ಪ್ರಧಾನಿ ನರೇಂದ್ರ ಮೋದಿ, ಸುಷ್ಮಾ ಸ್ವರಾಜ್ ಗೆ ಶಾಕ್‌

By Kannadaprabha NewsFirst Published Jul 14, 2018, 9:35 AM IST
Highlights

ಪ್ರಧಾನಿ ನರೇಂದ್ರ ಮೋದಿ, ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಇದೀಗ ಲಕ್ಷಾಂತರ ಸಂಖ್ಯೆಯಲ್ಲಿ ತಮ್ಮ ಟ್ವಿಟ್ಟರ್ ಫಾಲೋವರ್ ಗಳನ್ನು ಕಳೆದುಕೊಂಡಿದ್ದಾರೆ. 

ನವದೆಹಲಿ: ಸಾಮಾಜಿಕ ಮಾಧ್ಯಮ ಟ್ವೀಟರ್‌ನಲ್ಲಿರುವ ನಕಲಿ ಖಾತೆ ನಿಷ್ಕ್ರೀಯ ಗೊಳಿಸುವ ಕಾರ್ಯ ಚುರುಕುಗೊಂಡ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌, ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್‌ ಸೇರಿದಂತೆ ಇತರ ರಾಜಕೀಯ ನಾಯಕರ ಹಿಂಬಾಲಕರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. 

ದೇಶದಲ್ಲಿ ಅತಿಹೆಚ್ಚು ಹಿಂಬಾಲಕರ ಹೊಂದಿದ್ದ ಮೋದಿ ಅವರು 2,84,746 ಹಿಂಬಾಲಕರನ್ನು ಕಳೆದುಕೊಂಡಿದ್ದಾರೆ. ಸುಷ್ಮಾ ಸ್ವರಾಜ್‌ 74132, ದೆಹಲಿ ಸಿಎಂ ಕೇಜ್ರಿವಾಲ್‌ 92000, ಅರುಣ್‌ ಜೇಟ್ಲಿ 51324, ರಾಹುಲ್‌ ಗಾಂಧಿ 17000 ಹಿಂಬಾಲಕರನ್ನು ಕಳೆದುಕೊಂಡಿದ್ದಾರೆ.

ಹಲವು ಟ್ವೀಟರ್‌ ಬಳಕೆದಾರರು ನಕಲಿ ಮತ್ತು ಆಟೋಮೇಟೆಡ್‌ ಖಾತೆಗಳನ್ನು ಬಳಸಿಕೊಂಡು, ಟ್ವೀಟರ್‌ನಲ್ಲಿ ತಮ್ಮ ಹಿಂಬಾಲಕರ ಸಂಖ್ಯೆಯನ್ನು ಕೃತಕವಾಗಿ ಹಿಗ್ಗಿಸಿಕೊಳ್ಳುತ್ತಿದ್ದಾರೆ. 

ಈ ಮೂಲಕ ತಮ್ಮ ರಾಜಕೀಯ ಚಟುವಟಿಕೆ, ವಾಣಿಜ್ಯೋದ್ಯಮದ ಮೇಲೆ ಧನಾತ್ಮಕ ಪರಿಣಾಮ, ಸುಳ್ಳು ಸುದ್ದಿಗಳ ಹಬ್ಬಿಸುವ ವೇದಿಕೆಯನ್ನಾಗಿ ಪರಿವರ್ತಿಸಿಕೊಳ್ಳಲಾಗುತ್ತಿದೆ ಎಂಬ ಆರೋಪ ಕೇಳಿಬಂದಿವೆ. ಹಾಗಾಗಿ, ಇಂಥ ನಕಲಿ ಖಾತೆಗಳನ್ನು ಅಳಿಸಿ ಹಾಕುವ ನಿಟ್ಟಿನಲ್ಲಿ ನಕಲಿ ಮತ್ತು ಆಟೋಮೇಟೆಡ್‌ ಖಾತೆಗಳನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ತೊಡಗಿಸಿಕೊಳ್ಳಲಾಗಿದೆ ಎಂದು ಟ್ವೀಟರ್‌ ಹೇಳಿದೆ.

click me!