80 'ಅಮೆರಿಕನ್ ಭಯೋತ್ಪಾದಕರ' ಹತ್ಯೆ, ಬಂದ್ ಮಾಡಿ ಕಾರ್ಮಿಕರು ಕೇಳಿದರು ಭತ್ಯೆ: ಟಾಪ್ 10 ಸುದ್ದಿ!

By Suvarna NewsFirst Published Jan 8, 2020, 4:54 PM IST
Highlights

ದೇಶದ ರಾಜಕೀಯ, ಆರ್ಥಿಕ, ಸಾಮಾಜಿಕ ಕ್ಷೇತ್ರದಲ್ಲಿ ಹತ್ತು ಹಲವು ಘಟನಾವಳಿಗಳು| ಸುದ್ದಿಯ ಸಾರವರಿತು ಸುದ್ದಿಯ ವಿಶ್ಲೇಷಿಸುವ ನಿಮ್ಮ ಸುವರ್ಣನ್ಯೂಸ್.ಕಾಂ| ದಿನದ ಟಾಪ್ 10 ಸುದ್ದಿಗಳು ನಿಮಗಾಗಿ| ಜ. 08ರ ರಂದು ನಡೆದ ವಿವಿಧ ಪ್ರಮುಖ ಸುದ್ದಿಗಳ ಸಂಕ್ಷಿಪ್ತ ಮಾಹಿತಿ ಇಲ್ಲಿದೆ|

ಬೆಂಗಳೂರು(ಜ.08): ದಿನವೊಂದಕ್ಕೆ ದೇಶದಲ್ಲಿ ಅದೆಷ್ಟು ಘಟನೆಗಳು ಸಂಭವಿಸುತ್ತವೆ. ದೇಶದ ರಾಜಕೀಯ, ಆರ್ಥಿಕ, ಸಾಮಾಜಿಕ ಕ್ಷೇತ್ರದಲ್ಲಿ ಅಸಂಖ್ಯಾತ ಘಟನಾವಳಿಗಳು ಜರುತ್ತಲೇ ಇರುತ್ತವೆ. ಈ ಎಲ್ಲ ಸುದ್ದಿಗಳನ್ನು ಹೆಕ್ಕಿ ತೆಗೆಯುವ, ಸುದ್ದಿಯ ಆಳಕ್ಕಿಳಿದು ವಿಶ್ಲೇಷಿಸುವ ಪತ್ರಿಕಾಧರ್ಮವನ್ನು ನಿಮ್ಮ ಸುವರ್ಣನ್ಯೂಸ್.ಕಾಂ ಚಾಚೂ ತಪ್ಪದೇ ಪಾಲಿಸಿಕೊಂಡು ಬರುತ್ತದೆ. ಅದರಂತೆ ಇಂದಿನ ಅಸಂಖ್ಯ ಘಟನಾವಳಿಗಳ ಸಮುದ್ರದಿಂದ ಟಾಪ್ 10 ಸುದ್ದಿ ಎಂಬ ಬೊಗಸೆಯಲ್ಲಿಡಿದು ಓದುಗರ ಮುಂದಿಟ್ಟಿದೆ. ಸುವರ್ಣನ್ಯೂಸ್.ಕಾಂ. ಓದಿರಿ, ಓದಿಸಿರಿ.

1. ಇರಾನ್ ಮಿಸೈಲ್ ದಾಳಿಗೆ 80 'ಅಮೆರಿಕನ್ ಭಯೋತ್ಪಾದಕರ' ಸಾವು?: ಏನಾಗಿಲ್ಲ ಎಂದ ಟ್ರಂಪ್!


