ಈಕ್ವಲ್ ಜಸ್ಟೀಸ್... ಸಂಸತ್‌ನಲ್ಲಿ ಕಾವೇರಿ ಕತೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಸುಮಲತಾ

By Web DeskFirst Published Aug 1, 2019, 12:17 AM IST
Highlights

ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಕರ್ನಾಟಕದ ಪರವಾಗಿ ಸಂಸತ್ ನಲ್ಲಿ ಧ್ವನಿ ಎತ್ತಿದ್ದಾರೆ.  ನದಿ ನೀರು ಹಂಚಿಕೆ ಸಂಬಂಧ ಇಡೀ ದೇಶಕ್ಕೆ ಒಂದೇ ಪ್ರಾಧಿಕಾರದ ಕುರಿತಾದ ಚರ್ಚೆಯಲ್ಲಿ ಸುಮಲತಾ ಅನೇಕ ಅಂಶಗಳನ್ನಿಟ್ಟುಕೊಂಡು ಗಮನ ಸೆಳೆದರು.

ನವದೆಹಲಿ[ಆ, 01] ಮಂಡ್ಯದ ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್ ಸಂಸತ್ ನಲ್ಲಿ ಮಾತನಾಡುತ್ತ ಕಾವೇರಿ ನದಿ ನೀರು ಹಂಚಿಕೆಯಲ್ಲಿ ಕರ್ನಾಟಕ್ಕೆ ಹೇಗೆ ಅನ್ಯಾಯವಾಗುತ್ತಿದೆ ಎಂಬುದನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಅಂತರ್ ರಾಜ್ಯ ನದಿ ನೀರು ಹಂಚಿಕೆ ಮಸೂದೆ  2019 ರ ಮೇಲಿನ ಚರ್ಚೆಯಲ್ಲಿ ಮಾತನಾಡಿದರು.. ಸುಮಲತಾ ಅವರ ಪ್ರಭಾವಶಾಲಿ ಮಾತುಗಳು ಹೇಗಿದ್ದವು? ಅವರದ್ದೇ ಭಾಷೆಯಲ್ಲಿ ಕೇಳಿಕೊಂಡು ಬನ್ನಿ..

"

‘ರಾಜ್ಯಗಳ ನಡುವೆ ವಿವಾದ ಇರಬಹುದು. ಆದರೆ ನೀರು ಅತ್ಯಮೂಲ್ಯ ಎಂಬುದನ್ನು ಎಲ್ಲರೂ ಒಪ್ಪಿಕೊಳ್ಳಲೇಬೇಕು. ನದಿ ನೀರು ಹಂಚಿಕೆಯಲ್ಲಿ ಉಂಟಾಗುವ ಗೊಂದಲಗಳನ್ನು ಸೂಕ್ಷ್ಮವಾಗಿ ಬಗೆಹರಿಸಬೇಕಾಗುತ್ತದೆ.

ನದಿ ನೀರು ಹಂಚಿಕೆ ಗೊಂದಲ ನಿವಾರಣೆಗೆ ಇಡೀ ದೇಶಕ್ಕೆ ಒಂದೇ ಪ್ರಾಧಿಕಾರ ಎಂಬುದನ್ನು ನಾನು ಸ್ವಾಗತ ಮಾಡುತ್ತೇನೆ. ನಾನು ಕರ್ನಾಟಕದ ಪರ ಮಾತನಾಡುತ್ತೇನೆ. ನಾನು ಈಕ್ವಲ್ ಜಸ್ಟೀಸ್[ಸರ್ವರಿಗೂ ಸಮಾನ ಹಕ್ಕು] ಎಂಬ ಪದವನ್ನು ಅಂಡರ್ ಲೈನ್ ಮಾಡುತ್ತೇನೆ. ಯಾಕೆ?...ಯಾಕಂದ್ರೆ ಹಲವಾರು ವರ್ಷಗಳಿಂದ ನಮ್ಮ ಕರ್ನಾಟಕದ ಜನರಿಗೆ ಸಮಾನ ನೀರು ಹಂಚಿಕೆ ಆಗುತ್ತಿಲ್ಲ. ಈ ಹೊಸ ಮಸೂದೆ ಕರ್ನಾಟಕದ ಜನರಿಗೆ ನ್ಯಾಯ ನೀಡುತ್ತದೆ ಎಂದು ಬಲವಾಗಿ ನಂಬಿದ್ದೇನೆ.

