ಎಫ್‌ಬಿ, ಇನ್ಸ್ಟಾ ನಿಧಾನವಾಗಲು ಅಸಲಿ ಕಾರಣವಾದರೂ ಏನು?

By Web DeskFirst Published Nov 20, 2018, 11:13 PM IST
Highlights

ಇಂದಿನ ಪ್ರಪಂಚ ಸೋಶಿಯಲ್ ಮೀಡಿಯಾಕ್ಕೆ ಅದೆಷ್ಟು ಅಂಟಿಕೊಂಡಿದೆ ಎಂಬುದಕ್ಕೆ ಇಂದಿನ ಪ್ರಕರಣವೇ ಸಾಕ್ಷಿ. ಫೇಸ್ ಬುಕ್, ಇನ್ಸ್ಟಾಗ್ರಾಮ್ ನಲ್ಲಿ ಮಂಗಳವಾರ ಸಂಜೆ ಕಾಣಿಸಿಕೊಂಡ ನಿಧಾನದ ಸಮಸ್ಯೆ ಹಲವರನ್ನು ಕಾಡಿತು. ಹಾಗಾದರೆ ಇದಕ್ಕೆ ಅಸಲಿ ಕಾರಣವಾದರೂ ಏನು?

ಬೆಂಗಳೂರು(ನ.20): ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್ ಮತ್ತು ಇನ್ಸ್ಟಾಗ್ರಾಮ್ ಏಕಾಏಕಿ ಕಾರ್ಯ ಸ್ಥಗಿತವಾಗಿದ್ದು, ಬಳಕೆದಾರರಲ್ಲಿ ಗೊಂದಲ ಸೃಷ್ಟಿಯಾಗಿತ್ತು. ಮಂಗಳವಾರ ಸಂಜೆ ಫೇಸ್ ಬುಕ್ ಮತ್ತು ಇನ್ಸಟಾಗ್ರಾಮ್ ನ ಕೆಲಸ ನಿರ್ವಹಣೆ ನಿಧಾನವಾಘಿತ್ತು.

ನಿಧಾನವಾಗುತ್ತಿರುವ ಸಮಸ್ಯೆ ಕಾಣಿಸಿಕೊಂಡ ನಂತರ ಸೋಶಿಯಲ್ ಮೀಡಿಯಾದಲ್ಲಿ ಇದೆ ವಿಚಾರ ಮತ್ತೆ ಟ್ರೆಂಡ್ ಆಯಿತು. #FacebookDown and #InstagramDown ಹ್ಯಾಷ್ ಟ್ಯಾಗ್ ಗಳ ಮೂಲಕ ನೆಟ್ಟಿಗರು ಅಭಿಪ್ರಾಯ ಹೊರ ಹಾಕಿದರು.

ಫೋಟೋ ಅಪ್​ಲೋಡ್​ ಮಾಡಲು ಬಳಸುವ ಇನ್​ಸ್ಟಾಗ್ರಾಂ ಕೂಡ ಸ್ಥಗಿತಗೊಂಡಿತ್ತು. ಫೇಸ್‌ ಬುಕ್ ನಲ್ಲೂ ಅಪ್ ಲೋಡ್ ಸಮಸ್ಯೆ ಎದುರಾಗಿತ್ತು.  ಪೇಜ್​ಗಳು ತುಂಬ ನಿಧಾನವಾಗಿ ತೆರೆದುಕೊಳ್ಳುತ್ತವೆ. ಮೆಸೆಂಜರ್​ನಲ್ಲಿ ಕೂಡ ಮೆಸೇಜ್​ ಕಳಿಸಲು ಸಾಧ್ಯವಾಗುತ್ತಿರಲಿಲ್ಲ. ರಾತ್ರಿ ವೇಳೆಗೆ ಬಹುತೇಕ ಸರಿಯಾಯಿತಾದರೂ ಜನ ದೂರುವುದನ್ನು ನಿಲ್ಲಿಸಲಿಲ್ಲ.

 

click me!