ಸೊಸೆಯನ್ನು ವರಿಸಲು 62ರ ಮಾವನ ಖತರ್ನಾಕ್ ಪ್ಲಾನ್!: ಬಲಿಯಾಗಿದ್ದು ಮಾತ್ರ ಮಗ!

By Web DeskFirst Published Feb 14, 2019, 2:27 PM IST
Highlights

ತನ್ನ ಸೊಸೆಯ ಮೇಲೇ ಕಣ್ಣಿಟ್ಟ ತಂದೆಯೊಬ್ಬ ಆಕೆಯನ್ನು ಮದುವೆಯಾಗುವ ಮಹದಾಸೆಯಿಂದ ಖತರ್ನಾಕ್ ಪ್ಲಾನ್ ಒಂದನ್ನು ಮಾಡಿದ್ದಾನೆ. ಪ್ಲಾನ್ ಇನ್ನೇನು ಯಶಸ್ವಿಯಾಯ್ತು ಎನ್ನುವಷ್ಟರಲ್ಲಿ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಹಾಕಿಕೊಂಡು ಪೊಲೀಸರ ಅತಿಥಿಯಾಗಿದ್ದಾನೆ. ಅಷ್ಟಕ್ಕೂ ಆ 62 ವರ್ಷದ ಮಾವ ಮಾಡಿದ್ದೇನು? ಇಲ್ಲಿದೆ ವಿವರ

ಚಂಡೀಗಡ[ಫೆ.14]: ಪ್ರೀತಿ ಹಾಗೂ ಯುದ್ಧದಲ್ಲಿ ಏನು ಮಾಡಿದರೂ ತಪ್ಪಲ್ಲ ಎನ್ನುವುದರೊಂದಿಗೆ ಪ್ರೀತಿಗೆ ವಯಸ್ಸಿನ ಮಿತಿ ಇಲ್ಲ ಎಂಬ ಮಾತೂ ಇದೆ. ಆದರೆ ಈ ಪ್ರೀತಿ ಸಂಬಂಧವನ್ನೇ ಮೀರಿ ಬೆಳೆದರೆ ಹೇಗೆ? ಹೌದು ಸದ್ಯ ಪಂಜಾಬ್‌ನ ಖಾನಾ ಎಂಬ ಹಳ್ಳಿಯಲ್ಲಿ ಬೆಚ್ಚಿ ಬೀಳಿಸುವ ಪ್ರಕರಣವೊಂದು ಬೆಳಕಿಗೆ ಬಂದಿದೆ.

62 ವರ್ಷದ ಛೋಟಾ ಸಿಂಗ್ ಎಂಬ ವ್ಯಕ್ತಿಗೆ 40 ವರ್ಷದ ತನ್ನ ಮಗ ರಾಜ್ವಿಂದರ್ ಸಿಂಗ್ ಹೆಂಡತಿಯೊಂದಿಗೆ ದೀರ್ಘ ಸಮಯದಿಂದ ಸಂಬಂಧವಿತ್ತು. ಈ ಕಾರಣದಿಂದ ಛೋಟಾ ಸಿಂಗ್ ತನ್ನ ಸೊಸೆಯೊಂದಿಗೆ ಮದುವೆಯಾಗುವ ಪ್ಲ್ಯಾನ್ ಮಾಡಿದ್ದಾನೆ. ಇದಕ್ಕಾಗಿ ಎಲ್ಲಕ್ಕಿಂತ ಮೊದಲು ತನ್ನ ಮಗನನ್ನು ಸಾಯಿಸುವ ಯೋಜನೆ ಹಾಕಿಕೊಂಡಿದ್ದಾನೆ.

ಹಿಂದೂಸ್ಥಾನ್ ಟೈಮ್ಸ್ ವರದಿಯನ್ವಯ ಒಂದು ರಾತ್ರಿ ಛೋಟಾ ಸಿಂಗ್ ತನ್ನ ಯೋಜನೆಯನ್ವಯ ಮಗನ ತಲೆಗೆ ಆಯುಧವೊಂದರಿಂದ ಹೊಡೆದು ಉರುಳಿಸುತ್ತಾನೆ. ಇದಾದ ಬಳಿಕ ಆತನ ದೇಹವನ್ನು ತುಂಡರಿಸಿ ಅವುಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಸಿ ಚರಂಡಿಯಲ್ಲಿ ಹರಿದು ಬಿಡುತ್ತಾನೆ.

ಆದರೆ ಛೋಟಾ ಸಿಂಗ್ ತನ್ನ ಮಗನ ದೇಹದ ತುಂಡುಗಳನ್ನು ಚೀಲಕ್ಕೆ ತುಂಬಿಸುತ್ತಿದ್ದಾಗ ನೆಲದ ಮೇಲೆಲ್ಲಾ ರಕ್ತ ತಾಗಿತ್ತು. ಹೀಗಿರುವಾಗ ಛೋಟಾ ಸಿಂಗ್ ಸೋದರಳಿಯನಿಗೆ ಎಚ್ಚರವಾಗಿದೆ. ಏನಾಗುತ್ತಿದೆ ಎಂದು ಹೊರಗೆ ಬಂದು ನೋಡಿದ ಆತನಿಗೆ ನೆಲದ ಮೇಲಿದ್ದ ರಕ್ತ ಕಾಣಿಸಿಕೊಂಡಿದೆ. ಛೋಟಾ ಸಿಂಗ್ ತನ್ನ ಮಗನನ್ನು ಕೊಂದಿರಬಹುದೆಂಬ ಅನುಮಾನ ಬರುತ್ತಿದ್ದಂತೆಯೇ ಆತ ಪೊಲೀಸರಿಗೆ ಈ ಮಾಹಿತಿ ರವಾನಿಸಿದ್ದಾನೆ. ಸ್ಥಳಕ್ಕಾಗಮಿಸಿದ  ಪೊಲೀಸರು ಚೋಟಾ ಸಿಂಗ್ ನನ್ನು ಬಂಧಿಸಿ ಠಾಣೆಗೊಯ್ದಿದ್ದಾರೆ.

ತನಿಖೆ ವೇಳೆ ಪೊಲೀಸರಿಗೆ ಮಾಹಿತಿ ನೀಡಿರುವ ಛೋಟಾ ಸಿಂಗ್ ಹಿರಿಯ ಮಗ ರಾಜ್ವೀರ್ ಸಿಂಗ್ 'ನನ್ನ ತಮ್ಮ ರಾಜ್ವಿಂದರ್ ಸಿಂಗ್ 12 ವರ್ಷದ ಹಿಂದೆ ಜಸ್ವೀರ್ ಸಿಂಗ್ ಎಂಬಾಕೆಯನ್ನು ಮದುವೆಯಾಗಿದ್ದ. ಇವರಿಗೆ ಇಬ್ಬರು ಮಕ್ಕಳಿದ್ದಾರೆ' ಎಂದು ತಿಳಿಸಿದ್ದಾರೆ.

ಪೊಲೀಸರು ಈ ಪ್ರಕರಣದ ಕುರಿತಾಗಿ ಮಾಹಿತಿ ನೀಡುತ್ತಾ ಛೋಟಾ ಸಿಂಗ್ ಹಾಗೂ ಜಸ್ವೀರ್ ಸಿಂಗ್ ನಡುವೆ ತುಂಬಾ ಆಳವಾದ ