ಫೇಕಿಸ್ತಾನ್ ಯುದ್ಧ ವಿಮಾನದ ಅವಶೇಷ: ಕಳ್ಳಾಟದಲ್ಲಿ ಪಾಕ್ ನಾಮಾವಶೇಷ

By Web DeskFirst Published Feb 28, 2019, 7:55 PM IST
Highlights

ಫೇಕಿಸ್ತಾನ್ ಸುಳ್ಳಿನ ಬಣ್ಣ ಬಯಲು ಮಾಡಿದ ಭಾರತೀಯ ಸೇನಾ ಅಧಿಕಾರಿಗಳು| ಪಾಕಿಸ್ತಾನದ ಫೇಕ್ ಮುಖವಾಡ ಬಯಲು ಮಾಡಿದ ಸೇನಾ ಮುಖ್ಯಸ್ಥರು| ಪಾಕಿಸ್ತಾನ ವಾಯಸೇನೆಯ ಯುದ್ಧವಿಮಾನಗಳ ಅವಶೇಷಗಳ ಪ್ರದರ್ಶನ| ಜಂಟಿಸುದ್ದಿಗೋಷ್ಠಿ ಬಳಿಕ ಅವಶೇಷಗಳನ್ನು ಪ್ರದರ್ಶಿಸಿದ ಸೇನಾಧಿಕಾರಿಗಳು|
 

ನವದೆಹಲಿ, [ಫೆ.28]: ಫೆ.14ರಂದು ನಡೆದ ಪುಲ್ವಾಮ ದಾಳಿ ಪ್ರತೀಕಾರವಾಗಿ ಭಾರತ ಮಾಡಿರುವ ಏರ್ ಸ್ಟ್ರೈಕ್ ನಿಂದಾಗಿ ಗಡಿಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.

ಏರ್ ಸ್ಟ್ರೈಕ್ ಬೆನ್ನಲ್ಲೇ ಪಾಕ್ ಸಹ ಗಡಿ ರೇಖೆ ದಾಟಿ ಬಂದು ಭಾರತದ ಮೇಲೆ ದಾಳಿಗೆ ಮುಂದಾಗಿತ್ತು. ಆದ್ರೆ ಭಾರತ ವಾಯು ಸೇನೆಯು ಪಾಕ್ ವಿಮಾನಗಳನ್ನು ಹಿಮ್ಮಟ್ಟಿಸಿದೆ. ಇದರಲ್ಲಿ ಒಂದು ವಿಮಾನವನ್ನು ಹೊಡೆದುರಿಳಿಸಿದೆ.

ಇನ್ನು ಈ ಸಂಬಂಧ ಭಾರತ ಮೂರು ಸೇನೆ ಅಂದರೆ, ವಾಯು ಸೇನೆ, ಭೂಸೇನೆ, ನೌಕಾ ಸೇನೆಯ ಅಧಿಕಾರಿಗಳು ಇಂದು [ಗುರುವಾರ] ಜಂಟಿ ಸುದ್ದಿಗೋಷ್ಠಿ ನಡೆಸಿದರು.

Air Vice Marshal RGK Kapoor: We are happy that our pilot who had fallen across the Line of Control and was in custody of Pakistan is being released, we're extremely happy to have him back. We only see it as a gesture which is in consonance with all Geneva conventions. pic.twitter.com/Dg5Cpel4Lw

— ANI (@ANI)

ಪಾಕಿಸ್ತಾನ ಶಾಂತಿ ಮಾತುಕತೆಗೆ ಮುಂದಾಗಿದೆ. ನಾವೂ ಇದಕ್ಕೆ ಪ್ರತಿಕೂಲವಾಗಿ ಸ್ಪಂದಿಸುತ್ತೇವೆ. ಶಾಂತಿಗೆ ಶಾಂತಿ ಎಂಬುದು ನಮ್ಮ ಮಂತ್ರ. ಕ್ರಾಂತಿ ಬೇಕೆಂದ್ರೆ ಅದಕ್ಕೂ ನಾವು ಸಿದ್ಧ ಎಂದು ಏರ್​​ ವೈಸ್​ ಮಾರ್ಷಲ್​ ಆರ್​​ಜಿಕೆ ಕಪೂರ್​ ಹೇಳಿದ್ದಾರೆ.

Visuals of cover of AARAM missile fired from Pakistani F-16 aircraft found near the LoC in India pic.twitter.com/qHdOm5cDqN

— ANI (@ANI)

ಪಾಕಿಸ್ತಾನ ನಮ್ಮ ಸೇನಾ ನೆಲೆಗಳ ಮೇಲೆ ದಾಳಿ ನಡೆಸಿ, ಅವುಗಳನ್ನು ನಾಶ ಮಾಡಲು ಮುಂದಾಗಿತ್ತು. ಆದ್ರೆ ನಮ್ಮ ವಾಯುಸೇನೆ ಅದನ್ನು ಬಲವಾಗಿ ಹಿಮ್ಮೆಟ್ಟಿಸಿತು. ಈ ಮಧ್ಯೆ, ಪಾಕಿಸ್ತಾನ ಎಫ್​-16 ಯುದ್ಧ ವಿಮಾನ ಬಳಸಿದ ಎಂಬುದಕ್ಕೆ ನಮ್ಮಲ್ಲಿ ಬಲವಾದ ಸಾಕ್ಷ್ಯವಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಭಾರತ ವಾಯು ಸೇನೆಯು ಪಾಕ್ ಯುದ್ಧ ವಿಮಾನವನ್ನು ಹೊಡೆದುರಿಳಿಸಿರುವುದರ ಬಗ್ಗೆ ಸಾಕ್ಷಿಗಳನ್ನು ಬಿಡುಗಡೆ ಮಾಡಿದರು. ಈ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನವನ್ನು ಬೆತ್ತಲುಗೊಳಿಸಿದರು. 

ಪಾಕಿಸ್ತಾನ ಯುದ್ಧ ವಿಮಾನ F-16 ಹೊಡೆದುರುಳಿಸಿರುವುದು ನಿಜ. ಪಾಕ್ F-16 ಫ್ಲೈಟ್ ಅವಶೇಷಗಳು ಭಾರತ ಗಡಿ ಪ್ರದೇಶದೊಳಗೆ ಬಿದ್ದಿವೆ ಎಂದು ಏರ್ ವೈಸ್ ಮಾರ್ಷೆಲ್ ರವಿ ಕಪೂರ್ ಹೇಳಿದರು.

35 ಬಾರಿ ಗಡಿ ನಿಯಂತ್ರಣ ರೇಖೆ ದಾಟಿ ದಂಡೆತ್ತಿ ಬಂದಿದ್ದು, ಪಾಕಿಸ್ತಾನ ಯುದ್ಧ ವಿಮಾನ F-16 ಹೊಡೆದುರುಳಿಸಿರುವುದಕ್ಕೆ ಅವಶೇಷಗಳ ಸಾಕ್ಷಿ ಎಂದು ಏರ್ ವೈಸ್ ಮಾರ್ಷೆಲ್ ರವಿ ಕಪೂರ್ ಮಾಹಿತಿ ನೀಡಿದರು.

 ಪಾಕ್ ನ ಎಫ್-16 ಯುದ್ಧ ವಿಮಾನದ ಕ್ಷಿಪಣಿಯ ತುಂಡು ಪ್ರದರ್ಶನ ಮಾಡಿ ಫೇಕಿಸ್ತಾನ್ ಸುಳ್ಳಿನ ಬಣ್ಣ ಬಯಲು ಮಾಡಿದರು.

click me!