ಪ್ರಧಾನಿ ದಕ್ಷಿಣ ಪ್ರವಾಸ: ‘ಗೋ ಬ್ಯಾಕ್ ಮೋದಿ’ ಅಭಿಯಾನದ ಪ್ರಯಾಸ!

By Web DeskFirst Published Feb 10, 2019, 12:07 PM IST
Highlights

ಇಂದು ಪ್ರಧಾನಿ ಮೋದಿಯಿಂದ ದಕ್ಷಿಣ ರಾಜ್ಯಗಳ ಪ್ರವಾಸ| ಆಂಧ್ರ, ತಮಿಳುನಾಡು, ಕರ್ನಾಟಕ ಪ್ರವಾಸದಲ್ಲಿ ಮೋದಿ| ಟ್ವಿಟ್ಟರ್ ನಲ್ಲಿ ಗೋ ಬ್ಯಾಕ್ ಮೋದಿ ಅಭಿಯಾನ ಜೋರು| ಆಂಧ್ರದಲ್ಲಿ ಪ್ರಧಾನಿ ಮೋದಿ ವಿರುದ್ಧ ಭುಗಿಲೆದ್ದ ಪ್ರತಿಭಟನೆ 

ಹೈದರಾಬಾದ್(ಫೆ.10): ದಕ್ಷಿಣ ಭಾರತದ ರಾಜ್ಯಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟ್ವೀಟರ್ ನಲ್ಲಿ  ಆರಂಭಿಸಲಾಗಿರುವ #gobackmodi ಅಭಿಯಾನ ವೈರಲ್ ಆಗಿದೆ.

ಮೋದಿ ಹಿಂದಕ್ಕೆ ಹೋಗಿ, ಮತ್ತೆಂದೂ ಮೋದಿ ಬೇಡ ಎಂಬರ್ಥದ ಪೋಸ್ಟರ್ ಗಳು ಟ್ವೀಟರ್ ನಲ್ಲಿ ಹರಿದಾಡುತ್ತಿವೆ. #TNWelcomesModi ಮತ್ತು #GoBackSadistModi ಎಂಬ ಹ್ಯಾಶ್‌ಟ್ಯಾಗ್‌ಗಳು ಟ್ವಿಟರ್‌ನಲ್ಲಿ ಟಾಪ್‌ ಟ್ರೆಂಡಿಂಗ್‌ ಆಗಿವೆ.

ನರೇಂದ್ರ ಮೋದಿ ಇಂದು ಆಂಧ್ರ ಪ್ರದೇಶ, ಕರ್ನಾಟಕ ಮತ್ತು ತಮಿಳುನಾಡಿಗೆ ಭೇಟಿ ನೀಡಲಿದ್ದಾರೆ. ಸಾಮಾಜಿಕ ತಾಣದಲ್ಲಿ #NoMoreModi ಮತ್ತು #ModIsAMistake ಎಂಬ ಘೋಷಣೆಗಳಿರುವ ಫಲಗಳನ್ನು ಪ್ರದರ್ಶಿಸುತ್ತಿರುವ ಜನರ ಗುಂಪು ಮತ್ತು ಪ್ರಧಾನಿ ನರೇಂದ್ರ ಮೋದಿ ಓಡುತ್ತಿರುವ ಕಾರ್ಟೂನ್‌ಗಳನ್ನು ಬಳಕೆ ಮಾಡಿದ ಪೋಸ್ಟರ್‌ ವೈರಲ್‌ ಆಗಿದೆ.


Andhra is unwelcoming you Mr Prime Minister Modi..... !

You are the unwelcome Guest everywhere in India...!

Please Confine yourself inside the PMO...! When People see you, They Get Anger and Protest...!

Please don't Go out...!pic.twitter.com/RtyrVp4bAK

— S Rajasekar 🇮🇳 (@srspdkt)

ಇನ್ನು ಆಂಧ್ರದಲ್ಲಿ ಪ್ರಧಾನಿ ಮೋದಿ ಭೇಟಿ ಖಂಡಿಸಿ ಟಿಡಿಪಿ ಸದಸ್ಯರು ಪ್ರತಿಭಟನೆ ಮಾಡುತ್ತಿದ್ದು, ರಸ್ತೆಗಳಲ್ಲಿ ಟೈರ್ ಗಳಿಗೆ ಬೆಂಕಿ ಹಚ್ಚಿ ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 
 

click me!