ಬದುಕಲು ಕರೆಂಟ್ ಬೇಡ ಇವ್ರಿಗೆ: ಹುಚ್ಚಿ ಅಂದೋರಿಗಿದೆ ಬುದ್ಧನ ದೀವಿಗೆ!

By Web DeskFirst Published May 8, 2019, 1:38 PM IST
Highlights

ಜೀವಮಾನವೀಡಿ ವಿದ್ಯುತ್ ಬಳಸದ ಕಾಲೇಜು ಪ್ರೊಫೆಸರ್| ಪುಣೆಯ ಗರ್ವಾರೆ ಕಾಲೇಜಿನ ನಿವೃತ್ತ ಪ್ರೊಫೆಸರ್ ಡಾ. ಹೇಮಾ ಸನೆ| ಸಸ್ಯಶಾಸ್ತ್ರದಲ್ಲಿ ಪಿಹೆಚ್.ಡಿ ಪಡೆದಿರುವ ಡಾ.ಹೇಮಾ ಸನೆ| ಗುಡಿಸಲಿನಲ್ಲಿ ವಾಸ ಮಾಡುವ ಹೇಮಾ ಸನೆಗೆ ಹಕ್ಕಿಗಳೇ ಗೆಳೆಯರು| ತಮ್ಮ ಜೀವಮಾನವೀಡಿ ವಿದ್ಯುತ್ ಬಳಸಿಲ್ಲ ಹೇಮಾ ಸನೆ|

ಪುಣೆ(ಮೇ.08): ಐದು ನಿಮಿಷ ಕರೆಂಟ್ ಇಲ್ಲ ಅಂದ್ರೆ ಆಕಾಶ ಭೂಮಿ ಒಂದು ಮಾಡೋ ಜನರ ಮಧ್ಯೆ, ಜೀವನವೀಡಿ ವಿದ್ಯುತ್ ನ್ನೇ ಬಳಸದ ಕಾಲೇಜು ಪ್ರೊಫೆಸರ್ ಒಬ್ಬರನ್ನು ಭೇಟಿಯಾಗ ಬನ್ನಿ.

ಹೌದು, ಪುಣೆಯ ಗರ್ವಾರೆ ಕಾಲೇಜಿನಲ್ಲಿ ಪ್ರೊಫೆಸರ್ ಆಗಿ ನಿವೃತ್ತಿ ಹೊಂದಿರುವ ಡಾ. ಹೇಮಾ ಸನೆ, ತಮ್ಮ ಜೀವಮಾನವೀಡಿ ವಿದ್ಯುತ್’ನ್ನೇ  ಬಳಸಿಲ್ಲ.

ನಗರದ ಬುಧವಾರ್ ಪೇಟ್’ನಲ್ಲಿ ನಿವೃತ್ತಿ ಜೀವನ ನಡೆಸುತ್ತಿರುವ 79 ವರ್ಷದ ಡಾ. ಹೇಮಾ, ಪರಿಸರ ರಕ್ಷಣೆಗಾಗಿ ವಿದ್ಯುತ್ ಬಳಸದಿರುವ ನಿರ್ಧಾರ ಕೈಗೊಂಡಿದ್ದಾರೆ.

Maharashtra: Dr Hema Sane, a 79-year old former professor has been living in a house without electricity in Budhwar Peth, Pune all her life. Says "Food, shelter&clothing are the basic needs.Once upon a time there was no electricity,it came much later,I can manage without it"(7.5) pic.twitter.com/wiKYA3aBBv

— ANI (@ANI)

ಸಣ್ಣ ಗುಡಿಸಲೊಂದರಲ್ಲಿ ವಾಸಿಸುತ್ತಿರುವ ಡಾ. ಹೇಮಾ, ಒಂದು ನಾಯಿ, ಎರಡು ಬೆಕ್ಕು ಮತ್ತು ಅಸಂಖ್ಯ ಹಕ್ಕಿಗಳಿಗೆ ಆಶ್ರಯ ನೀಡುತ್ತಾರೆ. ಜೀವನ ನಡೆಸಲು ವಿದ್ಯುತ್ ಅವಶ್ಯಕತೆ ಇಲ್ಲ ಎಂಬುದು ಹೇಮಾ ಸನೆ ಅವರ ಅಭಿಮತ.

ಪುಣೆಯ ಸಾವಿತ್ರಿಭಾಯಿ ಪುಲೆ ವಿವಿಯಿಂದ ಸಸ್ಯಶಾಸ್ತ್ರದಲ್ಲಿ ಪಿಹೆಚ್.ಡಿ ಪದವಿ ಪಡೆದಿರುವ ಡಾ. ಹೇಮಾ, ಸಸ್ಯಶಾಸ್ತ್ರ ಮತ್ತು ಪರಿಸರದ ಕುರಿತು ಅನೇಕ ಪುಸ್ತಕಗಳನ್ನು ಬರೆದಿದ್ದಾರೆ.

Dr Hema Sane: This property belongs to my dog, two cats, mongoose and so many birds, it is their property not mine, I'm only here to look after them...People call me a fool, I may be insane but it doesn't matter because it's my wicked way of life, I may live as I like. (7.5.19) https://t.co/f5stSGHwQy

— ANI (@ANI)

ವಿಚಿತ್ರ ಸಂಗತಿ ಎಂದರೆ ಡಾ. ಹೇಮಾ ಅವರನ್ನು ಸ್ಥಳೀಯ ಜನರು ಹುಚ್ಚಿ ಎಂದು ಕರೆಯುತ್ತಾರೆ. ಆದರೆ ಹಾಗೆ ಕರೆದವರಿಗೆಲ್ಲಾ ಡಾ.ಹೇಮಾ ಬುದ್ಧನ ಜನಪ್ರಿಯ ‘ನಿಮ್ಮ ಜೀವನದ ದಾರಿಯನ್ನು ನೀವೇ ಆಯ್ಕೆ ಮಾಡಿಕೊಳ್ಳಿ’ ಎಂಬ ಸಂದೇಶವನ್ನು ಪುನರುಚ್ಛಿಸುತ್ತಾರೆ.

click me!