Published : Apr 11, 2025, 07:57 AM ISTUpdated : Apr 11, 2025, 11:39 PM IST

Karnataka News Live 11th April: EVM ಹ್ಯಾಕ್ ಮಾಡಬಹುದು: ತುಳಸಿ ಗಬ್ಬಾರ್ಡ್, ಚು.ಆಯೋಗ ಹೇಳಿದ್ದೇನು?

ಸಾರಾಂಶ

ಬೆಂಗಳೂರು (ಮಾ.11): ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಚರ್ಚೆಯಲ್ಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ (ಜಾತಿಗಣತಿ ವರದಿ-2015) ವರದಿ ಶುಕ್ರವಾರದ ಸಚಿವ ಸಂಪುಟ ಸಭೆಯಲ್ಲಿ ಮಂಡನೆಯಾಗಲಿದ್ದು, ವರದಿಗೆ ಬಹುತೇಕ ಅನುಮೋದನೆ ದೊರೆಯುವ ಸಾಧ್ಯತೆಗಳಿವೆ. ಇದರ ನಡುವೆ ಅಮೆರಿಕದಿಂದ ಭಾರತಕ್ಕೆ ಕರೆತಂದಿರುವ ಉಗ್ರ ತಹಾವೂರ್‌ ರಾಣಾನನ್ನು 20 ದಿನಗಳ ಕಾಲ ವಶಕ್ಕೆ ನೀಡುವಂತೆ ಎನ್‌ಐಎ ಪಟಿಯಾಲ ಕೋರ್ಟ್‌ ಎದುರು ಅರ್ಜಿ ಸಲ್ಲಿಕೆ ಮಾಡಿದೆ.
 

Karnataka News Live 11th April: EVM ಹ್ಯಾಕ್ ಮಾಡಬಹುದು: ತುಳಸಿ ಗಬ್ಬಾರ್ಡ್, ಚು.ಆಯೋಗ ಹೇಳಿದ್ದೇನು?

11:39 PM (IST) Apr 11

EVM ಹ್ಯಾಕ್ ಮಾಡಬಹುದು: ತುಳಸಿ ಗಬ್ಬಾರ್ಡ್, ಚು.ಆಯೋಗ ಹೇಳಿದ್ದೇನು?

ಅಮೆರಿಕದ ಗುಪ್ತಚರ ನಿರ್ದೇಶಕರು ಇವಿಎಂ ಹ್ಯಾಕ್ ಆಗುವ ಸಾಧ್ಯತೆ ಬಗ್ಗೆ ಎಚ್ಚರಿಸಿದ್ದಾರೆ. ಆದರೆ ಭಾರತದ ಚುನಾವಣಾ ಆಯೋಗವು ಭಾರತದ ಇವಿಎಂಗಳು ಸುರಕ್ಷಿತ ಮತ್ತು ಹ್ಯಾಕ್ ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

ಪೂರ್ತಿ ಓದಿ

11:05 PM (IST) Apr 11

Ghibli art: ನಿಮ್ಮ ಡೇಟಾ ಅಪಾಯದಲ್ಲಿದೆ, ಮುಂಬೈ ಸೈಬರ್ ಸೆಲ್‌ ಎಚ್ಚರಿಕೆ!

ಮಹಾರಾಷ್ಟ್ರ ಸೈಬರ್ ಸೆಲ್ ಘಿಬ್ಲಿ ಶೈಲಿಯ ಕಲೆ ರಚಿಸುವ AI ಪ್ಲಾಟ್‌ಫಾರ್ಮ್‌ಗಳ ಬಗ್ಗೆ ಎಚ್ಚರಿಕೆ ನೀಡಿದೆ. ಈ ಪ್ಲಾಟ್‌ಫಾರ್ಮ್‌ಗಳು ವೈಯಕ್ತಿಕ ಡೇಟಾವನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇದೆ ಎಂದು ತಿಳಿಸಿದೆ.

ಪೂರ್ತಿ ಓದಿ

10:52 PM (IST) Apr 11

ಜಾತಿ ಗಣತಿ ವರದಿಗೆ ಯಾರಿಂದಲೂ ವಿರೋಧವಿಲ್ಲ; ಪ್ರಿಯಾಂಕ್ ಖರ್ಗೆ!

ರಾಜ್ಯದ ಜಾತಿ ಗಣತಿ ವರದಿಗೆ ಯಾರದ್ದೂ ವಿರೋಧ ಬಂದಿಲ್ಲ. ಈ ವರದಿಯಲ್ಲಿನ ಅಂಶಗಳ ಬಗ್ಗೆ ಸದ್ಯಕ್ಕೆ ಯಾರಿಗೂ ತಿಳಿದಿಲ್ಲ, ಅಧ್ಯಯನದ ಬಳಿಕ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಪೂರ್ತಿ ಓದಿ

10:43 PM (IST) Apr 11

ಹಿಂದೂ ಸಂಪ್ರದಾಯದಂತೆ ನಾಮಕರಣ: ಮಗುವಿಗೆ ಭಾರ್ತಿ ಮೀನಾ ಎಂದು ಹೆಸರಿಟ್ಟ ಸೀಮಾ ಹೈದರ್

ಸೀಮಾ ಹೈದರ್ ಮೊನ್ನೆಯಷ್ಟೇ  ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಈಗ ಅವರು ತಮ್ಮ ಮಗುವಿಗೆ ಭಾರ್ತಿ ಮೀನಾ ಎಂದು ಹೆಸರಿಟ್ಟಿದ್ದಾರೆ.

