ಹಫ್ತಾ ವಸೂಲಿ ಪ್ರಕರಣದಲ್ಲಿ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್‌ಮುಖ್ ತಲೆದಂಡವಾಗಿದೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಹೊರಗಿಡಲು ಟಿಎಂಸಿ ಜೊತೆ ಒಪ್ಪಂದಕ್ಕೆ ಕಾಂಗ್ರೆಸ್ ಮುಂದಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಏಪ್ರಿಲ್ 7 ರಂದು ಸಂಜೆ 7 ಗಂಟೆಗೆ ಪರೀಕ್ಷಾ ಪೇ ಚರ್ಚೆ ನಡೆಸಲಿದ್ದಾರೆ. ಆರ್‌ಸಿಬಿ ಫೈನಲ್ ತಲುಪುತ್ತಾ? ರಶ್ಮಿಕಾ ಮಂದಣ್ಣಗೆ ಅಭಿಮಾನಿಗಳಿಂದ ಸ್ಪೆಷಲ್ ಗಿಫ್ಟ್ ಸೇರಿದಂತೆ ಎಪ್ರಿಲ್ 5ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
ಹಫ್ತಾ ವಸೂಲಿ ಪ್ರಕರಣದಲ್ಲಿ ಮೊದಲ ವಿಕೆಟ್ ಪತನ: ಮಹಾರಾಷ್ಟ್ರ ಗೃಹ ಸಚಿವ ರಾಜೀನಾಮೆ!...
undefined
ಕಳೆದ ಕೆಲ ದಿನಗಳಿಂದ ಭಾರಿ ಸದ್ದು ಮಾಡುತ್ತಿದ್ದ ಮಹಾರಾಷ್ಟ್ರದ 100 ಕೋಟಿ ಹಫ್ತಾ ವಸೂಲಿ ಪ್ರಕರಣದಲ್ಲಿ ಇದೀ ಗ ಮೊದಲ ತಲೆದಂಡವಾಗಿದೆ. ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್‌ಮುಖ್ ರಾಜೀನಾಮೆ ನೀಡಿದ್ದಾರೆ.
BJP ಬಿರುಗಾಳಿಗೆ ಬೆದರಿದ ಕಾಂಗ್ರೆಸ್; ದೀದಿಗೆ ಸಿಎಂ ಪಟ್ಟ, 22 ಷರತ್ತಿನ ಒಪ್ಪಂದಕ್ಕೆ ಯತ್ನ!...
ಬಿಜೆಪಿ ಘಟಾನುಘಟಿ ನಾಯಕರು ಬಂಗಾಳದಲ್ಲಿ ಕಮಲ ಅರಳಿಸುವ ಪ್ರಯತ್ನದಲ್ಲಿದ್ದಾರೆ. ಇದರ ನಡುವೆ ಪಶ್ಚಿಮ ಬಂಗಾಳ ಚುನಾವಣೆಗೆ ಬಹುದೊಡ್ಡ ಟ್ವಿಸ್ಟ್ ಸಿಗುವ ಸಾಧ್ಯತೆ ಇದೆ. ಮಮತಾ ಬ್ಯಾನರ್ಜಿ ತೃಣಮೂಲ ಕಾಂಗ್ರೆಸ್ ಜೊತೆ ಒಪ್ಪಂದಕ್ಕೆ ಕಾಂಗ್ರೆಸ್ ಮುಂದಾಗಿದೆ. ಈ ಮೂಲಕ ಬಿಜೆಪಿಯನ್ನು ದೂರವಿಡಲು ಮಾತುಕತೆ ನಡೆದಿದೆ.
ಏಪ್ರಿಲ್ 7, ಸಂಜೆ 7ಗಂಟೆಗೆ: ಸ್ನೇಹಿತನಾಗಿ ವಿದ್ಯಾರ್ಥಿಗಳೊಂದಿಗೆ ಮಾತನಾಡಲಿದ್ದಾರೆ ಮೋದಿ!...
ಪ್ರಧಾನ ಮಂತ್ರಿ ನರೇಂದ್ರ ಮೋದಿ ಏಪ್ರಿಲ್ 7 ರಂದು ಸಂಜೆ 7 ಗಂಟೆಗೆ ಪರೀಕ್ಷಾ ಪೇ ಚರ್ಚೆ ನಡೆಸಲಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಟ್ವಿಟರ್‌ನಲ್ಲಿ ಒಂದು ವಿಡಿಯೋ ಶೇರ್ ಮಾಡಿ ಖುದ್ದು ತಾವೇ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ರಮೇಶ್ ಜಾರಕಿಹೊಳಿ ಐಸಿಯುಗೆ ಶಿಫ್ಟ್!...
ಭಾನುವಾರ ರಾತ್ರಿ ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ರಮೇಶ್ ಜಾರಕಿಹೊಳಿ ಅವರ ಬಿಪಿ, ಶುಗರ್ ನಲ್ಲಿ ಏರುಪೇರಾಗಿದೆ. ಈ ಹಿನ್ನೆಲೆಯಲ್ಲಿ ರಮೇಶ್ ಜಾರಕಿಹೊಳಿ ಅವರನ್ನ ಐಸಿಯುಗೆ ಶಿಫ್ಟ್ ಮಾಡಲಾಗಿದೆ ಎನ್ನುವ ಮಾಹಿತಿ ತಿಳಿದುಬಂದಿದೆ.
