RSS ಸಮನ್ವಯ ಬೈಠಕ್'ಗೆ ಯಡಿಯೂರಪ್ಪ, ಈಶ್ವರಪ್ಪಗೆ ಆಹ್ವಾನವಿಲ್ಲ!

By Suvarna Web DeskFirst Published Jan 16, 2017, 9:26 PM IST
Highlights

ಇಂದು ಆರ್​ಎಸ್​ಎಸ್​ ನ ಸಮನ್ವಯ ಬೈಠಕ್​ ನಡೆಯಲಿದೆ. ಆದರೆ ಈ ಸಮನ್ವಯ ಬೈಠಕ್​ಗೆ ಯಡಿಯೂರಪ್ಪ ಹಾಗೂ ಈಶ್ವರಪ್ಪಗೆ ಆಹ್ವಾನವಿಲ್ಲ. ರಾಜ್ಯ ಬಿಜೆಪಿಯ ಪರವಾಗಿ ಬೈಠಕ್​'ಗೆ ಇಬ್ಬರಿಗೆ ಮಾತ್ರ ಆಹ್ವಾನ ನೀಡಲಾಗಿದೆ. ಆ ಇಬ್ಬರು ಪ್ರಮುಖರು ಯಾರು? ಬಿಜೆಪಿ ನಾಯಕರ ಬೈಠಕ್​ನಿಂದ ದೂರ ಇಟ್ಟಿದ್ದೇಕೆ? ಇಲ್ಲಿದೆ ವಿಶ್ಲೇಷಣಾತ್ಮಕ ವರದಿ.

ಬೆಂಗಳೂರು(ಜ.17): ಇಂದು ಆರ್​ಎಸ್​ಎಸ್​ ನ ಸಮನ್ವಯ ಬೈಠಕ್​ ನಡೆಯಲಿದೆ. ಆದರೆ ಈ ಸಮನ್ವಯ ಬೈಠಕ್​ಗೆ ಯಡಿಯೂರಪ್ಪ ಹಾಗೂ ಈಶ್ವರಪ್ಪಗೆ ಆಹ್ವಾನವಿಲ್ಲ. ರಾಜ್ಯ ಬಿಜೆಪಿಯ ಪರವಾಗಿ ಬೈಠಕ್​'ಗೆ ಇಬ್ಬರಿಗೆ ಮಾತ್ರ ಆಹ್ವಾನ ನೀಡಲಾಗಿದೆ. ಆ ಇಬ್ಬರು ಪ್ರಮುಖರು ಯಾರು? ಬಿಜೆಪಿ ನಾಯಕರ ಬೈಠಕ್​ನಿಂದ ದೂರ ಇಟ್ಟಿದ್ದೇಕೆ? ಇಲ್ಲಿದೆ ವಿಶ್ಲೇಷಣಾತ್ಮಕ ವರದಿ.

ಸಂಗೊಳ್ಳಿ ರಾಯಣ್ಣ ಬ್ರಿಗೇಡ್​ನ ಹಿನ್ನಲೆಯಲ್ಲಿ ರಾಜ್ಯ ಬಿಜೆಪಿಯಲ್ಲುಂಟಾಗಿರುವ ಗೊಂದಲಗಳ ಪರಿಣಾಮವನ್ನು ಆರ್​.ಎಸ್​.ಎಸ್​. ಗಂಭೀರವಾಗಿ ಪರಿಗಣಿಸಿದೆ. ಇಂದಿನ ಬೈಠಕ್​'ನಲ್ಲಿ​ ನಿಗದಿಯಂತೆ ಕರ ಸಂಘದ 40 ಸಂಘಟನೆಗಳು ಭಾಗವಹಿಸುತ್ತಿವೆ. ಈ ಪೈಕಿ ಬಿಜೆಪಿ ಕೂಡ ಭಾಗವಹಿಸ್ತಿದೆ. ಹಾಗಾದರೆ, ಬಿಜೆಪಿ ಪರವಾಗಿ ಬೈಠಕ್​'ಗೆ ಹೋಗುರುವುದು ಯಾರು ಎಂಬ ಪ್ರಶ್ನೆ ಮೂಡುವುದು ಸಹಜ.