ಪೂರ್ತಿ ಓದಿ

10:34 PM (IST) Apr 11

ಚಿನ್ನದ ಬೆಲೆ ಸರ್ವಕಾಲಿಕ ದಾಖಲೆ 10 ಗ್ರಾಂ ಬೆಲೆ ಎಷ್ಟು ಗೊತ್ತಾ?

Gold price today: ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿವೆ. ಅಮೆರಿಕ-ಚೀನಾ ಸುಂಕ ಯುದ್ಧ ಮತ್ತು ಜಾಗತಿಕ ಅನಿಶ್ಚಿತತೆಯಿಂದಾಗಿ ಈ ಏರಿಕೆ ಕಂಡುಬಂದಿದೆ.

ಪೂರ್ತಿ ಓದಿ

10:16 PM (IST) Apr 11

ಹೆಣ್ಣುಮಕ್ಕಳ ಬಟ್ಟೆ ನೋಡಿ ಪ್ರಚೋದನೆಯಾಗತ್ತೆ ಎನ್ನುವವರಿಗೆ ಇಟ್ಟಿರೋ ಸಂತ್ರಸ್ತೆಯರ ಬಟ್ಟೆಗಳಿವು!

ಕಾಮುಕರ ಕೈಗೆ ಸಿಕ್ಕು ನಲುಗಿರುವ ಹೆಣ್ಣುಮಕ್ಕಳ ಬಟ್ಟೆಗಳನ್ನು ಪ್ರದರ್ಶನಕ್ಕೆ ಇಡಲಾಗಿದ್ದು, ಇಂಥ ಕೃತ್ಯಕ್ಕೆ ಬಟ್ಟೆಗಳು ಕಾರಣವಲ್ಲ ಎನ್ನುವುದನ್ನು ತೋರಿಸಲಾಗುತ್ತಿದೆ.
 

ಪೂರ್ತಿ ಓದಿ

10:08 PM (IST) Apr 11

ನೀವು ಕೊಟ್ಟ ಸಾಲ ವಾಪಸ್ ಕೊಡ್ತಿಲ್ವಾ? ಇಲ್ಲಿದೆ ಹೊಸ ಹಣ ವಸೂಲಿ ವಿಧಾನ

ಸಾಲ ಕೊಟ್ಟ ಹಣವನ್ನು ವಾಪಸ್ ಪಡೆಯಲು ಪರದಾಡುತ್ತಿದ್ದೀರಾ? ಹಾಗಾದರೆ, ಸಾಲ ಕೊಟ್ಟ ಹಣವನ್ನು ವಾಪಸ್ ಪಡೆಯುವುದು ಹೇಗೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಪೂರ್ತಿ ಓದಿ

10:06 PM (IST) Apr 11

ವಿಮಾನದಲ್ಲಿ ಲೆಗ್ಗಿಂಗ್ಸ್ ಏಕೆ ಧರಿಸಬಾರದು?

ವಿಮಾನ ಪ್ರಯಾಣದ ಸಮಯದಲ್ಲಿ ಯಾವ ರೀತಿಯ ಬಟ್ಟೆಗಳನ್ನು ಧರಿಸಬೇಕು ಎಂಬುದರ ಬಗ್ಗೆ ಅನೇಕ ಜನರಿಗೆ ತಿಳಿದಿಲ್ಲ. ಒಂದು ವೇಳೆ ಗೊತ್ತಿದ್ದರೂ, ಕೆಲವು ಬಟ್ಟೆಗಳನ್ನು ಧರಿಸಬಾರದು ಎಂದು ಅವರು ಏಕೆ ಹೇಳುತ್ತಾರೆಂದು ಸ್ಪಷ್ಟವಾಗಿಲ್ಲ. ಲೆಗ್ಗಿಂಗ್ಸ್ ವಿಮಾನದಲ್ಲಿ ಧರಿಸಬಾರದ ಬಟ್ಟೆಗಳಲ್ಲಿ ಒಂದಾಗಿದೆ. ಇದಕ್ಕೆ ಕಾರಣವೇನೆಂದು ತಿಳಿದುಕೊಳ್ಳೋಣ.

ಪೂರ್ತಿ ಓದಿ

09:49 PM (IST) Apr 11

ಬೆಂಗಳೂರಲ್ಲಿ ಶೂ ಕಳ್ಳರ ಹಾವಳಿ! ಚಪ್ಪಲಿ ಕೂಡ ಬಿಡ್ತಿಲ್ಲ ಖದೀಮರು!

