ಹೊಸ ವರ್ಷಾಚರಣೆಗೆ ಹೊಸ ರೂಲ್ಸ್, ರಾಹುಲ್‌ಗೆ ಸಿಗುತ್ತಾ ಚಾನ್ಸ್; ಡಿ.30ರ ಟಾಪ್ 10 ಸುದ್ದಿ!

By Suvarna NewsFirst Published Dec 30, 2020, 4:51 PM IST
Highlights

ಹೊಸ ವರ್ಷಾಚಣೆ ಸಂಭ್ರಮಕ್ಕೆ ತಯಾರಿಮಾಡಿಕೊಳ್ಳುತ್ತಿರುವವರು ಹೊಸ ನಿಯಮದ ಕುರಿತು ಅರಿತುಕೊಳ್ಳುವುದು ಮುಖ್ಯ.  ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಬಿಜೆಪಿ ಸೇರಿಕೊಳ್ಳೋ ಮೂಲಕ ರಾಜಕೀಯ ಸಂಚಲನ ಮೂಡಿಸಿದ್ದಾರೆ. ಹೊಸ ವರ್ಷದಿಂದ ನಟಿ ರಮ್ಯಾ ಸಸ್ಯಾಹಾರಿಯಾಗಲಿದ್ದಾರೆ. ಶಾಲೆ ಆರಂಭದ ಕುರಿತು ಗೊಂದಲ್ಲ ಇಲ್ಲ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ. 3ನೇ ಟೆಸ್ಟ್ ಪಂದ್ಯಕ್ಕೆ ಭಾರತ ತಂಡದಲ್ಲಿ 3 ಬದಲಾವಣೆ, ಕಿಚ್ಚನಿಗೆ ಜೋಡಿಯಾದ ಶ್ರೀಲಂಕಾ ಬೆಡಗಿ ಸೇರಿದಂತೆ ಡಿಸೆಂಬರ್ 30ರ ಪ್ರಮುಖ ಸುದ್ದಿ ಇಲ್ಲಿವೆ.
 

BMTC ಎಸಿ ಬಸ್ ಪ್ರಯಾಣಿಕರಿಗೆ ಗುಡ್ ನ್ಯೂಸ್!...

 ಬಿಎಂಟಿಸಿ ಮಹತ್ವದ ಆದೇಶವನ್ನು ಹೊರಡಿಸಿದ್ದು, ವಾಯು ವಜ್ರ ಎಸಿ ಬಸ್ ಪಾಸ್ ದರ ಇಳಿಸಿದೆ. ಮಾಸಿಕ ಪಾಸು ಮತ್ತು ದಿನದ ಪಾಸುಗಳ ದರವನ್ನ ಶೇ. 20ರಷ್ಟು ಇಳಿಸಿ ಆದೇಶ ಹೊರಡಿಸಿದೆ. 

ಲವ್‌ ಜಿಹಾದ್‌ ನಿಷೇಧಕ್ಕೆ ಮ.ಪ್ರ.ದಲ್ಲೂ ಸುಗ್ರೀವಾಜ್ಞೆ!...

ಉತ್ತರ ಪ್ರದೇಶದ ಬಳಿಕ ‘ಲವ್‌ ಜಿಹಾದ್‌’ ನಿಷೇಧಕ್ಕೆ ಮಧ್ಯಪ್ರದೇಶದ ಬಿಜೆಪಿ ಸರ್ಕಾರ ಕೂಡ ಸುಗ್ರೀವಾಜ್ಞೆಯ ಮೊರೆ ಹೋಗಿದೆ. ಅಧ್ಯಾದೇಶದ ಮೂಲಕ ಈ ಕಾನೂನನ್ನು ಜಾರಿಗೆ ತರಲು ಶಿವರಾಜ್‌ ಸಿಂಗ್‌ ಚೌಹಾಣ್‌ ನೇತೃತ್ವದ ಸರ್ಕಾರ ನಿರ್ಧರಿಸಿದ್ದು, ಇದನ್ನು ರಾಜ್ಯಪಾಲರ ಒಪ್ಪಿಗೆಗೆ ಮಂಗಳವಾರ ಕಳಿಸಿಕೊಟ್ಟಿದೆ.