ಇರಾಕ್‌ನಲ್ಲಿ ಬೀಡು ಬಿಟ್ಟಿರುವ ಅಮೆರಿಕ ಸೇನಾ ನೆಲೆಗಳ ಮೇಲೆ ಇರಾನ್ ಮಿಸೈಲ್ ದಾಳಿ ನಡೆಸಿದೆ ಎನ್ನಲಾಗಿದ್ದು, ದಾಳಿಯಲ್ಲಿ ಸುಮಾರು 80 'ಅಮೆರಿಕನ್ ಭಯೋತ್ಪಾದಕರು'(ಸೈನಿಕರು) ಮೃತಪಟ್ಟಿರುವುದಾಗಿ ಇರಾನ್ ಸರ್ಕಾರಿ ಮಾಧ್ಯಮ ಹೇಳಿದೆ. ಆದರೆ ಇಂತಹ ಯಾವುದೇ ದಾಳಿ ನಡೆದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಹೇಳಿದ್ದಾರೆ.

2. ರಾಕಿಂಗ್ ಬರ್ತಡೇ; ಯಶ್‌ಗೆ ಸೆಲಬ್ರಿಟಿಗಳು ವಿಶ್ ಮಾಡಿದ್ದು ಹೀಗೆ!


ಕೆಜಿಎಫ್ ಕಿಂಗ್ ಯಶ್‌ ಹುಟ್ಟುಹಬ್ಬವನ್ನು ಅಭಿಮಾನಿಗಳು ಅದ್ಧೂರಿಯಾಗಿ ಸೆಲಬ್ರೆಟ್ ಮಾಡಿದ್ದಾರೆ. ಅಭಿಮಾನಿಗಳು, ಸೆಲಬ್ರಿಟಿಗಳು ಸೇರಿದಂತೆ ಯಶ್‌ಗೆ ವಿಶ್‌ಗಳ  ಸುರಿಮಳೆಯೇ ಹರಿದು ಬಂದಿದೆ.  ಯಾರು ಯಾರೆಲ್ಲಾ ಹೇಗೆಲ್ಲಾ ವಿಶ್ ಮಾಡಿದ್ದಾರೆ? ಇಲ್ಲಿದೆ ನೋಡಿ ವಿಡಿಯೋ!

3.JDS ಶಾಸಕರು ನಮ್ಮ ಕಡೆ ಬರದಂತೆ ನೋಡ್ಕೊಳ್ಳಿ: HDKಗೆ ಬಿಜೆಪಿ ನಾಯಕ ಕಿವಿ ಮಾತು


ಬಿಜೆಪಿ ಅತೃಪ್ತ ಶಾಸಕರ ಬಗ್ಗೆ ಅಮೇಲೆ ಮಾತನಾಡಲಿ. ಮೊದಲು ಕುಮಾರಸ್ವಾಮಿ ತಮ್ಮ ಪಕ್ಷದ ಅತೃಪ್ತ ಶಾಸಕರನ್ನು ಉಳಿಸಿಕೊಳ್ಳಲಿ ಎಂದು  ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಟಾಂಗ್ ಕೊಟ್ಟರು.]

4. ಮಧ್ಯಪ್ರಾಚ್ಯಕ್ಕೆ ಹೋದವರಿಗೆ, ಹೋಗುವವರಿಗೆ ವಿದೇಶಾಂಗ ಇಲಾಖೆ ಸಲಹೆ!


ಇರಾಕ್‌ಗೆ ತೆರಳುವ ಭಾರತೀಯರು ತಮ್ಮ ಪ್ರವಾಸವನ್ನು ಮುಂದೂಡುವುದು ಒಳಿತು ಎಂದು ಭಾರತದ ವಿದೇಶಾಂಗ ಇಲಾಖೆ ಸಲಹೆ ನೀಡಿದ್ದು, ಇರಾಕ್‌ನಲ್ಲಿರುವ ಭಾರತೀಯರು ಕಟ್ಟೆಚ್ಚರದಿಂದ ಇರುವಂತೆ ಮನವಿ ಮಾಡಿದೆ. ಈ ಕುರಿತು ಪ್ರಕಟಣೆ ಹೊರಡಿಸಿರುವ ವಿದೇಶಾಂಗ ಇಲಾಖೆ, ಮಧ್ಯಪ್ರಾಚ್ಯ ರಾಷ್ಟ್ರಗಳು ಅದರಲ್ಲೂ ಇರಾಕ್ ಹಾಗೂ ಇರಾನ್‌ ರಾಷ್ಟ್ರಗಳಿಗೆ ತೆರಳುವ ಯೋಜನೆಯನ್ನು ಭಾರತೀಯರು ಮುಂದೂಡಬೇಕು ಎಂದು ಮನವಿ ಮಾಡಿದೆ.