ಮಂಡ್ಯ ರೈತರಿಗೆ KRS ನೀರು, ಸುಮಲತಾ ಪೋಸ್ಟ್ ಹುಟ್ಟುಹಾಕಿದ ಚರ್ಚೆ

ಕಾವೇರಿ ನದಿಯ ಬಗ್ಗೆ ನಾನಿಲ್ಲಿ ಹೇಳಲೇಬೇಕು. ಕರ್ನಾಟಕದ ತಲಕಾವೇರಿಯಲ್ಲಿ ಜನಿಸುವ ನದಿ ನಂತರ ತಮಿಳುನಾಡು, ಪಾಂಡಿಚೇರಿ ಮತ್ತು ಕೇರಳದವರೆಗೂ ಹರಿಯುತ್ತದೆ.ಈ ನದಿಯ ನೀರು ಹಂಚಿಕೆಯನ್ನು ಎರಡು ದೊಡ್ಡ ರಾಜ್ಯಗಳ ನಡುವೆ ಅಂದಿನ ಬ್ರಿಟಿಷ್ ಸರಕಾರ ನಿರ್ಧಾರ ಮಾಡಿತ್ತು. ಮದ್ರಾಸ್ ಪ್ರೆಸಿಡೆನ್ಸಿ[ತಮಿಳುನಾಡು]  ಮತ್ತು ಚಿಕ್ಕ ಸಂಸ್ಥಾನವಾಗಿದ್ದ ಮೈಸೂರಿನ [ಕರ್ನಾಟಕ] ನಡುವೆ ನದಿ ನೀರು ಹಂಚಿಕೆಯಾಗಿತ್ತು.

ದಕ್ಷಿಣ ಭಾರತದ ಈ ಎರಡು ರಾಜ್ಯಗಳ ನಡುವೆ ಹಲವಾರು ಸಾಮ್ಯತೆಗಳಿವೆ. ಸಂಸ್ಕೃತಿ, ಆಹಾರ ಪದ್ಧತಿ ಭಾಷೆಯಲ್ಲಿ ಸಾಮ್ಯತೆ ಇದೆ. ಆದರೆ ಕಾವೇರಿ ನದಿ ನೀರು ಹಂಚಿಕೆ ಮಾತ್ರ ಯಾವಾಗಲೂ ಗೊಂದಲದ ಗೂಡೆ ಆಗಿದೆ. ಕಾವೇರಿ ನದಿಯೊಂದೇ ಅಲ್ಲ.. ದಕ್ಷಿಣ ಭಾರತದ ನದಿಗಳು ಹಿಮಾಲಯದ ನದಿಗಳಂತೆ ಜೀವನದಿಗಳಲ್ಲ.  ಮಳೆ ನೀರಿನಿಂದ ಮಾತ್ರ ತುಂಬಿ ಹರಿಯುತ್ತವೆ. ಮಾನ್ಸೂನ್ ಮಳೆಯೇ ಇದಕ್ಕೆಲ್ಲ ಆಧಾರ. ನಾವು ನ್ಯಾಯಕ್ಕಾಗಿ ನೂರಾರು ವರ್ಷ ಕಾದಿದ್ದೇವೆ. ಮಾತನಾಡಲು ಇನ್ನು ಕೆಲ ನಿಮಿಷಗಳ ಅವಕಾಶ ಕೊಡಿ....

ಇನ್ನು ಕೆಲ ವಿಚಾರಗಳನ್ನು ನಿಮ್ಮ ಗಮನಕ್ಕೆ ತರಲು ಬಯಸುತ್ತೇನೆ. ಕೆಆರ್‌ಎಸ್ ಅಣೆಕಟ್ಟೆಯ ಒಟ್ಟು ಸಾಮರ್ಥ್ಯ 124.8 ಅಡಿ , ಆದರೆ ಈ ಸಾರಿ ಮಳೆ ಕೊರತೆಯಿಂದ 84-85 ಅಡಿ ಮಾತ್ರ ತುಂಬಿದೆ. ಕಳೆದ ವರ್ಷ ಅಂದರೆ 2018ರಲ್ಲಿ  ಇದೇ ವೇಳೆಗೆ 124 ಅಡಿ ತುಂಬಿತ್ತು. ಇದರ ಅರ್ಥ ನನ್ನ ರಾಜ್ಯ ಬರ ಎದುರಿಸುತ್ತಿದೆ.  150 ತಾಲೂಕಿಗಳಿಗೆ ಕುಡಿಯಲೂ ನೀರಿಲ್ಲ. ನಾವು ಹೇಗೆ ನೀರು ಬಿಡಬೇಕು  ಎಂಬುದೇ ಅರ್ಥವಾಗುತ್ತಿಲ್ಲ

