ಡಾ. ರಾಜ್ ಅಪಹರಣದ ಬಗ್ಗೆ ಎಸ್.ಎಂ ಕೃಷ್ಣ ಬಿಚ್ಚಿಟ್ಟ ಸತ್ಯ

By Web DeskFirst Published Aug 14, 2018, 8:33 AM IST
Highlights

ವರನಟ ಡಾ. ರಾಜ್ ಅವರನ್ನು ವೀರಪ್ಪನ್ ಅಪಹರಣ ಮಾಡಿದ್ದರ ಬಗ್ಗೆ ಇದೀಗಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರು ಕೆಲ ವಿಚಾರಗಳನ್ನು ಬಿಚ್ಚಿಟ್ಟದ್ದಾರೆ.

ಬೆಂಗಳೂರು :  ಬಹುಶಃ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ ಅವರು ಇಲ್ಲದೇ ಇದ್ದಿದ್ದರೆ ಅಂದು ನಮ್ಮ ವರನಟ ಡಾ.ರಾಜ್‌ಕುಮಾರ್‌ ಅವರನ್ನು ಕಾಡುಗಳ್ಳ ವೀರಪ್ಪನ್‌ ಕಪಿಮುಷ್ಟಿಯಿಂದ ಸುರಕ್ಷಿತವಾಗಿ ಕರೆತರುವುದು ಸಾಧ್ಯ ಆಗುತ್ತಿರಲಿಲ್ಲ.

ಅದು 2001ರ ಜು.29. ರಾತ್ರಿ 7.30ರ ಸುಮಾರಿಗೆ ಮೈಸೂರಿನಿಂದ ಪಾರ್ವತಮ್ಮ ರಾಜ್‌ಕುಮಾರ್‌ ಅವರು ಕರೆ ಮಾಡಿದರು. ಮುಖ್ಯಮಂತ್ರಿಯಾಗಿದ್ದ ನಾನು ನನ್ನ ಅಧಿಕೃತ ನಿವಾಸ ಅನುಗ್ರಹದಲ್ಲಿದ್ದೆ. 

ಯಾವುದೋ ಕೆಲಸದಲ್ಲಿ ನಿರತನಾಗಿದ್ದೆ. ಈ ವೇಳೆ ಕರೆ ಸ್ವೀಕರಿಸಿದಾಗ ಆಶ್ವರ್ಯಕರ ಸಂಗತಿಯೊಂದನ್ನು ಪಾರ್ವತಮ್ಮ ಹೇಳಿದರು. ನಟಸರ್ವಭೌಮ ಡಾ.ರಾಜ್‌ಕುಮಾರ್‌ ಅವರನ್ನು ಕಾಡುಗಳ್ಳ ವೀರಪ್ಪನ್‌ ಕರೆದುಕೊಂಡ ಹೋದ ವಿಷಯವನ್ನು ಅವರು ತಿಳಿಸಿದರು. ಎಲ್ಲಿಗೆ ಕರೆದುಕೊಂಡು ಹೋದ ಎಂದು ಕೇಳಿದಾಗ ಕೆಲವರು ಬಂದು ಕರೆದುಕೊಂಡು ಹೋದರು ಎಂದಷ್ಟೇ ಹೇಳಿದರು.

click me!