ಷೇರು ಮಾರುಕಟ್ಟೆಯಲ್ಲಿ ಕೋಲಾಹಲ; ಕುಸಿದ ಸೆನ್ಸೆಕ್ಸ್, ಹೂಡಿಕೆದಾರರಿಗೆ ಕೋಟ್ಯಂತರ ರೂಪಾಯಿ ನಷ್ಟ

By Suvarna News  |  First Published May 3, 2024, 4:59 PM IST

ಷೇರು ಮಾರುಕಟ್ಟೆ ಶುಕ್ರವಾರ ಅಚ್ಚರಿಯ ವಿದ್ಯಮಾನಗಳಿಗೆ ಸಾಕ್ಷಿಯಾಗಿದೆ. ಸೆನ್ಸೆಕ್ಸ್ ಭಾರೀ ಕುಸಿತ ಕಂಡಿದ್ದು ಹೂಡಿಕೆದಾರರಿಗೆ ಕೋಟಿ ಕೋಟಿ ನಷ್ಟವಾಗಿದೆ. 
 


ನವದೆಹಲಿ (ಮೇ 3): ಷೇರು ಮಾರುಕಟ್ಟೆಯಲ್ಲಿ ಇಂದು (ಮೇ 3) ಅಚ್ಚರಿಯ ವಿದ್ಯಮಾನಗಳು ಘಟಿಸಿವೆ. ದಿನದ ಪ್ರಾರಂಭಿಕ ವಹಿವಾಟಿನಲ್ಲಿ ಭಾರೀ ಏರಿಕೆ ಕಂಡ ಷೇರು ಮಾರುಕಟ್ಟೆ ಹೂಡಿಕೆದಾರರಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಮೂಡಿಸಿತ್ತು. ಆದರೆ, ಇದ್ದಕ್ಕಿದ್ದಂತೆ ಅಚ್ಚರಿಯ ಬೆಳವಣಿಗೆಯಲ್ಲಿ ಪಾತಾಳಕ್ಕೆ ಕುಸಿದಿದೆ. ಸೆನ್ಸೆಕ್ಸ್ ಇಂದು ತನ್ನ ಗರಿಷ್ಠ ಮಟ್ಟಕ್ಕಿಂತ ಶೇ.2ರಷ್ಟು ಅಥವಾ 1434 ಪಾಯಿಂಟ್‌ಗಳಿಗಿಂತ ಕೆಳಗೆ ವಹಿವಾಟು ನಡೆಸಿದರೆ, ನಿಫ್ಟಿ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 22,794 ತಲುಪಿದೆ. ದಿನದ ಅಂತ್ಯದ ವೇಳೆಗೆ ಸೆನ್ಸೆಕ್ಸ್ 732.96 ಪಾಯಿಂಟ್ಸ್ ಕುಸಿತದೊಂದಿಗೆ 73,878.15ರಲ್ಲಿ ಕ್ಲೋಸ್ ಆಗಿದೆ. ಇನ್ನು ನಿಫ್ಟಿ ಕೂಡ 150 ಪಾಯಿಂಟ್ಸ್ ಗಿಂತಲೂ ಅಧಿಕ ಇಳಿಕೆ ಕಂಡಿದ್ದು, 22,475.85ರಲ್ಲಿ ಕ್ಲೋಸ್ ಆಗಿದೆ. ಈ ಕೆಳಮುಖ ಬೆಳವಣಿಗೆಯಿಂದ ಹೂಡಿಕೆದಾರರು ಮಾರುಕಟ್ಟೆ ಮೌಲ್ಯದಲ್ಲಿ ಅಂದಾಜು 2 ಲಕ್ಷ ಕೋಟಿ ರೂ. ನಷ್ಟ ಅನುಭವಿಸಿದ್ದಾರೆ. ಬ್ಲೂ - ಚಿಪ್ ರಿಲಯನ್ಸ್ ಇಂಡಸ್ಟ್ರೀಸ್‌ ಲಿ.ನ ಷೇರುಗಳ ಭಾರೀ ಕುಸಿತ ಕಂಡ ಹಿನ್ನೆಲೆಯಲ್ಲಿ ಷೇರುಪೇಟೆ ಸೂಚ್ಯಂಕಗಳು ತೀವ್ರ ಇಳಿಕೆ ದಾಖಲಿಸಿವೆ.