ಏನೇ ಇರಲಿ..ಕರ್ನಾಟಕ ಮೊದಲಿನಿಂದಲೂ ನ್ಯಾಯಾಲಯಕ್ಕೆ ಗೌರವ ನೀಡುತ್ತಲೇ  ಬಂದಿದೆ. ನ್ಯಾಯಾಲಯದ ಆದೇಶ ಪಾಲನೆಯಲ್ಲಿ ಯಾವತ್ತೂ ಹಿಂದೆ ಬಿದ್ದಿಲ್ಲ. ನಾವು ಶಾಂತಿ ಪ್ರಿಯರು.. ಪಕ್ಕದ ರಾಜ್ಯದವರ ಸಹಕಾರವನ್ನು ಕೇಳುತ್ತಲೇ ಬಂದಿದ್ದೇವೆ. 

ಪ್ರಾಧಿಕಾರ 740 ಟಿಎಂಸಿ ನೀರು ಕಾವೇರಿ ಕಣಿವೆಯಲ್ಲಿ ಲಭ್ಯವಿದೆ ಎಂದು ಪ್ರಾಧಿಕಾರ ಹೇಳುತ್ತಿದೆ. ನಾನೊಬ್ಬಳೆ ಕರ್ನಾಟಕದ ಪರವಾಗಿ ಮಾತನಾಡುತ್ತಿದ್ದೇನೆ.... ಕರ್ನಾಟಕಕ್ಕೆ ಕಾವೇರಿ ನದಿ ನೀರು ಹಂಚಿಕೆಯಲ್ಲಿ ಸಮಾನ ನ್ಯಾಯ ಸಿಕ್ಕಿಲ್ಲ ಎಂಬುದನ್ನು ಮತ್ತೆ ಮತ್ತೆ ನಿಮ್ಮ ಗಮನಕ್ಕೆ ತರುತ್ತಿದ್ದೇನೆ..

ಈ ಎಲ್ಲ ನಿಯಮಗಳು ಬ್ರಿಟಿಷ್ ಕಾಲದಲ್ಲಿ ಮಾಡಿದ್ದು. ರಾಜಧಾನಿ ಬೆಂಗಳೂರು ಐಟಿ ಬಿಟಿ ಹಬ್ ಆಗಿ ರೂಪಗೊಂಡಿದೆ. ನಾನು ಮುಗಿಸುತ್ತಿದ್ದೇನೆ ..... ಶೇ. 35 ರಿಂದ 40 ಶೇಕಡಾ ಸಾಫ್ಟವೇರ್ ಇಲ್ಲಿಂದಲೇ ರಫ್ತಾಗುತ್ತಿದೆ. ನೀವು 5 ಟ್ರಿಲಿಯನ್ ಎಕಾನಮಿ ಬಗ್ಗೆ ಹೇಳುವವರು ಈ ನಗರಕ್ಕೆ ನೀರನ್ನು ಕಡೆಗಣನೆ ಮಾಡುವಂತೆ ಇಲ್ಲ,. ಬ್ರಿಟಿಷರ ಕಾಲದ ನಿಯಮಗಳು ಈಗ ಯಾವ ಕಾರಣಕ್ಕೂ ಅನ್ವಯವಾಗುವುದೇ ಇಲ್ಲ.

ಮೂರನೇ ವಿಶ್ವಯುದ್ಧ ಆದರೆ ಅದು ನೀರಿಗಾಗಿ ಎಂಬ ಮಾತಿದೆ. ನಾವು ಶಾಂತಚಿತ್ತವಾಗಿಯೇ ಬಗೆಹರಿಸಿಕೊಳ್ಳಲು ಬಯಸುತ್ತೇವೆ. ಇದನ್ನು ನನ್ನ ನೆರೆಯ ರಾಜ್ಯದ ಅಂದರೆ ತಮಿಳುನಾಡಿನವರೂ ಮನವರಿಕೆ ಮಾಡಿಕೊಳ್ಳುತ್ತಾರೆ ಎಂದು ಭಾವಿಸುತ್ತೇನೆ’

 

click me!