Published : Jul 18, 2025, 06:54 AM ISTUpdated : Jul 18, 2025, 11:46 PM IST

Karnataka News Live: ಮೂವರು ಗೆಳೆಯರ ಸಾಹಸ, ಜಿಲ್ಲೆಯ 800 ಮನೆಗೆ 24 ಗಂಟೆ ಉಚಿತ ವಿದ್ಯುತ್

ಸಾರಾಂಶ

ರಾಯಲ್‌ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿಜಯೋತ್ಸವ ಆಯೋಜನೆ ವಿಚಾರದಲ್ಲಿ ಪೊಲೀಸರು ಆರ್‌ಸಿಬಿ ಸೇವಕರಂತೆ ವರ್ತಿಸಿ ಕಾಲ್ತುಳಿತ ನಡೆಯಲು ಕಾರಣವಾಗಿ ಸರ್ಕಾರಕ್ಕೆ ಮುಜುಗರ ಉಂಟಾಗುವಂತೆ ಮಾಡಿದ್ದಾರೆ. ಈ ಕಾರಣದಿಂದಲೇ ಪೊಲೀಸ್‌ ಅಧಿಕಾರಿಗಳನ್ನು ಸೇವೆಯಿಂದ ಅಮಾನತು ಮಾಡಲಾಯಿತು ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ ಮುಂದೆ ಬಲವಾಗಿ ವಾದಿಸಿದೆ. ಕಾಲ್ತುಳಿತ ಪ್ರಕರಣ ಸಂಬಂಧ ಕರ್ತವ್ಯಲೋಪ ಆರೋಪದಡಿ ಬೆಂಗಳೂರು ನಗರ ಹೆಚ್ಚುವರಿ ಪೊಲಿಸ್‌ ಆಯುಕ್ತರಾಗಿದ್ದ ವಿಕಾಸ್‌ ಕುಮಾರ್‌ ಅವರನ್ನು ಸೇವೆಯಿಂದ ಅಮಾನತು ಮಾಡಿದ ಆದೇಶ ರದ್ದುಪಡಿಸಿದ ಕೇಂದ್ರ ಆಡಳಿತಾತ್ಮಕ ನ್ಯಾಯಾಧಿಕರಣ (ಸಿಎಟಿ)ದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಸ್.ಜಿ.ಪಂಡಿತ್ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಕರ್ತವ್ಯ ಲೋಪ ಆರೋಪದ ಮೇಲೆ ಪೊಲೀಸ್‌ ಅಧಿಕಾರಿಗಳನ್ನು ಅಮಾನತುಪಡಿಸಿದ ತನ್ನ ಕ್ರಮವನ್ನು ಸರ್ಕಾರ ಸಮರ್ಥಿಸಿಕೊಂಡಿತು.

Electricity

11:46 PM (IST) Jul 18

ಮೂವರು ಗೆಳೆಯರ ಸಾಹಸ, ಜಿಲ್ಲೆಯ 800 ಮನೆಗೆ 24 ಗಂಟೆ ಉಚಿತ ವಿದ್ಯುತ್

ಮೂವರು ಗೆಳಯರ ಸಾಹಸದಿಂದ ಇದೀಗ ಜಿಲ್ಲೆಯ 800 ಮನೆಗೆ ಉಚಿತ ವಿದ್ಯುತ್ ಲಭ್ಯವಾಗಿದೆ. ದಿನದ 24 ಗಂಟೆಯೂ 800 ಮನೆಗಳಿಗೆ ಯಾವುದೇ ಅಡೆ ತಡೆ ಇಲ್ಲದೆ ವಿದ್ಯುತ್ ಲಭ್ಯವಾಗಿದೆ. ಈ ಮೂವರು ಗೆಳೆಯರು ಮಾಡಿದ ಕ್ರಾಂತಿಯೇನು?

 

Read Full Story

10:58 PM (IST) Jul 18

ಸೌಜನ್ಯ ಪ್ರಕರಣಕ್ಕೂ ಶವ ಹೂತಿಟ್ಟ ಆರೋಪಕ್ಕೂ ಸಂಬಂಧವಿಲ್ಲ, ಅಡ್ವೋಕೇಟ್ ಕೆವಿ ಧನಂಜಯ್ ಸ್ಪಷ್ಟನೆ

ಧರ್ಮಸ್ಥಳದ ಮಾಜಿ ಕಾರ್ಮಿಕ ಎನ್ನಲಾದ ಅನಾಮಿಕ ವ್ಯಕ್ತಿ ಮಾಡಿದ ನೂರಾರು ಶವಗಳ ಹೂತಿಟ್ಟ ಆರೋಪ ಇದೀಗ ಕೋಲಾಹಲ ಸೃಷ್ಟಿಸಿದೆ. ಇದರ ನಡುವೆ ಅಡ್ವೋಕೇಟ್ ಕೆವಿ ಧನಂಜಯ್ ಕೆಲ ಸ್ಪಷ್ಟನೆ ನೀಡಿದ್ದಾರೆ.

Read Full Story

09:56 PM (IST) Jul 18

ತಿರುಪತಿ ಭಕ್ತರಿಗೆ ಟಿಟಿಡಿ ಮಹತ್ವದ ಎಚ್ಚರಿಕೆ, ಭಕ್ತರಿಂದ ಹಣ ವಸೂಲಿ ಪ್ರಕರಣ ಬೆಳಕಿಗೆ

ತಿರುಪತಿ ತಿಮ್ಮಪ್ಪನ ಭಕ್ತರಿಗೆ ಟಿಟಿಡಿ ಮಹತ್ವದ ಎಚ್ಚರಿಕೆ ನೀಡಿದೆ. ನಕಲಿ ಫೇಸ್‌ಬುಕ್ ಖಾತೆ ಸೃಷ್ಟಿಸಿ ಭಕ್ತರಿಂದ ಹಣ ವಸೂಲಿ ಮಾಡುವ ಪ್ರಕರಣ ಬೆಳಕಿಗೆ ಬಂದಿದೆ. ಈ ಕುರಿತು ಟಿಟಿಡಿ ಅಲರ್ಟ್ ನೀಡಿದೆ.

