ಗೆಲುವಿನಿಂದ ನಿವಾರಣೆಯಾಯ್ತು ದೀದಿ ಸಂಕಷ್ಟ, ಪರಿಹಾರ ಬೇಡ ಎಂದ ಸಮಂತಾ; ಅ.3ರ ಟಾಪ್ 10 ಸುದ್ದಿ!

By Suvarna NewsFirst Published Oct 3, 2021, 5:00 PM IST
Highlights

ಬಾಲಿವುಡ್ ಡ್ರಗ್ಸ್ ಪಾರ್ಟಿ ಭಾರಿ ಸದ್ದು ಮಾಡುತ್ತಿದೆ. ತನಿಖೆಯಲ್ಲಿ ಸ್ಫೋಟಕ ಮಾಹಿತಿಗಳು ಹೊರಬರುತ್ತಿದೆ. ಇತ್ತ ಮಮತಾ ಬ್ಯಾನರ್ಜಿ ಸಿಎಂ ಪಟ್ಟ ಉಳಿಸಿಕೊಂಡಿದ್ದಾರೆ.  ವಿಚ್ಚೇದನ ಪಡೆದಿರುವ ನಟಿ ಸಮಂತಾ 200 ಕೋಟಿ ರೂಪಾಯಿ ಪರಿಹಾರ ಬೇಡ ಎಂದಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಪಂಜಾಬ್ ಸವಾಲು, ಕೋವಿಡ್ ನಿಯಂತ್ರಣದಲ್ಲಿ ಕರ್ನಾಟಕ ನಂ.1 ಸೇರಿದಂತೆ ಅಕ್ಟೋಬರ್ 3ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

ಬಾಲಿವುಡ್‌ ಡ್ರಗ್ಸ್ ಪಾರ್ಟಿ: ಕ್ರೂಸ್‌ಗೆ ಎಂಟ್ರಿಯಾದವರಿಗೆ 14 ಪುಟಗಳ 'ಕ್ರಯಾಕ್ ಬೈಬಲ್'!

ಮುಂಬೈನಲ್ಲಿ ಎನ್‌ಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, ಸಮುದ್ರದ ಮಧ್ಯೆ ಐಷಾರಾಮಿ ಹಡಗಿನಲ್ಲಿ ನಡೆಯುತ್ತಿದ್ದ ಡ್ರಗ್ಸ್ ಪಾರ್ಟಿಯಲ್ಲಿ ಎಂಜಾಯ್‌ ಮಾಡುತ್ತಿದ್ದವರನ್ನು ಬಲೆಗೆ ಹಾಕಿಕೊಂಡಿದೆ. ಈ ಮೂಲಕ ಬಾಲಿವುಡ್‌ ಸ್ಟಾರ್‌ ನಟನ ಮಗ ಸೇರಿ ಒಟ್ಟು ಹದಿನಾರು ಮಂದಿಯನ್ನು ಎನ್‌ಸಿಬಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. 

ಸಿಎಂ ಪಟ್ಟ ಉಳಿಸಿಕೊಂಡ ದೀದಿ: 58,832 ಮತಗಳಿಂದ ಗೆದ್ದ ಮಮತಾ ಬ್ಯಾನರ್ಜಿ!

 ಪಶ್ಚಿಮ ಬಂಗಾಳದ ಭವಾನಿಪುರ ವಿಧಾನಸಭಾ ಕ್ಷೇತ್ರಕ್ಕೆ(Bhabanipur Buypoll) ನಡೆದಿದ್ದ ಉಪಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಸಿಎಂ ಮಮತಾ ಬ್ಯಾನರ್ಜಿ(Mamata Banerjee) ಬರೋಬ್ಬರಿ 58,832 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಕೋವಿಡ್‌ ನಿಯಂತ್ರಣ: ದೇಶದಲ್ಲಿ ರಾಜ್ಯ ನಂ. 1!

ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಜಯಂತಿಯಂದೇ ಕರ್ನಾಟಕಕ್ಕೆ ‘ಕೋವಿಡ್‌-19 ವಿರುದ್ಧ ಹೋರಾಡುತ್ತಿರುವ ಅತ್ಯುತ್ತಮ ರಾಜ್ಯ’(BEST STATE COMBATING COVID-19) ಪ್ರಶಸ್ತಿ ಲಭಿಸಿದೆ. ಪ್ರತಿಷ್ಠಿತ ಮಾಧ್ಯಮ ಸಂಸ್ಥೆ ಇಂಡಿಯಾ ಟುಡೇ ಸಮೂಹ ‘ಇಂಡಿಯಾ ಟುಡೇ ಹೆಲ್ತ್‌ಗಿರಿ’ ಪ್ರಶಸ್ತಿಯನ್ನು(The India Today Healthgiri Awards 2021) ರಾಜ್ಯಕ್ಕೆ ನೀಡಿದೆ.

