ರಾಘವ್‌ ಚಡ್ಡಾ ತಮ್ಮ Eyesight ಕಳೆದುಕೊಂಡಿರಬಹುದು.. ಅಪ್‌ಡೇಟ್‌ ನೀಡಿದ ಆಪ್‌

By Santosh Naik  |  First Published Apr 30, 2024, 2:04 PM IST

ಚುನಾವಣಾ ಸಮಯ ಅದಲ್ಲದೆ ಪಕ್ಷದ ನಾಯಕ ಅರವಿಂದ್‌ ಕೇಜ್ರಿವಾಲ್‌ ಜೈಲಿಗೆ ಹೋಗಿರುವ ಸಂದರ್ಭದಲ್ಲಿ ಆಪ್‌ನ ಮತ್ತೊಬ್ಬ ನಾಯಕ ರಾಘವ್‌ ಚಡ್ಡಾ ನಾಪತ್ತೆಯಾಗಿದ್ದು ಸಾಕಷ್ಟು ಚರ್ಚೆಯ ವಿಚಾರವಾಗಿತ್ತು. ಈಗ ಆಪ್‌ ಈ ಕುರಿತಾಗಿ ಅಪ್‌ಡೇಟ್‌ ನೀಡಿದೆ.


ನವದೆಹಲಿ (ಏ.30): ದಿಲ್ಲಿ ಸಚಿವ ಸೌರಭ್ ಭಾರದ್ವಾಜ್ ಅವರು ಮಂಗಳವಾರ ಪಕ್ಷದ ಹಿರಿಯ ನಾಯಕ ಮತ್ತು ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ ಅವರ ಕುರಿತಾಗಿ ಬಿಗ್‌ ಅಪ್‌ಡೇಟ್‌ ನೀಡಿದ್ದಾರೆ. ದೇಶದ ಪ್ರಮುಖ ಚುನಾವಣಾ ಸಂದರ್ಭದಲ್ಲಿ ಅವರು ನಾಪತ್ತೆಯಾಗಿದ್ದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಆದರೆ, ಸ್ವಲ್ಪ ಮೇಜರ್‌ ಕೂಡ ಆಗಿರುವ ಕಣ್ಣಿನ ಸಮಸ್ಯೆಯಿಂದ ಅವರು ಬಳಲುತ್ತಿದ್ದಾರೆ. ನನ್ನ ಪ್ರಕಾರ ಅವರು ತಮ್ಮ ಐಸೈಟ್‌ಅನ್ನೂ ಕಳೆದುಕೊಂಡಿರಬಹುದು. ಪ್ರಸ್ತುತ ಅವರು ಚಿಕಿತ್ಸೆಗಾಗಿ ಅಮೆರಿಕದಲ್ಲಿ ಇದ್ದಾರೆ ಎಂದು ತಿಳಿಸಿದ್ದಾರೆ. ರಾಘವ್‌ ಚಡ್ಡಾ ಇಂಗ್ಲೆಂಡ್‌ನಲ್ಲಿದ್ದಾರೆ. ಅವರ ಕಣ್ಣಿನಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ನನಗೆ ತಿಳಿಸಿರುವ ಪ್ರಕಾರ ಅವರು ಈಗಾಗಲೇ ದೃಷ್ಟಿಯನ್ನೂ ಕಳೆದುಕೊಂಡಿದ್ದಾರೆ. ಇದರ ಚಿಕಿತ್ಸೆಗಾಗಿಯೇ ಅವರು ಅಲ್ಲಿದ್ದಾರೆ. ಶೀಘ್ರದಲ್ಲೇ ಅವರು ಚೇತರಿಸಿಕೊಂಡು ವಾಪಾಸ್‌ ಬರಲಿದ್ದಾರೆ ಮತ್ತು ಪ್ರಚಾರದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

ಆಮ್ ಆದ್ಮಿ ಪಕ್ಷಕ್ಕೆ ಸತತ ಹಿನ್ನಡೆಗಳ ನಡುವೆ ರಾಘವ್ ಚಡ್ಡಾ ಅವರ ಗೈರು ಹಾಜರಿ ಪ್ರಮುಖವಾಗಿ ಕಂಡಿತ್ತು. ವಿಶೇಷವಾಗಿ ಮದ್ಯ ನೀತಿ ಪ್ರಕರಣದಲ್ಲಿ ಪಕ್ಷದ ವರಿಷ್ಠ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಬಂಧನದ ಬನ್ನಲ್ಲಿಯೇ ರಾಘವ್‌ ಚಡ್ಡಾ ಎಲ್ಲಿದ್ದಾರೆ ಎನ್ನುವ ಪ್ರಶ್ನೆಗಳು ಉದ್ಭವವಾಗಿದೆ. ಪಕ್ಷದ ಪ್ರಮುಖ ಇಲಾಖೆಗಳನ್ನು ನಿಭಾಯಿಸಿದ ಮತ್ತು ರಾಜಕೀಯ ಪ್ರತಿಸ್ಪರ್ಧಿಗಳ ಮೇಲೆ ಪಕ್ಷದ ದಾಳಿಯ ನೇತೃತ್ವ ವಹಿಸಿದ್ದ ಕೇಜ್ರಿವಾಲ್ ಅವರ ಆಪ್ತ ಸಹಾಯಕ ಚಡ್ಡಾ, ಕಣ್ಣಿನ ಶಸ್ತ್ರಚಿಕಿತ್ಸೆಗಾಗಿ ಕಳೆದ ತಿಂಗಳಿನಿಂದ ಲಂಡನ್‌ನಲ್ಲಿದ್ದಾರೆ.

