ಬಿಎಸ್‌ವೈ ರಾಜ್ಯ ಪ್ರವಾಸ ತಲ್ಲಣ, ಭವಿನಾಗೆ 3 ಕೋಟಿ ರೂ ಬಹುಮಾನ; ಆ.29ರ ಟಾಪ್ 10 ಸುದ್ದಿ!

By Suvarna News  |  First Published Aug 29, 2021, 5:17 PM IST

ಬಿಎಸ್ ಯಡಿಯೂರಪ್ಪ ರಾಜ್ಯ ಪ್ರವಾಸ ಇದೀಗ ಸರ್ಕಾರ ಹಾಗೂ ಬಿಜೆಪಿ ಪಾಳಯದಲ್ಲಿ ಭಾರಿ ತಲ್ಲಣ ಮೂಡಿಸಿದೆ. ಕಾಬೂಲ್ ಏರ್‌ಪೋರ್ಟ್‌ ಮೇಲೆ ಮತ್ತೆ ದಾಳಿ ಸಾಧ್ಯತೆ ಇದೆ. ಬೆಳ್ಳಿ ಗೆದ್ದ ಭವಿನಾ ಪಟೇಲ್‌ಗೆ 3 ಕೋಟಿ ರೂ ಬಹುಮಾನ ಘೋಷಿಸಲಾಗಿದೆ. ಯಾವ ರಾಜ್ಯಕ್ಕೆ ಹೋದರೂ ಒಂದೇ ವಾಹನ ನೋಂದಣಿ, ಕೆಂಗೇರಿ ಮೆಟ್ರೋ ಆರಂಭ ಸೇರಿದಂತೆ ಆಗಸ್ಟ್ 29ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.


ಕಾಬೂಲ್ ಏರ್‌ಪೋರ್ಟ್‌ ಮೇಲೆ ಮತ್ತೆ ದಾಳಿ?: ಮುಂದಿನ 36 ಗಂಟೆ ಡೇಂಜರಸ್!

Latest Videos

undefined

ಕಾಬೂಲ್‌ ಏರ್‌ಪೋರ್ಟ್‌ ಮೇಲೆ ಮತ್ತೆ ದಾಳಿನಾ? 24 ರಿಂದ 36 ಗಂಟೆಯೊಳಗೆ ಉಗ್ರರಿಂದ ವಿಮಾನ ನಿಲ್ದಾಣದ ಮೇಲೆ ದಾಳಿ ನಡೆಯುವ ಎಲ್ಲಾ ಸಾಧ್ಯತೆಗಳಿವೆ. ಅಮೆರಿಕ ಸೇನೆಯನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಯಲಿದೆ ಎನ್ನಲಾಗಿದ್ದು, ಎಚ್ಚರದಿಂದಿರುವಂತೆ ಅಮೆರಿಕ ಅಧ್ಯಕ್ಷ ಬೈಡೆನ್ ವಾರ್ನಿಂಗ್ ಕೊಟ್ಟಿದ್ದಾರೆ.

ರಾಜ್ಯ ಬಿಜೆಪಿಯಲ್ಲಿ ಸೃಷ್ಟಿಯಾಗುತ್ತಾ ಮತ್ತೊಂದು ತಲ್ಲಣ..?

 ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ರಾಜ್ಯ ಪ್ರವಾಸ ಮಾಡುವ ಬಗ್ಗೆ ಇದೀಗ ಬಿಜೆಪಿಯೊಳಗೆ ತಳಮಳ ಶುರುವಾಗಿದೆ. ರಾಜ್ಯ ಬಿಜೆಪಿಯೊಳಗೆ ಇದರಿಂದ ಮತ್ತೊಂದು ತಲ್ಲಣ ಸೃಷ್ಟಿಯಾಗುತ್ತಾ..? ಈ ಬಗ್ಗೆ ಬಿಸಿ ಬಿಸಿ ಚರ್ಚೆಯಾಗುತ್ತಿದೆ. 

ಪ್ಯಾರಾ ಒಲಿಂಪಿಕ್ಸ್; ಬೆಳ್ಳಿ ಗೆದ್ದ ಭವಿನಾ ಪಟೇಲ್‌ಗೆ 3 ಕೋಟಿ ರೂ ಬಹುಮಾನ ಘೋಷಣೆ!

ಪ್ಯಾರಾ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತೀಯ ಕ್ರೀಡಾಪಟುಗಳು ದಿಟ್ಟ ಹೋರಾಟ ನೀಡುತ್ತಿದ್ದಾರೆ. ಇದರ ಫಲವಾಗಿ ಭಾರತ ಮೊದಲ ಪದಕ ಗೆದ್ದುಕೊಂಡಿದೆ. ಟೇಬಲ್ ಟೆನಿಸ್‌ನಲ್ಲಿ ಭವಿನಾ ಪಟೇಲ್ ಬೆಳ್ಳಿ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಭವಿನಾ ಪಟೇಲ್ ಸಾಧನೆಗೆ ಇದೀಗ ಗುಜರಾತ್ ಸರ್ಕಾರ 3 ಕೋಟಿ ರೂಪಾಯಿ ಬಹುಮಾನ ಘೋಷಿಸಿದೆ.