Read Full Story

09:35 PM (IST) Jul 18

ಮಂಗಳೂರು, ಹಾಸನ, ಸಕಲೇಶಪುರದ ತಿರುಪತಿ ಭಕ್ತಾದಿಗಳಿಗೆ ಗುಡ್‌ನ್ಯೂಸ್; ಪ್ರಯಾಣ ಸುಲಭ, ಆರಾಮದಾಯಕ!

Good News for Tirumala Devotees: ಮಂಗಳೂರಿನಿಂದ ತಿರುಪತಿಗೆ ನೇರ ಬಸ್ ಸೇವೆ ಆರಂಭವಾಗಿದ್ದು, ಭಕ್ತರಿಗೆ ಅನುಕೂಲವಾಗಿದೆ. ಐರಾವತ ಕ್ಲಬ್ ಕ್ಲಾಸ್ ಬಸ್ ಹೊರಡಲಿದೆ.

Read Full Story

09:16 PM (IST) Jul 18

ಐದು ದಿನ ಭಾರಿ ಮಳೆ ಅಲರ್ಟ್, ಈ ಜಿಲ್ಲೆಗೆ ವೀಕೆಂಡ್ ಟ್ರಿಪ್ ಬರೋ ಪ್ರವಾಸಿಗರಿಗೆ ಎಚ್ಚರಿಕೆ

ರಾಜ್ಯದ ಹಲೆವೆಡೆ ಭಾರಿ ಮಳೆಯಾಗುತ್ತಿದೆ. ಹಲವು ಜಿಲ್ಲೆಗಳಲ್ಲಿ ಆರೇಂಜ್ ಅಲರ್ಟ್ ನೀಡಲಾಗಿದೆ. ಭಾರಿ ಮಳೆ ಕಾರಣ ಇದೀಗ ಕೆಲ ಜಿಲ್ಲೆಗೆ ಎಚ್ಚರಿಕೆ ನೀಡಲಾಗಿದೆ. ವೀಕೆಂಡ್ ಪ್ರವಾಸಕ್ಕೆ ತೆರಳುವ ಮುನ್ನ ಅಲರ್ಟ್ ಪಾಲಿಸಲು ಸೂಚಿಸಲಾಗಿದೆ

Read Full Story

08:50 PM (IST) Jul 18

ಆಂದ್ರದಲ್ಲಿ ನಾಯ್ಡು ಫ್ಲಾಗ್ ಹಾರಿಸಿದರೆ ಕೇಂದ್ರ ಸರ್ಕಾರ ಬೀಳಲಿದೆ! - ಸಚಿವ ಲಾಡ್ ಸ್ಫೋಟಕ ಹೇಳಿಕೆ

ಕಾರ್ಮಿಕ ಸಚಿವ ಸಂತೋಷ ಲಾಡ್ ಅವರು ಕೇಂದ್ರದಲ್ಲಿರುವ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಚಂದ್ರಬಾಬು ನಾಯ್ಡು ಫ್ಲಾಗ್ ಹಾರಿಸಿದರೆ ಮೋದಿ ಸರ್ಕಾರ ಉರುಳುತ್ತದೆ ಎಂದು ಲಾಡ್ ಹೇಳಿದ್ದಾರೆ. ಬಿಜೆಪಿ 75 ವರ್ಷ ಮೇಲ್ಪಟ್ಟವರನ್ನು ರಾಜಕೀಯದಿಂದ ನಿವೃತ್ತಿಗೊಳಿಸಬೇಕೆಂದು ಹೇಳಿದ್ದಾರೆ .

Read Full Story

08:37 PM (IST) Jul 18

ಇಸ್ಲಾಂಪುರ ಇನ್ನು ಈಶ್ವರಪುರ, ಮರುನಾಮಕರಣಕ್ಕೆ ಮಹಾರಾಷ್ಟ್ರ ಸಂಪುಟ ಅಸ್ತು

ಇಸ್ಲಾಂಪುರ ಅನ್ನೋ ಗ್ರಾಮದ ಹೆಸರನ್ನು ಇದೀಗ ಈಶ್ವರಪುರವಾಗಿ ಮುರುನಾಮಕರಣ ಮಾಡಲು ಮಹಾರಾಷ್ಟ್ರ ಸಂಪುಟ ಗ್ರೀನ್ ಸಿಗ್ನಲ್ ನೀಡಿದೆ. ಇತ್ತ ವಿಧಾನಸಭೆಯಲ್ಲಿ ಈ ಪ್ರಸ್ತಾವನೆ ಮಂಡಿಸಲಾಗಿದೆ.

Read Full Story

08:14 PM (IST) Jul 18

ಧರ್ಮಸ್ಥಳದಲ್ಲಿ ನೂರು ಶವಗಳ ಹೂತಿಟ್ಟ ಆರೋಪ, ಅನಾಮಿಕ ನೀಡಿದ ದೂರಿನಲ್ಲಿದೆಯಾ ಸತ್ಯಾಂಶ?

ಧರ್ಮಸ್ಥಳದಲ್ಲಿ ಸರಣಿ ಹತ್ಯೆಗಳು ನಡೆದಿದ್ದು, ಮೃತದೇಹಗಳನ್ನು ಹೂತಿಟ್ಟಿರುವುದಾಗಿ ಹೇಳಿದ ಅನಾಮಿಕ ವ್ಯಕ್ತಿ ದೂರು ದಾಖಲಿಸಿದ್ದಾನೆ. ಈತ ನೀಡಿದ ದೂರಿನಲ್ಲಿ ಏನಿದೆ? ಇದರಲ್ಲಿ ಸತ್ಯಾಂಶವಿದೆಯಾ?

Read Full Story

08:01 PM (IST) Jul 18

ಸೌಜನ್ಯಾ ಕೇಸ್‌ನ ನಂತರ ಧರ್ಮಸ್ಥಳಕ್ಕೆ ಮತ್ತೆ ಧರ್ಮ ಸಂಕಟ! 100ಕ್ಕೂ ಹೆಚ್ಚು ಶವ ಹೂತಿಟ್ಟ ವ್ಯಕ್ತಿ ಪ್ರತ್ಯಕ್ಷ!