ಬೆಂಗಳೂರಿನ ಕೆ.ಆರ್. ಪುರಂನಲ್ಲಿ ತಡರಾತ್ರಿ ಶೂ ಕಳ್ಳನೊಬ್ಬ ಬ್ರಾಂಡೆಡ್ ಶೂಗಳನ್ನು ಕದ್ದಿದ್ದಾನೆ. ಸಿಸಿಟಿವಿಯಲ್ಲಿ ಕೃತ್ಯ ಸೆರೆಯಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪೂರ್ತಿ ಓದಿ

09:42 PM (IST) Apr 11

ಹಿಜಾಬ್​ಗಾಗಿ ಪ್ರಾಣ ಕಳೆದುಕೊಂಡ ವಿದ್ಯಾರ್ಥಿನಿ: ಬಚಾವ್​ ಮಾಡಿದ್ರೂ ಅಗ್ನಿಗಾಹುತಿಯಾದಳು!

ಸಿಲಿಂಡರ್​ ಬ್ಲಾಸ್ಟ್​ ಆದ ಸಮಯದಲ್ಲಿ, ಬಚಾವಾದ ವಿದ್ಯಾರ್ಥಿನಿಯೊಬ್ಬಳು ಹಿಜಾಬ್​ಗಾಗಿ ಹಠ ಹಿಡಿದು ಪ್ರಾಣ ಕಳೆದುಕೊಂಡಿರುವ ಘಟನೆ ನಡೆದಿದೆ. ಆದದ್ದೇನು? 
 

ಪೂರ್ತಿ ಓದಿ

09:17 PM (IST) Apr 11

ಮದುವೆಗೊಪ್ಪದ ಅಪ್ಪನ ಹೆಣದ ಮೇಲೆ ಮಗಳ ಲವ್ ಮ್ಯಾರೇಜ್!

'ಹರ್ಷಿತಾ, ನೀನು ತಪ್ಪು ಮಾಡಿದೆ ಮಗಳೇ, ನಾನು ಹೋಗುತ್ತಿದ್ದೇನೆ'. ಭಾರತದ ಸಂವಿಧಾನವೂ ತಪ್ಪಾಗಿದೆ, ಇದು ಹುಡುಗಿಯರು ವಯಸ್ಕರಾದಾಗ ತಂದೆಯಿಂದ ಎಲ್ಲಾ ಹಕ್ಕುಗಳನ್ನು ಕಸಿದುಕೊಳ್ಳುತ್ತದೆ.

ಪೂರ್ತಿ ಓದಿ

09:07 PM (IST) Apr 11

ಈ ಬೀಜದ ನೀರನ್ನು 7 ದಿನಗಳು ಕುಡಿದ್ರೆ ಏನಾಗುತ್ತೆ?

Benefits of Sabja Seeds: ಬೇಸಿಗೆಯಲ್ಲಿ ಸಬ್ಜಾ ಬೀಜಗಳನ್ನು ಸೇವಿಸುವುದರಿಂದ ದೇಹವನ್ನು ತಂಪಾಗಿಡಬಹುದು, ಚರ್ಮಕ್ಕೆ ಕಾಂತಿ ನೀಡಬಹುದು ಮತ್ತು ತೂಕವನ್ನು ನಿಯಂತ್ರಿಸಬಹುದು. ಕೇವಲ 7 ದಿನಗಳಲ್ಲಿ ಇದರ ಫಲಿತಾಂಶಗಳನ್ನು ಅನುಭವಿಸಿ.

ಪೂರ್ತಿ ಓದಿ

09:06 PM (IST) Apr 11

ಕೆಎಫ್‌ಸಿ ಚಿಕನ್ ಫ್ಲೇವರ್‌ನ ಟೂತ್‌ಪೇಸ್ಟ್‌: ಹಲ್ಲುಜ್ಜಿದ ಯುವಕನ ರಿಯಾಕ್ಷನ್ ಹೇಗಿತ್ತು ನೋಡಿ

ಕೆಎಫ್‌ಸಿ ತನ್ನ ಫ್ರೈಡ್ ಚಿಕನ್ ಫ್ಲೇವರ್‌ನ ಟೂತ್‌ಪೇಸ್ಟ್ ಅನ್ನು ಬಿಡುಗಡೆ ಮಾಡಿದೆ. ಬಳಕೆದಾರರೊಬ್ಬರು ಇದನ್ನು ಪ್ರಯತ್ನಿಸಿದ್ದು ಅವರು ಏನು ಹೇಳಿದ್ದಾರೆ ನೋಡಿ..

ಪೂರ್ತಿ ಓದಿ

08:29 PM (IST) Apr 11

ಬೆಂಗಳೂರಿನ ಮಾನ 3 ಕಾಸಿಗೆ ಹರಾಜು; ಟೆಕ್ಕಿಯ ಪೋಸ್ಟ್ ಭಾರಿ ವೈರಲ್!

ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಜೀವನ ವೆಚ್ಚ, ನಿಶ್ಚಲ ವೇತನಗಳು ಮತ್ತು ಸಂಚಾರ ದಟ್ಟಣೆಯು ನಗರವನ್ನು ದುಬಾರಿಯನ್ನಾಗಿ ಮಾಡುತ್ತಿದೆ. ಹಾಲಿನಿಂದ ಹಿಡಿದು ಬಾಡಿಗೆಯವರೆಗೆ ಎಲ್ಲದರ ಬೆಲೆ ಏರಿಕೆಯಾಗಿದ್ದು, ಮಧ್ಯಮ ವರ್ಗದವರ ಬದುಕು ದುಸ್ತರವಾಗಿದೆ.

