ಬೆಂಗಳೂರು ಟೆಕ್ಕಿ ಮಲ್ಲಳ್ಳಿ ಜಲಪಾತದಲ್ಲಿ ನೀರು ಪಾಲು..ಎಲ್ಲರಿಗೂ ಒಂದು ಎಚ್ಚರಿಕೆ

By Web Desk  |  First Published Feb 4, 2019, 6:03 PM IST

ಪ್ರವಾಸ ಪ್ರಾಣಕ್ಕೆ ಸಂಚಕಾರ ತಂದಿತು ಎಂದು ಹಲವು ಸಾರಿ ಮಾಧ್ಯಮಗಳ ಆದಿಯಾಗಿ ಎಚ್ಚರಿಕೆ ನೀಡುತ್ತಿದ್ದರೂ ಪ್ರಮಾದಗಳು ಆಗಿ ಹೋಗುತ್ತವೆ. ಅಂಥದ್ದೇ ಒಂದು ಅವಘಡ ನಡೆದು ಹೋಗಿದೆ. ಸ್ನೇಹಿತರ ಪ್ರಾಣ ಉಳಿಸಲು ಹೋದ ಇಂಜಿನಿಯರ್ ಪ್ರಾಣ ಕಳೆದುಕೊಂಡಿದ್ದಾನೆ.


ಸೋಮವಾರಪೇಟೆ[ಫೆ. 04]  ಸೋಮವಾರಪೇಟೆ ಸಕಲೇಶಪುರ ಗಡಿ ಭಾಗದ ಮಲ್ಲಳ್ಳಿ ಜಲಪಾತದಲ್ಲಿ ಈಜಲು ತೆರಳಿ ಪ್ರಾಣಾಪಾಯಕ್ಕೆ ಸಿಲುಕಿದ್ದ ಯುವಕರನ್ನು ರಕ್ಷಿಸಲು ಮುಂದಾದ ಇಂಜಿನಿಯರ್ ಪ್ರಾಣ ಕಳೆದುಕೊಂಡಿದ್ದಾರೆ.

ಭಾನುವಾರ ಘಟನೆ ನಡೆದಿದ್ದು  ಬೆಂಗಳೂರಿನ ಎಕ್ಸೆಂಚರ್ ಕಂಪನಿಯಲ್ಲಿ ಇಂಜಿನಿಯರ್ ಆಗಿದ್ದ ಸ್ಕಂದ(25) ನೀರು ಪಾಲಾಗಿದ್ದಾರೆ.  ಬೆಂಗಳೂರಿನಿಂದ ಸ್ಕಂದ ಸೇರಿದಂತೆ 11 ಮಂದಿ ಮಲ್ಲಳ್ಳಿ ಜಲಪಾತ ವೀಕ್ಷಣೆಗೆ ಆಗಮಿಸಿದ್ದರು. ಬೆಳಿಗ್ಗೆ 11ಗಂಟೆಯ ಸಮಯದಲ್ಲಿ ಜಲಪಾತದ ತಳಭಾಗದಲ್ಲಿರುವ ಮರಣ ಬಾವಿ ಎಂದೇ ಕರೆಸಿಕೊಂಡಿರುವ ಹೊಂಡ ಸಮೀಪ ತೆರಳಿದ್ದಾರೆ. ಈ ಸಂದರ್ಭ ಬಿಹಾರ ಮೂಲದ ಬೆಂಗಳೂರಿನಲ್ಲಿ ನೌಕರಿಯಲ್ಲಿರುವ ಶರ್ಮಾ ಬಿಹಾರ್, ನಿಲೇಶ್ ಮತ್ತು ಅಂಕಿತ್ ಚೌದರಿ ಎಚ್ಚರಿಕೆಯ ಫಲಕವನ್ನು ಗಮನಿಸದೆ ಹೊಂಡದಲ್ಲಿ ಸ್ನಾನಕ್ಕೆ ಇಳಿದಿದ್ದಾರೆ.

Latest Videos

undefined

ಸೌಂದರ್ಯದೊಂದಿಗೆ ಇತಿಹಾಸ ಹೇಳುತ್ತೆ ಕವಲೇದುರ್ಗ

ಸ್ನಾನಕ್ಕೆ ಇಳಿದವರು ಮುಳುಗಲು ಆರಂಭಿಸಿದ್ದಾರೆ. ಈ ಸಂದರ್ಭದಲ್ಲಿ ಸಹಾಯಕ್ಕಾಗಿ ಕಿರುಚಿದ್ದಾರೆ. ಅಲ್ಲಿಯೇ ಇದ್ದ ಸ್ಕಂದ ಮುಳುಗುತ್ತಿದ್ದವರನ್ನು ರಕ್ಷಿಸಲು ನೀರಿಗೆ ಇಳಿದಿದ್ದಾರೆ.  ಆದರೆ ಬಿಹಾರದ ಮೂವರು ದಡ ಸೇರಿಸಿದ್ದಾನೆ. ಕೊನೆಯಲ್ಲಿ ಸ್ಕಂದ ಮೇಲೆ ಬರಲಾಗದೆ ಸೇಹಿತರು ನೋಡುತ್ತಿರುವಂತೆ ಮುಳುಗಿ ಪ್ರಾಣ ಕಳೆದುಕೊಂಡಿದ್ದಾರೆ.

