ಬಿರುಗಾಳಿ ಸಹಿತ ಭಾರೀ ಮಳೆಗೆ ಮರ ಉರುಳಿಬಿದ್ದು ಯುವಕ ದುರ್ಮರಣಕ್ಕೀಡಾದ ಘಟನೆ ಮಂಡ್ಯ ನಗರದ ಶಿಲ್ಪಶ್ರೀ ಆಸ್ಪತ್ರೆ ಬಳಿ ನಡೆದಿದೆ. ಜಿ ಬೊಮ್ಮನಹಳ್ಳಿ ಗ್ರಾಮದ ಕಾರ್ತಿಕ್(27) ಮೃತ ದುರ್ದೈವಿ
ಮಂಡ್ಯ (ಮೇ.6): ಬಿರುಗಾಳಿ ಸಹಿತ ಭಾರೀ ಮಳೆಗೆ ಮರ ಉರುಳಿಬಿದ್ದು ಯುವಕ ದುರ್ಮರಣಕ್ಕೀಡಾದ ಘಟನೆ ಮಂಡ್ಯ ನಗರದ ಶಿಲ್ಪಶ್ರೀ ಆಸ್ಪತ್ರೆ ಬಳಿ ನಡೆದಿದೆ.
ಜಿ ಬೊಮ್ಮನಹಳ್ಳಿ ಗ್ರಾಮದ ಕಾರ್ತಿಕ್(27) ಮೃತ ದುರ್ದೈವಿ. ಅನಾರೋಗ್ಯ ಹಿನ್ನೆಲೆ ತಂದೆ ಜಿ ಬೊಮ್ಮನಹಳ್ಳಿ ಆಸ್ಪತ್ರೆಗೆ ದಾಖಲಾಗಿದ್ದ. ಇಂದು ತಂದೆಯ ಆರೋಗ್ಯ ವಿಚಾರಿಸಲು ಬಂದಿದ್ದ ಕಾರ್ತಿಕ್. ಆರೋಗ್ಯ ವಿಚಾರಿಸಿ ವಾಪಸ್ ಹೋಗುವಾಗ ಬಿರುಗಾಳಿ ಸಹಿತ ಭಾರೀ ಮಳೆಯಾಗುತ್ತಿದ್ದ ಹಿನ್ನೆಲೆ ಬೈಕ್ ನಿಲ್ಲಿಸಿ ಸ್ನೇಹಿತನ ಕಾರು ಹತ್ತಿ ಕುಳಿತಿದ್ದ ಕಾರ್ತಿಕ್. ಮರದ ಕೆಳಗೇ ಕಾರು ನಿಲ್ಲಿಸಿದ್ದರಿಂದ ಬಿರುಗಾಳಿಗೆ ಕಾರಿನ ಮೇಲೆ ಉರುಳಿಬಿದ್ದ ಬೃಹತ್ ಮರ. ಮರಬಿದ್ದ ರಭಸಕ್ಕೆ ಸ್ಥಳದಲ್ಲೇ ಮೃತಪಟ್ಟಿರುವ ಯುವಕ. ಕಾರಿನ ಹೊರಗಡೆ ನಿಂತಿದ್ದ ಸ್ನೇಹಿತ ಮೃತ್ಯವಿನಿಂದ ಪಾರಾಗಿದ್ದಾನೆ.
ಮುರುಡೇಶ್ವರ ಸಮುದ್ರದಲ್ಲಿ ಮುಳುಗಿ ಇಬ್ಬರು ಯುವಕರ ದುರಂತ ಸಾವು
ಎಂತಹ ದುರ್ವಿಧಿ ನೋಡಿ ನಾಳೆಯೇ ಕಾರ್ತಿಕ್ ಹುಟ್ಟು ಹಬ್ಬವಿತ್ತು. ಇಂದು ಹೊಸಬಟ್ಟೆ ಖರೀದಿಸಿ, ತಂದೆ ಆರೋಗ್ಯ ವಿಚಾರಿಸಿ ತೆರಳುವಾಗ ನಡೆದಿರುವ ದುರ್ಘಟನೆ. ಮಗನ ಸಾವು ಕಂಡು ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ ಘಟನೆ ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರು, ನಗರಸಭೆ ಅಧಿಕಾರಿಗಳು ಭೇಟಿ ನೀಡಿ ಕ್ರೇನ್ ಮೂಲಕ ಮರ ತೆರವು ಕಾರ್ಯ ನಡೆಸಿದ್ದಾರೆ. ಮಂಡ್ಯ ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.