Tap to resize

Latest Videos

ರಾಘವ್‌ ಚಡ್ಡಾ ಅವರ ಪತ್ನಿ, ನಟಿ ಪರಿಣಿತಿ ಚೋಪ್ರಾ ಅವರು ತಮ್ಮ ಚಲನಚಿತ್ರ ಅಮರ್ ಸಿಂಗ್ ಚಮ್ಕಿಲಾ ಬಿಡುಗಡೆಗೆ ಮುಂಚಿತವಾಗಿ ಭಾರತಕ್ಕೆ ವಾಪಸಾಗಿದ್ದರು. ಅದಕ್ಕೂ ಮುನ್ನ ಅವರು ಪತಿಯ ಜೊತೆ ಲಂಡನ್‌ನಲ್ಲಿಯೇ ಇದ್ದರು. ರಾಘವ್‌ ಚಡ್ಡಾ ದೀರ್ಘಕಾಲದಿಂದ ನಾಪತ್ತೆಯಾಗಿರುವುದು ಅವರ ರಾಜಕೀಯ ಭವಿಷ್ಯದ ಬಗ್ಗೆ ಊಹಾಪೋಹಗಳಿಗೆ ಕಾರಣವಾಗಿದೆ.

ಹಾಗಿದ್ದರೂ, ಪಂಜಾಬ್‌ನ ರಾಜ್ಯಸಭಾ ಸಂಸದರು ಪಕ್ಷದ ಪತ್ರಿಕಾಗೋಷ್ಠಿಗಳು ಮತ್ತು ಕೇಜ್ರಿವಾಲ್ ಅವರ ಪತ್ನಿ ಸುನಿತಾ ಕೇಜ್ರಿವಾಲ್ ಅವರ ಭಾಷಣಗಳನ್ನು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಿಂದ ಪೋಸ್ಟ್ ಮಾಡುತ್ತಿದ್ದಾರೆ. “ಅರವಿಂದ್ ಕೇಜ್ರಿವಾಲ್ ಹಲವು ವರ್ಷಗಳಿಂದ ಮಧುಮೇಹ ರೋಗಿ. ಕೇಜ್ರಿವಾಲ್ ಪ್ರತಿ ದಿನ 54 ಯೂನಿಟ್ ಇನ್ಸುಲಿನ್ ಬಳಸುತ್ತಿದ್ದಾರೆ. ಜೈಲಿನ ಅಧಿಕಾರಿಗಳು ಇವರಿಗೆ ಇನ್ಸುಲಿನ್ ನೀಡುತ್ತಿಲ್ಲ ಎನ್ನಲಾಗುತ್ತಿದೆ. ಇದು ಅತ್ಯಂತ ಅಮಾನವೀಯ ಮತ್ತು ಜೈಲು ನಿಯಮಗಳಿಗೆ ವಿರುದ್ಧವಾಗಿದೆ ಎಂದು ರಾಘವ್ ಚಡ್ಡಾ ಏಪ್ರಿಲ್ 18 ರಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಮೊದಲ ಭೇಟಿಯಲ್ಲೇ ರಾಘವ್‌ ಚಡ್ಡಾ ನಾನು ಮದುವೆಯಾಗಲಿರುವ ವ್ಯಕ್ತಿ ಎಂದು ನನಗೆ ತಿಳಿದಿತ್ತು; ಪರಿಣಿತಿ ಚೋಪ್ರಾ

ಜೈಲಿನಲ್ಲಿರುವ ಎಎಪಿ ನಾಯಕರಾದ ಕೇಜ್ರಿವಾಲ್, ಮನೀಶ್ ಸಿಸೋಡಿಯಾ ಮತ್ತು ಸತ್ಯೇಂದ್ರ ಜೈನ್ ಅವರೊಂದಿಗೆ ಎಎಪಿ ಹೆಸರಿಸಿದ 40 ಸ್ಟಾರ್ ಪ್ರಚಾರಕರಲ್ಲಿ ರಾಘವ್ ಚಡ್ಡಾ ಕೂಡ ಸೇರಿದ್ದಾರೆ. ಪಟ್ಟಿಯಲ್ಲಿ ಸುನೀತಾ ಕೇಜ್ರಿವಾಲ್, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಮತ್ತು ರಾಜ್ಯಸಭಾ ಸಂಸದರಾದ ಸಂಜಯ್ ಸಿಂಗ್ ಮತ್ತು ಸಂದೀಪ್ ಪಾಠಕ್ ಸೇರಿದ್ದಾರೆ.

ರಾಜ್ಯಸಭೆ ಸಭಾಪತಿಗೆ ಬೇಷರತ್‌ ಕ್ಷಮೆಯಾಚಿಸಿ, ಸಂಸದ ರಾಘವ್‌ ಚಡ್ಡಾಗೆ ಸಲಹೆ ನೀಡಿದ ಸುಪ್ರೀಂ ಕೋರ್ಟ್‌

click me!