IPL 2021: ಪಂಜಾಬ್ ಕಿಂಗ್ಸ್ ಎದುರು ಟಾಸ್ ಗೆದ್ದ ಆರ್‌ಸಿಬಿ ಬ್ಯಾಟಿಂಗ್ ಆಯ್ಕೆ

ರಾಯಲ್ ಚಾಲೆಂಜರ್ಸ್‌ ಬೆಂಗಳೂರು (Royal Challengers Bangalore) ಹಾಗೂ ಪಂಜಾಬ್ ಕಿಂಗ್ಸ್‌ ನಡುವಿನ 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯ 48ನೇ ಪಂದ್ಯದಲ್ಲಿ ಟಾಸ್ ಗೆದ್ದ ಆರ್‌ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ (Virat Kohli) ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ

ಹಿಂದು ಭಾವನೆಗಳಿಗೆ ಧಕ್ಕೆ ತಂದ ನಟಿ ಆಲಿಯಾ ಭಟ್ ವಿರುದ್ಧ FIR ದಾಖಲು!

ಬಾಲಿವುಡ್ ನಟಿ ಆಲಿಯಾ ಭಟ್ ಬಟ್ಟೆ ಬ್ರ್ಯಾಂಡ್ ಒಂದರ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಹಿಂದೂ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಮತ್ತು ಕನ್ಯಾದಾನದಂತಹ ಪವಿತ್ರ ಸಂಪ್ರದಾಯವನ್ನು ತಪ್ಪಾಗಿ ತೋರಿಸಿದ್ದಾರೆ ಎಂದು ಹೇಳಲಾಗಿದೆ. ಈ ಕಾರಣಕ್ಕೆ ಸಾಂತಾಕ್ರೂಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಮಾಜಿ ಗಂಡನಿಂದ ಸಿಗಲಿದ್ದ 200 ಕೋಟಿ ಪರಿಹಾರ ಬೇಡ ಎಂದ ಸಮಂತಾ

ಬಾಲಿವುಡ್ ಸೇರಿದಂತೆ ಸಿನಿ ಇಂಡಸ್ಟ್ರಿಯಲ್ಲಿ ಒಂದು ವಿಚ್ಚೇದನೆ ಪಕ್ಕಾ ಆಯಿತು ಎಂದಾಗ ಅಲ್ಲಿ ಪತ್ನಿಗೆ ನೀಡಲಾಗುವ ಪರಿಹಾರದ ಮೊತ್ತ ಭಾರೀ ಸುದ್ದಿಯಾಗುತ್ತದೆ. ಕಾರಣ ಭಾರೀ ದೊಡ್ಡ ಮೊತ್ತವನ್ನೇ ಸ್ಟಾರ್ ಹೀರೋಗಳು ತಮ್ಮಿಂದ ಬೇರೆಯಾಗುವ ಪತ್ನಿಗೆ ನೀಡಬೇಕಾಗಿರುತ್ತದೆ.

iPhone 13 ಪ್ರೋ ಮ್ಯಾಕ್ಸ್ ಕ್ಯಾಮರಾ ಬಳಸಿ ಕಣ್ಣಿನ ಚಿಕಿತ್ಸೆ, ವೈದ್ಯನ ಪ್ರಯತ್ನಕ್ಕೆ ಭರ್ಜರಿ ಯಶಸ್ಸು!

ವೈದ್ಯಲೋಕಕ್ಕೆ ಅಚ್ಚರಿ ನೀಡಿದ ಘಟನೆ ಅಮೆರಿಕದಲ್ಲಿ(America) ನಡೆದಿದೆ. ಮೊಬೈಲ್ ಕ್ಯಾಮರಾ(Mobile camera) ಬಳಸಿ ಕಣ್ಣಿನ ಚಿಕಿತ್ಸೆ ನಡೆಸಿ ಯಶಸ್ವಿಯಾದ ವೈದ್ಯ(Doctor)  ಸುಲಭ ವಿಧಾನ ಪರಿಚಯಿಸಿದ್ದಾರೆ. ಕಳದ ತಿಂಗಳು ಆ್ಯಪಲ್ iPhone 13 ಪ್ರೋ ಮ್ಯಾಕ್ಸ್ ಬಿಡುಗಡೆ ಮಾಡಿತ್ತು. ಇದೇ ಫೋನ್ ಬಳಸಿದ ಡಾ. ಟೊಮಿ ಕೊರ್ನ್ ಕಣ್ಣಿನ ಚಿಕಿತ್ಸೆಯನ್ನು(Eye Treatment) ಯಶಸ್ವಿಯಾಗಿ ಹಾಗೂ ಸುಲಭವಾಗಿ ಮಾಡಿದ್ದಾರೆ.

8 ತಿಂಗಳ ಬಳಿಕ ಮನೆಗೆ ಭೇಟಿ ಕೊಟ್ಟ ರೈಲ್ವೇ ಸಚಿವ: ತಂದೆ ಕೊಟ್ಟ ಪತ್ರದಲ್ಲಿತ್ತು ಆ ಒಂದು ವಾಕ್ಯ!

ಪ್ರಧಾನ ಮಂತ್ರಿ ನರೇಂದ್ರ ಮೋದಿ(Narendra Modi) ಸಂಪುಟದಲ್ಲಿ ಕೇಂದ್ರ ರೈಲ್ವೇ ಸಚಿವರಾದ(Railway Minister) ಬಳಿಕ ಇದೇ ಮೊದಲ ಬಾರಿ ಅಶ್ವಿನಿ ವೈಷ್ಣವ್(Ashwini Vaishnav) ಜೋಧ್ಪುರದ(Jodhpur) ತಮ್ಮ ಮನೆಗೆ ತಲುಪಿದ್ದಾರೆರು. 

click me!