‘ಹಣೆಬರಹ ರೇಪ್ ಇದ್ದಂತೆ: ತಡೆಯಲಾಗದಿದ್ದರೆ ಎಂಜಾಯ್ ಮಾಡಿ’!

By Web DeskFirst Published Oct 22, 2019, 5:20 PM IST
Highlights

‘ಹಣೆಬರಹ ರೇಪ್ ಇದ್ದಂತೆ: ತಡೆಯಲಾಗದಿದ್ದರೆ ಎಂಜಾಯ್ ಮಾಡಿ’| ಕೇರಳ ಕಾಂಗ್ರೆಸ್ ಸಂಸದನ ಪತ್ನಿಯ ವಿವಾದಾತ್ಮಕ ಹೇಳಿಕೆ| ವಿವಾದಾತ್ಮಕ ಹೇಳಿಕೆ ನೀಡಿದ ಕಾಂಗ್ರೆಸ್ ಸಂಸದ ಹಿಬಿ ಈಡನ್ ಪತ್ನ| ಹಣೆಬರವನ್ನು ಅತ್ಯಾಚಾರಕ್ಕೆ ಹೋಲಿಸಿದ ಆ್ಯನಾ ಈಡನ್| ಅತ್ಯಾಚಾರವನ್ನು ಎಂಜಾಯ್ ಮಾಡಬೇಕೆಂದ ಆ್ಯನಾ ಈಡನ್| ನೆಟ್ಟಿಗರ ಆಕ್ರೋಶ ಕಂಡು ಪೋಸ್ಟ್ ಹಿಂಪಡೆದ ಸಂಸದನ ಪತ್ನಿ|

ತಿರುವನಂತಪುರಂ(ಅ.22): ಆಕೆ ಸಮಾಜದ ಪ್ರತಿಷ್ಠಿತ ವರ್ಗದ ಮನೆ ಮಗಳು, ಸಂಸದರ ಪತ್ನಿ, ಸುಶಿಕ್ಷಿತ ಕುಟುಂಬದ ಹಿನ್ನೆಲೆಯಳ್ಳವಳು, ಇದೆಲ್ಲಕ್ಕೂ ಮಿಗಿಲಾಗಿ ಆಕೆ ಓರ್ವ ಹೆಣ್ಣು.. ಆಕೆ ಇದೆಲ್ಲವೂ ಹೌದಾ ಅಲ್ವಾ ನೀವೇ ತೀರ್ಮಾನಿಸಿ.. 

ಅಪ್ರಾಪ್ತೆ ಅಪಹರಿಸಿ ಅಡಗಿಸಿಟ್ಟು ಅತ್ಯಾಚಾರ : ಆರೋಪಿ ಸೆರೆ

ಹಣೆಬರಹ ಅತ್ಯಾಚಾರ ಇದ್ದಂತೆ, ಒಂದು ವೇಳೆ ಅದನ್ನು ತಡೆಯಲಾಗದಿದ್ದರೆ ಆಸ್ವಾದಿಸಬೇಕು..’ ಇದು ಕೇರಳದ ಕಾಂಗ್ರೆಸ್ ಸಂಸದ ಹಿಬಿ ಈಡನ್ ಪತ್ನಿಯ ಉವಾಚ್ಚ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ಆ್ಯನಾ ಈಡನ್, ಹಣೆಬರ ಅತ್ಯಾಚಾರ ಇದ್ದಂತೆ, ಅದನ್ನು ತಡೆಯಲಾಗದಿದ್ದರೆ ಕನಿಷ್ಠ ಅದನ್ನು ಎಂಜಾಯ್ ಮಾಡಬೇಕು ಎಂದು ಬರೆದುಕೊಂಡಿದ್ದರು.

ಬಿಷಪ್‌ ರೇಪ್‌ ವಿರುದ್ಧ ಬೀದಿಗಿಳಿದಿದ್ದ ಸನ್ಯಾಸಿನಿಗೆ ವ್ಯಾಟಿಕನ್‌ನಲ್ಲೂ ಸೋಲು!

ಆ್ಯನಾ ಪೋಸ್ಟ್’ಗೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಮಹಿಳೆಯಾಗಿ ಅತ್ಯಾಚಾರ ಕುರಿತು ಇಂತಹ ಕೀಳು ಹೇಳಿಕೆ ನೀಡಲು ನಾಚಿಕೆಯಾಗಬೇಕು ಎಂದು ನೆಟ್ಟಿಗರು ಹರಿಹಾಯ್ದಿದ್ದಾರೆ.

ಭಾರೀ ಮಳೆಯ ಹಿನ್ನೆಲೆಯಲ್ಲಿ ಕೊಚ್ಚಿಯ ಮನೆಯಿಂದ ತಮ್ಮ ಮಗುವನ್ನು ರಕ್ಷಿಸಿದ ವಿಡಿಯೋ ಹಾಗೂ ಸಂಸದ ಹಿಬಿ ತಮ್ಮ ಸಿಜ್ಲರ್ ಊಟವನ್ನು ಸವಿಯುತ್ತಿರುವ ವಿಡಿಯೋ ಶೇರ್ ಮಾಡಿದ್ದ ಆ್ಯನಾ, ಮೇಲಿನಂತೆ ಹೇಳಿಕೆ ನೀಡಿದ್ದರು.

ಸಾಮೂಹಿಕ ಅತ್ಯಾಚಾರಗೈದು ವಿಷವುಣಿಸಿದ ಮಾಜಿ ಗಂಡನ ಕುಟುಂಬಸ್ಥರು!

ಇನ್ನು ನೆಟ್ಟಿಗರ ಆಕ್ರೋಶ ಕಂಡು ಕೂಡಲೇ ತಮ್ಮ ಪೋಸ್ಟ್ ಡಿಲೀಟ್ ಮಾಡಿರುವ ಆ್ಯನಾ, ತಮಗೆ ಯಾರನ್ನೂ ನೋವಿಸುವ ಉದ್ದೇಶ ಇರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
 

click me!