ಹಾಟ್‌ ಲುಕ್‌ನಲ್ಲಿ ಶ್ವೇತಾ: ನಿಮ್ಮ ಯವ್ವನ ಹೋಗ್ತಾನೆ ಇಲ್ಲ ಎಂದ ಫ್ಯಾನ್ಸ್

ಬಾಲಿವುಡ್ ನಟಿ ಶ್ವೇತಾ ತಿವಾರಿ ದಿನಕಳೆದಂತೆ ಸಖತ್ ಬ್ಯೂಟಿಫುಲ್ ಆಗುತ್ತಿದ್ದಾರೆ. ಕೆಲವು ತಿಂಗಳ ಹಿಂದೆ ಫಿಟ್ನೆಸ್ ಫೋಟೋ ಶೇರ್ ಮಾಡಿದ ನಟಿ ಈಗ ಇಂಟರ್‌ನೆಟ್‌ನಲ್ಲಿ ವೈರಲ್ ಆಗುತ್ತಿದ್ದಾರೆ.

ಯಾವ ರಾಜ್ಯಕ್ಕೆ ಹೋದರೂ ಒಂದೇ ವಾಹನ ನೋಂದಣಿ: ‘ಕೆಎ’ ಇದ್ದಂತೆ ಭಾರತಕ್ಕೆ ‘ಬಿಎಚ್‌’ ಸೀರೀಸ್‌!

ಖಾಸಗಿ ವಾಹನ ಹೊಂದಿರುವವರು ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ವಾಸ್ತವ್ಯ ಬದಲಿಸಿದರೆ ವಾಹನ ಮರು ನೋಂದಣಿ ಮಾಡಿಸುವ ತಲೆನೋವು ಇನ್ನಿಲ್ಲ. ಇಡೀ ದೇಶಕ್ಕೆ ಅನ್ವಯಿಸುವ ನೋಂದಣಿ ಸಂಖ್ಯೆ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಈ ವರ್ಷದ ಸೆ.15ರಿಂದ ‘ಬಿಎಚ್‌’ ಸರಣಿಯ ಹೊಸ ರೀತಿಯ ನೋಂದಣಿ ಸಂಖ್ಯೆ ಜನರಿಗೆ ಲಭಿಸಲಿದೆ.

ಸೆಪ್ಟೆಂಬರ್ 1ಕ್ಕೆ ಹ್ಯಾಟ್ರಿಕ್ ಹೀರೋ ಭಜರಂಗಿ-2 ಟ್ರೈಲರ್ ಬಿಡುಗಡೆ!

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅಭಿನಯದ ಭಜರಂಗಿ 2 ಸಿನಿಮಾ ಇದೇ ಸೆಪ್ಟೆಂಬರ್ 10ಕ್ಕೆ ಬಿಡುಗಡೆ ಆಗುತ್ತಿದೆ. ರಿಲೀಸ್ ಡೇಟ್ ಅನೌನ್ಸ್ ಮಾಡುತ್ತಿದ್ದ ಬೆನ್ನಲ್ಲೇ ಚಿತ್ರದ ಟ್ರೈಲರ್ ಬಿಡುಗಡೆ ಮಾಡುತ್ತಿದ್ದಾರೆ. ಸೆಪ್ಟೆಂಬರ್ 1ರಂದು ಚಿತ್ರದ ಟ್ರೈಲರ್ ರಿಲೀಸ್ ಆಗುತ್ತಿದೆ.

ಕೆಂಗೇರಿ ಮೆಟ್ರೋ ಆರಂಭ: ವೇದಿಕೆಯಲ್ಲಿ ಕನ್ನಡವೇ ಮಾಯ!

ನಾಯಂಡಹಳ್ಳಿಯಿಂದ ಕೆಂಗೇರಿ ಮೆಟ್ರೋ ಮಾರ್ಗಕ್ಕೆ ಚಾಲನೆ ಸಿಕ್ಕಿದೆ. ಆದರೆ ವೇದಿಕೆ ಕಾರ್ಯಕ್ರಮದಲ್ಲಿ ಕನ್ನಡವೇ ಮಾಯವಾಗಿದೆ. ಹೌದು ಮುಖ್ಯ ವೇದಿಕೆಯಲ್ಲಿ ಸಂಪೂರ್ಣ ಇಂಗ್ಲೀಷ್ ಬಳಕೆಯಾಗಿದೆ. 

ಅಮಿತಾಬ್ ಬಚ್ಚನ್ ಬಾಡಿಗಾರ್ಡ್‌ಗೆ 1.5 ಕೋಟಿ ರೂ ಸಂಭಾವನೆಯಾ?

ಮುಂಬೈ ಪೊಲೀಸ್ ಇಲಾಖೆಯ ಕಾನ್‌ಸ್ಟೇಬಲ್ ಜಿತೇಂದ್ರ ಶಿಂಧೆ ಅವರು ಹಲವು ವರ್ಷಗಳಿಂದ ಅಮಿತಾಬ್ ಬಚ್ಚನ್  ಬಾಡಿಗಾರ್ಡ್‌ ಆಗಿದ್ದಾರೆ. ಈ ದಿನಗಳಲ್ಲಿ  ಅವರ ಸಂಬಳ ಸುದ್ದಿಯಲ್ಲಿದೆ. ಅವರ ಸಂಬಳ ಕೇಳಿದರೆ ಶಾಕ್‌ ಆಗುವುದು ಗ್ಯಾರಂಟಿ. ಇಲ್ಲಿದೆ ವಿವರ.

click me!