ಧರ್ಮಸ್ಥಳದಲ್ಲಿ ನಡೆದಿರುವ 100ಕ್ಕೂ ಅಧಿಕ ನಿಗೂಢ ಹತ್ಯೆಗಳ ಬಗ್ಗೆ ಮಾಜಿ ನೌಕರನೊಬ್ಬ ಬಹಿರಂಗಪಡಿಸಿದ್ದಾನೆ. ನೂರಾರು ಅಪ್ರಾಪ್ತ ಬಾಲಕಿಯರು ಮತ್ತು ಮಹಿಳೆಯರ ಅತ್ಯಾಚಾ*ರ ಮತ್ತು ಕೊಲೆಗಳ ಆರೋಪ ಕೇಳಿಬಂದಿದ್ದು, ಈ ಹತ್ಯೆಗಳ ತನಿಖೆಗೆ ಆಗ್ರಹಿಸಿ ವಕೀಲರ ಪತ್ರ ವೈರಲ್ ಆಗಿದೆ.

Read Full Story

07:34 PM (IST) Jul 18

ಸಾಲು ಸಾಲು ಹಗರಣ, ರೈತರು, ಬಾಣಂತಿಯರು, ಶಿಶುಗಳ ಸಾವಿನ ಸಾಧನಾ ಸಮಾವೇಶ; ಆರ್. ಅಶೋಕ!

ರಾಜ್ಯದಲ್ಲಿ ನಡೆದಿರುವ ಹಲವು ದುರಂತಗಳ ನಡುವೆಯೂ ಸಿಎಂ ಸಿದ್ದರಾಮಯ್ಯ ಸಾಧನಾ ಸಮಾವೇಶ ಹಮ್ಮಿಕೊಂಡಿರುವುದಕ್ಕೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಟೀಕೆ ವ್ಯಕ್ತಪಡಿಸಿದ್ದಾರೆ. ಸರ್ಕಾರದ ಅಸ್ಥಿರತೆ, ಅಭಿವೃದ್ಧಿ ಕಾರ್ಯಗಳ ಕೊರತೆ ಹಾಗೂ ಬೆಂಗಳೂರು ನಗರ ವಿಭಜನೆಯ ಯೋಜನೆಯನ್ನು ಅವರು ಟೀಕಿಸಿದ್ದಾರೆ.
Read Full Story

07:16 PM (IST) Jul 18

ಮಾರುತಿ ಸುಜುಕಿ ಇ ವಿಟಾರ ಎಲೆಕ್ಟ್ರಿಕ್ ಕಾರು ಸೆ.3ಕ್ಕೆ ಬಿಡುಗಡೆ, 426 ಕಿ.ಮಿ ಮೈಲೇಜ್

ಮಾರುತಿ ಸುಜುಕಿಯ ಮೊದಲ ಎಲೆಕ್ಟ್ರಿಕ್ ಕಾರು ಇ-ವಿಟಾರಾ, ಸೆಪ್ಟೆಂಬರ್ 3 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ. ಅತ್ಯಾಧುನಿಕ ವೈಶಿಷ್ಟ್ಯಗಳು, ಡ್ಯುಯಲ್-ಸ್ಕ್ರೀನ್ ಡ್ಯಾಶ್‌ಬೋರ್ಡ್ ಮತ್ತು ADAS ತಂತ್ರಜ್ಞಾನದೊಂದಿಗೆ 426 ಕಿ.ಮೀ ವರೆಗಿನ ರೇಂಜ್ ಹೊಂದಿದೆ.

 

Read Full Story

07:16 PM (IST) Jul 18

ಹೆಂಡ್ತೀನ ಕಂಟ್ರೋಲ್​ನಲ್ಲಿ ಇಟ್ಕೊಳೋದು ಹೇಗೆ ಎಂದು ಹೇಳಿಕೊಟ್ಟ ಭಾಗ್ಯಲಕ್ಷ್ಮಿ ಆದಿ!

ಹೆಂಡತಿಯನ್ನು ಕಂಟ್ರೋಲ್​ ಮಾಡುವುದು ಹೇಗೆ ಎಂದು ಭಾಗ್ಯಲಕ್ಷ್ಮಿ ಆದಿ ಪಾತ್ರಧಾರಿ ಹರೀಶ್​ ರಾಜ್​ ಹೇಳಿದ್ದಾರೆ ನೋಡಿ.

 

Read Full Story

06:46 PM (IST) Jul 18

ಏರ್‌ ಇಂಡಿಯಾ ವಿಮಾನ ದುರಂತ ಸ್ಮರಣಾರ್ಥ 500 ಕೋಟಿಯ ಟ್ರಸ್ಟ್‌ ಆರಂಭಿಸಿದ ಟಾಟಾ ಸನ್ಸ್‌!

ಅಹಮದಾಬಾದ್‌ನಲ್ಲಿ AI-171 ವಿಮಾನ ಅಪಘಾತದ ಬಲಿಪಶುಗಳಿಗೆ ಮತ್ತು ಕುಟುಂಬಗಳಿಗೆ ಸಹಾಯ ಮಾಡಲು ಟಾಟಾ ಸನ್ಸ್ 'ದಿ AI-171 ಮೆಮೋರಿಯಲ್ ಅಂಡ್ ವೆಲ್ಫೇರ್ ಟ್ರಸ್ಟ್' ಅನ್ನು ಸ್ಥಾಪಿಸಿದೆ. ಟಾಟಾ ಸನ್ಸ್ ಮತ್ತು ಟಾಟಾ ಟ್ರಸ್ಟ್‌ಗಳು ಜಂಟಿಯಾಗಿ 500 ಕೋಟಿ ರೂ.ಗಳನ್ನು ಈ ಉಪಕ್ರಮಕ್ಕೆ ಮೀಸಲಿಟ್ಟಿವೆ.
Read Full Story

06:43 PM (IST) Jul 18

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಮೋಸ್ಟ್ ವಾಂಟೆಡ್ ಮಸೂದ್ ಅಜರ್ ಪತ್ತೆ, ಭಾರತದ ಗಡಿಯಲ್ಲಿ ಹೈಅಲರ್ಟ್

ಭಾರತದಲ್ಲಿ ಮತ್ತೊಂದು ಉಗ್ರ ದಾಳಿಗೆ ಸಂಚು ನಡೆದಿರುವ ಮಹತ್ವದ ಮಾಹಿತಿಯನ್ನು ಗುಪ್ತಚರ ಇಲಾಖೆ ಬಯಲು ಮಾಡಿದೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಭಾರತದ ಮೋಸ್ಟ್ ವಾಂಟೆಡ್ ಉಗ್ರ ಮಸೂದ್ ಅಜರ್ ಪತ್ತೆಯಾಗಿದ್ದಾನೆ.