IPL 2021: 'ಆರ್‌ಸಿಬಿ ಈ ಸಲ ಪ್ಲೇ ಆಫ್‌ಗೇರಲ್ಲ'...
ಬಹುನಿರೀಕ್ಷಿತ 14ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಕ್ಷಣಗಣನೆ ಆರಂಭವಾಗಿದ್ದು, ಏಪ್ರಿಲ್ 09ರಿಂದ ಹೈವೋಲ್ಟೇಜ್ ಪಂದ್ಯಗಳ ಟೂರ್ನಿಗೆ ಚಾಲನೆ ಸಿಗಲಿದೆ. ಎಲ್ಲಾ 8 ತಂಡಗಳು ಪ್ರತಿಷ್ಠಿತ ಟ್ರೋಫಿ ಮೇಲೆ ಕಣ್ಣಿಟ್ಟಿದ್ದು, ಮತ್ತೊಮ್ಮೆ ಐಪಿಎಲ್ ಟೂರ್ನಿ ಜಿದ್ದಾಜಿದ್ದಿನ ಕಾಳಗಕ್ಕೆ ಸಾಕ್ಷಿಯಾಗುವ ಸಾಧ್ಯತೆಯಿದೆ.
ಡಿನೋಟಿಫಿಕೇಷನ್ ಪ್ರಕರಣ: ಮುಖ್ಯಮಂತ್ರಿ ಯಡಿಯೂರಪ್ಪಗೆ ಸುಪ್ರೀಂ ಬಿಗ್ ರಿಲೀಫ್...
ಡಿನೋಟಿಫಿಕೇಷನ್ ಪ್ರಕರಣದಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಸುಪ್ರೀಂ ಕೋರ್ಟ್ ಬಿಗ್ ರಿಲೀಫ್ ನೀಡಿದೆ.
ಎಲ್ಲಿ ನೋಡಿದರೂ ರಶ್ಮಿಕಾ ಮಂದಣ್ಣ ಕಾಮನ್ ಡಿಪಿ; ಹ್ಯಾಪಿ ಬರ್ತಡೇ ಮಿಸ್ ಬ್ಯೂಟಿಫುಲ್!...
25ರ ವಸಂತಕ್ಕೆ ಕಾಲಿಟ್ಟ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣಗೆ ಅಭಿಮಾನಿಗಳು ಸ್ಪೆಷಲ್ ಫೋಟೋ ಕ್ರಿಯೇಟ್ ಮಾಡಿದ್ದಾರೆ. ಈ ವರ್ಷ ವಿಭಿನ್ನವಾದ ಕಾಮನ್ ಡಿಪಿ ಬಿಡುಗಡೆ ಮಾಡಲಾಗಿದೆ.
50 ಕೋಟಿ ಫೇಸ್‌ಬುಕ್ ಖಾತೆ ಮಾಹಿತಿ ಸೋರಿಕೆ!...
ವಿಶ್ವದ ಅತ್ಯಂತ ಜನಪ್ರಿಯ ಸಾಮಾಜಿಕ ಜಾಲತಾಣವಾಗಿರುವ ಫೇಸ್‌ಬುಕ್‌ನ 50 ಕೋಟಿ ಬಳಕೆದಾರರ ಮಾಹಿತಿ ಸೋರಿಕೆಯಾಗಿರುವ ಸಂಗತಿ ಬಯಲಾಗಿದೆ.
ಮಾರುತಿ ಕಾರು ಖರೀದಿಗೆ ಕರ್ನಾಟಕ ಬ್ಯಾಂಕಿನಿಂದ ಶೇ.85ರವರೆಗೂ ಸಾಲ!...
ಕಾರ್ ಖರೀದಿಯನ್ನು ಸರಳಗೊಳಿಸುವುದು ಮತ್ತು ಹಣಕಾಸು ನೆರವು ಒದಗಿಸುವ ಸಂಬಂಧ ಮಾರುತಿ ಸುಜುಕಿ ಇಂಡಿಯಾ ಮತ್ತು ಕರ್ನಾಟಕ ಬ್ಯಾಂಕ್ ಪರಸ್ಪರ ಒಪ್ಪಂದ ಮಾಡಿಕೊಂಡಿವೆ. ಮಾರುತಿ ಕಾರುಗಳ ಖರೀದಿಗೆ ಶೇ.85ರ ವರೆಗೂ ಸಾಲವನ್ನು ಕರ್ನಾಟಕ ಬ್ಯಾಂಕ್ ಒದಗಿಸಲಿದೆ. ಈ ಮೂಲಕ ಮಾರುತಿ ಕಾರ್ ಖರೀದಿಯನ್ನು ಮತ್ತಷ್ಟು ಸರಾಗೊಳಿಸುವ ಪ್ರಯತ್ನ ಮಾಡಲಾಗುತ್ತಿದೆ.