5. 2020ರಲ್ಲಿ ಕೊಹ್ಲಿ ಧೂಳಿಪಟಮಾಡಲಿದ್ದಾರೆ ಸಚಿನ್ ತೆಂಡುಲ್ಕರ್ 3 ರೆಕಾರ್ಡ್ಸ್..!


ಕ್ರಿಕೆಟ್ ದೇವರು ಎಂದೇ ಕರೆಸಿಕೊಳ್ಳುವ ಸಚಿನ್ ತೆಂಡುಲ್ಕರ್ ಹಲವು ದಾಖಲೆಗಳನ್ನು ವಿರಾಟ್ ಕೊಹ್ಲಿ ಈಗಾಗಲೇ ಅಳಿಸಿಹಾಕಲಿದ್ದಾರೆ. ಆಧುನಿಕ ಕ್ರಿಕೆಟ್’ನ ಸೂಪರ್ ಸ್ಟಾರ್ ಬ್ಯಾಟ್ಸ್’ಮನ್ ಎನಿಸಿಕೊಂಡಿರುವ ವಿರಾಟ್ ಕೊಹ್ಲಿ 2020ರಲ್ಲಿ ಸಚಿನ್ ತೆಂಡುಲ್ಕರ್ ಹೆಸರಿನಲ್ಲಿರುವ ಮೂರು ದಾಖಲೆಗಳನ್ನು ಧೂಳಿಪಟ ಮಾಡಲು ರೆಡಿಯಾಗಿದ್ದಾರೆ.

6. ಭಕ್ತನಿಂದ ಹೊರಬಿತ್ತು ಫೋಟೋ: ವಿನಯ್ ಗುರೂಜಿಗೆ ಸಂಕಷ್ಟ..!


ಭಕ್ತರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿರುವ ಸ್ವಯಂಘೋಷಿತ ಆಧ್ಯಾತ್ಮ ಗುರು ವಿನಯ್ ಗುರೂಜಿ ಫೋಟೋವೊಂದು ಸಂಕಷ್ಟ ತಂದೊಡ್ಡಿದ್ದು, ವಿನಯ್ ಗುರೂಜಿ ಕಾನೂನಿನ ಸಂಕಷ್ಟ ಎದುರಾಗುವ ಸಾಧ್ಯತೆಗಳಿವೆ.ಏನದು ಪೋಟೋ..? ಈ ಕೆಳಗಿನಂತಿದೆ.

7. ಯಶ್‌ ಯಶಸ್ಸಿಗೆ ತಿರುವು ಕೊಟ್ಟ ಸಿನಿಮಾಗಳಿವು!


ರಾಕಿಂಗ್ ಸ್ಟಾರ್ ಯಶ್ ಸ್ಯಾಂಡಲ್‌ವುಡ್‌ನಲ್ಲಿ ಮೋಸ್ಟ್ ಡಿಮ್ಯಾಂಡ್ ಕ್ರಿಯೆಟ್ ಮಾಡಿರುವ ನಟ. ಕಿರುತೆರೆ, ಬೆಳ್ಳಿತೆರೆ ಎರಡರಲ್ಲೂ ಹೆಸರು ಮಾಡಿದ ನಟ. ಇವರು ಮಾಡುವ ಸಿನಿಮಾಗಳು ಒಂದಕ್ಕಿಂತ ಒಂದು ಡಿಫರೆಂಟ್! ಯಶ್ ಇದುವರೆಗಿನ ಟಾಪ್ ಸಿನಿಮಾಗಳು ಒಂದಕ್ಕಿಂತ ಒಂದು ಡಿಫರೆಂಟ್! ಯಶ್ ಇದುವರೆಗಿನ ಟಾಪ್ ಸಿನಿಮಾಗಳ ಒಂದು ನೋಟ ಇಲ್ಲಿದೆ ನೋಡಿ.