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, ಕಮೆಂಟೇಟರ್ ಬಿಜೆಪಿ ಸೇರ್ಪಡೆ; ಹೊಸ ಸಂಚಲನ!...

ವಿಧಾನ ಸಭಾ ಚುನಾವಣೆಗಳು ಒಂದರ ಮೇಲೊಂದರಂತೆ ಹತ್ತಿರಬರುತ್ತಿದೆ. ಇದರ ಬೆನ್ನಲ್ಲೇ ಎಲ್ಲಾ ಪಕ್ಷಗಳು ಸೆಲೆಬ್ರೆಟಿಗಳನ್ನು, ಪ್ರಮುಖ ನಾಯಕರನ್ನು ಪಕ್ಷಕ್ಕೆ ಸೆಳೆಯುವ ಪ್ರಯತ್ನ ಮಾಡುತ್ತಿದೆ. ಆದರೆ ಕಳೆದ ಕೆಲ ತಿಂಗಳುಗಳಿಂದ ಇತರ ಪಕ್ಷಗಳಿಂದ ಬಿಜೆಗೆ ಸೇರುವ ಮುಖಂಡರ ಸಂಖ್ಯೆ ಹೆಚ್ಚುತ್ತಿದೆ. ಇದೀಗ ಟೀಂ ಇಂಡಿಯಾ ಮಾಜಿ ಕ್ರಿಟಿಗ, ಐಸಿಸಿ ಸಮಿತಿಯ ಸದಸ್ಯ, ವೀಕ್ಷಕ ವಿರಣೆಗಾರ ಬಿಜೆಪಿ ಸೇರಿಕೊಂಡಿದ್ದಾರೆ.

ಫ್ಯಾಂಟಮ್‌ ಭಾರ ಹೆಚ್ಚಿಸಿದ ಬಾಲಿವುಡ್ ಬೆಡಗಿ: ಕಿಚ್ಚನಿಗೆ ನಟಿ ಜಾಕಿ ಜೋಡಿ...

ನಟ ಸುದೀಪ್‌ ಅವರ ‘ಫ್ಯಾಂಟಮ್‌’ ಚಿತ್ರದಲ್ಲಿ ಶ್ರೀಲಂಕಾ ಮೂಲದ ಬಾಲಿವುಡ್‌ ನಟಿ ಜಾಕ್ವೆಲಿನ್‌ ಫರ್ನಾಂಡಿಸ್‌ ಹೆಜ್ಜೆ ಹಾಕುತ್ತಿದ್ದಾರೆ.

Viನಿಂದ 1,499 ಪ್ರೀಪೇಡ್ ಪ್ಲ್ಯಾನ್‌ ಮೇಲೆ 50 ಜಿಬಿ ಎಕ್ಸಟ್ರಾ ಡೇಟಾ?...

ವೋಡಾಫೋನ್-ಐಡಿಯಾ(ವಿಐ) ಕಂಪನಿಯು 1,499 ರೂ. ಪ್ರೀಪೇಡ್ ಪ್ಲ್ಯಾನ್ ಖರೀದಿಸಿದ ಚಂದಾದಾರರಿಗೆ ಎಕ್ಸಟ್ರಾ 50 ಜಿಬಿ ಡೇಟಾ ಒದಗಿಸುತ್ತಿದೆ ಎಂದು ಹಲವು ವೆಬ್‌ಸೈಟ್‌ಗಳು ವರದಿ ಮಾಡಿವೆ. ಆದರೆ, ಈ ಆಫರ್ ಕೆಲವು ಸಮಯದವರಿಗೆ ಮಾತ್ರವೇ ಇದೆಯಾ, ಇತ್ತಾ ಎಂಬುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಕಂಪನಿಯೂ ಕೂಡ ಈ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ.

ಇದು ಚೀನಾ ಬುಗಾಟಿ ಚೀರೋನ್ ಕಾರು; ಆಲ್ಟೋಗಿಂತ ಕಡಿಮೆ ಬೆಲೆ, ಲೈಸೆನ್ಸ್ ಕೂಡ ಬೇಡ!...

