ರಾಜ್ಯದಲ್ಲಿ ಸಂಪುಟ ಸರ್ಕಸ್, ಶೆರ್ಲಿನ್ ಮನೆಗೆ ನುಗ್ಗಿ ಕುಂದ್ರಾ ಕಿಸ್; ಜು.29ರ ಟಾಪ್ 10 ಸುದ್ದಿ!

By Suvarna NewsFirst Published Jul 29, 2021, 6:22 PM IST
Highlights

ಕರ್ನಾಟಕ ನೂತನ ಸಿಎಂ ಬಸವರಾಜ ಬೊಮ್ಮಾಯಿ ಸಂಪುಟ ಸೇರಲು ಶಾಸಕರ ಸರ್ಕಸ್ ತೀವ್ರಗೊಂಡಿದೆ. ಟ್ರಂಪ್ ದುರಾದೃಷ್ಟ, ಮೋದಿಯೇ ಈಗ ಅತ್ಯಂತ ಜನಪ್ರಿಯ ನಾಯಕನಾಗಿ ಹೊರಹೊಮ್ಮಿದ್ದಾರೆ. ದುಷ್ಕರ್ಮಿಗಳು ನಡು ರಸ್ತೆಯಲ್ಲಿ ಜಡ್ಜ್ ಕೊಂದು ಪರಾರಿಯಾಗಿದ್ದಾರೆ. ಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟ ಪಿವಿ ಸಿಂಧೂ, ಶೆರ್ಲಿನ್ ಮನೆಗೆ ನುಗ್ಗಿ ಕಿಸ್ ಮಾಡಿದ ರಾಜ್ ಕುಂದ್ರಾ ಸೇರಿದಂತೆ ಜುಲೈ 29ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

ಕಲಿಕೆಗಾಗಿ ವಿದೇಶಕ್ಕೆ ಹೋಗುವ ಕಾಲವಿಲ್ಲ, ಭಾರತದಲ್ಲೇ ಅತ್ಯುತ್ತಮ ಶಿಕ್ಷಣ ಲಭ್ಯ; ಪ್ರಧಾನಿ ಮೋದಿ !

ವಿದ್ಯಾರ್ಥಿಗಳಿಗೆ ವೈಜ್ಞಾನಿಕ ರೀತಿಯಲ್ಲಿ ಶಿಕ್ಷಣ, ಪರೀಕ್ಷಾ ಭಯದಿಂದ ಮುಕ್ತಿ, ಹೊಸ ಹೊಸ ಸಂಶೋಧನೆ, ವಿದ್ಯಾರ್ಥಿಗಳ ಕಲಿಕೆ ಹಾಗೂ ಜ್ಞಾನದ ಮಟ್ಟವನ್ನು ಹೆಚ್ಚಿಸಲು ಹೊಸ ಶಿಕ್ಷಣ ನೀತಿ ನೆರವಾಗಲಿದೆ. ಈ ನೀತಿಯಿಂದ ಭಾರತದ ಭಾಗ್ಯ ಬದಲಾಗಲಿದೆ.  ಈ ಹಿಂದೆ ಭಾರತೀಯರು ಉತ್ತಮ ಶಿಕ್ಷಣಕ್ಕೆ ವಿದೇಶಕ್ಕೆ ಹೊಗಬೇಕಿತ್ತು. ಇದೀಗ ವಿದೇಶಿಗರು ಭಾರತಕ್ಕೆ ಆಗಮಿಸುತ್ತಿದ್ದಾರೆ. ಇದು ನಿಜವಾದ ಬದಲಾವಣೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಹೈಪ್ರೊಫೈಲ್ ಪ್ರಕರಣದ ವಿಚಾರಣೆ ನಡೆಸ್ತಿದ್ದ ಜಡ್ಜ್ ಕೊಲೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆ!

ಜಾರ್ಖಂಡ್‌ನ ಧನ್ಬಾದ್ ಜಿಲ್ಲೆಯಲ್ಲಿ, ದುಷ್ಕರ್ಮಿಗಳ ಅಟ್ಟಹಾಸ ಅದೆಷ್ಟು ಹೆಚ್ಚಿದೆ ಎಂದರೆ ಹಾಡಹಗಲೇ ಕೊಲೆಗಳಾಗಲಾರಂಭಿಸಿವೆ. ಸದ್ಯ ಇಲ್ಲಿಂದ ಜಿಲ್ಲಾ ನ್ಯಾಯಾಧೀಶ ಮತ್ತು ಸೆಷನ್ಸ್ ನ್ಯಾಯಾಧೀಶ ಉತ್ತಮ್ ಆನಂದ್ ಅವರನ್ನು ದುಷ್ಕರ್ಮಿಗಳು ನಡುರಸ್ತೆಯಲ್ಲೇ ಕೊಂದು ಪರಾರಿಯಾಗಿದ್ದಾರೆ.

