ಮಹಾ ಮೈತ್ರಿಯೊಳಗೆ ಅಸಮಾಧಾನ, IPL ವೀಕ್ಷಣೆ ನಿಲ್ಲಿಸಲು 5 ಕಾರಣ; ಸೆ.21ರ ಟಾಪ್ 10 ಸುದ್ದಿ!

By Suvarna NewsFirst Published Sep 21, 2021, 4:49 PM IST
Highlights

ಜಮ್ಮು ಕಾಶ್ಮೀರದಲ್ಲಿ ಸೇನಾ ಹೆಲಿಕಾಪ್ಟರ್‌ ಪತನಗೊಂಡಿದ್ದು, ರಕ್ಷಣಾ ಕಾರ್ಯ ಮುಂದುವರಿದಿದೆ. ಇತ್ತ ಮಹಾರಾಷ್ಟ್ರದ ಮಹಾ ವಿಕಾಸ ಅಘಾಡಿ ಸರ್ಕಾರದಲ್ಲಿ ಅಸಮಾಧಾನ ಭುಗಿಲೆದ್ದಿದೆ. 45 ಲಕ್ಷದ ಫ್ಲ್ಯಾಟ್‌ ಖರೀದಿಗೆ ಮುದ್ರಾಂಕ ಶುಲ್ಕ ಶೇ.3ಕ್ಕೆ ಇಳಿಸಲಾಗಿದೆ. ಐಪಿಎಲ್ ನೋಡೋದು ನಿಲ್ಲಿಸಲು ಐದು ಕಾರಣ, 18 ಕೊಟಿ ಮುಗಿಯೋಕೆ 18 ಗಂಟೆಯೂ ಬೇಡ ಎಂದ ಸೋನು ಸೇರಿದಂತೆ ಸೆಪ್ಟೆಂಬರ್ 21ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

ಉಧಂಪುರ ಬಳಿ ಸೇನಾ ಹೆಲಿಕಾಪ್ಟರ್‌ ಪತನ, ಮುಂದುವರಿದ ರಕ್ಷಣಾ ಕಾರ್ಯ!

ಜಮ್ಮು ಕಾಶ್ಮೀರದ ಉಧಂಪುರ ಜಿಲ್ಲೆಯ ಶಿವ ಗರ್‌ಧಾರ್​​ನಲ್ಲಿ ಮಂಗಳವಾರ ಭಾರತೀಯ ಸೇನೆಯ ಹೆಲಿಕಾಪ್ಟರ್‌ ಪತನಗೊಂಡಿದೆ. ಮಂಜು ಮುಸುಕಿದ ವಾತಾವರಣವಿದ್ದ ಕಾರಣ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದೆ ಎನ್ನಲಾಗಿದೆ. ಇನ್ನು ಈ ಘಟನೆಯಲ್ಲಿ ಇಬ್ಬರು ಪೈಲಟ್‌ಗಳು ಗಾಯಗೊಂಡಿರುವುದಾಗಿ ವರದಿಯಾಗಿದೆ.

ಬೆನ್ನಿಗೆ ಚೂರಿ ಇರಿಯುವ ಪವಾರ್ ನಮ್ಮ ಗುರುವಾಗಲು ಸಾಧ್ಯವಿಲ್ಲ: ಶಿವಸೇನೆ ನಾಯಕ!

