ನಾಚಿಕೆ, ಮಾನ, ಮರ್ಯಾದೆ ಮೂರು ಬಿಟ್ಟ ಬಿಜೆಪಿ: ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಕೆಂಡಾಮಂಡಲ..!

By Girish GoudarFirst Published Apr 23, 2024, 11:22 PM IST
Highlights

ಕರ್ನಾಟಕದಲ್ಲಿ 100 ವರ್ಷಗಳ ನಂತರ ಅತ್ಯಂತ ಭೀಕರ ಬರಗಾಲ ಬಂದಿದೆ. ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ₹18,172 ಕೋಟಿ ಬರ ಪರಿಹಾರ ನೀಡುವಂತೆ ರಾಜ್ಯ ಸರ್ಕಾರ ವಿವಿಧ ಹಂತಗಳಲ್ಲಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಮನವಿ ಸಲ್ಲಿಸಿ 7 ತಿಂಗಳು ಕಳೆದರೂ ಕೇಂದ್ರ ಒಂದೇ ಒಂದು ರೂಪಾಯಿ ಬರ ಪರಿಹಾರ ಬಿಡುಗಡೆ ಮಾಡಿಲ್ಲ. ಈಗ ಯಾವ ಮುಖ ಹೊತ್ತುಕೊಂಡು ಕರ್ನಾಟಕಕ್ಕೆ ಮತ ಕೇಳಲು ಬರುತ್ತೀರಿ?: ಸಿಎಂ ಸಿದ್ದರಾಮಯ್ಯ 
 

ಬೆಂಗಳೂರು(ಏ.23):  ಕೇಂದ್ರ ಸರ್ಕಾರದ ಬರ ಪರಿಹಾರದ ವಂಚನೆಯ ವಿರುದ್ಧ ಕಾಂಗ್ರೆಸ್ ಸರ್ಕಾರ ಸುಪ್ರೀಂಕೋರ್ಟಿನಲ್ಲಿ ಕಾನೂನು ಹೋರಾಟ ನಡೆಸಿ ಯಶಸ್ಸು ಸಾಧಿಸಿದೆ. ಬರದಿಂದ ನಲುಗಿದ ನಮ್ಮ ರೈತರ ಹಿತ ಕಾಯುವ ನಮ್ಮ ಸರ್ಕಾರದ ಬದ್ಧತೆಗೆ ಕಾನೂನಾತ್ಮಕ ಜಯ ದೊರಕಿದೆ. ನ್ಯಾಯಾಲಯದ ಆದೇಶದಂತೆ ಕೇಂದ್ರ ಬಿಜೆಪಿ ಸರ್ಕಾರ ಬರ ಪರಿಹಾರ ತತಕ್ಷಣವೇ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಇಂದು(ಮಂಗಳವಾರ) ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಕಾಂಗ್ರೆಸ್‌ ಪ್ರತಿಭಟನೆ ನಡೆಸಿದೆ. 