ಈ ಷೇರುಗಳಲ್ಲಿ ಭಾರೀ ಇಳಿಕೆ
ಸೆನ್ಸೆಕ್ಸ್‌  ನಲ್ಲಿ ಲಾರ್ಸೆನ್ ಆಂಡ್‌ ಟೂಬ್ರೊ, ಭಾರ್ತಿ ಏರ್‌ಟೆಲ್, ರಿಲಯನ್ಸ್ ಇಂಡಸ್ಟ್ರೀಸ್ ಲಿ., ಮಾರುತಿ ಸುಜುಕಿ ಇಂಡಿಯಾ, ಟಾಟಾ ಮೋಟಾರ್ಸ್ ಹಾಗೂ ನೆಸ್ಲೆ ಇಂಡಿಯಾ ಷೇರುಗಳು ಭಾರೀ ಇಳಿಕೆ ದಾಖಲಿಸಿವೆ.

Tap to resize

Latest Videos

ಅದಾನಿ ಗ್ರೂಪ್‌ನ ಅತಿದೊಡ್ಡ ಕಂಪನಿಗೆ 449 ಕೋಟಿ ರೂಪಾಯಿ ನಷ್ಟ!

ಗಳಿಕೆ ದಾಖಲಿಸಿದ ಷೇರುಗಳು
ಕೋಲ್ ಇಂಡಿಯಾ, ಒಎನ್ ಜಿಸಿ, ಗ್ರಾಸಿಮ್ ಹಿಂಡಲ್ಕೊ ಹಾಗೂ ಅಪೊಲೋ ಹಾಸ್ಪಿಟಲ್ಸ್  ಸೇರಿದಂತೆ ಅನೇಕ ಪ್ರಮುಖ ಕಂಪನಿಗಳು ನಿಫ್ಟಿ ಸೂಚ್ಯಂಕದಲ್ಲಿ ಅತ್ಯಧಿಕ ಗಳಿಕೆ ದಾಖಲಿಸಿವೆ. 

ಷೇರು ಮಾರುಕಟ್ಟೆ ದಿಢೀರ್ ಕುಸಿತಕ್ಕೆ ಕಾರಣವೇನು?
ಇಂದು ಷೇರು ಮಾರುಕಟ್ಟೆ ದಿಢೀರ್ ಕುಸಿತ ಕಾಣಲು ಈ ಎರಡು ಅಂಶಗಳು ಪ್ರಮುಖ ಕಾರಣ ಎಂದು ಹೇಳಲಾಗಿದೆ.

1.ಆರ್ ಐಎಲ್ ಹಾಗೂ ಎಚ್ ಡಿಎಫ್ ಸಿ ಬ್ಯಾಂಕ್ ಷೇರುಗಳ ಮೌಲ್ಯದಲ್ಲಿನ ಇಳಿಕೆ ಮಾರುಕಟ್ಟೆ ಕುಸಿತಕ್ಕೆ ಕಾರಣವಾಗಿದೆ. ಆರ್ ಐಎಲ್ , ಎಲ್ ಆಂಡ್ ಟಿ, ಎಚ್ ಡಿಎಫ್ ಸಿ ಹಾಗೂ ಭಾರ್ತಿ ಏರ್ ಟೈಲ್ ಷೇರು ಮೌಲ್ಯದಲ್ಲಿನ ಇಳಿಕೆ ಷೇರು ಮಾರುಕಟ್ಟೆ ಬೆಳಗ್ಗಿನ ಅವಧಿಯ ಗಳಿಕೆಯನ್ನು ಕಳೆದುಕೊಳ್ಳುವಂತೆ ಮಾಡಿತು. ಈ ಷೇರುಗಳ ಬೆಲೆ ಇಳಿಕೆಯೇ ಭಾರೀ ನಷ್ಟಕ್ಕೆ ಕಾರಣವಾಗಿದೆ.

