ಕೃಷಿ ಹೊಂಡದಲ್ಲಿ ಅಣ್ಣ ಮುಳುಗುತ್ತಿದ್ದರೂ ಮೊಬೈಲ್‌ನಲ್ಲಿ ವಿಡಿಯೋ ಮಾಡುತ್ತಾ ನಿಂತ ತಂಗಿ!

By Ravi Janekal  |  First Published May 3, 2024, 12:05 PM IST

ಈಜು ಬಾರದಿದ್ದರೂ ಕೃಷಿಹೊಂಡದಲ್ಲಿ ಈಜಾಡಲು ಹೋಗಿ ಮೃತಪಟ್ಟ ಘಟನೆ ಕೋಲಾರ ತಾಲೂಕಿನ ನಾಗನಾಳ ಗ್ರಾಮದಲ್ಲಿ ನಡೆದಿದೆ. ಅಣ್ಣ ಕೃಷಿ ಹೊಂಡದಲ್ಲಿ ಮುಳುಗುತ್ತಿದ್ದರೂ ಸಹಾಯಕ್ಕೆ ಬಾರದೆ ಅಣ್ಣ ಮುಳುಗಿ ಸಾಯುವವರೆಗೂ ವಿಡಿಯೋ ಮಾಡುತ್ತಲೇ ನಿಂತ ತಂಗಿ.


ಕೋಲಾರ (ಮೇ.3): ಈಜು ಬಾರದಿದ್ದರೂ ಕೃಷಿಹೊಂಡದಲ್ಲಿ ಈಜಾಡಲು ಹೋಗಿ ಮೃತಪಟ್ಟ ಘಟನೆ ಕೋಲಾರ ತಾಲೂಕಿನ ನಾಗನಾಳ ಗ್ರಾಮದಲ್ಲಿ ನಡೆದಿದೆ.

ಗೌತಮ್ ಗೌಡ (26) ಮೃತ ದುರ್ದೈವಿ. ಮೈಸೂರಿನ ರಾಘವೇಂದ್ರನಗರ ನಿವಾಸಿಯಾಗಿರುವ ಗೌತಮ್ ಗೌಡ. ತಮ್ಮ ತಂದೆಯ ಊರಾದ ವೇಮಗಲ್ ಸಮೀಪದ ನಾಗನಾಳ ಗ್ರಾಮಕ್ಕೆ ಆಗಮಿಸಿದ್ದ ಯುವಕ. ವಿಪರೀತ ಬಿಸಲು ಹಿನ್ನೆಲೆ ಜಮೀನಲ್ಲಿದ್ದ ಕೃಷಿ ಹೊಂಡದಲ್ಲಿ ಈಜಾಡಲು ಬುಧವಾರ ಕುಟುಂಬದವರೊಂದಿಗೆ ತೆರಳಿದ್ದ. ಯುವಕನ ಜೊತೆಗೆ ತಂಗಿ ಇದ್ದಳು.

Tap to resize

Latest Videos

ಅಣ್ಣ ಕೃಷಿ ಹೊಂಡದಲ್ಲಿ ಜಂಪ್ ಮಾಡಿ ಈಜಾಡುವುದನ್ನು ವಿಡಿಯೋ ಮಾಡುತ್ತಿದ್ದ ತಂಗಿ. ಕೃಷಿ ಹೊಂಡಕ್ಕೆ ಜಂಪ್ ಮಾಡಿ ದಡ ಸೇರುವಾಗಲೇ  ಹಿಂದಕ್ಕೆ ಚಲಿಸಿದ ಯುವಕ ಅಲ್ಲಿಂದ ಎಷ್ಟೇ ಪ್ರಯತ್ನಿಸಿದರೂ ದಡಕ್ಕೆ ಬಾರಲಾಗದೆ ಪರದಾಡಿರುವ ಯುವಕ. ಕೃಷಿ ಹೊಂಡದಲ್ಲಿ ಮುಳುಗುತ್ತಿದ್ದರೂ ಅಣ್ಣನ ಸಹಾಯಕ್ಕೆ ಬಾರದ ಮುಳುಗುತ್ತಿರುವುದನ್ನ ವಿಡಿಯೋ ರೆಕಾರ್ಡ್ ಮಾಡುತ್ತಲೇ ನಿಂತ ತಂಗಿ! ಸಹಾಯಕ್ಕೆ ಕೈಚಾಚಿರುವುದು ವಿಡಿಯೋದಲ್ಲಿ ಕಂಡುಬಂದಿದೆ ಆದರೂ ಮೊಬೈಲ್ ಬಿಟ್ಟಾಕಿ ಅಣ್ಣನ ಸಹಾಯಕ್ಕೆ ಬಾರದೆ, ಸಹಾಯಕ್ಕಾಗಿ ಪ್ರಯತ್ನಿಸದೆ ವಿಡಿಯೋ ಮಾಡುತ್ತಲೇ ನಿಂತಿದ್ದರಿಂದ ಕಣ್ಣಮುಂದೆಯೇ ನೀರಲ್ಲಿ ಅಣ್ಣ ಮುಳುಗಿಮುಳುಗಿ ಮೃತಪಟ್ಟಿದ್ದಾನೆ.

ಬೆಂಗಳೂರಿನ ಐವರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಸಾವು, ಕನಕಪುರ ಸಂಗಮದಲ್ಲಿ ಈಜಲು ತೆರಳಿದಾಗ ದುರ್ಘಟನೆ

click me!