Latest Videos

ಬಿಜೆಪಿ ಪರವಾಗಿ ಸಭೆಗೆ ಅರುಣ್​-ಸಂತೋಷ್​

ಇಂದಿನ ಬೈಠಕ್'​ಗೆ ಯಡಿಯೂರಪ್ಪ, ಈಶ್ವರಪ್ಪ ಸೇರಿ ಬಿಜೆಪಿಯ ಯಾವ ನಾಯಕರಿಗೂ ಆಹ್ವಾನವಿಲ್ಲ. ಬದಲಾಗಿ ರಾಜ್ಯ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್​ಕುಮಾರ್ ಹಾಗೂ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಸಂತೋಷ್​ಗೆ ಆಹ್ವಾನ ಸಿಕ್ಕಿದೆ. ಈ ಮೂಲಕ ಸಂಗೊಳ್ಳಿ ರಾಯಣ್ಣ ಬ್ರಿಗೇಡ್​'ನ ಗೊಂದಲಗಳಿಗೆ ಆರ್​'ಎಸ್​'ಎಸ್'​ನ ವೇದಿಕೆಯಲ್ಲಿ ಚರ್ಚೆಗೆ ಅವಕಾಶವಿಲ್ಲ ಎನ್ನುವ ಖಡಕ್​ ಸಂದೇಶವನ್ನ ಸಂಘಪರಿವಾರ ರವಾನಿಸಿದೆ. ಇತ್ತ ಈಶ್ವರಪ್ಪ, ಬಿಜೆಪಿಯಲ್ಲಿ ಗೊಂದಲ ಇರುವುದು ನಿಜ ಅಂತ ಮತ್ತೆ ಹೇಳಿದ್ದಾರೆ.

ಈವರೆಗೆ ಸಮನ್ವಯ ಬೈಠಕ್'ನಲ್ಲಿ ಬಿಜೆಪಿಯ ಸುಮಾರು 12 ಪ್ರಮುಖ ನಾಯಕರು ಭಾಗವಹಿಸುತ್ತಿದ್ದರು. ಈ ಬಾರಿ ಬಿಜೆಪಿ ನಾಯಕರನ್ನು ದೂರವಿಟ್ಟು RSS ಬೈಠಕ್ ನಡೆಸುತ್ತಿದೆ. ಇತ್ತ ಯಡಿಯೂರಪ್ಪ ಇಂದಿನ ಬೈಠಕ್'​ನಲ್ಲಿ ಭಾಗವಹಿಸದಿರೋದನ್ನ ಸ್ಪಷ್ಟಪಡಿಸಿದ್ದಾರೆ.

ಒಟ್ಟಾರೆ, ಸಂಗೊಳ್ಳಿ ರಾಯಣ್ಣ ಬ್ರಿಗೇಡ್​'ನ ಹಿನ್ನಲೆಯಲ್ಲಿ ಬಿಜೆಪಿಯಲ್ಲಿ ಉಂಟಾಗಿರುವ ಗೊಂದಲಗಳನ್ನು ಆರ್​ಎಸ್​ಎಸ್​ ಗಂಭೀರವಾಗಿ ಪರಿಗಣಿಸಿದೆ. ಇಂದಿನ ಬೈಠಕ್​'ನಲ್ಲಿ ಈ ಬಗ್ಗೆ ಚರ್ಚೆ ನಡೆಯದಿದ್ದರೂ ಮುಂದಿನ ದಿನಗಳಲ್ಲಿ ಸಂಘ ಪರಿವಾರ ಇಬ್ಬರೂ ನಾಯಕರ ನಡುವೆ ಮಧ್ಯಸ್ಥಿಕೆ ವಹಿಸಿ ಗೊಂದಲಗಳ ಶಮನ ಯತ್ನ ನಡೆಸುವ ಸಾಧ್ಯತೆ ಇದೆ.

click me!