ಮೈಸೂರಿನ ವಿವೇಕಾನಂದ ನಗರದ  ಮದುವಧನ ಲೇಔಟ್‍ನ ಮೈಸೂರು ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಶಂಕರ್, ರೇವತಿ ದಂಪತಿಗಳ ಒಬ್ಬನೆ ಪುತ್ರನಾಗಿರುವ ಸ್ಕಂದ್‍ನನ್ನು ಕಳೆದ ಪೋಷಕರ ಅಕ್ರಂದನ ಮುಗಿಲು ಮುಟ್ಟಿತು. ಸ್ಕಂದ ಆರು ತಿಂಗಳ ಹಿಂದೆ ಬೆಂಗಳೂರಿನ ಕಂಪೆನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಪಟ್ಟಣದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶವಪರೀಕ್ಷೆಯ ನಂತರ ಪೋಷಕರಿಗೆ ಒಪ್ಪಿಸಲಾಯಿತು. ಡಿವೈಎಸ್‍ಪಿ ಮುರುಳಿಧರ್, ಸರ್ಕಲ್ ಇನ್ಸ್‍ಪೆಕ್ಟರ್ ನಂಜುಂಡೇಗೌಡ, ಪಿ.ಎಸ್.ಐ. ಶಿವಶಂಕರ್, ಸಿಬ್ಬಂದಿಗಳಾದ ಜಗದೀಶ್, ಶಿವಕುಮಾರ್, ಕುಮಾರ, ಪ್ರವೀಣ್ ಸ್ಥಳಕ್ಕೆ ತೆರಳಿ ಮಹಜರು ನಡೆಸಿದರು.

ಪ್ರವಾಸಿಗರಲ್ಲಿ ಒಂದು ಜಾಗೃತಾ ಮನವಿ:  ಪಶ್ಚಿಮಘಟ್ಟದ ಜಲಪಾತಗಳು ಅತೀ ಎತ್ತರದಿಂದ ವೇಗವಾಗಿ ಧುಮ್ಮಕ್ಕುವುದರಿಂದ ಅಡಿಯಲ್ಲಿ ದೊಡ್ಡ ದೊಡ್ಡ ಹೊಂಡಗಳು ಕೊರಕಲುಗಳು ಇರುತ್ತವೆ. ಮೇಲ್ನೋಟಕ್ಕೆ ನಮಗೆ ಅರಿವಿಗೆ ಬರುವುದಿಲ್ಲ.  ಸ್ವಿಮ್ಮಿಂಗ್ ಪೂಲ್ ನಲ್ಲಿ ಈಜು ಕಲಿತವರು ಹುಚ್ಚು ಧೈರ್ಯ ಮಾಡಿ ನೀರಿಗೆ ಇಳಿದರೆ ಅಪಾಯಕ್ಕೆ ಸಿಲುಕುವುದು ಖಚಿತ.  ಪ್ರಕೃತಿಯ ಸೊಬಗನ್ನು ನೋಡಿ ಆನಂದಿಸಿ ಅದರ ಜೊತೆ ಸರಸ ಬೇಡ ಎಂಬ ಸಂದೇಶವನ್ನು ಸಹ ಸೋಶಿಯಲ್ ಮೀಡಿಯಾದಲ್ಲಿ ನೀಡಲಾಗಿದೆ.

ನಂದಿ ಬೆಟ್ಟ ಮಾತ್ರವಲ್ಲ, ಇಲ್ಲೂ ಸೂಪರ್ ಸನ್‌ರೈಸ್ ನೋಡ್ಬೋದು!

ಮಲೆನಾಡ ಭಾಗದ ನದಿಗಳು ಪ್ರತಿ ವರ್ಷ ತಮ್ಮ ಪಾತ್ರ ಬದಲಾಯಿಸುತ್ತವೆ. ಘಟ್ಟ ಪ್ರದೇಶದಲ್ಲಿ ಇಳಿಜಾರಿನಲ್ಲಿ ವೇಗವಾಗಿ ಹರಿಯುವುದರಿಂದ ಈ ವರ್ಷ  ಆಳವಿಲ್ಲದ ಜಾಗದಲ್ಲಿ ಮುಂದಿನ ವರ್ಷ ಆಳ ಕಂದಕ ನಿರ್ಮಾಣವಾಗಬಹುದು. ಇನ್ನು ಜಲಪಾತಗಳ ಸಮೀಪ ನೀರು ಧುಮ್ಮಿಕ್ಕುವ ಜಾಗದಲ್ಲಿ ಒಂದು ಕಡೆ ಆಳವಾಗಿದ್ದರೆ ಅದರ ಎದುರು ಮುಖದಲ್ಲಿ ಮರಳು ಶೇಖರವಾಗಿರುತ್ತದೆ. ಇದೇ ಪಾಯಕ್ಕೆ ದೂಡುವುದು.  ಇಂಥ ಸ್ಥಳಗಳಿಗೆ ಪ್ರವಾಸ ತೆರಳುವಾಗ ಸ್ಥಳೀಯ ಸ್ನೇಹಿತರನ್ನು ಒಟ್ಟಿಗೆ ಕರೆದುಕೊಂಡು ಹೋಗುವುದು ಉತ್ತಮ.

"

 

click me!