ಎಚ್‌ಡಿಕೆ ನಾಟಿ ಕೆಲಸಕ್ಕೆ ಖರ್ಚಾದ ಹಣ ಎಷ್ಟು? ಯಾರದ್ದು?

By Web DeskFirst Published Aug 13, 2018, 9:17 PM IST
Highlights

ಸಿಎಂ ಕುಮಾರಸ್ವಾಮಿ ಪ್ರಮಾಣ ವಚನ ಸಮಾರಂಭಕ್ಕೆ ಗಣ್ಯರನ್ನು ಆಹ್ವಾನಿಸಿ ಅವರಿಗೆ ಆತಿಥ್ಯ ನೀಡಿದ್ದಕ್ಕೆ ವೆಚ್ಚ ಮಾಡಿದ್ದ ಖರ್ಚುಗಳ ಲೆಕ್ಕ ಸರಕಾರಕ್ಕೆ ಒಂದು ಹಂತದಲ್ಲಿ  ಮುಜುಗರ ತಂದಿತ್ತು. ಈಗ ಮಂಡ್ಯದ ಸಿಎಂ ನಾಟಿ ಕೆಲಸಕ್ಕೆ ಯಾವ ಹಣ ಬಳಕೆ ಮಾಡಲಾಗಿದೆ ಎಂಬ ಪ್ರಶ್ನೆಯೂ ಎದುರಾಗಿದ್ದು ಜೆಡಿಎಸ್ ಮುಖಂಡರು ಉತ್ತರ ನೀಡುವ ಯತ್ನವನ್ನು ಮಾಡಿದ್ದಾರೆ.

ಮಂಡ್ಯ/ಬೆಂಗಳೂರು[ಆ.13]  ಸೀತಾಪುರ ಕುಮಾರಣ್ಣ ನಾಟಿ ಕಾರ್ಯಕ್ಕೆ ಸರ್ಕಾರದ ದುಡ್ಡು ಇಲ್ಲ. ಸರ್ಕಾರದ ದುಡ್ಡು ಬಳಸಬೇಡಿ ಎಂದು ಸಿಎಂ ಕೊಟ್ಟಿರುವ ಸೂಚನೆಯನ್ನು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ  ಪುಟ್ಟರಾಜು ಗಂಭೀರವಾಗಿ ತೆಗೆದುಕೊಂಡಿದ್ದು ಜೆಡಿಎಸ್ ಫಂಡ್ ನಿಂದಲೇ ಬರಿಸಲಾಗುವುದು ಎಂದು ಹೇಳಿದ್ದಾರೆ.

ನಾಟಿ ಕಾರ್ಯಕ್ರಮಕ್ಕೆ ಒಟ್ಟಾರೆ  12  ರಿಂದ 14  ಲಕ್ಷ ಖರ್ಚಾಗಿದೆ. ನಾಟಿ ಖರ್ಚಿಗೆ ಬಿಲ್ ಮಾಡೋದು ಬೇಡ ಎಂದು ಅಧಿಕಾರಿಗಳಿಗೆ ಸಿಎಂ ಸೂಚಿಸಿದ್ದಾರೆ. ಈ ಮೂಲಕ ದುಂದು ವೆಚ್ಚ ಆರೋಪ ಮಾಡುವವರಿಗೆ ತಿರುಗೇಟು ಕೊಡಲು ಸಿಎಂ ಪ್ಲ್ಯಾನ್ ಮಾಡಿದ್ದಾರೆ.

ಒಟ್ಟಿನಲ್ಲಿ ಆರೋಪ ತಪ್ಪಿಸಿಕೊಳ್ಳಲು ಕುಮಾರಸ್ವಾಮಿ ಸೂಚನೆ ನೀಡಿದ್ದು ಅಂತಿಮವಾಗಿ ಹಣ ಎಲ್ಲಿಂದ ಭರಣವಾಗುತ್ತಿದೆ ಎಂಬುದು ದಾಖಲೆಗಳಿಂದ ಆಚೆ ಬರಬೇಕಿದೆ.

ದೇಶಿ ಗೆಟಪ್’ನಲ್ಲಿ ನಾಟಿ ಮಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ

click me!