ಆಶ್ಚರ್ಯ! ಮೋದಿ ಹೊಗಳಿದ ಸಿಧು: ಟ್ವೀಟ್ ಇದೆ ನೋಡಿ

By Web DeskFirst Published Nov 22, 2018, 9:22 PM IST
Highlights

ಕೇಂದ್ರ ಸರ್ಕಾರವನ್ನು  ಹಾಡಿ ಹೊಗಳಿದ ನವಜೋತ್ ಸಿಧು! ಡೇರಾ ಬಾಬಾ ನಾನಕ್ ನಿಂದ ಕರ್ತಾರಪುರ್ ವರೆಗಿನ ಕಾರಿಡಾರ್ ಅಭಿವೃದ್ದಿ! ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಕ್ಯಾಬಿನೆಟ್ ಅನುಮೋದನೆ! ಕೇಂದ್ರದ ನಿರ್ಧಾರವನ್ನು ಪ್ರಶಂಸಿದ ಪಂಜಾಬ್ ಕಾಂಗ್ರೆಸ್ ಸಚಿವ

ನವದೆಹಲಿ(ನ.22): ಪ್ರಧಾನಿ ಮೋದಿ ಟೀಕಾಕಾರರ ಸಾಲಿನಲ್ಲಿ ಗುರುತಿಸಿಕೊಂಡಿರುವ ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು, ಕೇಂದ್ರ ಸರ್ಕಾರ ತೆಗೆದುಕೊಂಡಿರುವ ಒಂದು ನಿರ್ಧಾರವನ್ನು ತುಂಬು ಹೃದಯದಿಂದ ಸ್ವಾಗತಿಸಿದ್ದಾರೆ. 

ಗುರುದಾಸ್ ಪುರ ಜಿಲ್ಲೆ ಅಂತರರಾಷ್ಟ್ರೀಯ ಗಡಿಯಲ್ಲಿನ ಡೇರಾ ಬಾಬಾ ನಾನಕ್ ನಿಂದ ಕರ್ತಾರ್ ಪುರ ವರೆಗಿನ ಕಾರಿಡಾರ್ ಅಭಿವೃದ್ದಿಗೆ ನ.22 ರಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಕ್ಯಾಬಿನೆಟ್ ಅನುಮೋದನೆ ನೀಡಿದೆ. 

ಈ ವಿಷಯವಾಗಿ ಟ್ವೀಟ್ ಮಾಡಿರುವ ನವಜೋತ್ ಸಿಂಗ್ ಸಿಧು, ಕೇಂದ್ರ ಸರ್ಕಾರದ ನಿರ್ಧಾರ 12 ಕೋಟಿ ನಾನಕ್ ಭಕ್ತಾದಿಗಳಿಗೆ ಸಂತಸದ ಸುದ್ದಿಯಾಗಿದೆ, ಕಾರಿಡಾರ್ ನಿರ್ಮಾಣ ಸೇತುವೆಗಳನ್ನು ನಿರ್ಮಿಸಲಿದೆ. ದ್ವೇಷವನ್ನು ಹೋಗಲಾಡಿಸಲಿದೆ. ಎರಡು ರಾಷ್ಟ್ರಗಳ ನಡುವೆ ಸೌಹಾರ್ದತೆಯನ್ನು ಉಂಟುಮಾಡಲಿದೆ ಎಂದು ಹೇಳಿದ್ದಾರೆ.

I thank the Govt. of India from the core of my heart and take a bow! I request the Hon’ble PM of Pakistan Sahib to take reciprocal steps for opening the Kartarpur Sahib corridor and spread Baba Nanak’s message of universal brotherhood and peace across the Globe.

— Navjot Singh Sidhu (@sherryontopp)

ಕೇಂದ್ರ ಸಚಿವ ಸಂಪುಟದಲ್ಲಿ ಕೈಗೊಂಡ ಆ ನಿರ್ಧಾರದ ಬಗ್ಗೆ ಟ್ವೀಟ್ ಮಾಡಿರುವ ನವಜೋತ್ ಸಿಂಗ್ ಸಿಧು, "ಕೇಂದ್ರ ಸರ್ಕಾರದ ನಿರ್ಧಾರವನ್ನು ಸ್ವಾಗತಿಸುತ್ತೇನೆ. ತುಂಬು ಹೃದಯದಿಂದ ಧನ್ಯವಾದ ತಿಳಿಸುತ್ತೇನೆ" ಎಂದು ಹೇಳಿದ್ದಾರೆ. 

click me!