ಈ ವೇಳೆ ಮಾತನಾಡಿದ ಕಾಂಗ್ರೆಸ್‌ ನಾಯಕರು ನಾಚಿಕೆ, ಮಾನ, ಮರ್ಯಾದೆ ಈ ಮೂರನ್ನೂ ಬಿಟ್ಟಿರುವ ಏಕೈಕ ರಾಜಕೀಯ ಪಕ್ಷ ಎಂದರೆ ಅದು ಬಿಜೆಪಿ ಮಾತ್ರ!. ಕರ್ನಾಟಕಕ್ಕೆ ಬರ ಅಪ್ಪಳಿಸಿ 6 ತಿಂಗಳು ಕಳೆದಿದೆ, ಆದರೂ ಸ್ಪಂದನೆ ಇಲ್ಲ, ರಾಜ್ಯ ಸರ್ಕಾರ ಪರಿಹಾರಕ್ಕಾಗಿ ಪ್ರಸ್ತಾವನೆ ಸಲ್ಲಿಸಿ 6 ತಿಂಗಳು ಕಳೆದಿದೆ, ಆದರೂ ಸ್ಪಂದನೆ ಇಲ್ಲ. ಮುಖ್ಯಮಂತ್ರಿಗಳೇ ಪ್ರಧಾನಿ ಭೇಟಿಯಾದರೂ ಸ್ಪಂದನೆ ಇಲ್ಲ. ನ್ಯಾಯಾಲಯದಲ್ಲಿ ನಮ್ಮ ಸರ್ಕಾರ ಬರ ಪರಿಹಾರಕ್ಕಾಗಿ ದಾವೆ ಹೂಡಿದಾಗಲೂ ಸ್ಪಂದನೆ ಇಲ್ಲ, ಬದಲಾಗಿ ಕೇಂದ್ರ ವಿತ್ತ ಸಚಿವರು ನ್ಯಾಯಾಲಯದಲ್ಲಿ ತಕ್ಕ ಉತ್ತರ ಕೊಡುತ್ತೇವೆ ಎಂಬ ದುರಹಕಾರದ ಪ್ರತಿಕ್ರಿಯೆ ನೀಡಿದ್ದರು. ಕೇಂದ್ರ ಗೃಹಸಚಿವರು ರಾಜ್ಯ ಸರ್ಕಾರ ವಿಳಂಬ ಮಾಡಿದೆ ಎಂಬ ಸುಳ್ಳಿನ ಫ್ಯಾಕ್ಟರಿ ತೆರೆದಿದ್ದರು, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಆರ್‌. ಅಶೋಕ್‌ ಹಾಗೂ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು "ಬರ ಪರಿಹಾರ ಕೊಡುವುದೆಲ್ಲ ಕೊಟ್ಟಾಗಿದೆ, ಯಾವುದೇ ಬಾಕಿ ಇಲ್ಲ" ಎಂದು ಬರ ಪರಿಹಾರದ ಅನ್ಯಾಯವನ್ನು ಸಾರಾಸಗಟಾಗಿ ನಿರಾಕರಿಸಿದ್ದರು ಎಂದು ಕಿಡಿಕಾರಿದ್ದಾರೆ. 

ಗಾಂಧಿ ಹೆಸರು ಬಳಸಿಕೊಳ್ಳಲು ರಾಹುಲ್‌ಗೆ ಯಾವುದೇ ಹಕ್ಕಿಲ್ಲ, ಭಾರಿ ವಿವಾದ ಸೃಷ್ಟಿಸಿದ ನಾಯಕನ ಹೇಳಿಕೆ!

ಸುಪ್ರೀಂ ಕೋರ್ಟ್ ನಿರ್ದೇಶನ ನೀಡುವವರೆಗೂ ಪ್ರಧಾನಿ ಸಹಿತ ಯಾವೊಬ್ಬ ಕೇಂದ್ರ ಸರ್ಕಾರದ ಪ್ರತಿನಿಧಿಯೂ ಬರ ಪರಿಹಾರ ನೀಡುವ ಭರವಸೆಯ ಮಾತನಾಡದೆ ಈಗ ನ್ಯಾಯಾಲಯದ ಅದೇಶದನ್ವಯ ಬರ ಪರಿಹಾರ ನೀಡುವ ಅನಿವಾರ್ಯ ಸ್ಥಿತಿ ನಿರ್ಮಾಣವಾದಾಗ ಲಜ್ಜೆ ಬಿಟ್ಟು ಕ್ರೆಡಿಟ್ ಪಡೆಯಲು ಹವಣಿಸುವ ಬಿಜೆಪಿಯದ್ದು ಕ್ಷುದ್ರ ಹಾಗೂ ವಿಕೃತ ಮನಸ್ಥಿತಿ. ಕನ್ನಡಿಗರಿಗೆ ಬಿಜೆಪಿಯ ಕೊಳಕು ರಾಜಕೀಯದ ಅರಿವಿದೆ, ಕರ್ನಾಟಕ ದ್ವೇಷಿ ಬಿಜೆಪಿಯನ್ನು ತಿರಸ್ಕರಿಸುವುದು ನಿಶ್ಚಿತ. 

