Karnataka Lok Sabha Election 2024: ಅಂಗವಿಕಲರಿಗೆ ಸಕ್ಷಮ್ ಆ್ಯಪ್ ನೆರವು: ವೀಲ್ಹ್‌ಚೇರ್ ಸೇರಿ ಎಲ್ಲಾ ಸೌಲಭ್ಯ

By Kannadaprabha News  |  First Published Apr 26, 2024, 9:18 AM IST

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗವು ಅಭಿವೃದ್ಧಿಪಡಿಸುವ 'ಸಕ್ಷಮ್ ಆ್ಯಪ್' ಬಳಸಿಕೊಂಡು ಅಂಗವಿಕಲ ಮತದಾರರು ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಮತ ಚಲಾಯಿಸುವಂತೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್‌‌ ಮೀನಾ ತಿಳಿಸಿದ್ದಾರೆ. 


ಬೆಂಗಳೂರು (ಏ.26): ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗವು ಅಭಿವೃದ್ಧಿಪಡಿಸುವ 'ಸಕ್ಷಮ್ ಆ್ಯಪ್' ಬಳಸಿಕೊಂಡು ಅಂಗವಿಕಲ ಮತದಾರರು ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಮತ ಚಲಾಯಿಸುವಂತೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್‌‌ ಮೀನಾ ತಿಳಿಸಿದ್ದಾರೆ. ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಮತ ಚಲಾಯಿಸಲು6,20,008 ಅಂಗವಿಕಲ ಮತದಾರರಿ ದ್ದಾರೆ. ಈ ಪೈಕಿ ಶುಕ್ರವಾರ ನಡೆಯುವ ರಾಜ್ಯದ ಮೊದಲ ಹಂತದ ಮತದಾನದಲ್ಲಿ 2.76 ಲಕ್ಷ ಮಂದಿ ಅಂಗವಿಕಲರು ಮತದಾನದಲ್ಲಿ ಭಾಗವಹಿಸಲಿದ್ದಾರೆ. 

ತಾವಿರುವಲ್ಲೇ ಮಾಹಿತಿ ಪಡೆಯಿರಿ: ಈ ಅಂಗವಿಕಲ ಮತದಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೇಂದ್ರ ಚುನಾವಣಾ ಆಯೋಗವು ಸಕ್ಷಮ್ ಆ್ಯಪ್ ಅಭಿವೃದ್ಧಿಪ ಡಿಸಿದೆ. ಇದರಲ್ಲಿ ಅಂಗವಿಕಲ ಮತದಾರರಿಗೆ ಮೊಬೈಲ್ ಮುಖಾಂತರ ಗಾಲಿ ಕುರ್ಚಿ, ಸಾರಿಗೆ, ಸಹಾಯಕರು, ಪ್ರತ್ಯೇಕ ಸಾಲು, ಸಂಜ್ಞಾ ಭಾಷೆ ಪರಿಣಿತರು, ಬೂತಗನ್ನಡಿ, ಬ್ರೈಲ್ ಲಿಪಿ, ನೀರು ಇತ್ಯಾದಿ ಸೌಲಭ್ಯಗಳನ್ನು ಪಡೆಯ ಬಹುದು. ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಆ್ಯಪ್ ಲಭ್ಯವಿದೆ.

Tap to resize

Latest Videos

ಕರ್ನಾಟಕ Election 2024 Live: ರಾಜ್ಯದ 14 ಜಿಲ್ಲೆಗಳಲ್ಲೂ ಚುರುಕುಗೊಂಡ ಮತದಾನ

ಸಂಜೆ 5ರವರೆಗೂ ಕಾಯ್ದಿರಿಸಬಹುದು: ರಾಜ್ಯದಲ್ಲಿ ಮೊದಲ ಹಂತದಲ್ಲಿ ನಡೆಯವ 14 ಲೋಕಸಭಾ ಕ್ಷೇತ್ರಗಳ ಮತದಾನಕ್ಕಾಗಿ ಈ ಕ್ಷೇತ್ರ ವ್ಯಾಪ್ತಿಯಲ್ಲಿ ಗಾಲಿಕುರ್ಚಿಗಾಗಿ 756, ಸಾರಿಗೆ 489 ಹಾಗೂ ಸಹಾಯಕರನ್ನು ಕೋರಿ 31 ಅಂಗವಿಕಲಮತದಾರರುಸಕ್ಷಮ್ ಆ್ಯಪ್ನಲ್ಲಿ ಮುಂಗಡವಾಗಿ ಕಾಯ್ದಿರಿಸಿದ್ದಾರೆ. ಶುಕ್ರವಾರ ಸಂಜೆ 5 ಗಂಟೆವರೆಗೂ ಈ ಸೌಲಭ್ಯಗಳನ್ನು ಮುಂಗಡವಾಗಿ ಕಾಯ್ದಿರಿಸಲು ಅವಕಾಶ ಕಲ್ಪಿಸಲಾಗಿದೆ.

ಆ್ಯಪ್ ಬಳಕೆ ಹೇಗೆ?: ಅಂಗವಿಕಲ ಮತದಾರರು ತಮ್ಮ ಮೊಬೈಲ್‌ನ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಸಕ್ಷಮ್ ಆ್ಯಪ್ ಡೌಗ್ಲೋಡ್ ಮಾಡಬೇಕು. ಬಳಿಕ ತಮ್ಮ ಮೊಬೈಲ್ ಸಂಖ್ಯೆ ಬಳಸಿ ನೋಂದಣಿ ಮಾಡಿಕೊಂಡು ಲಾಗಿನ್ ಮಾಡಬೇಕು. ಬಳಿಕ ಮನೆಯಿಂದ ಮತಗಟ್ಟೆಗೆ ತೆರಳಲು ಹಾಗೂ ವಾಪಸ್ ಮನೆಗೆ ಬರಲು ಮುಂಗಡವಾಗಿ ವಾಹನ ಕಾಯ್ದಿರಿಸಬಹುದು. ಅಂತೆಯೇ ಮತಗಟ್ಟೆಯಲ್ಲಿ ದೊರೆಯುವ ಅಂಗವಿಕಲರ ಸೌಲಭ್ಯಗಳನ್ನು ಪಡೆ ಯಲು ಮುಂಗಡವಾಗಿ ಕಾಯ್ದಿರಿಸಬಹುದು ಎಂದು ಮನೋಜ್ ಕುಮಾರ್‌ಮೀನಾ ತಿಳಿಸಿದ್ದಾರೆ.

click me!