ಜೆಡಿಎಸ್ ನಾಯಕ, ಉದ್ಯಮಿ ಪ್ರಭಾಕರ್ ರೆಡ್ಡಿ ಬಂಧನ

Feb 22, 2019, 9:27 AM IST

ನಕಲಿ ದಾಖಲೆ ಸೃಷ್ಟಿಸಿ, ನಿವೇಶನ ಮಾರಾಟ ಮಾಡಿ ಅಮಾಯಕರಿಗೆ ವಂಚಿಸುತ್ತಿದ್ದ ಆರೋಪದ ಮೇರೆಗೆ ರಿಯಲ್‌ ಎಸ್ಟೇಟ್‌ ಉದ್ಯಮಿ, ರಾಜಕಾರಣಿ ಪ್ರಭಾಕರ್‌ ರೆಡ್ಡಿಯನ್ನು ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಗುರುವಾರ ಬಂಧಿಸಿದ್ದಾರೆ. ಪ್ರಭಾಕರ್‌ ರೆಡ್ಡಿ ಮನೆ ಹಾಗೂ ಕಚೇರಿ ದಾಳಿ ನಡೆಸಿ ಸುಮಾರು .300 ಕೋಟಿಗೂ ಅಧಿಕ ಮೌಲ್ಯದ ಆಸ್ತಿ ಜಪ್ತಿ ಮಾಡಲಾಗಿದೆ. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಸಿಸಿಬಿ ಅಧಿಕಾರಿಗಳು ಹೇಳಿದ್ದಾರೆ.