ಮಹಾರಾಷ್ಟ್ರದ ಮಹಾ ವಿಕಾಸ ಅಘಾಡಿ ಸರ್ಕಾರದಲ್ಲಿ ಭಿನ್ನಾಭಿಪ್ರಾಯಗಳು ಮೂಡಲಾರಂಭಿಸಿವೆ. ಶಿವಸೇನೆ, ಕಾಂಗ್ರೆಸ್ ಮತ್ತು NCP ಈ ಮೂರೂ ಪಕ್ಷಗಳು ಒಟ್ಟಾಗಿ ಸರ್ಕಾರವ ನಡೆಸುತ್ತಿವೆಯಾದರೂ, ಕಾಲಕಾಲಕ್ಕೆ ಈ ಪಕ್ಷಗಳ ನಾಯಕರ ನಡುವಿನ ಅಸಮಾಧಾನ ಬಹಿರಂಗಗೊಳ್ಳುತ್ತಿದೆ. ಸದ್ಯ ಮಾಜಿ ಕೇಂದ್ರ ಸಚಿವ ಮತ್ತು ಶಿವಸೇನಾ ನಾಯಕ ಅನಂತ್ ಗೀತೆ, ಎನ್‌ಸಿಪಿ ನಾಯಕ ಶರದ್ ಪವಾರ್(Shaarad pawar) ಕುರಿತಾಗಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

IPL 2021: ಐಪಿಎಲ್ ನೋಡೋದು ನಿಲ್ಲಿಸಲು ಸಾಕು ಈ ಐದು ಕಾರಣಗಳು!

IPL ಸಂಭ್ರಮ ಸುಮಾರು ಒಂದು ತಿಂಗಳಿಗಿಂತಲೂ ಹೆಚ್ಚು ದಿನ ಮುಂದುವರೆಯುತ್ತದೆ. ಕ್ರಿಕೆಟ್‌ ಅಭಿಮಾನಿಗಳಿಗೆ ಇದೊಂದು ಅತ್ಯಂತ ಪವಿತ್ರ ಕಾಲದಂತೆ. ಹೀಗಾಗೆ ಒಂದೂ ಪಂದ್ಯ ತಪ್ಪದೇ ವೀಕ್ಷಿಸುತ್ತಾರೆ. ಆದರೆ ಈ ಐಪಿಎಲ್‌ ಫೀವರ್‌ ಕೂಡಾ ಒಳ್ಳೆಯದಲ್ಲ ಎಂಬ ಮಾತಿದೆ. ಅಷ್ಟಕ್ಕೂ ಯಾಕೆ? ಇಲ್ಲಿವೆ ನೋಡಿ ಐದು ಕಾರಣ

ಕ್ರಿಕೆಟ್‌ ಬಿಟ್ಟರೂ ಕೋಟಿಗಟ್ಟಲೇ ಸಂಪಾದನೆ, ಕೊಹ್ಲಿ ಆದಾಯದ 8 ದೊಡ್ಡ ಮೂಲಗಳು!

ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ(Virat Kohli) ಟಿ 20 ಕ್ರಿಕೆಟ್ ಮತ್ತು ಐಪಿಎಲ್ ಫ್ರಾಂಚೈಸಿ ಆರ್‌ಸಿಬಿ(RCB) ನಾಯಕತ್ವಕ್ಕೆ ಗುಡ್‌ಬೈ ಹೇಳಲಿದ್ದಾರೆ. ಹೀಗಿದ್ದರೂ ಅವರ ಆದಾಯ ಕಡಿಮೆಯಾಗುವುದಿಲ್ಲ, ಕೋಟಿಗಟ್ಟಲೇ ಆದಾಯ ಮುಂದುವರೆಯಲಿದೆ. 

ಓದದೆ ಬಾಕಿ ಇದೆ 54 ಸಾವಿರ ಮೇಲ್: 18 ಕೊಟಿ ಮುಗಿಯೋಕೆ 18 ಗಂಟೆಯೂ ಬೇಡ ಎಂದ ಸೋನು

ಅಕ್ರಮ ಫಂಡ್ ವಿಚಾರವಾಗಿ ಇತ್ತೀಚೆಗಷ್ಟೇ ಬಹುಭಾಷಾ ನಟ ಸೋನು ಸೂದ್ ಮನೆಯಲ್ಲಿ ಬರೋಬ್ಬರಿ ಮೂರು ದಿನಗಳ ಕಾಲ ಆದಾಯ ತೆರಿಗೆ ಅಧಿಕಾರಿಗಳು ನಟನ ಮುಂಬೈನ ಮನೆಯಲ್ಲಿ ದಾಳಿ ನಡೆಸಿದ್ದರು. 