ಕರ್ನಾಟಕದಲ್ಲಿ 100 ವರ್ಷಗಳ ನಂತರ ಅತ್ಯಂತ ಭೀಕರ ಬರಗಾಲ ಬಂದಿದೆ. ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ₹18,172 ಕೋಟಿ ಬರ ಪರಿಹಾರ ನೀಡುವಂತೆ ರಾಜ್ಯ ಸರ್ಕಾರ ವಿವಿಧ ಹಂತಗಳಲ್ಲಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಮನವಿ ಸಲ್ಲಿಸಿ 7 ತಿಂಗಳು ಕಳೆದರೂ ಕೇಂದ್ರ ಒಂದೇ ಒಂದು ರೂಪಾಯಿ ಬರ ಪರಿಹಾರ ಬಿಡುಗಡೆ ಮಾಡಿಲ್ಲ. ಈಗ ಯಾವ ಮುಖ ಹೊತ್ತುಕೊಂಡು ಕರ್ನಾಟಕಕ್ಕೆ ಮತ ಕೇಳಲು ಬರುತ್ತೀರಿ? ಎಂದು ಸಿಎಂ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ. 

ರಾಜ್ಯದ ರೈತರಿಗೆ ₹18,172 ಕೋಟಿ ಬರ ಪರಿಹಾರ ಕೊಡಲು ನಿರಾಕರಿಸಿದ ಪ್ರಧಾನ ಮಂತ್ರಿಗಳು ಹಾಗೂ ಗೃಹ ಸಚಿವರಿಗೆ ಈ ಪ್ರತಿಭಟನೆ ಮೂಲಕ ಎಚ್ಚರಿಕೆ ನೀಡಿದ್ದೇವೆ ಅಂತ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಕೆಂಡ ಕಾರಿದೆ . 
ನಿಮ್ಮ ಈ ತಾರತಮ್ಯ ಧೋರಣೆಯನ್ನು ರಾಜ್ಯದ ಜನರು ಸಹಿಸಿಕೊಳ್ಳುವುದಿಲ್ಲ. ಬರ ಪರಿಹಾರವನ್ನು ನೀಡದ ನಿಮಗೆ ಈ ನೆಲದಲ್ಲಿ ಕಾಲಿಡುವ ಯಾವ ನೈತಿಕತೆಯೂ ಇಲ್ಲ ಅಂತ ರಣದೀಪ್‌ ಸಿಂಗ್‌ ಸರ್ಜೇವಾಲಾ ಅವರು ಕಿಡಿ ಕಾರಿದ್ದಾರೆ. 

ಬರ ಪರಿಹಾರಕ್ಕೆ ಕರ್ನಾಟಕ ಮನವಿಯನ್ನೇ ಸಲ್ಲಿಸಿಲ್ಲ ಎಂದು ಬಿಜೆಪಿ ಕೇಂದ್ರ ನಾಯಕರು ಹೇಳುತ್ತಾರೆ. ಆದರೆ ಸುಪ್ರೀಂ ಕೋರ್ಟ್ ಮುಂದೆ ಹೋದಾಗ, ಕರ್ನಾಟಕ ಸರ್ಕಾರದ ಅರ್ಜಿಯನ್ನು ಒಪ್ಪಿಕೊಂಡು ಒಂದು ವಾರಗಳ ಕಾಲಾವಕಾಶ ಕೋರುತ್ತಾರೆ. ಅಂದರೆ, ಬರ ಪರಿಹಾರ ಸಂಬಂಧ ಕೇಂದ್ರ ಬಿಜೆಪಿ ನಾಯಕರು ನೀಡಿದ ಹೇಳಿಕೆ ಸುಳ್ಳು ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಕೇಂದ್ರ ಬಿಜೆಪಿ ಸರ್ಕಾರ ವ್ಯವಸ್ಥಿತವಾಗಿ ಕರ್ನಾಟಕದ ರೈತರಿಗೆ ಮೋಸ ಮಾಡುತ್ತಿದೆ ಎಂದು ರಮೇಶ್‌ ಬಾಬು ಹೇಳಿದ್ದಾರೆ. 

