ರಾಮೇಶ್ವರಂ ಕೆಫೆ ಸ್ಫೋಟ, ನೇಹಾ ಹತ್ಯೆ ಘಟನೆ ಉಲ್ಲೇಖಿಸಿ ಕರ್ನಾಟಕ ಕಾನೂನು ಸುವ್ಯವಸ್ಥೆ ಪ್ರಶ್ನಿಸಿದ ಮೋದಿ!

By Suvarna NewsFirst Published Apr 28, 2024, 4:50 PM IST
Highlights

ನೇಹಾ ಹತ್ಯೆ ಸಾಮಾನ್ಯ ಘಟನೆಯಲ್ಲ, ರಾಜಕೀಯ ಬಿಟ್ಟು ನ್ಯಾಯ ಒದಗಿಸಬೇಕು. ಪೋಷಕರಲ್ಲಿ ಇದೀಗ ಆತಂಕ ಮನೆ ಮಾಡಿದೆ. ಕರ್ನಾಟಕ ಕಾನೂನು ಸುವ್ಯವಸ್ಥೆ ಹದಗೆಟ್ಟಿಗೆ ಎಂದು ಮೋದಿ ವಾಗ್ದಾಳಿ ನಡೆಸಿದ್ದಾರೆ. 
 

ದಾವಣಗೆರೆ(ಏ.28) ಕರ್ನಾಟಕದ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಬಾಂಬ್ ಸ್ಫೋಟಗೊಳ್ಳುತ್ತಿದೆ. ಹೆಣ್ಣಮುಗು ನೇಹಾಳನ್ನು ಕಾಲೇಜು ಕ್ಯಾಂಪಸ್‌ನಲ್ಲಿ ಹತ್ಯೆ ಮಾಡಲಾಗಿದೆ. ಆದರೆ ಇಲ್ಲಿನ ಕಾಂಗ್ರೆಸ್ ಸರ್ಕಾರ ವೋಟ್ ಬ್ಯಾಂಕ್‌ಗಾಗಿ ತುಷ್ಠೀಕರಣ ರಾಜಕಾರಣ ಮಾಡುತ್ತಿದೆ ಎಂದು ಮೋದಿ ಹೇಳಿದ್ದಾರೆ. ದಾವಣಗೆರೆಯಲ್ಲಿ ಆಯೋಜಿಸಿದ್ದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಮೋದಿ, ಕರ್ನಾಟಕದ ಕಾಂಗ್ರೆಸ್ ಆಡಳಿತ ಹಾಗೂ ಕಾನೂನು ಸುವ್ಯವಸ್ಥೆ ಕುರಿತು ವಾಗ್ದಾಳಿ ನಡೆಸಿದ್ದಾರೆ. 

ಎಲ್ಲಾದರೂ ಕಾನೂನು ಸುವ್ಯವಸ್ಥೆ ಸರಿ ಇಲ್ಲದಿದ್ದರೆ, ಈ ರಾಜ್ಯಕ್ಕೆ ಯಾರೂ ಹೂಡಿಕೆ ಮಾಡಲು ಬರುವುದಿಲ್ಲ. ಕಾರ್ಖಾನೆ ಸ್ಥಾಪನೆ ಆಗುವುದಿಲ್ಲ. ಇಂದು ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಇಲ್ಲಿ ಬಾಂಬ್ ಸ್ಫೋಟಗೊಂಡಿತು. ಇದು ಗ್ಯಾಸ್ ಸಿಲಿಂಡರ್ ಸ್ಫೋಟ ಎಂದು ತನಿಖೆ ಮೊದಲೇ ಹೇಳಿಕೆ ನೀಡಿತು. ಸಿಲಿಂಡರ್ ಮಾತನ್ನು ಜನರು ತಿರಸ್ಕರಿಸಿದರು. ಈ ವೇಳೆ ಕಾಂಗ್ರೆಸ್ ಮತ್ತೊಂದು ಹೇಳಿಕೆ ನೀಡಿತು. ಇದು ವ್ಯವಹಾರದಲ್ಲಿನ ದ್ವೇಷದ ಸ್ಫೋಟ ಎಂದು ಹೇಳಿಕೆ ನೀಡಿ ತೀವ್ರತೆಯನ್ನು ಮರೆ ಮಾಚುವ ಪ್ರಯತ್ನ ಮಾಡಿತು ಎಂದು ಹೇಳಿದ್ದಾರೆ. 