Read Full Story

06:32 PM (IST) Jul 18

ಅಯ್ಯೋ ನಮಗೂ ಇಂಥ ಪ್ರೊಫೆಸರ್‌ ಇರಬಾರದಿತ್ತಾ? ಐಐಟಿ ರೋಪಾರ್‌ ಘಟಿಕೋತ್ಸವದಲ್ಲಿ ಕಂಡ 'ಕೂಲೆಸ್ಟ್‌ ಪ್ರೊಫೆಸರ್‌'!

ಐಐಟಿ ರೋಪಾರ್‌ನ ಘಟಿಕೋತ್ಸವದಲ್ಲಿ ವಿದ್ಯಾರ್ಥಿಯೊಬ್ಬ ತನ್ನ ಪ್ರೊಫೆಸರ್‌ಗೆ ಸನ್‌ಗ್ಲಾಸ್‌ ಹಾಕಿಸಿರುವ ವಿಡಿಯೋ ವೈರಲ್‌ ಆಗಿದೆ. ಈ ಹೃದಯಸ್ಪರ್ಶಿ ಕ್ಷಣ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ. ವಿದ್ಯಾರ್ಥಿ ಮತ್ತು ಪ್ರೊಫೆಸರ್‌ ನಡುವಿನ ಆರೋಗ್ಯಕರ ಬಾಂಧವ್ಯವನ್ನು ಈ ವಿಡಿಯೋ ತೋರಿಸುತ್ತದೆ.
Read Full Story

06:21 PM (IST) Jul 18

ಫೈರ್‌ಬ್ರಾಂಡ್ ನಾಯಕ ಅನಂತ ಕುಮಾರ್ ಹೆಗಡೆಗೆ ಜೀವ ಬೆದರಿಕೆ! ದೂರು ದಾಖಲು

ಮಾಜಿ ಸಂಸದ ಅನಂತ ಕುಮಾರ್ ಹೆಗಡೆ ಅವರಿಗೆ ಅಪರಿಚಿತ ವ್ಯಕ್ತಿಯಿಂದ ಇ-ಮೇಲ್ ಮೂಲಕ ಜೀವ ಬೆದರಿಕೆ ಬಂದಿದ್ದು, ಶಿರಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ತಾಂತ್ರಿಕ ಸಹಾಯದಿಂದ ತನಿಖೆ ನಡೆಯುತ್ತಿದೆ. ಹೆಗಡೆ ಅವರಿಗೆ ಹಿಂದೆಯೂ ಬೆದರಿಕೆಗಳು ಬಂದಿದ್ದ ಹಿನ್ನೆಲೆಯಲ್ಲಿ ಭದ್ರತೆ ಹೆಚ್ಚಿಸಲಾಗಿದೆ.
Read Full Story

06:20 PM (IST) Jul 18

ಚಿಕ್ಕಮಗಳೂರು ಕಾಫಿ ತೋಟದ ಹುಡುಗಿ ಕೈಕೊಟ್ಟಳೆಂದು ಅರೆಹುಚ್ಚನಾದ ಯುವಕ; ಹೆಡ್ ಕಾನ್‌ಸ್ಟೇಬಲ್ ಆತ್ಮಹ*ತ್ಯೆ,!

ಚಿಕ್ಕಮಗಳೂರಿನಲ್ಲಿ ಹೆಡ್ ಕಾನ್ಸ್ಟೇಬಲ್ ಕಾಂತರಾಜ್ ಆತ್ಮಹ*ತ್ಯೆ ಮಾಡಿಕೊಂಡಿದ್ದಾರೆ. ಪ್ರೇಮ ವಿಫಲತೆಯಿಂದ ಬಳಲುತ್ತಿದ್ದ ಯುವಕನೊಬ್ಬ ತಲೆಗೆ ಬಾಟಲಿ ಹೊಡೆದುಕೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ.

Read Full Story

05:35 PM (IST) Jul 18

ಇನ್‌ಸ್ಟಾ ರೀಲ್ಸ್ ನೋಡಲು ಪದೇ ಪದೇ ಸ್ವೈಪ್ ಮಾಡಬೇಕಿಲ್ಲ, ಹೊಸ ಆಟೋ ಸ್ಕ್ರಾಲ್ ಫೀಚರ್

ಇನ್‌ಸ್ಟಾಗ್ರಾಂ ರೀಲ್ಸ್ ನೋಡುವಾಗ ಕೈಬೆರಳು ಪದೇ ಪದೇ ಸ್ವೈಪ್ ಮಾಡುತ್ತಲೇ ಇರಬೇಕು. ಮುಂದಿನ ರೀಲ್ಸ್ ನೋಡಲು ಸ್ವೈಪ್ ಮಾಡಲೇಬೇಕು. ಆದರೆ ಇನ್‌ಸ್ಟಾಗ್ರಾಂ ಇದೀಗ ಹೊಸ ಫೀಚರ್ಸ್ ಜಾರಿಗೆ ತರಲು ಮುಂದಾಗಿದೆ. ನೀವು ಮೊಬೈಲ್ ಬೆಡ್ ಮೇಲಿಟ್ಟು ಅರಾಮಾಗಿ ಮಲಗಿಕೊಂಡೆ ಎಲ್ಲಾ ರೀಲ್ಸ್ ನೋಡಬಹುದು.

