ಜನಾರ್ದನ ರೆಡ್ಡಿ ಅರೆಸ್ಟ್ ಆಗ್ತಾರಾ..? ವಕೀಲರು ಹೇಳುವುದೇನು?

By Web DeskFirst Published Nov 10, 2018, 4:38 PM IST
Highlights

ಆಂಬಿಡೆಂಟ್ ಬಹುಕೋಟಿ ಚಿಟ್ ಫಂಡ್ ಹಗರಣಚನ್ನ ಮುಚ್ಚಿಹಾಕಲು ಲಂಚ ಸ್ವೀಕರಿಸಿದ್ದಾರೆ  ಎಂಬ ಆರೋಪ ಹೊತ್ತಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ಅರೆಸ್ಟ್ ಆಗ್ತಾರಾ..? ಈ ಬಗ್ಗೆ ವಕೀಲರು ಹೇಳುವುದೇನು?

ಬೆಂಗಳೂರು, (ನ.10): ಆಂಬಿಡೆಂಟ್ ಬಹುಕೋಟಿ ಚಿಟ್ ಫಂಡ್ ಹಗರಣಚನ್ನ ಮುಚ್ಚಿಹಾಕಲು ಲಂಚ ಸ್ವೀಕರಿಸಿದ್ದಾರೆ  ಎಂಬ ಆರೋಪ ಹೊತ್ತಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ಪ್ರತ್ಯಕ್ಷರಾಗಿದ್ದಾರೆ. ಈ ಬಗ್ಗೆ ಜನಾರ್ದನ ರೆಡ್ಡಿ ವಕೀಲರು ಕೆಲ ಮಾಹಿತಿಯನ್ನ ಹಂಚಿಕೊಂಡಿದ್ದಾರೆ.

ಆಂಬಿಡೆಂಟ್ ಚಿಟ್ ಫಂಡ್ ಪ್ರಕರಣದಲ್ಲಿ ಜನಾರ್ದನ ರೆಡ್ಡಿ ವಿರುದ್ಧ ಇರುವ ಆರೋಪಗಳೆಲ್ಲವೂ ಸತ್ಯಕ್ಕೆ ದೂರವಾಗಿದ್ದು, ಎಫ್‌ಐಆರ್‌ನಲ್ಲಿ ಜನಾರ್ದನ ರೆಡ್ಡಿಯ ಹೆಸರೇ ಇಲ್ಲದ ಮೇಲೆ ಭಯ ಪಡುವ ಅಗತ್ಯವೇನು ಇಲ್ಲ, ಆಂಬಿಡೆಂಟ್ ಕಂಪನಿ ಡೀಲ್‌ಗೆ ಸಂಬಂಧಿಸಿದಂತೆ ಎಲ್ಲಾ ತನಿಖೆಗೂ ಸಂಪೂರ್ಣ ಸಹಕಾರವಿದೆ ಎಂದು ಜನಾರ್ದನ ರೆಡ್ಡಿ ಪರ ವಕೀಲ ಚಂದ್ರಶೇಖರ್ ತಿಳಿಸಿದ್ದಾರೆ.

ಜನಾರ್ದನ ರೆಡ್ಡಿ ವಕೀಲ ಚಂದ್ರಶೇಖರ್ ಅವರೊಂದಿಗಿರುವ ವಿಡಿಯೋವನ್ನು ಬಿಡುಗಡೆ ಮಾಡಿದ್ದು, ತನಿಖೆಗೆ ಸಿಸಿಬಿಗೆ ಕಚೇರಿಗೆ ಬಂದಿರುವುದಾಗಿ ತಿಳಿಸಿದ್ದಾರೆ. 

ಆಂಬಿಡೆಂಟ್ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಆಯುಕ್ತರು ಜನಾರ್ದನರೆಡ್ಡಿಯವರ ಹೆಸರನ್ನು ಪ್ರಸ್ತಾಪಿಸಿದ್ದರು.

ಅಲ್ಲದೇ ಅದೇ ಪೊಲೀಸ್ ಪ್ರಕರಣೆಯಲ್ಲಿ ರೆಡ್ಡಿ ವಿರುದ್ಧ ಕೆಲವೊಂದು ಆರೋಪಗಳನ್ನು ಕೂಡ ಮಾಡಿದ್ದರು. ಆದರೆ ಅದೆಲ್ಲವೂ ಸತ್ಯಕ್ಕೆ ದೂರವಾಗಿದ್ದು, ಅಂತಹ ಅವ್ಯವಹಾರದಲ್ಲಿ ರೆಡ್ಡಿ ಭಾಗಿಯಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. 

ಆದ್ರೆ, ವಿಚಾರಣೆ ಬಳಿಕ ಜನಾದರ್ದನಾ ರೆಡ್ಡಿಯನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆಯುತ್ತಾರಾ? ಎನ್ನುವುದನ್ನ ಕಾದುನೋಡಬೇಕಿದೆ.

click me!