ಪೂರ್ತಿ ಓದಿ

08:29 PM (IST) Apr 11

59ರ ಸಲ್ಮಾನ್ ಖಾನ್ ಮಂಗನಂತೆ ಮರ ಏರಿದ್ರು, ಏನ್ ಕಿತ್ಕೊಂಡು ಬಂದ್ರು?

ಸಲ್ಮಾನ್ ಖಾನ್ ಫಿಟ್ನೆಸ್ ವಿಡಿಯೋ ವೈರಲ್! 59ರ ವಯಸ್ಸಿನಲ್ಲೂ ಮರ ಏರಿ ಹಣ್ಣು ಕಿತ್ತರು. ಫ್ಯಾನ್ಸ್ ಫುಲ್ ಫಿದಾ, ವಿಡಿಯೋ ಸಖತ್ ವೈರಲ್ ಆಗಿದೆ.

ಪೂರ್ತಿ ಓದಿ

07:56 PM (IST) Apr 11

ಮೈಸೂರು ರಾಣಿ ಪತ್ರ: ಸಿದ್ದಯ್ಯನಪುರ ಗ್ರಾಮಸ್ಥರಿಗೆ ಟೆನ್ಷನ್ !

ಮೈಸೂರು ಮಹಾರಾಜರಿಗೆ ಸೇರಿದ ಜಾಗ ಖಾತೆ ಮಾಡಿಕೊಡುವಂತೆ ರಾಣಿ ಪ್ರಮೋದಾದೇವಿ ಪತ್ರ ಬರೆದಿದ್ದಾರೆ. ಇದರಿಂದ ಸಿದ್ದಯ್ಯನಪುರ ಗ್ರಾಮಸ್ಥರು ಆತಂಕಿತರಾಗಿದ್ದು, ಊರು ಖಾಲಿ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಸರ್ಕಾರ ರಕ್ಷಣೆಗೆ ಧಾವಿಸುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.

ಪೂರ್ತಿ ಓದಿ

07:29 PM (IST) Apr 11

ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ: ಮಕ್ಕಳ ರಕ್ಷಿಸಲು ತಾಯಿಯ ಸಾಹಸ

ಗುಜರಾತ್‌ನ ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ತಾಯಿಯೊಬ್ಬರು ಮಕ್ಕಳನ್ನು ರಕ್ಷಿಸಲು ಬಾಲ್ಕನಿಯಿಂದ ಕೆಳಗಿಳಿಸಿದ ಘಟನೆ ನಡೆದಿದೆ. 

ಪೂರ್ತಿ ಓದಿ

07:07 PM (IST) Apr 11

46ರ ವಯಸ್ಸಿನಲ್ಲಿ 3 ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ ಮಹಿಳೆ!

46 ವರ್ಷದ ಮಹಿಳೆಯೊಬ್ಬರು 25 ವಾರಗಳ ಗರ್ಭಾವಸ್ಥೆಯಲ್ಲಿ 3 ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ. ತಾಯಿ ಮತ್ತು ಮಕ್ಕಳು 225 ದಿನಗಳ ತೀವ್ರ ನಿಗಾ ಘಟಕದ ಆರೈಕೆಯ ನಂತರ ಆರೋಗ್ಯವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಪೂರ್ತಿ ಓದಿ

07:00 PM (IST) Apr 11

ಕಾವಿ ಬಿಚ್ಚಿ ಖಾದಿ ತೊಡಲಿ: ಶ್ರೀಗಳ ವಿರುದ್ಧ ಕಾಶೆಪ್ಪನವರ್ ಕಿಡಿ!

ಹುಬ್ಬಳ್ಳಿಯಲ್ಲಿ ಶಾಸಕ ವಿಜಯಾನಂದ ಕಾಶಪ್ಪನವರ್ ಅವರು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸ್ವಾಮೀಜಿ ಮತ್ತು ಯತ್ನಾಳ್ ವಿರುದ್ಧ ಭ್ರಷ್ಟಾಚಾರ, ಸ್ವಯಂ ಘೋಷಿತ ನಾಯಕತ್ವ ಮತ್ತು ಸಮಾಜಕ್ಕೆ ದ್ರೋಹದ ಆರೋಪಗಳನ್ನು ಮಾಡಿದ್ದಾರೆ.

ಪೂರ್ತಿ ಓದಿ

06:09 PM (IST) Apr 11

ವಿದ್ಯಾರ್ಥಿಯ ಹಾಲ್‌ ಟಿಕೆಟ್ ಕದ್ದೊಯ್ದ ಹದ್ದು: ಆಮೇಲಾಗಿದ್ದು ಪವಾಡ

ಹಕ್ಕಿಗಳು/ಹದ್ದುಗಳು ಮನುಷ್ಯರ ಕೈಯಲ್ಲಿರುವುದನ್ನು ಕಸಿಯುವುದಕ್ಕೆ ಬರುವುದು ತೀರಾ ಅಪರೂಪ. ಆದರೆ ಇಲ್ಲೊಂದು ಅಚ್ಚರಿಯ ಘಟನೆ ನಡೆದಿದೆ. ಪರೀಕ್ಷೆಯ ಗಾಬರಿಯಲ್ಲಿದ್ದ  ಪರೀಕ್ಷಾರ್ಥಿಗೆ ಹಕ್ಕಿಯೊಂದು ಮತ್ತಷ್ಟು ಆತಂಕಕ್ಕೀಡು ಮಾಡುವಂತೆ ಮಾಡಿದೆ. ಹಾಗಿದ್ರೆ ಹಕ್ಕಿ ಮಾಡಿದ್ದೇನು ನೋಡಿ...