Read Full Story

05:32 PM (IST) Jul 18

ಕೌಟುಂಬಿಕ ಸಮಸ್ಯೆಯಲ್ಲಿ ರಾಜಕೀಯ ಷಡ್ಯಂತ್ರ ,ಮಗನ ವಿರುದ್ಧದ ಆರೋಪಕ್ಕೆ ಪ್ರಭು ಚವಾಣ್ ಸ್ಪಷ್ಟನೆ

ಮಾಜಿ ಸಚಿವ ಪ್ರಭು ಚವ್ಹಾಣ್ ಅವರ ಪುತ್ರನ ಮೇಲೆ ಯುವತಿಯೊಬ್ಬರು ಮಹಿಳಾ ಆಯೋಗಕ್ಕೆ ದೂರು ನೀಡಿದ್ದು, ಇದನ್ನು ಚವ್ಹಾಣ್ ರಾಜಕೀಯ ಷಡ್ಯಂತ್ರ ಎಂದಿದ್ದಾರೆ. ನಿಶ್ಚಿತಾರ್ಥ ಮುರಿದುಬಿದ್ದ ನಂತರ ಯುವತಿಯ ಕುಟುಂಬವನ್ನು ಬಳಸಿಕೊಂಡು ತಮ್ಮನ್ನು ರಾಜಕೀಯವಾಗಿ ತೇಜೋವಧೆ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
Read Full Story

05:15 PM (IST) Jul 18

ರಾಯಚೂರು ಜಿಲ್ಲಾ ಕೆಡಿಪಿ ಸಭೆಯಲ್ಲಿ, ಕದ್ದುಮುಚ್ಚಿ ರಮ್ಮಿ ಆಟ ಆಡುತ್ತಿದ್ದ ಸರ್ಕಾರಿ ಅಧಿಕಾರಿ!

ರಾಯಚೂರಿನಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿಯೊಬ್ಬರು ರಮ್ಮಿ ಆಟವಾಡುತ್ತಿದ್ದ ದೃಶ್ಯ ಸೆರೆಯಾಗಿದೆ. ಈ ಘಟನೆ ಸಚಿವರು ಮತ್ತು ಶಾಸಕರ ಗಮನಕ್ಕೆ ಬಂದಿದ್ದು, ಅಧಿಕಾರಿಯನ್ನು ಸಭೆಯಿಂದ ಹೊರಹಾಕಲಾಗಿದೆ. ಟೋಲ್ ಗೇಟ್ ವಿಚಾರವಾಗಿ ಶಾಸಕಿ ಕರೆಮ್ಮ ನಾಯಕ ಪ್ರತಿಭಟನೆ ನಡೆಸಿದರು.
Read Full Story

05:00 PM (IST) Jul 18

ರಾಜ್ಯ ಪ್ರತಿನಿಧಿಸುವ ಅಥ್ಲೀಟ್‌ಗಳಿಂದಲೂ ಸರ್ಕಾರ ಸುಲಿಗೆ, ಕಂಠೀರವ ಸ್ಟೇಡಿಯಂ ಪ್ರವೇಶಕ್ಕೂ ಈಗ ಶುಲ್ಕ!

ಕಂಠೀರವ ಕ್ರೀಡಾಂಗಣದಲ್ಲಿ ಅಥ್ಲೀಟ್‌ಗಳಿಗೆ ತರಬೇತಿಗಾಗಿ ಶುಲ್ಕ ವಿಧಿಸುವ ಸರ್ಕಾರದ ನಿರ್ಧಾರ ವಿವಾದಕ್ಕೆ ಕಾರಣವಾಗಿದೆ. ಕ್ರೀಡಾಪಟುಗಳು ಮತ್ತು ತರಬೇತುದಾರರು ಈ ನಿರ್ಧಾರವನ್ನು ವಿರೋಧಿಸಿದ್ದಾರೆ, ಇದು ಬಡ ಕ್ರೀಡಾಪಟುಗಳಿಗೆ ಹೊರೆಯಾಗುತ್ತದೆ ಎಂದು ವಾದಿಸಿದ್ದಾರೆ. 

 

Read Full Story

04:55 PM (IST) Jul 18

ಬಾಹ್ಯಾಕಾಶದಿಂದ ಭೂಮಿಗೆ ಜಿಗಿದು ದಾಖಲೆ ಬರೆದಿದ್ದ ಫೆಲಿಕ್ಸ್ ಪ್ಯಾರಾಗ್ಲೈಡಿಂಗ್ ಅಪಘಾತದಲ್ಲಿ ಸಾವು

ಬಾಹ್ಯಾಕಾಶದಿಂದ ಭೂಮಿಗೆ ಜಿಗಿದು ಐತಿಹಾಸಿಕ ಸಾಧನೆ ಮಾಡಿದ್ದ ಫೆಲಿಕ್ಸ್ ಬೌಮ್‌ಗಾರ್ಟ್ನರ್ ಇದೀಗ ಪ್ಯಾರಾಗ್ಲೈಡಿಂಗ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ. 56ರ ಹರೆಯದ ಸ್ಕೈಡೈವರ್ ಸಾವಿನ ಸುದ್ದಿ ಸಾಹಸಿಗಳನ್ನು ಬೆಚ್ಚಿಬೀಳಿಸಿದೆ.

Read Full Story

04:10 PM (IST) Jul 18

ನಾನು ರಾಮುಲು ಜೊತೆಗೆ ಕೂತು ಮಗನ ಸಿನೆಮಾ ನೋಡ್ತೇವೆ, ನಮ್ಮಿಬ್ಬರ ಮಧ್ಯೆ ಯಾರು ಬೇಕಿಲ್ಲ - ಜನಾರ್ಧನ ರೆಡ್ಡಿ

ಮಾಜಿ ಸಚಿವ ಜನಾರ್ಧನ ರೆಡ್ಡಿ ತಮ್ಮ ಮಗ ಕಿರಿಟಿ ರೆಡ್ಡಿ ಅಭಿನಯದ 'ಜೂನಿಯರ್' ಸಿನಿಮಾ ವೀಕ್ಷಿಸಿ ಭಾವುಕರಾದರು. ಶ್ರೀ ರಾಮುಲು ಜೊತೆಗಿನ ಸ್ನೇಹದ ಬಗ್ಗೆಯೂ ಸ್ಪಷ್ಟನೆ ನೀಡಿದರು. ಕಿರಿಟಿಯ ನಟನೆಯನ್ನು ಮೆಚ್ಚಿ, ಅವರ ಸಿನಿಮಾ ಯಶಸ್ಸಿನ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.
Read Full Story