ಟ್ರಂಪ್ ದುರಾದೃಷ್ಟ, ಮೋದಿಯೇ ಈಗ ಅತ್ಯಂತ ಜನಪ್ರಿಯ ನಾಯಕ!

ನರೇಂದ್ರ ಮೋದಿಯವರ ಹೆಸರಿಗೆ ಮತ್ತೊಂದು ದೊಡ್ಡ ಸಾಧನೆ ಸೇರ್ಪಡೆಗೊಂಡಿದೆ. ಬುಧವಾರ ಅವರ ಟ್ವಿಟರ್ ಹ್ಯಾಂಡಲ್ ಫಾಲೋವರ್ಸ್‌ ಸಂಖ್ಯೆ 70 ಮಿಲಿಯನ್ ತಲುಪಿದೆ. ಅವರು ಮೈಕ್ರೋಬ್ಲಾಗಿಂಗ್ ವೆಬ್‌ಸೈಟ್‌ನಲ್ಲಿ ಅತ್ಯಂತ ಸಕ್ರಿಯ ರಾಜಕಾರಣಿಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. 2009 ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಪ್ರಧಾನಿ ಟ್ವಿಟರ್ ಬಳಸಲಾರಂಭಿಸಿದ್ದು, 2010 ರಲ್ಲಿ ಒಂದು ಲಕ್ಷ ಅನುಯಾಯಿಗಳನ್ನು ಹೊಂದಿದ್ದರು.

ಬೊಮ್ಮಾಯಿ ಸಿಎಂ ಆದ್ರೆ ಕಿಂಗ್ ಮೇಕರ್ BSY : ಯಡಿಯೂರಪ್ಪ ನಿವಾಸಕ್ಕೆ ಶಾಸಕರ ಟೀಂ

ಯಡಿಯೂರಪ್ಪ ಮಾಜಿ ಸಿಎಂ ಆದರೇನು ಪಕ್ಷದ ಶಾಸಕರಿಗೆ ಅವರೇ ಹಾಲಿ ಸಿಎಂ ! ಬೊಮ್ಮಾಯಿ ಮುಖ್ಯಮಂತ್ರಿ ಆಗಿರಬಹುದು, ಆದರೆ ಕಿಂಗ್ ಮೇಕರ್ ಯಡಿಯೂರಪ್ಪ ಎನ್ನುವುದು ಯಡಿಯೂರಪ್ಪ ಫಾಲೊವರ್ಸ್ ಮಾತಾಗಿದೆ. 

ಹೆಚ್ಚಿದ ಕೊರೋನಾ: ಕೇರಳದಲ್ಲಿ ಮತ್ತೆ ಕಂಪ್ಲೀಟ್ ಲಾಕ್‌ಡೌನ್

ಜುಲೈ ಕೊನೆಯ ವಾರದಲ್ಲಿ ದೇಶದ ಕೊರೋನಾ ಪಾಸಿಟಿವ್ ಕೇಸ್ ಹೆಚ್ಚಾಗುತ್ತಲೇ ಇದೆ. ಮೂರನೇ ದಿನಕ್ಕೆ ಅತೀ ಹೆಚ್ಚು ಕೊರೋನಾ ಕೇಸುಗಳು ದಾಖಲಾಗುತ್ತಿದ್ದು, ಇದೇ ರೀತಿ ಮುಂದುವರಿದರೆ ವಾರಾಂತ್ಯಕ್ಕೆ ಕೊರೋನಾ ಪ್ರಕರಣಗಳಲ್ಲಿ ಹೆಚ್ಚಿನ ಏರಿಕೆ ಕಂಡು ಬರುವ ಸಾಧ್ಯತೆ ಇದೆ. ದೇಶದಲ್ಲಿ ಏಕಾಏಕಿ ಕೊರೋನಾ ಕೇಸ್ ಹೆಚ್ಚಾಗುವಲ್ಲಿ ಕೇರಳದಲ್ಲಿ ಕಂಡು ಬಂದ ಪ್ರಕರಣಗಳೂ ಪ್ರಮುಖ ಕಾರಣ.