45 ಲಕ್ಷದ ಫ್ಲ್ಯಾಟ್‌ ಖರೀದಿಗೆ ಮುದ್ರಾಂಕ ಶುಲ್ಕ ಶೇ.3ಕ್ಕೆ ಇಳಿಕೆ

ರಾಜ್ಯ ಸರ್ಕಾರ ಕೆಳ ಮಧ್ಯಮ ವರ್ಗ ಹಾಗೂ ಬಡವರು ಫ್ಲ್ಯಾಟ್‌ ಖರೀದಿಸುವುದನ್ನು ಉತ್ತೇಜಿಸಲು ರಾಜ್ಯದಲ್ಲಿ 35ರಿಂದ 45 ಲಕ್ಷ ರು. ಮೌಲ್ಯದ ಫ್ಲ್ಯಾಟ್‌ಗಳ ಖರೀದಿಗೆ ನಿಗದಿ ಮಾಡಿದ್ದ ಶೇ.5ರಷ್ಟುಮುದ್ರಾಂಕ ಶುಲ್ಕವನ್ನು ಶೇ.3ಕ್ಕೆ ಇಳಿಕೆ ಮಾಡಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ಹೇಳಿದ್ದಾರೆ.

ಸೋಶಿಯಲ್ ಮೀಡಿಯಾ ದೋಸ್ತಿ.. ಆಮೇಲೆ ಮಸ್ತಿ..  ಹನಿಟ್ರ್ಯಾಪ್ ಬಲೆಗೆ ಸೇನಾಧಿಕಾರಿ!

ಶ್ರೀನಗರ ಬೇಸ್ ಆಸ್ಪತ್ರೆಯಲ್ಲಿ  ಕರ್ತವ್ಯ ನಿರ್ವಹಿಸುತ್ತಿರುವ ಸೇನಾ ಅಧಿಕಾರಿಯೊಬ್ಬರನ್ನು ಉತ್ತರ ಪ್ರದೇಶದ ಕಾನ್ಪುರದ ಮಹಿಳೆ  ಹನಿ ಟ್ಯ್ರಾಪ್ ಬಲೆಗೆ ಬೀಳಿಸಿದ್ದಾಳೆ.

ಕಾಂಗ್ರೆಸ್ಸಿದ್ದರೆ ಜನ ಬೀದಿ ಹೆಣವಾಗುತ್ತಿದ್ದರು: ಬೊಮ್ಮಾಯಿ ವಾಗ್ಬಾಣ!

ವಿಶ್ವಾದ್ಯಂತ ಈ ಹಿಂದೆ ಸ್ಪಾ್ಯನಿಶ್‌ ಫä್ಲ ಬಂದಾಗ ನಮ್ಮ ದೇಶದಲ್ಲಿ ಹಸಿವಿನಿಂದಲೇ ಸಾವಿರಾರು ಮಂದಿ ಸಾವನ್ನಪ್ಪಿದ್ದರು. ಕೊರೋನಾದಂತಹ ಮಹಾಮಾರಿ ಬಂದಿದ್ದರೂ ಪ್ರಧಾನಿ ನರೇಂದ್ರ ಮೋದಿ ಅವರು ಹಸಿವಿನಿಂದ ಒಬ್ಬರನ್ನೂ ಸಾಯಲು ಬಿಟ್ಟಿಲ್ಲ. ಕಾಂಗ್ರೆಸ್‌ ಅವಧಿಯಲ್ಲಿ ಇಂತಹ ಕಾಯಿಲೆ ಬಂದಿದ್ದರೆ ಜನ ರಸ್ತೆಗಳಲ್ಲೇ ಸಾಯುತ್ತಿದ್ದರು...’

click me!