ಹೇಗಿದ್ದ? ಹೇಗಾದ..? 3 ತಿಂಗಳಲ್ಲಿ ಬದಲಾದ ಸಿದ್ದು ಖದರ್

Sep 21, 2018, 5:57 PM IST

ನಾನೆ ಬೇರೆ, ನನ್ನ ಸ್ಟೈಲು ಬೇರೇನೆ... ನನ್ನ ಖದರ್ ಬೇರೆನೆ...! ಹೌದು ಹೀಗೆಂದು ಮತ್ತೆ ಸಾಬೀತು ಮಾಡಿದ್ದು ಮಾಜಿ ಸಿಎಂ ಸಿದ್ದರಾಮಯ್ಯ. ಅಂದು ವಿಧಾನಸಭಾ ಚುನಾವಣಾ ಫಲಿತಾಂಶ ಬಂದಾಗ ಕೈ ಕಟ್ಟಿ ನಿಂತು ಜೆಡಿಎಸ್ ಗೆ ಬೇಷರತ್ ಬೆಂಬಲ ನೀಡಿದ್ದ ಅದೇ ಸಿದ್ದರಾಮಯ್ಯ ಕೇವಲ ಮೂರು ತಿಂಗಳಲ್ಲಿ ತಮ್ಮ ಖದರ್ ಬದಲಾಯಿಸಿದ್ದಾರೆ. ಈಗ ಕಾಲ ಮೇಲೆ ಕಾಲು ಹಾಕಿ ಕುಳಿತುಕೊಂಡಿದ್ದ ದೃಶ್ಯ ಸರಕಾರದಲ್ಲಿ ತಮ್ಮ ಬಲ ಎಷ್ಟಿದೆ ಎಂಬುದನ್ನು ಮತ್ತೆ ಮತ್ತೆ ಸಾರುತ್ತಿದೆ.