ಟೋಕಿಯೋ 2020: ಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟ ಸಿಂಧು

ರಿಯೋ ಒಲಿಂಪಿಕ್ಸ್‌ ಬೆಳ್ಳಿ ಪದಕ ವಿಜೇತೆ ಪಿ.ವಿ. ಸಿಂಧು ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದ ಪ್ರೀಕ್ವಾರ್ಟರ್ ಫೈನಲ್‌ನಲ್ಲಿ ಡೆನ್ಮಾರ್ಕ್‌ನ ಮಿಯಾ ಬ್ಲಿಚ್‌ಫೆಲ್ಟ್‌ ಎದುರು 21-15, 21-13 ನೇರ ಗೇಮ್‌ಗಳಲ್ಲಿ ಗೆಲುವು ಸಾಧಿಸುವ ಮೂಲಕ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. 

ಮನೆಗೆ ನುಗ್ಗಿ ಕಿಸ್ ಮಾಡೋಕೆ ಶುರು ಮಾಡಿದ: ಶಿಲ್ಪಾ ಪತಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ

ಅಶ್ಲೀಲ ಪ್ರಕರಣದ ತನಿಖೆ ನಡೆಯುತ್ತಿರುವುದರಿಂದ ಉದ್ಯಮಿ ರಾಜ್ ಕುಂದ್ರಾ ಅವರನ್ನು ನ್ಯಾಯಾಂಗ ವಶದಲ್ಲಿರಿಸಲಾಗಿದೆ. ಅವರ ಜಾಮೀನು ಅರ್ಜಿಯನ್ನು ಮುಂಬೈ ನ್ಯಾಯಾಲಯವು ಇಂದು ತಿರಸ್ಕರಿಸಿದೆ. ಕೆಲವು ನಟಿಯರು ರಾಜ್ ಕುಂದ್ರ ಅವರ ಆ್ಯಪ್ ಹಾಟ್‌ಶಾಟ್‌ಗಳ ವಿರುದ್ಧ ಬಹಿರಂಗವಾಗಿ ಆರೋಪಿಸಿದ್ದಾರೆ. ನಟಿಶೆರ್ಲಿನ್ ಚೋಪ್ರಾ ಅವರು ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದಾರೆ.

ಬ್ಯಾಂಕ್‌ ಮುಚ್ಚಿದರೆ 90 ದಿನದಲ್ಲಿ 5 ಲಕ್ಷ ರೂ. ಠೇವಣಿ ಹಣ ವಾಪಸ್‌!

ಯಾವುದೇ ಬ್ಯಾಂಕ್‌ಗಳು ಆರ್ಥಿಕ ಸಂಕಷ್ಟಕ್ಕೆ ಸಿಕ್ಕಿಹಾಕಿಕೊಂಡು, ಆರ್‌ಬಿಐನಿಂದ ವಹಿವಾಟು ನಿಷೇಧಕ್ಕೆ ಒಳಪಟ್ಟಸಂದರ್ಭದಲ್ಲಿ ಗ್ರಾಹಕರನ್ನು ಆರ್ಥಿಕ ಸಮಸ್ಯೆಯಿಂದ ಕಾಪಾಡುವ ಕಾಯ್ದೆ ತಿದ್ದುಪಡಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಇದರಿಂದಾಗಿ ಯಾವುದೇ ಬ್ಯಾಂಕ್‌ ಆರ್ಥಿಕ ಸಂಕಷ್ಟದಿಂದ ಮುಚ್ಚಿದರೆ ಅಲ್ಲಿನ ಠೇವಣಿದಾರರಿಗೆ 5 ಲಕ್ಷ ರು.ವರೆಗಿನ ಠೇವಣಿಗೆ ರಕ್ಷಣೆ ಸಿಗಲಿದೆ. ವಿಮಾ ರೂಪದಲ್ಲಿ 90 ದಿನದೊಳಗೆ 5 ಲಕ್ಷ ರು.ವರೆಗಿನ ಹಣ ಗ್ರಾಹಕರಿಗೇ ವಾಪಸು ಬರಲಿದೆ.

click me!