ಮೈಸೂರಿನಲ್ಲಿ ನವರಾತ್ರಿ ಸಿದ್ಧತೆ ಶುರು; ಇಂದು ಸಾರ್ವಜನಿಕ ಪ್ರವೇಶ ನಿಷೇಧ

By Web DeskFirst Published Oct 4, 2018, 10:00 AM IST
Highlights

ಮೈಸೂರಿನಲ್ಲಿ ದಸರಾ ತಯಾರಿ ಶುರು | ಕಳೆ ಕಟ್ಟಿದೆ ಸಾಂಸ್ಕೃತಿಕ ನಗರಿ | ನವರಾತ್ರಿ ವೈಭವಕ್ಕೆ ಶುರುವಾಯ್ತು ತಯಾರಿ 

ಮೈಸೂರು (ಅ. 04): ಸಾಂಸ್ಕೃತಿಕ ನಗರಿಯಲ್ಲಿ ನವರಾತ್ರಿ ವೈಭವದ ಕಳೆ ಕಟ್ಟಿದೆ.ಅಂಬಾ ವಿಲಾಸ ಅರಮನೆಯಲ್ಲಿ ಇಂದಿನಿಂದಲೇ ನವರಾತ್ರಿ ಆಚರಣೆಗೆ ಸಿದ್ಧತೆ ಶುರುವಾಗಿದೆ. 

ಸಿಂಹಾಸನ‌ ಜೋಡಣೆಗೆ ಚಾಲನೆ ಸಿಕ್ಕಿದೆ.  ಅರಮನೆಯಲ್ಲಿ ಖಾಸಗಿ ದರ್ಬಾರ್ ಗೆ ಕೈಂಕರ್ಯಗಳು ಆರಂಭವಾಗಿದೆ.  ಅರಮನೆಯ ದರ್ಬಾರ್ ಹಾಲ್‌ನಲ್ಲಿ ರತ್ನ ಖಚಿತ ಸಿಂಹಾಸನಕ್ಕೆ ಪೂಜೆ ಸಲ್ಲಿಸಿ  ಗೆಜ್ಜಗಳ್ಳಿ ಗ್ರಾಮದವರಿಂದ ಸಿಂಹಾಸನದ ಬಿಡಿಭಾಗಗಳ ಜೋಡಣೆ ಕಾರ್ಯ ಆರಂಭವಾಗಲಿದೆ.  ರಾಜಮಾತೆ ಪ್ರಮೋದಾದೇವಿ ಒಡೆಯರ್ ಸಮ್ಮುಖದಲ್ಲಿ ತಯಾರಿ ನಡೆಯಲಿದೆ. 

ದಸರಾ ಉದ್ಘಾಟಿಸಲು ಸುಧಾಮೂರ್ತಿಗೆ ಬಂತು ಅಧಿಕೃತ ಆಹ್ವಾನ

ಅರಮನೆಯ ನೆಲಮಾಳಿಗೆಯ ರೂಂನಿಂದ ಸಿಂಹಾಸನದ ಬಿಡಿ ಭಾಗಗಳನ್ನು ತಂದು ಜೋಡಣೆ ಮಾಡಲಾಗುತ್ತಿದೆ.  ಸಿಂಹಾಸನ ಜೋಡಣೆ ಹಿನ್ನೆಲೆಯಲ್ಲಿ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆ ವರೆಗೆ ಅರಮನೆಗೆ ಸಾರ್ವಜನಿಕ ಪ್ರವೇಶ ನಿಷೇಧಿಸಲಾಗಿದೆ. 

ನೀವು ಕಂಡ ಮೈಸೂರಿನ ಅರಮನೆಯ ಆಕರ್ಷಕ ಹುಡುಗಿ ನಿಧನ

click me!