ಸೇವಾ ತೆರಿಗೆ ಪಾವತಿಸದ ನಟ ಮಹೇಶ್‌ ಬಾಬು ಬ್ಯಾಂಕ್‌ ಖಾತೆಗಳು ಜಪ್ತಿ!

By Web DeskFirst Published Dec 28, 2018, 10:31 AM IST
Highlights

ಸೇವಾ ತೆರಿಗೆ ಪಾವತಿಸದ ನಟ ಮಹೇಶ್‌ ಬಾಬು ಬ್ಯಾಂಕ್‌ ಖಾತೆಗಳು ಜಪ್ತಿ! ಸೇವಾ ತೆರಿಗೆ ಪಾವತಿ ಮಾಡದೇ ಇರುವ ತೆಲಗು ಸೂಪರ್‌ ಸ್ಟಾರ್‌ ಮಹೇಶ್‌ ಬಾಬು ಅವರ ಬ್ಯಾಂಕ್‌ ಖಾತೆಗಳನ್ನು ಜಿಎಸ್‌ಟಿ ಇಲಾಖೆ ಮುಟ್ಟುಗೋಲು ಹಾಕಿಕೊಂಡಿದೆ. 

ಹೈದರಾಬಾದ್‌ (ಡಿ.28): ಸೇವಾ ತೆರಿಗೆ ಪಾವತಿ ಮಾಡದೇ ಇರುವ ತೆಲಗು ಸೂಪರ್‌ ಸ್ಟಾರ್‌ ಮಹೇಶ್‌ ಬಾಬು ಅವರ ಬ್ಯಾಂಕ್‌ ಖಾತೆಗಳನ್ನು ಜಿಎಸ್‌ಟಿ ಇಲಾಖೆ ಮುಟ್ಟುಗೋಲು ಹಾಕಿಕೊಂಡಿದೆ.

2007-08ನೇ ಸಾಲಿನಲ್ಲಿ ವಿವಿಧ ವಸ್ತುಗಳಿಗೆ ಪ್ರಚಾರ ರಾಯಭಾರಿಯಾಗಿ ಹಾಗೂ ವಿವಿಧ ವಸ್ತುಗಳ ಜಾಹಿರಾತಿನಲ್ಲಿ ಕಾಣಿಸಿಕೊಂಡಿದ್ದಕ್ಕೆ ಪ್ರತಿಯಾಗಿ ಪಡೆದ ಸಂಭಾವನೆಗೆ ನಟ ಮಹೇಶ್‌ ಬಾಬು ಅವರು 18.5 ಲಕ್ಷ ರು. ಸೇವಾ ತೆರಿಗೆ ಪಾವತಿಸಿಲ್ಲ. ಈ ಹಿನ್ನೆಲೆಯಲ್ಲಿ, ತೆರಿಗೆ ಸೇರಿದಂತೆ 73.5 ಲಕ್ಷ ರು.ಗಾಗಿ ಅವರ ಬ್ಯಾಂಕ್‌ ಖಾತೆ ಜಪ್ತಿ ಮಾಡಲಾಗಿದೆ ಎಂದು ಹೈದರಾಬಾದ್‌ ವಿಭಾಗದ ಜಿಎಸ್‌ಟಿ ಆಯುಕ್ತರು ಗುರುವಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

click me!