ರಾಮ ಮಂದಿರ ನಿರ್ಮಾಣವನ್ನು ಆಗಸ್ಟ್ 14, 1947ರಲ್ಲಿ ಆಗಬೇಕಿತ್ತು. ಆದರೆ 500 ವರ್ಷಗಳ ಬಳಿಕ ಆಗಿದೆ. ಇದಕ್ಕೆ ಕಾರಣ ಮೋದಿ ಅಲ್ಲ, ನೀವು ನೀಡಿದ ಒಂದು ಮತದಿಂದ ಆದ ಬದಲಾವಣೆ ಎಂದು ಮೋದಿ ಹೇಳಿದ್ದಾರೆ. ಹೊಸಪೇಟೆಯಲ್ಲಿ ಮೋದಿ ಭಾಷಣದ ವಿವರ ಇಲ್ಲಿದೆ.
ಹೊಸಪೇಟೆ(ಏ.28) ಪವಿತ್ರ ರಾಮಮಂದಿರ ಆಮಂತ್ರಣವನ್ನು ತಿರಸ್ಕರಿಸಿದವರನ್ನು ಹನುಮ ಜನ್ಮಸ್ಥಳದ ಮತದಾರರು ಎಂದಿಗೂ ಕ್ಷಮಿಸುವುದಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಹೊಸಪೇಟೆಯಲ್ಲಿ ಆಯೋಜಿಸಿದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಮೋದಿ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದೇ ವೇಳೆ 30 ವರ್ಷಗಳ ಹಿಂದೆ ಕಾಶ್ಮೀರದ ಲಾಲ್ ಚೌಕ್‌ನಲ್ಲಿ ತಿರಂಗ ಹಾರಿಸಲು ಹೊರಟಾದ ರಾಯಚೂರಿಗೆ ಆಗಮಿಸಿದ ಘಟನೆ ನೆನಪಿಸಿದ್ದಾರೆ.
ಅಯೋಧ್ಯೆಯಲ್ಲಿ 500 ವರ್ಷಗಳ ಬಳಿಕ ರಾಮ ಮಂದಿರ ನಿರ್ಮಾಣಗೊಂಡಿದೆ. ಹಲವು ಪೀಳಿಗೆ ಹೋರಾಟದಲ್ಲಿ ಜೀವ ಬಲಿದಾನ ಮಾಡಿದ್ದಾರೆ. ಪೂರ್ವಜರು ಸತತ ಹೋರಾಟ ಮಾಡಿ ಜೀವ ಸವೆಸಿದ್ದಾರೆ. ಭಜನೆ, ಧ್ಯಾನದ, ಭಕ್ತಿ ಮೂಲಕ ತಮ್ಮ ಇಚ್ಚೆ ವ್ಯಕ್ತಪಡಿಸಿದ್ದರು. ಇದೀಗ ಆಯೋಧ್ಯೆಯಲ್ಲಿ ಮಂದಿರ ನಿರ್ಮಾಣವಾಗಿದೆ. 1947, ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆ ಬೆನ್ನಲ್ಲೇ ರಾಮ ಮಂದಿರ ನಿರ್ಮಾಣವಾಗಬೇಕಿತ್ತು. ಆದರೆ ರಾಮ ಲಲ್ಲಾನಿಗೆ ಮಂದಿರ ನಿರ್ಮಾಣವಾಗಲಿಲ್ಲ. ಆದರೆ 500 ವರ್ಷಗಳ ಬಳಿಕ ರಾಮ ಮಂದಿರ ನಿರ್ಮಾಣವಾಗಿದೆ. ಇದು ಯಾವ ಕಾರಣದಿಂದ ಆಯಿತು? ಕೇವಲ ನಿಮ್ಮ ಮತದಿಂದ ರಾಮ ಮಂದಿರ ನಿರ್ಮಾಣವಾಗಿದೆ ಎಂದು ಮೋದಿ ಹೇಳಿದ್ದಾರೆ.
undefined
ನೇಹಾಳಂತ ಕೋಟ್ಯಂತರ ಹೆಣ್ಣುಮಕ್ಕಳ ರಕ್ಷಣೆ ಮಾಡಬೇಕಿದೆ, ಹೊಸಪೇಟೆಯಲ್ಲಿ ಕಾಂಗ್ರೆಸ್ ಕುಟುಕಿದ ಮೋದಿ!