2.ಇಂದಿನ ಏರಿಕೆಯ ಬಳಿಕ ಹೆವಿವೇಯ್ಟ್ ಷೇರುಗಳಲ್ಲಿ ಲಾಭದ ಬುಕ್ಕಿಂಗ್ ಪ್ರಾಬಲ್ಯ ಸಾಧಿಸಿತು. ಇದರಿಂದಾಗಿ ಷೇರು ಮಾರುಕಟ್ಟೆ ಕೆಳಮುಖವಾಗಿ ಚಲಿಸಲು ಪ್ರಾರಂಭಿಸಿತು. ಇನ್ನು ಅಮೆರಿಕದ ಫೆಡರಲ್ ಮಾರುಕಟ್ಟೆಯ ಬಡ್ಡಿದರದಲ್ಲಿನ ಕಡಿತದಲ್ಲಿನ ವಿಳಂಬ ಕೂಡ ಷೇರು ಮಾರುಕಟ್ಟೆ ಕುಸಿತಕ್ಕೆ ಕಾರಣವಾಗಿದೆ. 

ಜಂಟಿ ಎಂಡಿ ರಾಜೀನಾಮೆ ಬೆನ್ನಲ್ಲೇ ಕುಸಿದ ಕೋಟಕ್ ಮಹೀಂದ್ರ ಬ್ಯಾಂಕ್ ಷೇರು ಮೌಲ್ಯ; ಹೂಡಿಕೆದಾರರು ಈಗೇನು ಮಾಡ್ಬೇಕು?

ಎನ್‌ಎಸ್‌ಇಯಲ್ಲಿ 2,553 ಷೇರುಗಳಲ್ಲಿ 763 ಷೇರುಗಳು ಏರಿಕೆಯಾಗುತ್ತಿದ್ದು, 1,689 ಷೇರುಗಳು ದೊಡ್ಡ ಕುಸಿತ ಕಂಡಿವೆ. 101 ಷೇರುಗಳು ಬದಲಾಗಿಲ್ಲ. 133 ಷೇರುಗಳು 52 ವಾರದ ಗರಿಷ್ಠ ಮತ್ತು 7 ಕನಿಷ್ಠ ಮಟ್ಟವನ್ನು ಮುಟ್ಟಿವೆ. 87 ಸ್ಟಾಕ್‌ಗಳು ಅಪ್ಪರ್ ಸರ್ಕ್ಯೂಟ್ ಮತ್ತು 37 ಲೋವರ್ ಸರ್ಕ್ಯೂಟ್ ಹೊಂದಿವೆ. ಇಂದು ಸೆನ್ಸೆಕ್ಸ್ 460 ಅಂಕಗಳ ಏರಿಕೆಯೊಂದಿಗೆ 75,095.18 ಮಟ್ಟವನ್ನು ತಲುಪಿದ್ದರೆ, ನಿಫ್ಟಿ ಸುಮಾರು 150 ಅಂಕಗಳ ಏರಿಕೆಯೊಂದಿಗೆ ತನ್ನ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 22,794 ಅನ್ನು ತಲುಪಿದೆ ಎಂಬುದು ಗಮನಾರ್ಹ.

ಬಿಎಸ್‌ಇಯಲ್ಲಿ ಎಲ್ಲ ಲಿಸ್ಟೆಡ್ ಕಂಪನಿಗಳ ಮಾರುಕಟ್ಟೆ ಬಂಡವಾಳೀಕರಣವು ಸುಮಾರು 3 ಲಕ್ಷ ಕೋಟಿ ರೂ.ನಿಂದ 405.83 ಲಕ್ಷ ಕೋಟಿ ರೂ.ಗೆ ಇಳಿದಿದೆ. ಅಂದರೆ ಹೂಡಿಕೆದಾರರಿಗೆ ಎರಡು ಲಕ್ಷ ಕೋಟಿ ರೂ. ನಷ್ಟವಾಗಲಿದೆ. 

click me!