ಬುಗಾಟಿ ಚಿರೋನ್ ವಿಶ್ವದ ಅತ್ಯಂತ ದುಬಾರಿ ಕಾರು. ಇಷ್ಟೇ ಅಲ್ಲ ಚಿರೋನ್ ಅತೀ ವೇಗದ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದೀಗ ಇದೇ ಬುಗಾಟಿ ಚಿರೋನ್ ಕಾರಿನ ನಕಲಿ ರೂಪದಲ್ಲಿ ಚೀನಾ ಕಾರೊಂದು ಬಿಡುಗಡೆ ಮಾಡಿದೆ. ವಿಶೇಷ ಅಂದರೆ  ಚೀನಾದ ಬುಗಾಟಿ ಅತೀ ಕಡಿಮೆ ಬೆಲೆಯ ಕಾರಾಗಿದೆ. ಇಷ್ಟೇ ಅಲ್ಲ ಈ ಕಾರು ಚಲಾಯಿಸಲು ಲೈಸೆನ್ಸ್ ಕೂಡ ಬೇಕಿಲ್ಲ.

ನಾನ್‌ವೆಜ್ ಬಿಡ್ತಿದ್ದಾರೆ ರಮ್ಯಾ..! ಹೊಸ ವರ್ಷದಿಂದ ಪ್ಯೂರ್ ವೆಜಿಟೇರಿಯನ್...

ನಾನ್‌ವೆಜ್ ತ್ಯಜಿಸ್ತಾರಂತೆ ರಮ್ಯಾ..! ಚಿಕನ್, ಮಟನ್ ಫಿಶ್ ಕ್ಯಾನ್ಸಲ್ ಓನ್ಲೀ ಸೊಪ್ಪು, ತರಕಾರಿ ! ವರ್ಷದ ಕೊನೆಗೆ ನಟಿಯ ಹೊಸ ನಿರ್ಧಾರ

ಸಿಡ್ನಿ ಟೆಸ್ಟ್‌ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ 3 ಬದಲಾವಣೆ..?...

ಆಸ್ಟ್ರೇಲಿಯಾ ವಿರುದ್ದ ಜನವರಿ 07ರಿಂದ ಆರಂಭವಾಗಲಿರುವ ಬಾಕ್ಸಿಂಗ್ ಡೇ ಟೆಸ್ಟ್‌ ಪಂದ್ಯದಲ್ಲಿ ಟೀಂ ಇಂಡಿಯಾದಲ್ಲಿ 3 ಬದಲಾವಣೆಗಳಾಗುವ ನಿರೀಕ್ಷೆಯಿದೆ. 

ಹೊಸ ವರ್ಷಾಚರಣೆ ವೇಳೆ ಕೊರೋನಾ ನಿಯಮಗಳ ಕಡೆಗಣಿಸಬೇಡಿ: ಕೇಂದ್ರದಿಂದ ರಾಜ್ಯಗಳಿಗೆ ಪತ್ರ...

ಹೊಸ ವರ್ಷಾಚರಣೆ ವೇಳೆ ಮಾಸ್ಕ್ ತಪ್ಪದೇ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಮೊದಲಾದ ನಿಯಮಗಳನ್ನು ತಪ್ಪದೇ ಪಾಲಿಸಿ. ಇಲ್ಲವಾದಲ್ಲಿ ನೀವು ಕಾನೂನಾತ್ಮಕ ವಿಚಾರಣೆ ಎದುರಿಸಬೇಕಾಗುತ್ತದೆ. 

ಜ. 01 ರಿಂದ ಶಾಲಾ-ಕಾಲೇಜು ಪುನಾರಂಭದ ಬಗ್ಗೆ ಸುರೇಶ್ ಕುಮಾರ್ ಸ್ಪಷ್ಟನೆಯಿದು!...

'ಹೊಸ ವೈರಸ್ ಬಗ್ಗೆ ಅಪಾಯ ಇಲ್ಲ ಎಂದು ತಜ್ಞರು ಹೇಳಿದ್ದಾರೆ. ಶಾಲೆ ಆರಂಭಿಸಬಹುದು ಎಂದು ಆರೋಗ್ಯ ಸಚಿವರು ಹೇಳಿದ್ದಾರೆ. ಪೋಷಕರು ಹೆದರುವ ಅಗತ್ಯ ಇಲ್ಲ.  ಜನವರಿ 1 ರಿಂದ ನಿಗದಿಯಂತೆ ಶಾಲಾ ಕಾಲೇಜು ಆರಂಭವಾಗುವುದು' ಎಂದು ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. 

click me!