ಪೂರ್ತಿ ಓದಿ

06:07 PM (IST) Apr 11

ವಾಟ್ಸಾಪ್‌ನಲ್ಲಿ ಬಂದ ಫೋಟೋ ಓಪನ್‌ ಮಾಡಿ 2 ಲಕ್ಷ ಕಳೆದುಕೊಂಡ ವ್ಯಕ್ತಿ: ಏನಿದು ವಂಚನೆ?

 ವಾಟ್ಸಾಪ್‌ನಲ್ಲಿ ಬಂದ ಫೋಟೋ ಓಪನ್‌ ಮಾಡಿದ ವ್ಯಕ್ತಿಯೊಬ್ಬರು ಎರಡು ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಏನಿದು ಹೊಸ ವಂಚನೆ? ತಡೆಯುವುದು ಹೇಗೆ? 
 

ಪೂರ್ತಿ ಓದಿ

06:04 PM (IST) Apr 11

2026ರ ತಮಿಳುನಾಡು ಚುನಾವಣೆಗೆ ಮೈತ್ರಿ ಘೋಷಿಸಿದ AIADMK- ಬಿಜೆಪಿ

ತಮಿಳುನಾಡಿನಲ್ಲಿ 2026ರ ವಿಧಾನಸಭೆ ಚುನಾವಣೆಗೆ AIADMK-BJP ಮೈತ್ರಿ ಬಹುತೇಕ ಖಚಿತವಾಗಿದೆ. ಅಮಿತ್ ಶಾ ಚೆನ್ನೈಗೆ ಭೇಟಿ ನೀಡಿ ಎಡಪ್ಪಾಡಿ ಪಳನಿಸ್ವಾಮಿ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. 2026ರ ಚುನಾವಣೆಯಲ್ಲಿ ಮೈತ್ರಿ ಸರ್ಕಾರ ರಚನೆಯಾಗಲಿದೆ ಎಂದು ಅಮಿತ್ ಶಾ ಹೇಳಿದ್ದಾರೆ.

ಪೂರ್ತಿ ಓದಿ

06:03 PM (IST) Apr 11

ರೇಷನ್ ಕಾರ್ಡ್ e-KYC ಕಡ್ಡಾಯ, ಹೇಗೆ ಮಾಡಿಸೋದು? ತಿಳಿಯಿರಿ

2025ರವರೆಗೆ ರೇಷನ್ ಕಾರ್ಡ್ ಹೊಂದಿರುವವರು ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಬೇಕು. ಇಲ್ಲದಿದ್ದರೆ, ಉಚಿತ ರೇಷನ್ ಸೌಲಭ್ಯ ರದ್ದಾಗಬಹುದು. ನಿಮ್ಮ ಇ-ಕೆವೈಸಿ ಸ್ಥಿತಿಯನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸಿ ಮತ್ತು ಪೂರ್ಣಗೊಳಿಸದಿದ್ದರೆ ತಕ್ಷಣವೇ ಹತ್ತಿರದ ಕೇಂದ್ರದಲ್ಲಿ ಮಾಡಿಸಿ.

ಪೂರ್ತಿ ಓದಿ

05:39 PM (IST) Apr 11

ಸೈಟು, ಕೆಲಸ ರಿಜೆಕ್ಟ್ ಮಾಡಿ 4 ಕೋಟಿ ಪಡೆದ ವಿನೇಶ್ ಫೋಗಟ್!

ಕುಸ್ತಿಪಟು ವಿನೇಶ್ ಫೋಗಟ್‌ಗೆ ಹರಿಯಾಣ ಸರ್ಕಾರ 4 ಕೋಟಿ ರೂಪಾಯಿ ನಗದು ಬಹುಮಾನ ನೀಡಿದೆ. ಒಲಿಂಪಿಕ್ ಬೆಳ್ಳಿ ಪದಕ ವಿಜೇತರಿಗೆ ನೀಡುವ ಸೌಲಭ್ಯಕ್ಕೆ ಸಮನಾದ ಸೌಲಭ್ಯವನ್ನು ಸರ್ಕಾರ ನೀಡಿದೆ.

ಪೂರ್ತಿ ಓದಿ

05:37 PM (IST) Apr 11

ಸ್ಯಾಲರಿ ಹೈಕ್‌ ಆಸೆಯಲ್ಲಿದ್ದ ಟೆಕ್ಕಿಗಳಿಗೆ ಶಾಕ್, IT ಪಾಲಿಟಿಕ್ಸ್!

ಟಿಸಿಎಸ್ 2025 ಕ್ಕೆ ನೌಕರರ ವೇತನ ಏರಿಕೆಯನ್ನು ಮುಂದೂಡಿದೆ. ವ್ಯವಹಾರದ ಅಸ್ಥಿರ ವಾತಾವರಣವೇ ಇದಕ್ಕೆ ಕಾರಣ. ನಾಲ್ಕನೇ ತ್ರೈಮಾಸಿಕದಲ್ಲಿ ₹ 12,224 ಕೋಟಿ ನಿವ್ವಳ ಲಾಭ ಗಳಿಸಿದೆ.

