ಮೇಲ್ವರ್ಗ ಮೀಸಲಾತಿ: ಆದಾಯ ಮಿತಿ 8 ಲಕ್ಷ?

By Web DeskFirst Published Jan 18, 2019, 10:58 AM IST
Highlights

ಮೇಲ್ವರ್ಗದಲ್ಲೂ ಆರ್ಥಿಕವಾಗಿ ಹಿಂದುಳಿದವರಿಗೆ ಉನ್ನತ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ. 10  ರಷ್ಟು ಮೀಸಲು ನೀಡುವ ಕಾಯ್ದೆಯನ್ನು ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಈ ಕಾಯ್ದೆಯ ಲಾಭ ಪಡೆಯಲು ಕುಟುಂಬವೊಂದರ ವಾರ್ಷಿಕ ಆದಾಯ 8 ಲಕ್ಷರು.ಗಿಂತ ಕಡಿಮೆ ಇರಬೇಕು ಎಂಬುದು ಸೇರಿದಂತೆ ಹಲವು ನಿಯಮಗಳನ್ನು ಹಾಕಲಾಗಿದೆ.

ನವದೆಹಲಿ (ಜ. 18): ಮೇಲ್ವರ್ಗದಲ್ಲೂ ಆರ್ಥಿಕವಾಗಿ ಹಿಂದುಳಿದವರಿಗೆ ಉನ್ನತ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ.10 ರಷ್ಟು ಮೀಸಲು ನೀಡುವ ಕಾಯ್ದೆಯನ್ನು ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಜಾರಿಗೆ
ತಂದಿದೆ. ಈ ಕಾಯ್ದೆಯ ಲಾಭ ಪಡೆಯಲು ಕುಟುಂಬವೊಂದರ ವಾರ್ಷಿಕ ಆದಾಯ 8 ಲಕ್ಷರು.ಗಿಂತ ಕಡಿಮೆ ಇರಬೇಕು ಎಂಬುದು ಸೇರಿದಂತೆ ಹಲವು ನಿಯಮಗಳನ್ನು ಹಾಕಲಾಗಿದೆ.

ಆದರೆ ವಿಶೇಷವೆಂದರೆ ಈ ನಿಯಮಗಳ ಪೈಕಿ ವಾರ್ಷಿಕ ಆದಾಯದ ಮಿತಿಯನ್ನು ಬದಲಾಯಿಸುವ ಅವಕಾಶವನ್ನು ಕೇಂದ್ರ ಸರ್ಕಾರವು ರಾಜ್ಯಗಳಿಗೆ ದಯಪಾಲಿಸಿದೆ. ಹೀಗಾಗಿ ಅತ್ಯಗತ್ಯ ಎಂದು ಕಂಡು ಬಂದಲ್ಲಿ ರಾಜ್ಯ ಸರ್ಕಾರಗಳು ಶೇ.10 ರಷ್ಟು ಮೀಸಲು ನೀಡಲು ಗರಿಷ್ಠ ಆದಾಯದ ಮಿತಿಯನ್ನು 8 ಲಕ್ಷ ರು.ಗಳಿಗಿಂತ ಹೆಚ್ಚಿಸಬಹುದು. ಜೊತೆಗೆ ಇಂಥ ಮೇಲ್ವರ್ಗದ ಆರ್ಥಿಕ ಸ್ಥಿತಿಗತಿಯನ್ನು ತಿಳಿಸುವ ಸೂಚ್ಯಂಕಗಳನ್ನು ಪರಿಗಣಿಸಿ ಕಾಲಕಾಲಕ್ಕೆ ಇಂಥ ಆದಾಯದ ಮಿತಿಯನ್ನು ಬದಲಾಯಿಸುವ ಅವಕಾಶವನ್ನೂ ರಾಜ್ಯಗಳಿಗೆ ಕೇಂದ್ರ ಸರ್ಕಾರ ಪಾಲಿಸಿದೆ ಎಂದು ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ.

ಅಲ್ಲದೆ ಈಗಾಗಲೇ ಮೇಲ್ವರ್ಗದಲ್ಲಿನ ಆರ್ಥಿಕವಾಗಿ ಹಿಂದುಳಿದವರಿಗೆ ರಾಜ್ಯಗಳಲ್ಲಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಸೂಕ್ತ ಪ್ರಾತಿನಿಧ್ಯ ಸಿಕ್ಕಿರುವ ಹೊರತಾಗಿಯೂ, ಹೊಸ ಕಾಯ್ದೆಯ ಅನ್ವಯ ಶೇ.10 ರಷ್ಟು ಮೀಸಲು ನೀಡುವುದನ್ನು ಕಡ್ಡಾಯ ಮಾಡಲಾಗಿದೆ. 

click me!