8. ಯುದ್ಧ ಪರಿಣಾಮ ಶುರು: ಕಚ್ಚಾತೈಲ ಬೆಲೆ ಗಗನಕ್ಕೆ!


ರಾನ್-ಅಮೆರಿಕ ಯುದ್ಧೋನ್ಮಾದ ಜಗತ್ತನ್ನು ಆತಂಕಕ್ಕೀಡು ಮಾಡಿದೆ. ಈ ಎರಡು ರಾಷ್ಟ್ರಗಳ ನಡುವಿನ ವೈಮನಸ್ಸು ಬೇರೆ ದೇಶಗಳಿಗೆ ಬೆಲೆ ಏರಿಕೆಯ ಬಿಸಿ ಮುಟ್ಟಿಸುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಕೂಡ ಗಗನಕ್ಕೇರಿದ್ದು, ಅಂತರರಾಷ್ಟ್ರೀಯ ಬೆಂಚ್ ಮಾರ್ಕ್ ಕಚ್ಚಾ ತೈಲ ಬೆಲೆ  ಬ್ಯಾರಲ್ ಗೆ 70 ಡಾಲರ್ ಗಳಿಗೆ ಏರಿಕೆ ಕಂಡಿದೆ.

9.


ದಕ್ಷಿಣ ಭಾರತೀಯರ ಜನಪ್ರಿಯ ಉಪಾಹಾರಗಳಾದ ಇಡ್ಲಿ- ಸಾಂಬಾರ್‌, ಉಪ್ಪಿಟ್ಟು ಹಾಗೂ ತೆಂಗಿನಕಾಯಿ ಚಟ್ನಿ ಕೂಡ ಬಾಹ್ಯಾಕಾಶಕ್ಕೆ ಹೋಗಲಿವೆ. 2022ರಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮೊದಲ ಬಾರಿಗೆ ಮಾನವರನ್ನು ಅಂತರಿಕ್ಷಕ್ಕೆ ಕಳುಹಿಸಲು ಉದ್ದೇಶಿಸಿದೆ.

10. ಅವ್ರದ್ದು ಯುದ್ಧ ಆರಂಭಿಸುವ ಬಯಕೆ, ನಮ್ದು ಮುಗಿಸುವ ಬಯಕೆ: ಎಸ್ಪರ್!


ಇರಾಕ್‌ನಲ್ಲಿರುವ ತನ್ನ ಸೇನಾ ನೆಲೆಗಳ ಮೇಲೆ ಇರಾನ್ ನಡೆಸಿರುವ ಕ್ಷಿಪಣಿ ದಾಳಿಯನ್ನು ಖಂಡಿಸಿರುವ ಅಮೆರಿಕ, ನಮ್ನನ್ನು ಕೆಣಕುವ ದುಸ್ಸಾಹಸಕ್ಕೆ ಕೈ ಹಾಕದಂತೆ ಎಚ್ಚರಿಕೆ ನೀಡಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಮಾರ್ಕ್ ಎಸ್ಪರ್, ನಾವು ಇರಾನ್‌ನೊಂದಿಗೆ ಯುದ್ಧ ಆರಂಭಿಸಲ್ಲ, ಬದಲಿಗೆ ಮುಗಿಸುತ್ತೇವೆ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

click me!