ಎಲ್ಲರಿದೂ ರಾಮ ಮಂದಿರ ದರ್ಶನ ಮಾಡಲು ಬಯಸುತ್ತಾರೆ. ನಿಮಗೆ ರಾಮ ದರ್ಶನ ಗೌರವ ಹಾಗೂ ಹೆಮ್ಮೆಯ ಸಂಕೇತವಾಗಿದೆ. ಆದರೆ ಕಾಂಗ್ರೆಸ್ ರಾಮ ಮಂದಿರ ಪ್ರಾಣ ಪ್ರತಿಷ್ಠೆಗೆ ಗೈರಾಯಿತು. ರಾಮ ಮಂದಿರ ಟ್ರಸ್ಟ್ ಸದಸ್ಯರು ಕಾಂಗ್ರೆಸ್, ಇಂಡಿಯಾ ಒಕ್ಕೂಟ ಸದಸ್ಯರ ಮನೆಗೆ ತೆರಳಿ ಆಮಂತ್ರಣ ನೀಡಿತ್ತು. ಆದರೆ ಈ ಪವಿತ್ರ ಆಮಂತ್ರಣವನ್ನು ತಿರಸ್ಕರಿಸಿತು. ಪವಿತ್ರ ರಾಮ ಮಂದಿರ ಆಮಂತ್ರಣ ತಿರಸ್ಕರಿಸಿದವರನ್ನು ಮತದಾರರು ತಿರಸ್ಕರಿಸಿ. ಪ್ರಭು ರಾಮನಿಗೆ ಕಾಂಗ್ರೆಸ್ ಹಾಗೂ ಇಂಡಿಯ ಒಕ್ಕೂಟ ಮಾಡಿದ ಅಪಮಾನವಿದು. ಇದು ಶ್ರೀರಾಮ, ರಾಮ ಭಕ್ತರಿಗೆ ಮಾಡಿದ ಅಪಮಾನ ಎಂದು ಮೋದಿ ಹೇಳಿದ್ದಾರೆ. ಕಾಂಗ್ರೆಸ್ಸಿಗರನ್ನು ಈ ಹನುಮಾನ ಜನ್ಮ ಸ್ಥಳದ ಮತದಾರರು ಕ್ಷಮಿಸುವುದಿಲ್ಲ ಎಂದು ಮೋದಿ ಹೇಳಿದ್ದಾರೆ.
370 ವಿಧಿ ರದ್ದು ಸಾಧ್ಯವೇ ಇಲ್ಲ ಎಂದು ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಹೇಳಿತ್ತು. ಇದೀಗ 370ನೇ ವಿಧಿ ರದ್ದಾಗಿದೆ. ಶ್ರೀನಗರದ ಲಾಲ್ ಚೌಕ್‌ನಲ್ಲಿ ತಿರಂಗ ಹಾರಿಸಲು ನಾನು ಹೊರಟಿದ್ದೆ. ಆದರೆ ಶ್ರೀನಗರ ಲಾಲ್ ಚೌಕ್‌ನಲ್ಲಿ ತಿರಂಗ ಹಾರಿಸಲು ಪ್ರಯತ್ನಿಸಿದ್ದೇವೆ. ಇಲ್ಲಿ ರಾಯಚೂರು ವ್ಯಕ್ತಿಗಳಿದ್ದರೆ ಈ ಘಟನೆ ನೆನಪಾಗಲಿದೆ. 30 ವರ್ಷಗಳ ಹಿಂದಿನ ಘಟನೆ ಇದು. ನಾವು ರಾಯಚೂರು ತಲುಪಿದಾಗ ರಾತ್ರಿ ಮೂರು ಗಂಟೆಯಾಗಿತ್ತು. ಇಲ್ಲಿ ಯಾರು ಇರುತ್ತಾರೆ ಎಂದು ನಾವು ಭಾವಿಸಿದ್ದೇವು. ಆದರೆ ರಾತ್ರಿ 3 ಗಂಟೆಗೆ ರಾಯಚೂರು ಮಂದಿ ರಸ್ತೆಯಲ್ಲಿದ್ದರು. ರಾಯಚೂರು ಜನತೆಯ ಉತ್ಸಾಹ ನಮ್ಮ ಉತ್ಸಾಹ ಇಮ್ಮಡಿಗೊಳಿಸಿತ್ತು. ಪ್ರಧಾನಿಯಾದ ಬಳಿಕ 370 ವಿಧಿ ರದ್ದು ಮಾಡಿ ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಸ್ಥಾಪಿಸಲಾಗಿದೆ ಎಂದು ಮೋದಿ ಹೇಳಿದ್ದಾರೆ.
ರಾಮೇಶ್ವರಂ ಕೆಫೆ ಸ್ಫೋಟ, ನೇಹಾ ಹತ್ಯೆ ಘಟನೆ ಉಲ್ಲೇಖಿಸಿ ಕರ್ನಾಟಕ ಕಾನೂನು ಸುವ್ಯವಸ್ಥೆ ಪ್ರಶ್ನಿಸಿದ ಮೋದಿ!