ನಗರಕ್ಕೆ ಕಾಲಿಟ್ಟಿದೆ ಮತ್ತೊಂದು ರೋಗ : ಎಚ್ಚರ..!

Published : Jul 30, 2018, 08:58 AM ISTUpdated : Jul 30, 2018, 12:16 PM IST
ನಗರಕ್ಕೆ ಕಾಲಿಟ್ಟಿದೆ ಮತ್ತೊಂದು ರೋಗ : ಎಚ್ಚರ..!

ಸಾರಾಂಶ

ಇದೀಗ ಬೆಂಗಳೂರಿಗೆ ಮತ್ತೊಂದು ರೋಗ ಕಾಲಿಟ್ಟಿದೆ. ಮಕ್ಕಳನ್ನು ಬಾಧಿಸುವ ಈ ರೋಗದ ಬಗ್ಗೆ ಪೋಷಕರು ಎಚ್ಚರಿಕೆ ವಹಿಸುವುದು ಅಗತ್ಯ. ಒಬ್ಬರಿಂದ ಒಬ್ಬರಿಗೆ ಮಳೆಗಾಲದ ಆರಂಭದ ಸಂದರ್ಭದಲ್ಲಿ ಇಂತಹ ರೋಗವು ಮಕ್ಕಳನ್ನು ಬಾಧಿಸುತ್ತದೆ. 

ಬೆಂಗಳೂರು :  ಉದ್ಯಾನನಗರಿ ಮಕ್ಕಳಲ್ಲಿ ಸೀತಾಳ ಸಿಡುಬು (ಚಿಕನ್ ಪಾಕ್ಸ್) ಹೋಲುವ ‘ಕೈ ಕಾಲು ಬಾಯಿ ರೋಗ’ ಉಲ್ಬಣಗೊಂಡಿದೆ. ಅಪಾಯವಲ್ಲದ ಈ ಕಾಯಿಲೆ ವೈರಾಣುವಿನಿಂದ ಒಬ್ಬರಿಂದ ಮತ್ತೊ ಬ್ಬರಿಗೆ ಅತಿ ಶೀಘ್ರವಾಗಿ ಹರಡುತ್ತದೆ. ಹೀಗಾಗಿ ಎಚ್ಚರ ವಹಿಸುವಂತೆ ಮಕ್ಕಳ ವೈದ್ಯ ತಜ್ಞರು ಎಚ್ಚರಿಕೆ ನೀಡಿದ್ದಾರೆ.

‘ಕೈ ಕಾಲು ಬಾಯಿ ರೋಗ’ (ಎಚ್‌ಎಫ್‌ಎಂಡಿ) ಕಾಯಿಲೆಯು ರಜೆಗಳ ಬಳಿಕ ಶಾಲೆ ಆರಂಭವಾದಾಗ ಹಾಗೂ ಮಳೆಗಾಲದ ಆರಂಭದಲ್ಲಿ ಹೆಚ್ಚಾಗಿ ಹರ ಡುತ್ತದೆ. ಶಾಲೆಯಲ್ಲಿ ಮಕ್ಕಳು ಒಟ್ಟಿಗೆ ಕೂರುವುದು ಹಾಗೂ ಆಟವಾಡುವುದರಿಂದ ಕಾಯಿಲೆ ಇತರೇ ವಿದ್ಯಾರ್ಥಿಗಳಿಗೂ ಹರಡುತ್ತದೆ. ಇದೇ ಕಾರಣಕ್ಕೆ 2017 ರಲ್ಲಿ ನಗರದ ಒಂದು ಶಾಲೆಗೆ ಸಂಪೂರ್ಣ ರಜೆ ಘೋಷಿಸಲಾಗಿತ್ತು.