ದಾವಣಗೆರೆ ಬೆಣ್ಣೆ ದೋಸೆಗೆ ತಯಾರಿ ಮಾಡಿ, ಗೆಲುವಿನ ಸಂಭ್ರಮಕ್ಕೆ ಸೂಚನೆ ನೀಡಿದ ಮೋದಿ!

ಹುಬ್ಬಳ್ಳಿಯ ಕಾಲೇಜು ಕ್ಯಾಂಪಸ್‌ನಲ್ಲಿ ಹೆಣ್ಣುಮಗಳ ಹತ್ಯೆಯಾಯಿತು. ಆದರೆ ಇದರಲ್ಲೂ ಕಾಂಗ್ರೆಸ್ ರಾಜಕೀಯ ಮಾಡಿತು. ಈ ಘಟನೆ ಪೋಷಕರಲ್ಲಿ ಆತಂಕ ಹೆಚ್ಚಿಸಿದೆ. ನೇಹಾ ಹತ್ಯೆ ಸಾಮಾನ್ಯ ಘಟನೆಯಲ್ಲ. ಸರ್ಕಾರದಲ್ಲಿ ಕುಳಿತಿರುವ ವ್ಯಕ್ತಿಗಳು ವೋಟ್ ಬ್ಯಾಂಕ್‌ನಲ್ಲಿ ಮುಳುಗಿದೆ. ಹೆಣ್ಣುಮಕ್ಕಳು ಮನೆಯಿಂದ ಹೊರಬರಲಾಗದ ಪರಿಸ್ಥಿತಿ ಕರ್ನಾಟಕದಲ್ಲಿ ಮನೆ ಮಾಡುತ್ತಿದೆ. ಹೆಣ್ಣು ಹೆತ್ತವರು ತಮ್ಮ ಮಕ್ಕಳನ್ನು ಬೆಳೆಸುವುದೇ ಸವಾಲಾಗುತ್ತಿದೆ ಎಂದು ಮೋದಿ ಹೇಳಿದ್ದಾರೆ.

ಇಂತಹ ಪರಿಸ್ಥಿತಿಯಲ್ಲಿ ಇಲ್ಲಿನ ಕಾಂಗ್ರೆಸ್ ಸರ್ಕಾರ ತುಷ್ಠೀಕರಣ ಮಾಡುತ್ತಾ, ಘಟನೆಯನ್ನು ರಾಜಕೀಯ ಮಾಡುತ್ತಿದೆ. ಕಳೆದ 10 ವರ್ಷದಲ್ಲಿ ಮೋದಿ ಆಡಳಿತವನ್ನು ನೀವು ನೋಡಿದ್ದೀರಿ. ನಾವು ಮನೆಗೆ ನುಗ್ಗಿ ಹೊಡೆಯುತ್ತೇವೆ ಎಂದು ಮೋದಿ ಹೇಳಿದ್ದಾರೆ. 

ವಿಕಾಸದ ಗ್ಯಾರೆಂಟಿ ಎಂದರೆ ಮೋದಿ.  ಮೋದಿಯ ವಿಕಾಸ, ಹಾಗೂ ವೇಗವನ್ನು ನೀವು ನೋಡಿದ್ದೀರಿ. ನಮ್ಮ ಆಡಳಿತದಲ್ಲಿ 47 ರಾಷ್ಟ್ರೀಯ ಹೆದ್ದಾರಿ ಮಾಡಲಾಗಿದೆ. ದಾವಣೆಗೆರೆ, ಹರಿಹರ ರೈಲು ನಿಲ್ದಾಣ ಮೇಲ್ದರ್ಜಗೆ ಏರಿಸಲಾಗಿದೆ. ಇಲ್ಲಿನ ಯುವಕರಿಗೆ ಸ್ಟಾರ್ಟ್ ಅಪ್ ಅವಕಾಶ ಮಾಡಿಕೊಡಲಾಗಿದೆ. ದಾವಣಗೆರೆ ಟೆಕ್ಸ್ಟ್ ಟೈಲ್ ಇಂಡಸ್ಟ್ರಿಗೆ ಬಲ ನೀಡಲಾಗಿದೆ ಎಂದು ಮೋದಿ ಹೇಳಿದ್ದಾರೆ. 
 

click me!