04:06 PM (IST) Jul 18

ಅಬಕಾರಿ ಹಗರಣ, ಹುಟ್ಟುಹಬ್ಬ ದಿನವೇ ಕಾಂಗ್ರೆಸ್‌ ಮಾಜಿ ಸಿಎಂ ಪುತ್ರನ ಬಂಧಿಸಿದ ಇಡಿ

ಲಿಕ್ಕರ್ ಹಗರಣದಲ್ಲಿ ಇದೀಗ ಇಡಿ ಅಧಿಕಾರಿಗಳು ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಸಿಎಂ ಪುತ್ರನ ಬಂಧಿಸಿದ್ದಾರೆ. ಹುಟ್ಟು ಹಬ್ಬದ ಸಂಭ್ರಮದ ದಿನವೇ ಅರೆಸ್ಟ್ ಮಾಡಲಾಗಿದ್ದು, ಇದೀಗ ತೀವ್ರ ಕೋಲಾಹಲ ಸೃಷ್ಟಿಯಾಗಿದೆ.

Read Full Story

03:37 PM (IST) Jul 18

2025ರಲ್ಲಿ ಹೆಂಡತಿ ನದಿಗೆ ತಳ್ಳಿದರೂ ಬದುಕಿಬಂದ ಗಂಡ; ಇದೀಗ ಅಸಲಿ ಕಥೆ ಬಿಚ್ಚಿಟ್ಟ ಹೆಂಡತಿ!

ವೈರಲ್ ವಿಡಿಯೋದಲ್ಲಿ ನದಿಗೆ ಬಿದ್ದ ಯುವಕನ ಹೆಂಡತಿಯೇ ತಳ್ಳಿದಳೆಂಬ ಆರೋಪ. ಆದರೆ, ಹೆಂಡತಿ ಹೇಳುವುದೇ ಬೇರೆ. ಫೋಟೋ ತೆಗೆಯುವಾಗ ಆಯತಪ್ಪಿ ಬಿದ್ದಿದ್ದಾರಂತೆ ಗಂಡ. ಇಬ್ಬರ ಕುಟುಂಬಗಳ ರಾಜಿ ಪಂಚಾಯಿತಿಯ ನಡುವೆಯೂ ಗಂಡ ಡಿವೋರ್ಸ್​ ಕೊಡುವುದಾಗಿ ಪಟ್ಟು ಹಿಡಿದಿದ್ದಾನೆ.
Read Full Story

02:47 PM (IST) Jul 18

ತಾನು ಕಲಿತ ಸರ್ಕಾರಿ ಶಾಲೆಯ ನವೀಕರಣಕ್ಕೆ 14 ಕೋಟಿ ದಾನ ಮಾಡಿದ ಬೆಂಗಳೂರಿನ ವೈದ್ಯ!

ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಹೊಂಗನೂರು ಗ್ರಾಮದ ಸರ್ಕಾರಿ ಶಾಲೆಯು ಹಳೆಯ ವಿದ್ಯಾರ್ಥಿಯ ದೇಣಿಗೆಯಿಂದಾಗಿ ಅಂತರರಾಷ್ಟ್ರೀಯ ಮಟ್ಟದ ಸೌಲಭ್ಯಗಳನ್ನು ಪಡೆದುಕೊಂಡಿದೆ. ಈ ರೂಪಾಂತರವು ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆಗೆ ಕಾರಣವಾಗಿದೆ.
Read Full Story

01:52 PM (IST) Jul 18

ಶ್ರೀಸಾಮಾನ್ಯನನ್ನು ಪ್ರತಿನಿಧಿಸುವ 'ಎಕ್ಕ' ಸಿನಿಮಾದ ಹೈಲೈಟ್ ಏನು? ಸಂದರ್ಶನಲ್ಲಿ ವಿಕ್ರಮ್ ಹೇಳಿದಿಷ್ಟು..

'ಬ್ಯಾಂಗಲ್‌ ಬಂಗಾರಿ' ಹಾಡಿನಿಂದಲೇ ಸದ್ದು ಮಾಡುತ್ತಿರುವ ಯುವ ರಾಜ್‌ಕುಮಾರ್‌ ನಟನೆಯ 'ಎಕ್ಕ' ಸಿನಿಮಾದ ಕುರಿತು ಚಿತ್ರಕಥೆಗಾರ ವಿಕ್ರಮ್ ಹತ್ವಾರ್ ಸಂದರ್ಶನ.

Read Full Story

01:32 PM (IST) Jul 18

ಈಜಿಪುರ ಫ್ಲೈಓವರ್ ಕಾಮಗಾರಿ ಮುಗಿಸಲು ಮಾರ್ಚ್ 2026ಕ್ಕೆ ಕೊನೇ ಗಡುವು; ಬಿಬಿಎಂಪಿ ಕಮಿಷನರ್ ಮಹೇಶ್ವರ ರಾವ್

ಈಜೀಪುರ ಮೇಲ್ಸೇತುವೆ ಕಾಮಗಾರಿಯನ್ನು ಮಾರ್ಚ್ 2026ರ ವೇಳೆಗೆ ಪೂರ್ಣಗೊಳಿಸಲು ಬಿಬಿಎಂಪಿ ಮುಖ್ಯ ಆಯುಕ್ತರು ಗಡುವು ನೀಡಿದ್ದಾರೆ. ಸೆಗ್ಮೆಂಟ್ ಕಾಸ್ಟಿಂಗ್ ಅಳವಡಿಕೆ ವರ್ಷಾಂತ್ಯದೊಳಗೆ ಮುಗಿಯಬೇಕು ಹಾಗೂ ಭೂಸ್ವಾಧೀನ ಸಮಸ್ಯೆ ಬಗೆಹರಿದಿದೆ.