ಸಾಮಾನ್ಯವಾಗಿ 10 ವರ್ಷದೊಳಗಿನ ಮಕ್ಕಳಲ್ಲಿ ಕಾಣಿಸುವ ‘ಹ್ಯಾಂಡ್ ಫೂಟ್ ಮೌತ್ ಡಿಸೀಸ್’ ಕಾಯಿಲೆಯಿಂದ ಬಳಲುತ್ತಿರುವ ಹತ್ತಾರು ಮಕ್ಕಳು ನಿತ್ಯ ನಗರದ ಇಂದಿರಾಗಾಂಧಿ ಆಸ್ಪತ್ರೆಗೆ ದಾಖಲಾ ಗುತ್ತಿದ್ದಾರೆ. ಉಳಿದಂತೆ ನಗರದ ಕೆ.ಸಿ.ಜನರಲ್ ಆಸ್ಪತ್ರೆ, ಕೆ.ಆರ್.ಪುರ, ಸಿ.ವಿ. ರಾಮನ್‌ನಗರ ಜನರಲ್ ಆಸ್ಪತ್ರೆ ಸೇರಿದಂತೆ ಖಾಸಗಿ ಆಸ್ಪತ್ರೆಗಳಲ್ಲೂ ಹೆಚ್ಚು ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವೈದ್ಯಾಧಿಕಾರಿಗಳು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ. 

ಏನಿದು ಎಚ್‌ಎಫ್‌ಎಂಡಿ?: ಹಲವಾರು ವರ್ಷಗಳ ಹಿಂದಿನಿಂದ ಸೀತಾಳ ಸಿಡುಬು ಹಾಗೂ ಚಿಕನ್ ಫಾಕ್ಸ್ ಮಕ್ಕಳನ್ನು ಕಾಡುವ ಪ್ರಮುಖ ಕಾಯಿಲೆ ಯಾಗಿತ್ತು. ಇದಕ್ಕೆ ರೋಗ ನಿರೋಧಕ ಲಸಿಕೆ ಲಭ್ಯತೆ ಹಾಗೂ ಜನಜಾಗೃತಿಯಿಂದ ಈ ಕಾಯಿಲೆ ಸಾಕಷ್ಟು ಕಡಿಮೆ ಆಗಿದೆ. ಆದರೆ, ಬಹುತೇಕ ಇದೇ ಕಾಯಿಲೆ ಹೋಲುವ ಹಾಗೂ ಹೆಚ್ಚು ಅಪಾಯವಿಲ್ಲದ ವೈರಾಣು ಕಾಯಿಲೆ ‘ಕಾಕ್‌ಸಾಕಿ ಎ-16 ’ ವೈರಾಣುವಿನಿಂದ
ಹರಡುತ್ತದೆ. 

ಈ ವೈರಾಣು ರೋಗಿಯ ಕರುಳಲ್ಲಿ ವಾಸಿಸುತ್ತದೆ. ಕಾಯಿಲೆ ಬಂದ ಬಳಿಕ ರೋಗಿಯ ರೋಗಿಯ ಕೆಮ್ಮು, ಸೀನು, ಮಲ, ನೀರು, ಆಟಿಕೆಗಳು ಹಾಗೂ ಸ್ಪರ್ಷದಿಂದ ಬೇರೆಯವರಿಗೂ ಸೋಂಕು ಸುಲಭ ವಾಗಿ ಹರಡುತ್ತದೆ. ಹೀಗಾಗಿ ಕಾಯಿಲೆ ಬಂದ ಬಳಿಕ ಎರಡು ದಿನಗಳ ಕಾಲ ಮನೆಯಲ್ಲೇ ಉಪಚರಿಸಿದರೆ ಗುಣವಾಗುತ್ತದೆ. ಜತೆಗೆ ಬೇರೊಬ್ಬರಿಗೆ ಹರಡದಂತೆ ತಡೆಯಬಹುದು ಎಂದು ವೈದ್ಯರು ಹೇಳುತ್ತಾರೆ.

