ಮಹಿಳೆಯನ್ನು ರೇವಣ್ಣನೇ ಕಿಡ್ನಾಪ್ ಮಾಡಿಸಿದ್ದು ಎಸ್‌ಐಟಿ ಮುಂದೆ ಬಾಯಿಬಿಟ್ಟ A2 ಆರೋಪಿ

By Suvarna News  |  First Published May 5, 2024, 11:48 AM IST

ಲೈಂಗಿಕ ದೌರ್ಜನ್ಯ ಸಂತ್ರಸ್ತೆ ಕಿಡ್ನಾಪ್ ಆರೋಪ ಪ್ರಕರಣದಲ್ಲಿ A2 ಆರೋಪಿಯಾಗಿರುವ ಸತೀಶ್ ಬಾಬು  ಕಿಡ್ನಾಪ್ ಮಾಡಿಸಿದ್ದು ರೇವಣ್ಣನೇ ಎಂದು ಹೇಳಿಕೆ ನೀಡಿದ್ದಾರೆ 


ಬೆಂಗಳೂರು (ಮೇ.5): ಅತ್ಯಾಚಾರಕ್ಕೆ  ಒಳಗಾದ ಮಹಿಳೆ ದೂರು ನೀಡಬಾರದು ಎಂದು ಆಕೆಯನ್ನೆ ಅಪಹರಣ ಮಾಡಿದ ಗಂಭೀರ ಆರೋಪ ಈಗ ಹೆಚ್ ಡಿ ರೇವಣ್ಣ ಮೇಲಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ರೇವಣ್ಣ ಅವರನ್ನು ಎಸ್‌ಐಟಿ ಶನಿವಾರ ಸಂಜೆ ಬಂಧಿಸಿದೆ. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ A2 ಆರೋಪಿ ಹೇಳಿಕೆಯಿಂದ ರೇವಣ್ಣಗೆ ಕಂಟಕವಾಯ್ತಾ ಎಂಬ ಪ್ರಶ್ನೆ ಮೂಡಿದೆ.

ಏಕೆಂದರೆ ಲೈಂಗಿಕ ದೌರ್ಜನ್ಯ ಸಂತ್ರಸ್ತೆ ಕಿಡ್ನಾಪ್ ಆರೋಪ ಪ್ರಕರಣದಲ್ಲಿ A2 ಆರೋಪಿಯಾಗಿರುವ ಸತೀಶ್ ಬಾಬು  ಕಿಡ್ನಾಪ್ ಮಾಡಿಸಿದ್ದು ರೇವಣ್ಣನೇ ಎಂದು ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ರೇವಣ್ಣ ಹೇಳಿದ್ದಕ್ಕೆ ಮಹಿಳೆ ಕರೆದೊಯ್ದು ಬಿಟ್ಟು ಬಂದಿದ್ದೆ ಎಂದು ಎಸ್‌ಐಟಿ ಮುಂದೆ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

Tap to resize

Latest Videos

ಕಿಡ್ನಾಪ್‌ ಕೇಸ್‌ಲ್ಲಿ ಎಚ್‌.ಡಿ.ರೇವಣ್ಣ ಬಂಧನ: ಇಂದು ರಾತ್ರಿ ಎಸ್‌ಐಟಿ ಕಚೇರಿಯಲ್ಲೇ ವಿಚಾರಣೆ

ರೇವಣ್ಣ ಹೇಳಿದ ಜಾಗಕ್ಕೆ ಬಿಟ್ಟ ಬಂದ ನಂತರ ಮಹಿಳೆಗೆ ಟಾರ್ಚರ್ ನೀಡಿರುವ ಅನುಮಾನ ವ್ಯಕ್ತವಾಗಿದೆ.  ದೂರು ನೀಡದಂತೆ ಹೆಚ್.ಡಿ.ರೇವಣ್ಣ ಟಾರ್ಚರ್ ಮಾಡಿದ್ದಾರಾ ಎಂಬ ಪ್ರಶ್ನೆಗಳು ಎದ್ದಿದ್ದು,  ಸಂತ್ರಸ್ತೆ ಹೇಳಿಕೆಯೂ ರೇವಣ್ಣಗೆ ಮುಳುವಾಗಲಿದೆ. ಇಂದು ಎಸ್ಐಟಿ ಅಧಿಕಾರಿಗಳ ಕಚೇರಿಯಲ್ಲಿ ಸಂತ್ರಸ್ತೆ ಹಾಗೂ ರೇವಣ್ಣ ವಿಚಾರಣೆ ನಡೆಯಲಿದೆ. ಅಗತ್ಯಬಿದ್ದಲ್ಲಿ  ಎಸ್ಐಟಿ ಸಂತ್ರಸ್ತೆ ಹಾಗೂ ರೇವಣ್ಣ ಮುಖಾಮುಖಿ ವಿಚಾರಣೆ ನಡೆಸಲಿದೆ.