Read Full Story

01:31 PM (IST) Jul 18

ಧರ್ಮಸ್ಥಳ ಪ್ರಕರಣ - ದಿಢೀರನೆ ಎಸ್‌ಐಟಿ ಸ್ಥಾಪನೆ ಸಾಧ್ಯವಿಲ್ಲ - ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

ಯಾರೋ ಹೇಳಿದರು ಎಂದ ಮಾತ್ರಕ್ಕೆ ದಿಢೀರನೆ ಎಸ್‌ಐಟಿ ಮಾಡಲು ಆಗುವುದಿಲ್ಲ. ಎತ್ತು ಮರಿ ಹಾಕಿತ್ತು ಅಂಥ ಕೊಟ್ಟಿಗೆ ರೆಡಿ ಮಾಡಲು ಸಾಧ್ಯನಾ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

Read Full Story

01:00 PM (IST) Jul 18

ಮದುವೆಯಾಗೋದಾಗಿ ನಂಬಿಸಿ ದೈಹಿಕ ಸಂಪರ್ಕ, ಮಾಜಿ ಸಚಿವ ಪ್ರಭು ಚೌಹಾಣ್ ಪುತ್ರನ ವಿರುದ್ಧ ಮಹಿಳಾ ಆಯೋಗಕ್ಕೆ ದೂರು

ಮಾಜಿ ಸಚಿವ ಪಭು ಚೌಹಾಣ್ ಪುತ್ರ ಪ್ರತೀಕ್ ಚೌಹಾಣ್ ವಿರುದ್ಧ ಮದುವೆ ಆಮಿಷವೊಡ್ಡಿ ವಂಚಿಸಿದ ಆರೋಪ ಕೇಳಿಬಂದಿದೆ. ಯುವತಿಯೊಬ್ಬರು ಮಹಿಳಾ ಆಯೋಗಕ್ಕೆ ದೂರು ನೀಡಿದ್ದು, ಲೈಂಗಿಕ ದೌರ್ಜನ್ಯ ಮತ್ತು ಮಾನಸಿಕ ಕಿರುಕುಳದ ಆರೋಪಗಳನ್ನು ಮಾಡಿದ್ದಾರೆ.  

Read Full Story

12:50 PM (IST) Jul 18

ಲಾಕ್‌ಡೌನ್‌ನಿಂದ ಹುಟ್ಟಿ, ಕಪೆಕ್‌ನಿಂದ ಬೆಳೆದು ನಿಂತ ಉದ್ಯಮ - ರುಚಿತ್ ಬ್ರ್ಯಾಂಡ್ ಯಶೋಗಾಥೆ

ರುಚಿತ್ ಬಿ ಆಹಾರ ಉತ್ಪನ್ನಗಳು ಒಂದು ಬ್ರ್ಯಾಂಡ್ ಆಗಿ ಬೆಳೆಯತೊಡಗಿದೆ. ಕರ್ನಾಟಕದ ಮೂಲೆ ಮೂಲೆಗಳಿಗೂ ತಲುಪುತ್ತಿರುವ ರುಚಿತ್ ಬಿ ಉತ್ಪನ್ನಗಳು ತೆಲಂಗಾಣ ಮತ್ತು ಮಹಾರಾಷ್ಟ್ರದಲ್ಲೂ ಬೇಡಿಕೆ ಗಿಟ್ಟಿಸಿಕೊಂಡಿವೆ.

Read Full Story

12:30 PM (IST) Jul 18

ರವಿಚಂದ್ರನ್‌ ಬಗ್ಗೆ ಮಾತನಾಡುವಷ್ಟು ದೊಡ್ಡತನ ನನಗೆ ಇಲ್ಲ - ಜೂನಿಯರ್ ನಟ ಕಿರೀಟಿ ಸಂದರ್ಶನ

ಜನಾರ್ದನ ರೆಡ್ಡಿ ಪುತ್ರ ಕಿರೀಟಿ ನಟನೆಯ ಮೊದಲ ಸಿನಿಮಾ ಇಂದು ಅದ್ಧೂರಿಯಾಗಿ ರಿಲೀಸ್ ಆಗಿದ್ದು, ಈ ಹಿನ್ನೆಲೆಯಲ್ಲಿ ಕಿರೀಟಿ ತಮ್ಮ ಕನಸಿನ ಬಗ್ಗೆ ಸಂದರ್ಶನದಲ್ಲಿ ಮಾತನಾಡಿದ್ದಾರೆ.

Read Full Story

12:13 PM (IST) Jul 18

ಮನರಂಜನೆಯ ಮರುಕಲ್ಪನೆಯ ಹೊಸ ಆವಿಷ್ಕಾರ ಜೀ 'ವಾಟ್ಸ್ ನೆಕ್ಸ್ಟ್'ನಲ್ಲಿ!

ಜನರೊಂದಿಗಿನ ಈ ಭಾಂಧವ್ಯವನ್ನು ಮತ್ತಷ್ಟು ಪುಷ್ಟಿಗೊಳಿಸಲು 'Z What's Next' ಅನ್ನುವ ಮೂಲಕ ನೆಟ್ವರ್ಕ್ ಟ್ರಾನ್ಸ್ಫರ್ಮೇಷನ್‌ನ ಕಂಟೆಂಟ್ ತಂತ್ರಜ್ಞಾನದ ಪವರ್ ಹೌಸ್ ಮೂಲಕ ಮಾಡಲು ಹೊರಟಿದೆ.

Read Full Story

11:47 AM (IST) Jul 18

ನೆಟ್‌ಫ್ಲಿಕ್ಸ್‌ನ ಸ್ಟೆಪ್‌ಸನ್ಸ್‌ ವೆಬ್‌ ಸೀರೀಸ್‌ನಲ್ಲಿ ಅನಂತ್ ನಾಗ್‌ ನಟನೆ - ಮಹತ್ತರ ಪಾತ್ರವೇ?

