ಬಜೆಟ್‌ಗೂ ಮುನ್ನ ಸಿಎಂ ಮುಂದೆ ಪತ್ರಕರ್ತರ ನಾಲ್ಕು ಬೇಡಿಕೆಗಳು

By Web DeskFirst Published Feb 4, 2019, 9:31 PM IST
Highlights

ಬಜೆಟ್ ಮಂಡನೆಗೂ ಮುನ್ನ ಮುಖ್ಯಮಂತ್ರಿ ರೈತರೊಂದಿಗೆ, ಶ್ರಮಿಕರೊಂದಿಗೆ ಸಭೆ ನಡೆಸಿ ಅವರ ಬೇಡಿಕೆಗಳನ್ನು ಆಲಿಸುವುದು ವಾಡಿಕೆ.  ಈ ಬಾರಿ ಪತ್ರಕರ್ತರು ಸಹ ತಮ್ಮ ವಿವಿಧ ಬೇಡಿಕೆಗಳನ್ನು ಸಿಎಂ ಮುಂದೆ ಇಟ್ಟಿದ್ದಾರೆ.

ಬೆಂಗಳೂರು[ಫೆ.04] ರಾಜ್ಯ ಬಜೆಟ್ ಮಂಡನೆಗೆ ದಿನಗಣನೆ ಶುರುವಾಗಿದೆ. ಈ ನಡುವೆ ಮಾಧ್ಯಮ ಪ್ರತಿನಿಧಿಗಳು ವಿವಿಧ ಬೇಡಿಕೆಗಳನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಮುಂದೆ ಇಟ್ಟಿದ್ದಾರೆ.

ಒಂದಷ್ಟು ಪತ್ರಕರ್ತರು ಸೋಮವಾರ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರನ್ನು ಭೇಟಿಮಾಡಿ ಮನವಿ ಸಲ್ಲಿಸಿದ್ದಾರೆ. ಸರಕಾರ ಯಾವುದಕ್ಕೆಲ್ಲ ಅಸ್ತು ಎನ್ನುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಬೇಡಿಕೆಗಳು ಹೀಗಿವೆ...

1). ಸದ್ಯ ಜಾರಿಗೆ ಬರುತ್ತಿರುವ ಆಯುಷ್ ಕರ್ನಾಟಕ ಯೋಜನೆಯಲ್ಲಿ ಕೆಲವೇ ಪತ್ರಕರ್ತರಿಗೆ ಮಾತ್ರ ಸೌಲಭ್ಯ ಸಿಗುವಂತೆ ಮಾಡಲಾಗಿದೆ ಇದರ ಬದಲು ನಿತ್ಯ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲ ಪತ್ರಕರ್ತರಿಗೂ ಹಾಗೂ ಅವರನ್ನು ಅವಲಂಬಿಸಿರುವ ತಂದೆ-ತಾಯಿ ಕುಟುಂಬಕ್ಕೂ ಸೌಲಭ್ಯ ಸಿಗುವಂತೆ ಮಾಡಬೇಕು.

ಹೇಗಿರುತ್ತದೆ ಈ ಬಾರಿಯ ರಾಜ್ಯ ಬಜೆಟ್?

2). ರಾಜ್ಯದಲ್ಲಿ 3,000 ಹಿರಿಯ ಪತ್ರಕರ್ತರು ಇದ್ದು ಅವರಲ್ಲಿ ಕೇವಲ 600 ಪತ್ರಕರ್ತರಿಗೆ ಮಾತ್ರ ಪಿಂಚಣಿ ಸಿಗುತ್ತದೆ ಉಳಿದವರಿಗೂ ಪಿಂಚಣಿ ಸಿಗಬೇಕಾದರೆ ಜಾರಿಗೆ ಬಂದಿರುವ ನಿಯಮಗಳು ಅಡ್ಡಿ ಆಗುತ್ತಿವೆ. ಆದ್ದರಿಂದ ನಿಯಮಗಳನ್ನು ಸಡಿಲಿಸಿ ಹಿರಿಯ ಪತ್ರಕರ್ತರಿಗೆ ಪಿಂಚಣಿ ಸಿಗುವಂತೆ ಮಾಡಬೇಕು.

3). ರಾಜ್ಯದಲ್ಲಿ ಪತ್ರಿಕೆಗಳನ್ನು ಹಂಚುವ ಸಾವಿರಾರು ಯುವಕರು ಆರೋಗ್ಯ ಸುರಕ್ಷಿತ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಇವರಿಗೆ ಸೂಕ್ತ ಸೌಲಭ್ಯ ಕೊಡುವ ನಿಟ್ಟಿನಲ್ಲಿ ಸರ್ಕಾರ ಆದರೆ ಇನ್ನೂ ಜಾರಿಗೆ ಬಂದಿಲ್ಲ. ಈ ಬಗ್ಗೆ ಬಜೆಟ್ ನಲ್ಲಿ ಹೆಚ್ಚಿನ ಒತ್ತು ಕೊಡಬೇಕು

4). ವಿಧಾನಸೌಧ ಸೇರಿದಂತೆ ಬೆಂಗಳೂರು ಮತ್ತು ಇತರ ಜಿಲ್ಲಾ ಕೇಂದ್ರಗಳಲ್ಲಿ ಸುದ್ದಿ ರವಾನೆಗೆ ಅನುಕೂಲವಾಗುವಂತೆ ಮಾಧ್ಯಮ ಕೇಂದ್ರ ಗಳನ್ನು ಸರ್ಕಾರದಿಂದ ಆರಂಭಿಸಬೇಕು.

click me!