ಮಯ್ಯಾಸ್ ಗ್ರೂಪ್ ಮಾಲೀಕ ಹಾಗೂ ಕುಟುಂಬದ ಮೇಲೆ ವಂಚನೆ ಆರೋಪ!

By Web DeskFirst Published Jan 28, 2019, 10:23 PM IST
Highlights

ವಿವಿದ ಉತ್ಪನ್ನಗಳ ಮೂಲಕ ರಾಜ್ಯದಲ್ಲಿ ಮನೆ ಮಾತಾಗಿದ್ದ ಮಯ್ಯಾಸ್ ಗ್ರೂಪ್ ಮೇಲೆ ಇದೀಗ ವಂಚನೆ ಆರೋಪ ಕೇಳಿ ಬಂದಿದೆ. ಬರೋಬ್ಬರಿ 140 ಕೋಟಿ  ರೂಪಾಯಿ ವಂಚಿಸಿದ ಆರೋಪಕ್ಕೆ ಮಯ್ಯಾಸ್ ಗುರಿಯಾಗಿದೆ. ಏನಿದು ಪ್ರಕರಣ? ಇಲ್ಲಿದೆ ವಿವರ.
 

ಬೆಂಗಳೂರು(ಜ.28): ಮಯ್ಯಾಸ್ ಗ್ರೂಪ್ ಮಾಲೀಕ ಸದಾನಂದ ಮಯ್ಯ ಹಾಗೂ ಕುಟುಂಬದ ಮೇಲೆ ವಂಚನೆ ಆರೋಪ ಕೇಳಿ ಬಂದಿದೆ. ಮಾರಿಷಸ್ ಮೂಲದ‌ ಪೀಪಲ್ ಕ್ಯಾಪಿಟಲ್ ಕಂಪನಿಗೆ ವಂಚಿಸಿದ ಆರೋಪದಡಿ ಇದೀಗ ದೂರು ದಾಖಲಾಗಿದೆ. 

ಇದನ್ನೂ ಓದಿ: ಜನರ ಬೇಡಿಕೆಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ: ದಕ್ಷ ಟ್ರಾಫಿಕ್ ಇನ್ಸ್‌ಪೆಕ್ಟರ್ ವರ್ಗ!

ಮಯ್ಯಾಸ್ ಗ್ರೂಪ್ ಕಂಪನಿಯಲ್ಲಿ  ಪೀಪಲ್ ಕ್ಯಾಪಿಟಲ್ ಕಂಪನಿ 140 ಕೋಟಿ ಹೂಡಿಕೆ ಮಾಡಿತ್ತು. ಬಂಡವಾಳ ಹೂಡಿಕೆ ಮಾಡಿದ ಬಳಿಕ ಹಿಂದಿರುಗಿಸಲು ಮಯ್ಯಾಸ್ ಗ್ರೂಪ್ ವಿಫಲವಾಗಿದೆ. ಹಣ ಮರಳಿ ಕೊಡ ಮಯ್ಯಾಸ್ ಗ್ರೂಪ್ ವಿರುದ್ಧ ಪೀಪಲ್ಸ್ ಕ್ಯಾಪಿಟಲ್ ದೂರು ದಾಖಲಿಸಿದೆ.

ಇದನ್ನೂ ಓದಿ: ಶೋಭಾ ಹಿಲ್‌ವ್ಯೂ‌ನಲ್ಲಿ DCP ಅಣ್ಣಾಮಲೈಯೊಂದಿಗೆ ಪೊಲೀಸ್ ಸಂವಾದ

ಜಯನಗರ ಠಾಣೆಯಲ್ಲಿ ಪೀಪಲ್ಸ್ ಕ್ಯಾಪಿಟಲ್ ದೂರು ದಾಖಲಿಸಿದೆ. ಮಯ್ಯಾಸ್ ಗ್ರೂಪ್ ಮಾಲೀಕ ಸದಾನಂದ ಮಯ್ಯ, ಮಗ ಸುದರ್ಶನ್ ಮಯ್ಯ ಹಾಗೂ ಸುನಂದ ಮಯ್ಯ ಮೇಲೆ ದೂರು ನೀಡಲಾಗಿದೆ. ಕರ್ನಾಟಕದಲ್ಲಿ ಆಹಾರ ಪದಾರ್ಥಗಳು ಸೇರಿದಂತೆ ವಿವಿದ ಉತ್ಪನ್ನಗಳು ಮೂಲಕ ಮಯ್ಯಾಸ್ ಕಂಪನಿ ಪ್ರಸಿದ್ದವಾಗಿದೆ.
 

click me!