ಯಾವುದೇ ಸಿನಿಮಾದಲ್ಲಿ ನಟಿಸಲು ಒಪ್ಪದೇ ಇದ್ದ ಅನಂತ್ ನಾಗ್‌ ಅವರು ಇದೀಗ ನೆಟ್‌ಫ್ಲಿಕ್ಸ್‌ನಲ್ಲಿ ಬಹುಭಾಷೆಯಲ್ಲಿ ಪ್ರಸಾರವಾಗಲಿರುವ ‘ಸ್ಟೆಪ್‌ಸನ್ಸ್‌’ ವೆಬ್‌ಸೀರೀಸ್‌ನಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ.

Read Full Story

11:30 AM (IST) Jul 18

ಬೆಂಗಳೂರಿನ 40 ಶಾಲೆಗಳಿಗೆ ಏಕಕಾಲದಲ್ಲಿ ಬಾಂಬ್ ಬೆದರಿಕೆ - ಆತಂಕದಲ್ಲಿ ಪೋಷಕರು

ಬೆಂಗಳೂರಿನ 40 ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಇಮೇಲ್ ಬಂದಿದ್ದು, ಪೋಷಕರು ಮತ್ತು ಶಾಲಾ ಆಡಳಿತ ಮಂಡಳಿಯಲ್ಲಿ ಆತಂಕ ಮನೆ ಮಾಡಿದೆ. Roadkill333atomic@mail.com ಎಂಬ ಐಡಿಯಿಂದ ಬಂದ ಇಮೇಲ್‌ನಲ್ಲಿ ಸ್ಪೋಟಕಗಳನ್ನು ಇರಿಸಲಾಗಿದೆ ಎಂದು ಬರೆಯಲಾಗಿದೆ.
Read Full Story

11:28 AM (IST) Jul 18

ಲಾಸಲ್ಲೇ ಲಾಭ ಸೂತ್ರ ಕಂಡುಕೊಂಡ ದಂಪತಿಗೆ ಅಮ್ಮನ ಆಶೀರ್ವಾದ - ಮಜಾ ಉಪ್ಪಿನಕಾಯಿ ಯಶೋಗಾಥೆ!

ಸೋಲೆ ಗೆಲುವಿನ ಮೆಟ್ಟಿಲು ಅನ್ನೋ ಮಾತು ಇಂಥವರನ್ನು ನೋಡಿಯೇ ಹುಟ್ಟಿರಬೇಕು. ಬಣ್ಣ ಬಣ್ಣದ ಕ್ಯಾಪ್ಸಿಕಂ ಬೆಳೆದು ಯಾರೂ ಕೊಳ್ಳೋರಿಲ್ಲದೆ ನಷ್ಟದಲ್ಲಿದ್ದಾಗ ಹುಟ್ಟಿದ ಬ್ಯಾಂಡ್ 'ಮಜಾ' ಉಪ್ಪಿನಕಾಯಿ.

Read Full Story

11:13 AM (IST) Jul 18

ರಷ್ಯಾ ಮಹಿಳೆ, ಮಕ್ಕಳನ್ನು ನೋಡಲು ಬಂದ ಇಸ್ರೇಲ್ ಪ್ರಿಯಕರ ಬರಿಗೈಲೀ ವಾಪಸ್!

ರಷ್ಯಾ ಮಹಿಳೆ ಹಾಗೂ ಇಬ್ಬರು ಮಕ್ಕಳನ್ನು ನೋಡಲು ಬಂದ ರಷ್ಯಾ ಮಹಿಳೆಯ ಮಾಜಿ ಪ್ರಿಯಕರ ಇಸ್ರೇಲ್‌ನ ಡ್ರೋರ್ ಬರಿಗೈಯಲ್ಲಿ ವಾಪಸ್ಸಾಗಿದ್ದಾರೆ.

Read Full Story

11:11 AM (IST) Jul 18

ಹಾಸನದಲ್ಲಿ ಹೃದಯಾಘಾತಕ್ಕೆ ನವಜಾತ ಶಿಶು ಬಲಿ, ಕೊಪ್ಪಳದಲ್ಲಿ ಶಿಕ್ಷಕ ಸಾವು!

ಹಾಸನದಲ್ಲಿ ನವಜಾತ ಶಿಶುವೊಂದು ಹೃದಯಾಘಾತದಿಂದ ಮೃತಪಟ್ಟಿದೆ. ಹುಬ್ಬಳ್ಳಿಯಲ್ಲಿ ಶಿಕ್ಷಕರೊಬ್ಬರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಕೊಪ್ಪಳದಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕಾರಿ.
Read Full Story

10:48 AM (IST) Jul 18

ಕನ್ನಡ ತಪ್ಪು ಬಳಕೆ - ಸಿಎಂ ಸಿದ್ದರಾಮಯ್ಯ ಕ್ಷಮೆ ಕೇಳಿದ ಫೇಸ್‌ಬುಕ್‌!

ಕನ್ನಡ ಅನುವಾದದಲ್ಲಿ ಆಗುತ್ತಿರುವ ಲೋಪ ತಕ್ಷಣವೇ ಸರಿಪಡಿಸುವಂತೆ ಒತ್ತಾಯಿಸಿ ನನ್ನ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅವರು ಮೆಟಾಗೆ ಔಪಚಾರಿಕವಾಗಿ ಪತ್ರ ಬರೆದಿದ್ದಾರೆ ಎಂದು ತಿಳಿಸಿದ್ದಾರೆ.

Read Full Story

10:37 AM (IST) Jul 18

ಕುರ್ಚಿಗೆ ಕಂಟಕ ಬಂದಾಗ ಮಾತ್ರ ಸಿದ್ದುಗೆ ಹಿಂದುಳಿದವರು ನೆನಪು - ಸಂಸದ ಕಾರಜೋಳ

ತಮ್ಮ ಕುರ್ಚಿಗೆ ಕಂಟಕ ಬಂದಾಗ ಮಾತ್ರ ಸಿದ್ದರಾಮಯ್ಯ ಅವರಿಗೆ ಹಿಂದುಳಿದ ವರ್ಗದವರು ನೆನಪಾಗುತ್ತಾರೆ ಎಂದು ಸಂಸದ ಗೋವಿಂದ ಕಾರಜೋಳ ಆರೋಪಿಸಿದರು.

Read Full Story

More Trending News