ಕೇಂದ್ರಕ್ಕೆ ಸೆಡ್ಡು: ಕುಮಾರಸ್ವಾಮಿ ಮೈತ್ರಿ ಸರ್ಕಾರದಿಂದ ರೈತರಿಗೆ ಸಿಹಿ ಸುದ್ದಿ

By Web DeskFirst Published Nov 17, 2018, 4:38 PM IST
Highlights

ಈಗಾಗಲೇ ಕೇಂದ್ರ ಸರ್ಕಾರ 'ಫಸಲ್ ಭೀಮಾ ಯೋಜನೆ' ಜಾರಿಗೆ ತಂದಿದೆ. ಇದೀಗ ಇದಕ್ಕೆ ಸೆಡ್ಡು ಹೊಡೆದಿರುವ ರಾಜ್ಯ ಮೈತ್ರಿ ಸರ್ಕಾರ ರೈತೋಪಯೋಗಿ ಯೋಜನೆವೊಂದನ್ನ ಜಾರಿಗೆ ತರಲು ನೀಲಿನಕ್ಷೆ ಸಿದ್ಧಪಡಿಸಿದೆ. ಏನದು ಯೋಜನೆ?

ಬೆಂಗಳೂರು, (ನ.17): ಈಗಾಗಲೇ ಬೆಳೆ ಸಾಲ ಯೋಜನೆ ಜಾರಿಗೊಳಿಸಿ ರಾಜ್ಯ ರೈತರಿಗೆ ಸಿಹಿ ಸುದ್ದಿ ನಿಡಿರುವ ಮೈತ್ರಿ ಸರ್ಕಾರ ಈಗ ಮತ್ತೊಂದು ರೈತೋಪಯೋಗಿ ಯೋಜನೆವೊಂದನ್ನ ಜಾರಿಗೆ ತರಲು ಮುಂದಾಗಿದೆ.

ಈಗಾಗಲೇ ಕೇಂದ್ರದ 'ಫಸಲ್ ಭೀಮಾ ಯೋಜನೆ' ಜಾರಿಯಲ್ಲಿದೆ. ಇದಕ್ಕೆ ಪ್ರತಿಯಾಗಿ ರಾಜ್ಯ ಸರ್ಕಾರವೇ ಹೊಸದೊಂದು ಸರಳವಾದ ಬೆಳೆ ವಿಮೆ ಯೋಜನೆ ಜಾರಿಗೆ ತರಲು ಚಿಂತನೆ ನಡೆಸಿದೆ. 

ಕೇಂದ್ರದ ಫಸಲ್ ಭೀಮಾ ಯೋಜನೆ ಬಗ್ಗೆ ಈಗಾಗಲೇ ಮಹಾರಾಷ್ಟ್ರ, ಮಧ್ಯ ಪ್ರದೇಶಗಳಲ್ಲಿ ಆಕ್ಷೇಪಗಳು ವ್ಯಕ್ತವಾಗಿವೆ. ಈ ನಡುವೆ ರಾಜ್ಯ ಸರ್ಕಾರ ಬೆಳೆ ವಿಮೆ ತರಲು ಸಿದ್ಧವಾಗಿದೆ.
 
ಇನ್ನು ಈ ಬಗ್ಗೆ ಕೃಷಿ ಸಚಿವ ಶಿವಶಂಕರ ರೆಡ್ಡಿ ಅವರು ಮತನಾಡಿದ್ದು, ಬೆಳೆ ವಿಮೆ ಯೋಜನೆಗೆ ನೀಲಿನಕ್ಷೆ ರೆಡಿಯಾಗಿದ್ದು, ಕೂಡಲೇ ಯೋಜನೆ ಜಾರಿಗೊಳಿಸಲಾಗುವುದು ಎಂದು ಹೇಳಿದ್ದಾರೆ.

ಏನಿದು ಯೋಜನೆ?:
ಕಡಿಮೆ ಹಣದಲ್ಲಿ ಬೆಳೆ ವಿಮೆ ಯೋಜನೆ ಜಾರಿ ಆದರೆ ರೈತರಿಗೆ ಕಡಿಮೆ ಹಣದಲ್ಲಿ ಬೆಳೆ ವಿಮೆ ದೊರಕಲಿದೆ. ಬೆಳೆ ನಾಶವಾದರೂ ರೈತ ಕಂಗಾಲಾಗುವುದು ಈ ಯೋಜನೆಯಿಂದ ತಪ್ಪಲಿದೆ. ಯೋಜನೆಯಿಂದ ರೈತರಿಗೆ ಲಾಭವಾಗಲಿದೆ ಎನ್ನಲಾಗಿದೆ. ಆದ್ರೆ ಎಷ್ಟರ ಮಟ್ಟಿಗೆ ಈ ಯೋಜನೆ ರಾಜ್ಯದಲ್ಲಿ ಯಶಸ್ವಿಯಾಗುತ್ತೆ ಎನ್ನುವುದನ್ನ ಕಾದುನೋಡಬೇಕಿದೆ.
 

click me!