ಪುಟ್ನಂಜದ ರವಿಮಾಮನ ಜೋಡಿ ಮೀನಾ ಈಗ್ಲೂ ಇಪ್ಪತ್ತರ ತರುಣಿಯಂತಿರೋ ಬ್ಯೂಟಿ!

Published : May 03, 2024, 05:13 PM ISTUpdated : May 03, 2024, 05:14 PM IST

ಬಹುಭಾಷಾ ತಾರೆ ಮೀನಾ ವಯಸ್ಸು 47 ವರ್ಷ ಆದ್ರೂ ಇನ್ನೂ ಇಪ್ಪತ್ತರ ತರುಣಿಯಂತೆ ಮಿಂಚೋ ಬ್ಯೂಟಿ. ಹಲವು ಭಾಷೆಯ ಸಿನಿಮಾಗಳಲ್ಲಿ ನಟಿಸ್ತಿರೋ ಮೀನಾ ಇತ್ತೀಚಿಗೆ ಯೆಲ್ಲೋ ಸಲ್ವಾರ್‌ನಲ್ಲಿ ಸಖತ್ತಾಗಿ ಮಿಂಚಿದ್ದಾರೆ.  

PREV
18
ಪುಟ್ನಂಜದ ರವಿಮಾಮನ ಜೋಡಿ ಮೀನಾ ಈಗ್ಲೂ ಇಪ್ಪತ್ತರ ತರುಣಿಯಂತಿರೋ ಬ್ಯೂಟಿ!

ಬಹುಭಾಷಾ ತಾರೆ ಮೀನಾ ವಯಸ್ಸು 47 ವರ್ಷ ಆದ್ರೂ ಇನ್ನೂ ಇಪ್ಪತ್ತರ ತರುಣಿಯಂತೆ ಮಿಂಚೋ ಬ್ಯೂಟಿ. ಹಲವು ಭಾಷೆಯ ಸಿನಿಮಾಗಳಲ್ಲಿ ನಟಿಸ್ತಿರೋ ಮೀನಾ ಇತ್ತೀಚಿಗೆ ಯೆಲ್ಲೋ ಸಲ್ವಾರ್‌ನಲ್ಲಿ ಸಖತ್ತಾಗಿ ಮಿಂಚಿದ್ದಾರೆ. ಫ್ಯಾನ್ಸ್‌ ಎವರ್‌ಗ್ರೀನ್‌ ಹೀರೋಯಿನ್ ಸೌಂದರ್ಯಕ್ಕೆ ಫಿದಾ ಆಗಿದ್ದಾರೆ.

28

ಕ್ಯೂಟ್‌ನೆಸ್‌ ಓವರ್‌ಲೋಡೆಡ್, ಯೆಲ್ಲೋ ಬ್ಯೂಟಿ, ಶೈನಿಂಗ್ ಲೇಡಿ ಸೂಪರ್‌ಸ್ಟಾರ್‌, ಗಾರ್ಜಿಯಸ್ ಎಂದೆಲ್ಲಾ ಹೊಗಳಿ ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ನಿಮಗೆ ವಯಸ್ಸೇ ಆಗೋದಿಲ್ವಾ, ತಲೈವಿ ಇನ್ ಯೆಲ್ಲೋ ಎಂದು ಬರೆದಿದ್ದಾರೆ.

38

ದಕ್ಷಿಣ ಭಾರತದ ಜನಪ್ರಿಯ ನಟಿ ಮೀನಾ ಇತ್ತೀಚೆಗೆ ಸಿನಿಮಾಗಳಿಗಿಂತ ವೈಯಕ್ತಿಕ ವಿಚಾರಕ್ಕೆ ಹೆಚ್ಚು ಸದ್ದು ಮಾಡುತ್ತಿದ್ದಾರೆ. ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ರೂ ಮೀನಾ ಬಹು ಬೇಡಿಕೆಯ ನಟಿಯಾಗಿದ್ದಾರೆ. ಆದ್ರೆ ಕಳೆದ ಕೆಲವು ತಿಂಗಳುಗಳಿಂದ ಮೀನಾ ಎರಡನೇ ಮದುವೆ ಬಗ್ಗೆನೇ ಚರ್ಚೆಯಾಗುತ್ತಿದೆ. 

48

ಮೀನಾ ಕನ್ನಡ ಸಿನಿ ಪ್ರೇಕ್ಷಕರಿಗೆ ಚಿರ ಪರಿಚಿತೆ. ಕನ್ನಡದಲ್ಲಿ ಪುಟ್ನಂಜ, ಗ್ರಾಮದೇವತೆ, ಸ್ವಾತಿ ಮುತ್ತು ನಂತಹ ಬಿಗ್ ಹಿಟ್ ಸಿನಿಮಾಗಳನ್ನ ಮಾಡಿದ್ದಾರೆ. ಮೀನಾಗೆ ಈಗ 47 ವರ್ಷ ವಯಸ್ಸು. ಇವರಿಗೆ ಒಬ್ಬ ಮಗಳು ಕೂಡ ಇದ್ದಾರೆ. 

58

ಮೀನಾ ಪತಿ ವಿದ್ಯಾಸಾಗರ್‌ಗೆ ಶ್ವಾಸಕೋಶದ ಸಮಸ್ಯೆಯಿತ್ತು. ಪತಿ ಜೀವ ಉಳಿಸಿಕೊಳ್ಳಲು ಮೀನಾ ಹೋರಾಟ ಮಾಡಿದ್ರು. ಕಳೆದ 2022ರಲ್ಲಿ ಮೀನಾ ಪತಿ ವಿಶ್ಯಾಸಾಗರ್ ನಿಧನ ಹೊಂದಿದ್ರು.

68

ಮೀನಾ ಪತಿ ನಿಧನರಾದ ಕೆಲವು ದಿನಗಳಲ್ಲಿ ಮೀನಾ ಎರಡನೇ ಮದುವೆ ಆಗುತ್ತಾರೆ ಅಂತ ಸುದ್ದಿ ಹಬ್ಬಿತ್ತು. ನಟಿ ಮೀನಾ ತನ್ನ ಎರಡನೇ ಮದುವೆ ಬಗ್ಗೆ ಕಮೆಂಟ್ ಮಾಡಿದ್ದರು.

78

ಇಂಡಸ್ಟ್ರಿಯಲ್ಲಿ ಸಾಕಷ್ಟು ಮಂದಿ ನಟಿಯರು ಸಿಂಗಲ್ ಆಗಿದ್ದಾರೆ. ಅಷ್ಟೇ ಯಾಕೆ ನಾಯಕರು ಕೂಡ ಒಂಟಿಯಾಗಿದ್ದಾರೆ. ತನ್ನ ಬಗ್ಗೆ ಇಂತಹ ಮದುವೆ ಸುದ್ದಿಗಳು ಬಂದಾಗ ತುಂಬಾ ಬೇಸರವಾಗುತ್ತೆ ಎಂದಿದ್ದರು.

88

ಸ್ವಾತಿ ಮುತ್ತಿನ ಬ್ಯೂಟಿ ಮೀನಾ ಮದುವೆ ಬಗ್ಗೆ ಸುಳ್ಳು ಸುದ್ದಿಗಳನ್ನು ಹಬ್ಬಿಸುವರ ಮೇಲೆ ಮೀನಾಗೆ ತುಂಬಾ ಕೋಪವಿದೆಯಂತೆ. ಸದ್ಯ ಮೀನಾ ಹೈದರಾಬಾದ್​ನಲ್ಲಿ ನಲೆಸಿದ್ದಾರೆ.

Read more Photos on
click me!

Recommended Stories