ಜನರನ್ನು ಸೇರಿಸಿ ನಿಮ್ಮ ಬೇಳೆ ಬೇಯಿಸಿಕೊಳ್ತಿರಾ? ಜಸ್ಟ್ ಆಸ್ಕಿಂಗ್

By Web DeskFirst Published Dec 1, 2018, 5:20 PM IST
Highlights

ಶಬರಿಮಲೆಗೆ ಮಹಿಳೆಯರಿಗೆ ಪ್ರವೇಶ ವಿಚಾರಕ್ಕೆ ಸಂಬಂಧಿಸಿ ನಟ, ನಿರ್ದೇಶಕ ಪ್ರಕಾಶ್ ರೈ ಪ್ರತಿಕ್ರಿಯೆ ನೀಡಿದ್ದಾರೆ.  ಮಂಗಳೂರಿಗೆ ಬಂದ ರೈ ಹೇಳಿದ್ದಾದರೂ ಏನು?

ಮಂಗಳೂರು[ಡಿ.01]  ಧರ್ಮದ ವಿಚಾರದಲ್ಲಿರಾಜಕೀಯ ಮಾಡುವುದು ಸರಿ ಅಲ್ಲ ಎಂದು ನಟ, ನಿರ್ದೇಶಕ ಪ್ರಕಾಶ್ ರೈ ಹೇಳಿದ್ದಾರೆ. ಮಂಗಳೂರಿನಲ್ಲಿ ಮಾತನಾಡಿದ ರೈ, ಶಬರಿಮಲೆಗೆ ಮಹಿಳೆಯರಿಗೆ ಪ್ರವೇಶ ವಿಚಾರದ ಕುರಿತು ಪ್ರತಿಕ್ರಿಕೆ ನೀಡಿದರು.  ಆಚಾರ ವಿಚಾರ ಬಗ್ಗೆ ನನ್ನನ್ನು ಕೇಳೋದು ಮುಖ್ಯವಲ್ಲ. ಶಬರಿಮಲೆ, ಆಚಾರ ವಿಚಾರ ಬಗ್ಗೆ ನನ್ನನ್ನು ಕೇಳುವುದು ತಪ್ಪಾಗುತ್ತದೆ ಎಂದರು.

ಮಾನವೀಯತೆ ಬಿಟ್ಟು ಬೇರೆನನ್ನೂ  ನಾನು ಫಾಲೋ ಮಾಡಲ್ಲ. ನನ್ನ ಪತ್ನಿ ಹಿಂದು, ತಾಯಿ ಕ್ರಿಶ್ಚಿಯನ್, ಅವರ ಬದುಕಿಗೆ ತಕ್ಕಂತೆ ಬದುಕೋಕೆ ನಾನು ಬಿಡುತ್ತೇನೆ. ಸುಪ್ರೀಂಕೋರ್ಟ್ ಮೂಲಕ ಸಮಸ್ಯೆ ನಿಲ್ಲಿಸಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಇಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ದೇಶದ ಎಲ್ಲಾ ಎಂಪಿಗಳು ಶಬರಿಮಲೆಗೆ ಯಾಕೆ ಹೋಗುತ್ತಾರೆ? ಜನರನ್ನು ಸೇರಿಸಿ ಯಾಕೆ ಪ್ರತಿಭಟನೆ ನಡೆಸುವ ಮೂಲಕ ನಿಮ್ಮ ಬೇಳೆ ಯಾಕೆ ಬೇಯಿಸುತ್ತೀರಿ? ಎಂದು ರೈ ಪ್ರಶ್ನೆ ಮಾಡಿದರು.

ಭಕ್ತರ ಆಶಯ ಏನು,‌ಹೆಣ್ಣು ಮಕ್ಕಳ ಬೇಡಿಕೆ ಏನೆಂದು ಕೇಳಲ್ಲ. ಬಾಲ್ಯವಿವಾಹ, ದೇವದಾಸಿ ಪದ್ಧತಿ, ಸತಿಪದ್ಧತಿಯನ್ನು ಕಲಾಚಾರ ಅಂದಿದ್ದ ಕಾಲವೂ ಇತ್ತು. ಸುಪ್ರೀಂ ಕೋರ್ಟ್ ಆದೇಶದ‌ ಮೂಲಕ 3 ತಿಂಗಳು ಸಮಯ ಪಡೆದು ನಿರ್ಧಾರ ಕೈಗೊಳ್ಳಬೇಕು. ಅದು ಬಿಟ್ಟು ಧರ್ಮದ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎಂದು ರೈ ತಮ್ಮ ಅಭಿಪ್ರಾಯ ಮುಂದಿಟ್ಟರು.

click me!