ದೇವೇಗೌಡರ ಕುಟುಂಬದ ವಿರುದ್ಧ ಕಾಂಗ್ರೆಸ್ ಮುಖಂಡನಿಂದ ಭಾರೀ ಆರೋಪ

By Web DeskFirst Published Sep 18, 2018, 8:40 AM IST
Highlights

ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ವಿರುದ್ಧ ಕಾಂಗ್ರೆಸ್ ಮುಖಂಡ ಭಾರೀ ಆರೋಪ ಮಾಡಿದ್ದಾರೆ. ಅತ್ಯಧಿಕ ಪ್ರಮಾಣದಲ್ಲಿ ದೇವೇಗೌಡರ ಕುಟುಂಬ ಭೂ ಕಬಳಿಕೆ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ. 

ಬೆಂಗಳೂರು : ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ವಿರುದ್ಧ ಮಾಜಿ ಸಚಿವ ಎ.ಮಂಜು ಭೂ ಕಬಳಿಕೆ ಆರೋಪ ಮಾಡಿದ್ದಾರೆ. ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಂಜು, ತಾಲೂಕಿನ ದುದ್ದ ಹೋಬಳಿ ಗೌರಿಪುರ ಹಾಗೂ ಸೋಮ
ನಹಳ್ಳಿ ಕಾವಲು ಗ್ರಾಮ ವ್ಯಾಪ್ತಿಯಲ್ಲಿ 54.29 ಎಕರೆ ಸರ್ಕಾರಿ ಭೂಮಿಯನ್ನು ಮಾಜಿ ಪ್ರಧಾನಿ ದೇವೇಗೌಡರ ಅತ್ತೆ ಕಾಳಮ್ಮ ಹಾಗೂ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಜ್ವಲ್ ರೇವಣ್ಣ  ಹೆಸರಿಗೆ 2014- 15ರಲ್ಲಿ ಮಂಜೂರು ಮಾಡಲಾಗಿದೆ ಎಂದು ದೂರಿದರು. 

ಗೌರಿಪುರ ಹಾಗೂ ಸೋಮನಹಳ್ಳಿ ಕಾವಲಿನ ಸರ್ವೆ ನಂ.41, 42, 43, 44, 45, 46, 47, 48, 49, 50, 58, 62 ಹಾಗೂ 63ಕ್ಕೆ ಸಂಬಂಧಪಟ್ಟ ಬೀಳು ದು ರಸ್ತಿ ಆದೇಶವಾದ ನಕಲನ್ನು ನೀಡುವಂತೆ ನಾನು 2018 ರ ಮಾರ್ಚ್‌ನಲ್ಲಿಯೇ ತಹ ಸೀಲ್ದಾರ್‌ಗೆ ಪತ್ರ ಬರೆದಿದ್ದೆ. ಆದರೆ, ಬೀಳು ದುರಸ್ತಿ ಆಗಿರುವ ಮಾಹಿತಿ ಬಿಟ್ಟು ಬೇರೆಲ್ಲವನ್ನು ನೀಡಿದ್ದಾರೆ. 

1956-57ರಲ್ಲಿ ಸಣ್ಣೇ ಗೌಡ ಎಂಬವರ ಹೆಸರಿನಲ್ಲಿದ್ದ ಸರ್ವೆ ನಂ.46ರಲ್ಲಿನ 4.27 ಎಕ್ರೆ ಜಮೀನನ್ನು ಗಿರಿಯಪ್ಪ ಎಂಬುವರಿಗೆ ಬಿಟ್ಟುಕೊಡುತ್ತಾ ಬಳಿಕ ಗಿರಿಯಪ್ಪ ಮತ್ತು ಇತರೆ ಏಳು ಜನರು ಸೇರಿ ಮೇಲ್ಕಂಡ ಸರ್ವೆ ನಂ.ಗಳ ವ್ಯಾಪ್ತಿಯಲ್ಲಿ ಬರುವ ಒಟ್ಟು 54.29 ಎಕರೆ
ಜಮೀನನ್ನು ಕಾಳಮ್ಮ ಮತ್ತು ಪ್ರಜ್ವಲ್ ರೇವಣ್ಣಗೆ 2014ರಲ್ಲಿ ಬಿಟ್ಟು ಕೊಟ್ಟಿದ್ದಾರೆ. ಸರ್ಕಾರಿ ಜಮೀನನ್ನು ಈ ರೀತಿ ಬೇಕಾಬಿಟ್ಟಿ ಯಾರು ಬೇಕಾದವರು ತಮ್ಮ ಹೆಸರಿಗೆ ಮಾಡಿಕೊಳ್ಳಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ದೂರಿದರು.

ಈ ಕುರಿತು ಜಿಲ್ಲಾಧಿಕಾರ ರೋಹಿಣಿ ಸಿಂಧೂರಿ ಅವರಿಗೆ ದೂರು ನೀಡಲಾಗುವುದು. ಮುಂದಿನ 20 ದಿನಗಳಲ್ಲಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕೈಗೊಳ್ಳದಿದ್ದರೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

click me!