‘ ಪಾಕ್ ದರಿದ್ರ ದೇಶ, ರಾಜ್ಯದಿಂದ ಕೇಂದ್ರಕ್ಕೆ ಫುಲ್ ಸಪೋರ್ಟ್’

By Web DeskFirst Published Feb 26, 2019, 4:52 PM IST
Highlights

ಯೋಧರು ಪಾಕಿಸ್ತಾನದ ಉಗ್ರ ನೆಲೆಗಳ ಮೇಲೆ ದಾಳಿ ಮಾಡಿದ ನಂತರ ಒಬ್ಬೊಬ್ಬ ರಾಜಕೀಯ ನಾಯಕರು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಗೃಹ ಸಚಿವ ಎಂ.ಬಿ.ಪಾಟೀಲ್  ಪಾಕಿಸ್ತಾನ ಒಂದು ದರಿದ್ರ ದೇಶ ಎಂದು ಹೇಳಿಕೆ ನೀಡಿದ್ದಾರೆ.

ಬೆಂಗಳೂರು(ಫೆ. 26) ಪಾಕಿಸ್ತಾನ ಒಂದು ದರಿದ್ರ ದೇಶ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.  ಅಲ್ಲಿರುವ ಕೈಗಾರಿಕೆಯೇ ಭಯೋತ್ಪಾದನೆ. ಒಸಾಮಾ ಬಿನ್ ಲಾಡನ್ ಗೆ ರಕ್ಷಣೆ ಕೊಟ್ಟಂತ ದೇಶ ಪಾಕಿಸ್ತಾನ. ಭಾರತೀಯ ವಾಯು ಸೇನೆಯ ದಾಳಿ ವಿಚಾರವಾಗಿ ಸೇನೆ ಮೇಲೆ ನಮಗೆ ಗೌರವ ಇದೆ ಎಂದಿದ್ದಾರೆ.

ಸೈನಿಕರಿಂದ ಉಗ್ರರ ಮೇಲಿನ ದಾಳಿಗೆ ಡಿಕೆಶಿ ಭಿನ್ನ ಹೇಳಿಕೆ

ಸೇನೆಯ ಧೈರ್ಯ ಮತ್ತು ದಿಟ್ಟತನವನ್ನ ಈ ದಾಳಿ ತೋರಿಸಿದೆ. ಪಾಕಿಸ್ತಾನವನ್ನ ಅಂತರಾಷ್ಟ್ರೀಯ ಮಟ್ಟದಲ್ಲಿ ಮೂಲೆಗುಂಪು ಮಾಡಬೇಕಾಗಿದೆ ಉಗ್ರಗಾಮಿಗಳನ್ನು  ಮಟ್ಟ ಹಾಕಲು  ಕೇಂದ್ರ ಸರ್ಕಾರ, ಭಾರತೀಯ ಸೇನೆಯಿಂದ ಬರುವ ಸಲಹೆಗಳನ್ನು  ಆಧರಿಸಿ ರಾಜ್ಯದ ಪೊಲೀಸ್ ಇಲಾಖೆ ಕೂಡ ಕಾರ್ಯ ನಿರ್ವಹಿಸಲಿದೆ ಎಂದು ತಿಳಿಸಿದರು.

ವಾಯುಪಡೆಯ ನಮ್ಮೀ ಹೀರೋ: ಸಪ್ತ ಸಾಮರ್ಥ್ಯಗಳ 'ಮಿರಾಜ್ 2000'!

ಮಾಧ್ಯಮಗಳಲ್ಲಿ ಭಾರತೀಯ ವಾಯು ಸೇನೆ ಮಾಡಿದ  ದಾಳಿ ಬಗ್ಗೆ ಮಾಹಿತಿ ಪಡೆದಿದ್ದೇನೆ. ವಿದೇಶಾಂಗ ಸಚಿವಾಲಯ ಏರ್ ಸ್ಟ್ರೈಕ್ ಮಾಡಿದ್ದೇವೆ ಎಂದು ಹೇಳಿದೆ. ಆದರೆ  ರಕ್ಷಣಾ ಸಚಿವರು, ಪ್ರಧಾನಮಂತ್ರಿ ಇನ್ನು ಹೆಚ್ಚಿನ ಮಾಹಿತಿ ನೀಡಬೇಕು ಎಂದು ಪಾಟೀಲ್ ಹೇಳಿದ್ದಾರೆ.

click me!