ಕಾರ್ನಾಡ್'ಗೆ ಆಕ್ಸಿಜನ್ ಪೈಪ್..! ನಾಚಿಕೆ ಪಡೋಕೆ ನಾವೇನು ರೇಪ್ ಮಾಡಿದ್ದೇವೆಯೇ?

By Suvarna Web DeskFirst Published Jan 20, 2018, 11:22 AM IST
Highlights

ಇತ್ತೀಚೆಗೆ ಹಿರಿಯರೊಬ್ಬರು ಸಿಕ್ಕಿದ್ದರು. ನೀವಿದನ್ನು ಹಾಕಿಕೊಂಡೇ ಓಡಾಡುತ್ತೀರಾ ಎಂದು ಕೇಳಿದರು. ನಾನು ಯಾಕೆ ಎಂದು ಪ್ರಶ್ನಿಸಿದೆ. ವೈದ್ಯರು ನನಗೂ ಆಕ್ಸಿಜನ್ ಬ್ಯಾಗ್ ಜೊತೆ ಓಡಾಡಲು ಹೇಳಿದ್ದಾರೆ ಎಂದು ತಿಳಿಸಿದರು.

ಧಾರವಾಡ(ಜ.20): ಗಿರೀಶ್ ಕಾರ್ನಾಡರು ಈಗ ಎಲ್ಲೇ ಹೋದರೂ ಆಕ್ಸಿಜನ್ ಬ್ಯಾಗಿನ ಜೊತೆ ಹೋಗುತ್ತಾರೆ. ಅವರ ಮೂಗಿನಲ್ಲಿ ಆಕ್ಸಿಜನ್ ಪೈಪ್ ಇರುತ್ತದೆ. ಹೀಗೆಂದು ವಿಮರ್ಶಕ ನರಹಳ್ಳಿ ಬಾಲಸುಬ್ರಮಣ್ಯ ಅವರು, ಧಾರವಾಡ ಸಾಹಿತ್ಯ ಸಂಭ್ರಮದಲ್ಲಿ ಆಶಯ ಭಾಷಣದ ವೇಳೆ ಗಿರೀಶ್ ಕಾರ್ನಾಡ್ ಅವರ ಅನಾರೋಗ್ಯದ ಕುರಿತು ಪ್ರಸಾಪಿಸಿದರು.

ಬಳಿಕ ಈ ಕುರಿತು ಗೋಷ್ಠಿಯಲ್ಲಿ ವಿವರಣೆ ನೀಡಿದ ಗಿರೀಶ್ ಕಾರ್ನಾಡ್ ಅವರು, ಇದು ನನಗೆ ಮೂರನೇ ಶ್ವಾಸಕೋಶ ಇದ್ದಂತೆ. ಈ ಬ್ಯಾಗ್ ಇದ್ದಿದ್ದರಿಂದಲೇ ನಾನು ಧಾರವಾಡಕ್ಕೆ ಬರಲು ಸಾಧ್ಯವಾಯಿತು. ಇತ್ತೀಚೆಗೆ ಹಿರಿಯರೊಬ್ಬರು ಸಿಕ್ಕಿದ್ದರು. ನೀವಿದನ್ನು ಹಾಕಿಕೊಂಡೇ ಓಡಾಡುತ್ತೀರಾ ಎಂದು ಕೇಳಿದರು. ನಾನು ಯಾಕೆ ಎಂದು ಪ್ರಶ್ನಿಸಿದೆ. ವೈದ್ಯರು ನನಗೂ ಆಕ್ಸಿಜನ್ ಬ್ಯಾಗ್ ಜೊತೆ ಓಡಾಡಲು ಹೇಳಿದ್ದಾರೆ ಎಂದು ತಿಳಿಸಿದರು. ಆದರೆ, ಅವರ ಮನೆಯವರು ಪಬ್ಲಿಕ್‌'ನಲ್ಲಿ ಇದೆಲ್ಲಾ ಬೇಡ ಎಂದಿದ್ದರಂತೆ ಎಂದ ಕಾರ್ನಾಡ್, ಇದನ್ನು ಹಾಕಿಕೊಂಡು ಓಡಾಡಿದರೆ ಏನು ತಪ್ಪು? ನಾಚಿಕೆ ಪಡೋಕೆ ನಾವೇನು ರೇಪ್ ಮಾಡಿದ್ದೇವೆಯೇ? ಇಂತಹ ಬೆಳವಣಿಗೆ ಆಗಿದೆ ಅನ್ನೋದು ಎಲ್ಲರಿಗೂ ಗೊತ್ತಾಗಲಿ ಎಂದರು.

ಸಾಹಿತ್ಯದಲ್ಲಿ 18ರ ಕತೆ: ಸಾಹಿತ್ಯ ಸಂಭ್ರಮದ ಮೊದಲನೆಯ ದಿನದ ಎರಡನೇ ಗೋಷ್ಠಿಯಲ್ಲಿ ಆದಿಲ್ ಶಾಹಿ ಸಾಹಿತ್ಯ ಕುರಿತು ಚರ್ಚೆ ನಡೆಯಿತು. ಈ ಚರ್ಚೆಯಲ್ಲಿ ಆದಿಲ್ ಶಾಹಿ ಸಾಹಿತ್ಯದ ಸಮೃದ್ಧತೆ, ಗಹನತೆಯ ಬಗ್ಗೆ ಮಾತನಾಡಿದ ನಾಟಕಕಾರ ಗಿರೀಶ್ ಕಾರ್ನಾಡ್ ಅವರು, ಮಹಾ ಭಾರತದಲ್ಲಿ 18 ಪರ್ವ ಇದೆ. ಭಗವದ್ಗೀತೆಯಲ್ಲಿ 18 ಅಧ್ಯಾಯ ಇದೆ. ಅದೇ ಥರ ಆದಿಲ್ ಶಾಹಿ ಸಾಹಿತ್ಯದಲ್ಲೂ 18 ಸಂಪುಟ ಇದೆ ಎಂದರು.

click me!