ಇನ್ನು ಕೆ ಆರ್‌ ನಗರದಿಂದ ಮಹಿಳೆಯನ್ನು ಅಪಹರಣ ಮಾಡಿ ರೇವಣ್ಣ ಅವರ ಆಪ್ತನ ತೋಟದ ಮನೆಯಲ್ಲಿ ಇರಿಸಲಾಗಿತ್ತು. ಶನಿವಾರ ಮಹಿಳೆಯನ್ನು ಎಸ್‌ಐಟಿ ತಂಡ ರಕ್ಷಣೆ ಮಾಡಿತ್ತು. ಈ ಪ್ರಕರಣದಲ್ಲಿ ರೇವಣ್ಣ ಎ1 ಆರೋಪಿಯಾಗಿದ್ದರೆ, ಸತೀಶ್ ಬಾಬು ಎ2 ಆರೋಪಿಯಾಗಿದ್ದಾನೆ.

Breaking : HD Revanna Arrest ದೇವೇಗೌಡರ ನಿವಾಸದಲ್ಲೇ ರೇವಣ್ಣ ಬಂಧಿಸಿದ SIT

ಮದ್ಯಾಹ್ನ ಜಡ್ಜ್‌ ಮುಂದೆ ರೇವಣ್ಣ: ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ಸಂಬಂಧ ಮಧ್ಯಾಹ್ನ 2 ಗಂಟೆಗೆ ನ್ಯಾಯಾಧೀಶರ   ಕೋರಮಂಗಲದ ನಿವಾಸದಲ್ಲಿ ಹೆಚ್ ಡಿ ರೇವಣ್ಣರನ್ನು ಎಸ್‌ಐಟಿ ಅಧಿಕಾರಿಗಳು ಹಾಜರು ಪಡಿಸಲಿದ್ದಾರೆ. ಅಲ್ಲಿವರೆಗೂ ಅವರ ವಿಚಾರಣೆ ನಡೆಯಲಿದೆ.

ಮತ್ತೆ ದೂರು ನೀಡಲು ಮುಂದೆ ಬಂದಿರುವ ಮೂವರು ಮಹಿಳೆಯರು:
ಹಾಸನ ಅಶ್ಲೀಲ ವಿಡೀಯೋ ಪ್ರಕರಣದಲ್ಲಿ ಮತ್ತೆ ಮೂವರು ಮಹಿಳೆಯರು ದೂರು ನೀಡಲು ಮುಂದೆ ಬಂದಿದ್ದಾರೆ.  ಈಗಾಗಲೇ ಎಸ್ ಐ ಟಿ ಸಂಪರ್ಕಕ್ಕೆ ಮೂವರು ಸಂತ್ರಸ್ಥೆಯರು ಬಂದಿದ್ದಾರೆ. ಹೀಗಾಗಿ ಪ್ರಕರಣದಲ್ಲಿ  ತಂದೆ ಮಗ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ  ಮತ್ತಷ್ಟು ಸಂಕಷ್ಟ ಎದುರಾಗುವ ಸಾಧ್ಯತೆ ದಟ್ಟವಾಗಿದೆ. ಸದ್ಯ ಈ ಬಗ್ಗೆ ಎಸ್ ಐ ಟಿಯಿಂದ ಪರಿಶೀಲನೆ ನಡೆಯುತ್ತಿದ್ದು,  ಮೂರು ಪ್ರತ್ಯೇಕ‌ ಪ್ರಕರಣ ದಾಖಲಾಗುವ ಸಾಧ್ಯತೆ ಇದೆ. ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಎಸ್ ಐ ಟಿ ಉನ್ನತ ಮೂಲಗಳು ಮಾಹಿತಿ ನೀಡಿದೆ.

click me!