ಕೇಂದ್ರ ಬಿಜೆಪಿ ನಾಯಕರಿಗೆ ರೈತರ ಬಗ್ಗೆ ಕಾಳಜಿ ಇಲ್ಲ. ಬಿಜೆಪಿಗೆ ರೈತರ ಬಗ್ಗೆ ಕಾಳಜಿ ಇದ್ದಿದ್ದರೆ, ಅವರಿಗೆ ಸಹಾಯ ಮಾಡುವ ಮನಸು ಇದ್ದಿದ್ದರೆ ಯಾವತ್ತೋ ಬರ ಪರಿಹಾರವನ್ನು ಬಿಡುಗಡೆ ಮಾಡುತ್ತಿದ್ದರು. ಹಣವನ್ನು ಬಿಜೆಪಿ ಕಚೇರಿಯಿಂದ ಕೊಡುತ್ತಾರೆಯೇ? ಪುಕ್ಸಟ್ಟೆ ಏನು ಕೇಳುತ್ತಿಲ್ಲ ಅವರ ಬಳಿ. ಅದು ನಮ್ಮ ತೆರಿಗೆಯ ಹಣ, ನಮ್ಮ ರೈತರ ಹಣ ಅಂತ ಸಚಿವ ರಾಮಲಿಂಗಾ ರೆಡ್ಡಿ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. 

ಕೃಷಿ ಸಚಿವ ಚಲುವರಾಯಸ್ವಾಮಿ ಕಾಟೇರಾ ಸಿನಿಮಾದ ವಿಲನ್ ಇದ್ದಂಗಿದ್ದಾರೆ; ಡಾ.ರವೀಂದ್ರ

ಬರದಿಂದ ರೈತರ ಬೆಳೆ ನಷ್ಟವಾಗಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳಿಂದ ಸಂಗ್ರಹಿಸಿದ ಹಣದಲ್ಲಿ ರಾಜ್ಯಕ್ಕೆ ಸಿಗಬೇಕಾದ ಪಾಲನ್ನು ಕೊಡಬೇಕು. ತಮ್ಮ ಈ ಜವಾಬ್ದಾರಿ ನಿಭಾಯಿಸುವುವಲ್ಲಿ ಅವರು ವಿಫಲವಾಗಿದ್ದಾರೆ. ಈಗಲಾದರೂ ಕೇಂದ್ರ ಬಿಜೆಪಿ ಸರ್ಕಾರಕ್ಕೆ ಬದ್ಧತೆ ಇದ್ದರೆ ಕೂಡಲೇ ಬರ ಪರಿಹಾರದ ಹಣ ಬಿಡುಗಡೆ ಮಾಡಲಿ ಅಂತ ಮಾಜಿ ಸಂಸದ ವಿ. ಎಸ್ ಉಗ್ರಪ್ಪ ಆಗ್ರಹಿಸಿದ್ದಾರೆ.  

ರಾಜ್ಯದಲ್ಲಿ ಭೀಕರ ಬರಗಾಲವಿದೆ. ಬರ ಪರಿಹಾರ ನೀಡುವಂತೆ ಕಳೆದ 10 ತಿಂಗಳಿಂದ ಮನವಿ ಮಾಡುತ್ತಿದ್ದರೂ ಇನ್ನೂ ಕೊಟ್ಟಿಲ್ಲ. ಅನಿವಾರ್ಯಾವಾಗಿ ಸುಪ್ರೀಂ ಕೋರ್ಟ್‌ನಲ್ಲಿ ಹೋರಾಟ ಮಾಡಬೇಕಾಯಿತು. ಗುಜರಾತಿಂದ ನಾವು ಭಿಕ್ಷೆ ಕೇಳಿರಲಿಲ್ಲ, ನಾವು ಅತಿ ಹೆಚ್ಚು ತೆರಿಗೆ ಕಟ್ಟಿದ್ದೇವೆ. ನಮ್ಮ ಕಾನೂನು ಬದ್ಧ ಬರ ಪರಿಹಾರ ಕೇಳುತ್ತಿದ್ದೇವೆ.

click me!