ಪೂರ್ತಿ ಓದಿ

05:28 PM (IST) Apr 11

ಎಸ್ಸಿ ಕುಟುಂಬಕ್ಕೆ ಹೈಕೋರ್ಟ್‌ನಿಂದ 25 ಸಾವಿರ ರೂ. ದಂಡ! ಕಾರಣವೇನು?

ಸರ್ಕಾರದಿಂದ ಮಂಜೂರಾಗಿದ್ದ ಜಮೀನನ್ನು ಮಾರಾಟ ಮಾಡಿದ ಬಳಿಕ ಹಕ್ಕು ಮರುಸ್ಥಾಪನೆಗೆ ಕೋರಿದ್ದ ಪರಿಶಿಷ್ಟ ಜಾತಿ ಕುಟುಂಬಕ್ಕೆ ಹೈಕೋರ್ಟ್ 25 ಸಾವಿರ ರೂ. ದಂಡ ವಿಧಿಸಿದೆ. ಪಿಟಿಸಿಎಲ್ ಕಾಯ್ದೆಯಡಿ ಅರ್ಜಿಗಳ ಶೀಘ್ರ ವಿಲೇವಾರಿಗೆ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.

ಪೂರ್ತಿ ಓದಿ

05:14 PM (IST) Apr 11

ಬ್ರೇಕಪ್‌ ರಿವೆಂಜ್‌ಗೆಂದು ಮಾಜಿ ಲವ್ವರ್‌ಗೆ 300 ಕ್ಯಾಶ್‌ ಆನ್‌ ಡೆಲಿವರಿ ಪಾರ್ಸೆಲ್‌ ಕಳಿಸಿದ ಭೂಪ!

ಬ್ರೇಕಪ್‌ ಆದ್ಮೇಲೂ ಈ ರೀತಿ ಸೇಡು ತೀರಿಸಿಕೊಳ್ಳಬಹುದು ಎಂದು ತೋರಿಸಿಕೊಟ್ಟ ಹುಡುಗ ಈಗ ಜೈಲಿಗೆ ಹೋಗಿ ಬಂದಿದ್ದಾನೆ. 
 

ಪೂರ್ತಿ ಓದಿ

05:14 PM (IST) Apr 11

ಪುತ್ತೂರು ತಲವಾರು ತೋರಿಸಿ ಶೋಕಿ, ಇಬ್ಬರು ಯುವಕರು ಅರೆಸ್ಟ್!

ಪುತ್ತೂರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ತಲವಾರು ಪ್ರದರ್ಶಿಸಿ ಪೋಸ್ ನೀಡಿದ್ದ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಸುಮೊಟೋ ಕೇಸ್ ದಾಖಲಿಸಲಾಗಿದೆ. ಚಿನ್ನದ ಸರ ಸುಲಿಗೆ ಪ್ರಕರಣದಲ್ಲಿಯೂ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.

ಪೂರ್ತಿ ಓದಿ

05:10 PM (IST) Apr 11

7ನೇ ಕ್ಲಾಸ್ ಹುಡ್ಗನಿಂದ ಟೀಚರ್ ಮೇಲೆ ಕಬ್ಬಿಣದ ರಾಡ್‌ನಿಂದ ಹಲ್ಲೆ

 12 ವರ್ಷದ ಬಾಲಕನೋರ್ವ ಪರೀಕ್ಷೆಯಲ್ಲಿ ಶಿಕ್ಷಕರಿಗೆ ಸಿಕ್ಕಿಬಿದ್ದ, ನಂತರ ಕಬ್ಬಿಣದ ರಾಡ್‌ನಿಂದ ಶಿಕ್ಷಕನ ಮೇಲೆ ಹಲ್ಲೆ ಮಾಡಿದ್ದಾನೆ. ಇಂತಹ ಆಘಾತಕಾರಿ ಘಟನೆ ನೆರೆಯ ರಾಜ್ಯ ತೆಲಂಗಾಣದಲ್ಲಿ ನಡೆದಿದೆ.

ಪೂರ್ತಿ ಓದಿ

05:08 PM (IST) Apr 11

ಭಾರತ ಶ್ರೀಮಂತೆ ನೀತಾ ಅಂಬಾನಿ ಬಳಿ ಮಾತ್ರ ಇರುವ 5 ಐಷಾರಾಮಿ ವಸ್ತುಗಳು

ನೀತಾ ಅಂಬಾನಿ ಐಷಾರಾಮಿ ಜೀವನಶೈಲಿಗಾಗಿ ಹೆಸರುವಾಸಿಯಾಗಿದ್ದಾರೆ. ಅವರ ಬಳಿ ಇರುವ ಕೆಲವು ವಿಶೇಷ ವಸ್ತುಗಳು ಭಾರತದಲ್ಲಿ ಬೇರೆ ಯಾರ ಬಳಿಯೂ ಇಲ್ಲ. ಅವುಗಳ ಬಗ್ಗೆ ತಿಳಿಯೋಣ.