ಆತಂಕ ಪಡಬೇಕಾಗಿಲ್ಲ: ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ ತಜ್ಞ ವೈದ್ಯರು ಹಾಗೂ ಐಎಪಿ ಕಾರ್ಯಕಾರಿ ಸದಸ್ಯ ಡಾ.ಜಿ.ವಿ.ಬಸವರಾಜು ಪ್ರಕಾರ, ಕಳೆದ ಐದು ವರ್ಷಗಳಿಂದ ಕಾಯಿಲೆ ತೀವ್ರಗೊಂಡಿದೆ. ಈ ವರ್ಷವೂ ಎಚ್‌ಎಫ್‌ಎಂಡಿ ಸಮಸ್ಯೆಯಿಂದ ಸಾಕಷ್ಟು ಮಕ್ಕಳು ಆಸ್ಪತ್ರೆಗೆ ದಾಖಲಾ ಗುತ್ತಿದ್ದಾರೆ. ಈ ಕಾಯಿಲೆ ಬಗ್ಗೆ ಪೋಷಕರು ತೀವ್ರ ಆತಂಕ ಪಡುತ್ತಾರೆ. ಮೈಯೆಲ್ಲಾ ನೀರು ತುಂಬಿದ ಗುಳ್ಳೆಗಳು ಆಗುವುದು ಹಾಗೂ ಬಾಯಿ ತುಂಬಾ ಹುಣ್ಣು ಆಗುವುದರಿಂದ ಮಗುವಿಗೆ ಆಹಾರ ಸೇರುವುದಿಲ್ಲ.

ಹೀಗಾಗಿ ದ್ರವ ಪದಾರ್ಥದ ಮೂಲಕವೇ ನಿಭಾಯಿಸಬೇಕು. ಹಠಾತ್ತನೇ ಜ್ವರ, ಮೈಯೆಲ್ಲಾ ಗುಳ್ಳೆಗಳು, ಚರ್ಮ ಕೆಂಪಾಗುವುದು, ಹುಣ್ಣಾ ಗುವುದರಿಂದ ಸಹಜವಾಗಿಯೇ ಪೋಷಕರು ತೀವ್ರ ಆತಂಕಕ್ಕೆ ಒಳಗಾಗುತ್ತಾರೆ. ಇದಕ್ಕೆ ಸಹಜ ಚಿಕಿತ್ಸೆ ಇದ್ದು ಒಂದು ವಾರದಲ್ಲಿ ಸಂಪೂರ್ಣ ಗುಣಪಡಿಸಬಹುದು. ಕಾಯಿಲೆಯಿಂದ ಮೆದುಳು ಸಮಸ್ಯೆ ಹಾಗೂ ಉಸಿರಾಟದ ಸಮಸ್ಯೆ ಉಂಟಾಗಬಹುದು ಎಂಬುದು ಕಾಯಿಲೆ ದಾಖಲೆಯಲ್ಲಿದೆ. ಆದರೆ, ಇತ್ತೀಚೆಗೆ ಆಸ್ಪತ್ರೆಗೆ ಬರುವ ಯಾವ ಮಕ್ಕಳಲ್ಲೂ ಈ ಸಮಸ್ಯೆ ಕಾಣಲಿಲ್ಲ. ಹೀಗಾಗಿ ಆತಂಕ ಬೇಡ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಉತ್ತರಕನ್ನಡ: ನೀರು ಕೇಳುವ ನೆಪದಲ್ಲಿ ವೃದ್ಧೆಯ ಚಿನ್ನದ ಸರ ಎಗರಿಸಿ ಖದೀಮರು ಎಸ್ಕೇಪ್!
ಬಿಜೆಪಿಯಿಂದ ಟಿಕೆಟ್ ಗಿಟ್ಟಿಸಿಕೊಂಡ ಸೋನಿಯಾ ಗಾಂಧಿಗೆ ಕೇರಳ ಚುನಾವಣೆಯಲ್ಲಿ ಸೋಲು