ಸೌತ್ ಸ್ಟಾರ್ಸ್ ಗೌತಮಿ, ಮಧು ಹೆಣ್ಣು ಮಕ್ಕಳು, ಗ್ಲಾಮರ್‌ನಲ್ಲಿ ಅಮ್ಮನನ್ನೂ ಮೀರಿಸ್ತಾರೆ ನೋಡಿ!

Published : May 03, 2024, 05:07 PM IST

ದಕ್ಷಿಣ ಸಿನಿಮಾದ  ರೋಜಾ, ಲಯಾ, ಗೌತಮಿ, ನಾಡಿಯಾ ಮುಂತಾದ ಸ್ಟಾರ್ ಹೀರೋಯಿನ್‌ಗಳ ಹೆಣ್ಣು ಮಕ್ಕಳ ಸುಂದರ ಫೋಟೋಗಳು ಇದೀಗ ವೈರಲ್ ಆಗುತ್ತಿವೆ. ಈ ನಟಿಯರ ಹೆಣ್ಣುಮಕ್ಕಳು ಸೌಂದರ್ಯದಲ್ಲಿ ಅಮ್ಮಂದಿರರನ್ನು  ಮೀರಿಸುತ್ತಾರೆ.  ಈ ಮಕ್ಕಳು  ಇಂಡಸ್ಟ್ರಿಗೆ ಬಂದರೆ  ಈಗಿನ ನಟಿಯರಿಗೆ ಕಠಿಣ ಸ್ಪರ್ಧೆ ನೀಡುವುದು ಗ್ಯಾರಂಟಿ.   

PREV
111
ಸೌತ್ ಸ್ಟಾರ್ಸ್ ಗೌತಮಿ, ಮಧು ಹೆಣ್ಣು ಮಕ್ಕಳು, ಗ್ಲಾಮರ್‌ನಲ್ಲಿ ಅಮ್ಮನನ್ನೂ ಮೀರಿಸ್ತಾರೆ  ನೋಡಿ!

ನಾಯಕಿಯಾಗಿ ಸ್ಟಾರ್ ಡಮ್ ಕಂಡ ನಟಿ ರೋಜಾ  2002 ರಲ್ಲಿ ತಮಿಳು ನಿರ್ದೇಶಕ ಮತ್ತು ನಿರ್ಮಾಪಕ ಆರ್.ಕೆ. ಸೆಲ್ವಮಣಿ ಅವರನ್ನು ವಿವಾಹವಾದರು. ದಂಪತಿಗೆ ಒಬ್ಬ ಮಗಳು ಮತ್ತು ಒಬ್ಬ ಮಗ ಇದ್ದಾರೆ. 

211

ಮಗಳು ಅನುಷ್ಮಲಿಕಾ ಸೆಲ್ವಮಣಿ ಅಮೇರಿಕದಲ್ಲಿ ಓದುತ್ತಿದ್ದಾಳೆ. ಗ್ಲಾಮರ್‌ನಲ್ಲಿ ತಾಯಿ ರೋಜಾರನ್ನು ಮೀರಿಸುವ ಅನುಷ್ಮಲಿಕಾ ಈಗಿನ  ನಾಯಕಿಯರಿಗೆ ಪೈಪೋಟಿ ನೀಡುತ್ತಿದ್ದಾರೆ. 

311

ಅಷ್ಟೇ ಅಲ್ಲ,  ಅನುಷ್ಮಲಿಕಾ ದಿ ಫ್ಲೇಮ್ ಇನ್ ಮೈ ಹಾರ್ಟ್ ಎಂಬ ಪುಸ್ತಕವನ್ನೂ ಬರೆದಿದ್ದಾರೆ. ರೋಜಾ ತನ್ನ ಮಗಳೊಂದಿಗಿರುವ ಫೋಟೋ ಆಗಾಗ ಅಂತರ್ಜಾಲದಲ್ಲಿ ಟ್ರೆಂಡಿಂಗ್ ಆಗುತ್ತವೆ. 

 

411

ತೆಲುಗು ಚಿತ್ರರಂಗದಲ್ಲಿ ವಿಶೇಷ ಸ್ಥಾನವನ್ನು ಪಡೆದಿರುವ ನಾಯಕಿ ಲಯಾ. ತನ್ನ ಸೌಂದರ್ಯ ಮತ್ತು ನಟನೆಯಿಂದ ಪ್ರೇಕ್ಷಕರನ್ನು ಸೆಳೆದಿದ್ದಾರೆ. ಸುಮಾರು ಹತ್ತು ವರ್ಷಗಳ ಕಾಲ ಟಾಲಿವುಡ್‌ನಲ್ಲಿ ಸ್ಟಾರ್ ಹೀರೋಯಿನ್ ಆಗಿ ಮೆರೆದ ನಂತರ ಆಕೆ ಮದುವೆಯಾಗಿ ಅಮೆರಿಕದಲ್ಲಿ ನೆಲೆಸಿದ್ದರು.