ಪೂರ್ತಿ ಓದಿ

04:54 PM (IST) Apr 11

ರಾಣಾ ಹಸ್ತಾಂತರ: ಕಾಂಗ್ರೆಸ್-ಬಿಜೆಪಿ ನಡುವೆ ಕ್ರೆಡಿಟ್ ವಾರ್!

 Tahawwur Rana Extradition updates: 26/11 ದಾಳಿಯ ಆರೋಪಿ ತಹವ್ವೂರ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲಾಗಿದೆ. ಈ ಯಶಸ್ಸಿನ ಕೀರ್ತಿಗಾಗಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿ ನಡೆದಿದೆ. ಉಭಯ ಪಕ್ಷಗಳು ಪರಸ್ಪರ ಆರೋಪ-ಪ್ರತ್ಯಾರೋಪಗಳನ್ನು ಮಾಡುತ್ತಿವೆ.

ಪೂರ್ತಿ ಓದಿ

04:27 PM (IST) Apr 11

ಸುಳ್ಳು ಹೇಳಿ ಸಿಕ್ಕಾಕೊಂಡ್ರು, ಬಾತ್‌ರೂಮ್‌ನಲ್ಲೇ ವಿಡಿಯೋ ಮಾಡಿದ್ರು; ನಿವೇದಿತಾ ಗೌಡ ಅಂದ್ರೆ ಸುಮ್ನೇನಾ?

ಬಿಗ್‌ ಬಾಸ್‌ ನಿವೇದಿತಾ ಗೌಡ ಅವರು ಹಠಕ್ಕೆಂದೇ ಬಾತ್‌ರೂಮ್‌ನಲ್ಲೇ ಮತ್ತೆ ವಿಡಿಯೋ ಮಾಡಿದ್ದಾರೆ. ಇದಕ್ಕೂ ಕಾರಣ ಇದೆಯಂತೆ. 
 

ಪೂರ್ತಿ ಓದಿ

04:26 PM (IST) Apr 11

Good Bad Ugly ಬಳಿಕ ಅಜಿತ್ ಬಗ್ಗೆ ಮಾರುದ್ಧ ಬರೆದ ಪ್ರಿಯಾ ವಾರಿಯರ್

ತಮಿಳು ನಟ ಅಜಿತ್ ಕುಮಾರ್ ಅಭಿನಯದ 'ಗುಡ್ ಬ್ಯಾಡ್ ಅಗ್ಲಿ' ಚಿತ್ರದಲ್ಲಿನ ಅನುಭವಗಳನ್ನು ನಟಿ ಪ್ರಿಯಾ ವಾರಿಯರ್ ಹಂಚಿಕೊಂಡಿದ್ದಾರೆ. ಅಜಿತ್ ಅವರ ಪ್ರೀತಿ ಮತ್ತು ಕಾಳಜಿಯನ್ನು ಅವರು ಎಂದಿಗೂ ಮರೆಯುವುದಿಲ್ಲ ಎಂದು ಹೇಳಿದ್ದಾರೆ.

ಪೂರ್ತಿ ಓದಿ

04:25 PM (IST) Apr 11

ಬಿಬಿಎಂಪಿ ಕಸ ವಿಲೇವಾರಿಗೆ ಛೀಮಾರಿ ಹಾಕಿದ ಸ್ವಚ್ಛ ಭಾರತ ಮಿಷನ್ ತಂಡ!

ಬೆಂಗಳೂರಿನಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ನಿರ್ವಹಣೆಯ ಬಗ್ಗೆ ಸ್ವಚ್ಛ ಭಾರತ್ ಮಿಷನ್ ತಂಡವು ಪರಿಶೀಲನೆ ನಡೆಸಿತು. ಕಸ ವಿಲೇವಾರಿ ಕುರಿತು ಅಧಿಕಾರಿಗಳು ಸಲಹೆಗಳನ್ನು ನೀಡಿದರು ಮತ್ತು ಘಟಕಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಪೂರ್ತಿ ಓದಿ

04:23 PM (IST) Apr 11

ಬಾಗಲಕೋಟೆ: ಮತಾಂತರಕ್ಕೆ ಪ್ರಚೋದನೆ, ಮೂವರ ವಿರುದ್ಧ ಕೇಸ್!

ಬಾಗಲಕೋಟೆಯಲ್ಲಿ ರಾಮತೀರ್ಥ ದೇವಸ್ಥಾನದ ಬಳಿ ಕರಪತ್ರ ಹಂಚಿ ಮತಾಂತರಕ್ಕೆ ಪ್ರಚೋದನೆ ನೀಡಿದ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ. ಮುಸ್ತಾಫ, ಸುಲೇಮಾನ್, ಮತ್ತು ಅಲಿಸಾಬ್ ಎಂಬುವರ ವಿರುದ್ಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪೂರ್ತಿ ಓದಿ

04:12 PM (IST) Apr 11

ಪ್ರಸ್ತುತ ಸಮಾಜದಲ್ಲಿ ಮಗಳನ್ನು ಬೆಳೆಸಲು ಕಳವಳ ಆಗ್ತಿದೆ: ನಟಿ ಸೋಹಾ ಅಲಿ ಖಾನ್

ಚೋರಿ 2 ನಟಿ, ಸೈಫ್ ಅಲಿ ಖಾನ್ ಸೋದರಿ ಸೋಹಾ ಅಲಿ ಖಾನ್ ಅವರು ತಮ್ಮ ಮಗಳು ಇನಾಯಾಳನ್ನು ಪಿತೃಪ್ರಧಾನವಾಗಿರುವ ಈ ಸಮಾಜದಲ್ಲಿ ಬೆಳೆಸುವುದಕ್ಕೆ ತೀವ್ರ ಚಿಂತೆಯಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ. 

ಪೂರ್ತಿ ಓದಿ

04:10 PM (IST) Apr 11

ಅಬ್ಬಾ, ವಿರಾಟ್ ಕೊಹ್ಲಿ ತಾವು ರನೌಟ್ ಆಗಿದ್ದಕ್ಕಿಂತ ಸಹ ಆಟಗಾರರನ್ನು ಔಟ್ ಮಾಡಿದ್ದೇ ಹೆಚ್ಚು!

ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆರ್‌ಸಿಬಿ 6 ವಿಕೆಟ್‌ಗಳಿಂದ ಸೋತಿದೆ. ಫಿಲ್ ಸಾಲ್ಟ್ ರನೌಟ್ ಪಂದ್ಯದ ದಿಕ್ಕನ್ನು ಬದಲಾಯಿಸಿತು, ನಂತರ ಆರ್‌ಸಿಬಿ ಬ್ಯಾಟಿಂಗ್ ಕುಸಿತ ಕಂಡಿತು. ವಿರಾಟ್ ಕೊಹ್ಲಿ ಐಪಿಎಲ್ ಇತಿಹಾಸದಲ್ಲಿ 32 ಬಾರಿ ರನೌಟ್‌ಗೆ ಸಾಕ್ಷಿಯಾಗಿದ್ದಾರೆ.

ಪೂರ್ತಿ ಓದಿ

03:52 PM (IST) Apr 11

ಕಾಂಗ್ರೆಸ್ ಕಳ್ಳರೇ ದಲಿತರನ್ನು ತುಳಿದವರು; ಆರ್. ಅಶೋಕ ಆರೋಪ

ವಿಧಾನಸೌಧದಲ್ಲಿ ಮಾತನಾಡಿದ ಆರ್.ಅಶೋಕ, ಕಾಂಗ್ರೆಸ್ ದಲಿತರನ್ನು ತುಳಿದಿದೆ ಎಂದು ಆರೋಪಿಸಿದರು. ಕಾಂಗ್ರೆಸ್ ಬಾಬಾ ಸಾಹೇಬ್ ಅಂಬೇಡ್ಕರ್ ಹೆಸರನ್ನು ದುರುಪಯೋಗಪಡಿಸಿಕೊಂಡಿದೆ ಎಂದರು.

ಪೂರ್ತಿ ಓದಿ

03:42 PM (IST) Apr 11

RCB ವಿರುದ್ಧ ಸೇಡು ತೀರಿಸಿಕೊಂಡು 'ಕಾಂತಾರ' ನೆನೆದ KL Rahul;‌ ನಂಗೆ ಈ ಗ್ರೌಂಡ್‌ ಪಿಚ್‌ ಗೊತ್ತು ಎಂದ ಕನ್ನಡಿಗ

ಆರ್‌ಸಿಬಿ ವಿರುದ್ಧ ಗೆಲುವು ಸಾಧಿಸಿದ ಬಳಿಕ ಕೆ ಎಲ್‌ ರಾಹುಲ್‌ ಅವರ ಸಂಭ್ರಮಾಚರಣೆ ಸಾಕಷ್ಟು ಸದ್ದು ಮಾಡಿದೆ. ಈ ಬಗ್ಗೆ ಮಾತನಾಡುತ್ತ ರಾಹುಲ್‌ ಅವರು ಕಾಂತಾರ ಸಿನಿಮಾವನ್ನು ನೆನಪಿಸಿಕೊಂಡಿದ್ದಾರೆ. 
 

ಪೂರ್ತಿ ಓದಿ

03:39 PM (IST) Apr 11

ಪಾರ್ಕ್‌ ಬಳಿ ಬೈಕ್‌ನಲ್ಲಿ ಕೂತಿದ್ದ ಹಿಂದೂ ಯುವಕ-ಮುಸ್ಲಿಂ ಯುವತಿ ಮೇಲೆ ಹಲ್ಲೆ, ಪ್ರಿಯಾಂಕ್‌ ಖರ್ಗೆ ಆಕ್ರೋಶ!

ಬೆಂಗಳೂರಿನ ಚಂದ್ರಾ ಲೇಔಟ್‌ನಲ್ಲಿ ಯುವಕ-ಯುವತಿಗೆ ಹಲ್ಲೆ ನಡೆಸಿದ ಪ್ರಕರಣದಲ್ಲಿ 5 ಮಂದಿ ಮುಸ್ಲಿಂ ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ನೈತಿಕ ಪೊಲೀಸ್‌ಗಿರಿಯನ್ನು ಸಹಿಸುವುದಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಪೂರ್ತಿ ಓದಿ

More Trending News