511

ಲಯಾ ದಂಪತಿಗೆ ಇಬ್ಬರು ಮಕ್ಕಳು. ಮಗಳು ಶ್ಲೋಕಾ ಈಗಾಗಲೇ ಬಾಲನಟಿಯಾಗಿ ತೆಲುಗು ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಶ್ಲೋಕಾ ತಾಯಿಯಂತೆ ತುಂಬಾ ಸುಂದರಿ.

611

ಇತ್ತೀಚೆಗಷ್ಟೇ ಮಗಳ ಜೊತೆಗಿನ ಫೋಟೋವನ್ನು ಲಯಾ ಹಂಚಿಕೊಂಡಿದ್ದಾರೆ. ಇವರಿಬ್ಬರು ಸಹೋದರಿಯರಂತೆ ಇದ್ದಾರೆ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಮಗಳನ್ನೂ ನಾಯಕಿಯನ್ನಾಗಿ ಮಾಡುತ್ತೇನೆ ಎನ್ನುತ್ತಾರೆ ಲಯಾ.

711
gautami

ಅಂದಿನ  ಸ್ಟಾರ್ ಹೀರೋಗಳ ಎದುರು ಮಿಂಚಿದ  ಚೆಲುವೆ ಗೌತಮಿ. ಕನ್ನಡದಲ್ಲಿಯೂ ಏಳು ಸುತ್ತಿನ ಕೋಟೆ ಚಿತ್ರದಲ್ಲಿ ಅಂಬರೀಶ್ ಜೊತೆ ತೆರೆ ಹಂಚಿಕೊಂಡಿದ್ದರು. 1998ರಲ್ಲಿ ಸಂದೀಪ್ ಭಾಟಿಯಾ ಅವರನ್ನು ವಿವಾಹವಾದರು .1999ರಲ್ಲಿ ದಂಪತಿಗೆ ಸುಬ್ಬುಲಕ್ಷ್ಮಿ ಭಾಟಿಯಾ ಎಂಬ ಮಗಳು ಜನಿಸಿದಳು. ಆದರೆ ಗೌತಮಿ ಅದೇ ವರ್ಷ ಪತಿಯಿಂದ ವಿಚ್ಛೇದನ ಪಡೆದಿದ್ದರು. 

811

ಗೌತಮಿಯ ಮಗಳು ಅವರಷ್ಟೇ ಸುಂದರಿ. ಸದ್ಯ ಗೌತಮಿ ಮಗಳ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಮುಂದಿನ ನಾಯಕಿ ರೆಡಿ ಆಗಿದ್ದಾರೆ ಎಂದು ಹಲವರು ಕಾಮೆಂಟ್ ಕೂಡ ಮಾಡುತ್ತಿದ್ದಾರೆ.

 
 

911

ದಕ್ಷಿಣದ ಮತ್ತೊಬ್ಬ ಹಿರಿಯ ನಾಯಕಿ ನಾದಿಯಾ. ಈ ವಯಸ್ಸಿನಲ್ಲೂ ಗ್ಲಾಮರ್‌ ಕಳೆದುಕೊಳ್ಳದ ನಾಡಿಯಾ 1988ರಲ್ಲಿ ಸಿರಿಶ್ ಎಂಬ ವ್ಯಕ್ತಿಯನ್ನು ವಿವಾಹವಾದರು.ಈ ದಂಪತಿಗೆ 2 ಹೆಣ್ಣು ಮಕ್ಕಳಿವೆ. 

1011

ನಾದಿಯಾ ಆಗಾಗ ತಮ್ಮ ಕುಟುಂಬದೊಂದಿಗೆ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುತ್ತಾರೆ. ಅವುಗಳನ್ನು ನೋಡಿದ ಅಭಿಮಾನಿಗಳು ನಾಡಿಯಾಗೆ ಇಷ್ಟು ದೊಡ್ಡ ಹೆಣ್ಣುಮಕ್ಕಳಿವೆ ಇರುವುದಕ್ಕೆ ಆಶ್ಚರ್ಯ ವ್ಯಕ್ತಪಡಿಸುತ್ತಾರೆ.

1111

ಕನ್ನಡದಲ್ಲಿ ರವಿಚಂದ್ರನ್ ಜೊತೆ ಅಣ್ಣಯ್ಯ ಚಿತ್ರದಲ್ಲಿ ನಟಿ ಮಧುಬಾಲಾ 1999ರಲ್ಲಿ ಆನಂದ್ ಶಾ ಅವರನ್ನು ವಿವಾಹವಾದರು. ದಂಪತಿಗೆ ಅಮಯಾ ಶಾ ಮತ್ತು ಕಾಯಾ ಶಾ ಎಂಬ ಇಬ್ಬರು ಹೆಣ್ಣು ಮಕ್ಕಳಿವೆ. ಮಧುಬಾಲಾ ಆಗಾಗ್ಗೆ ತಮ್ಮ ಹೆಣ್ಣುಮಕ್ಕಳೊಂದಿಗೆ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಾರೆ. 

click me!

Recommended Stories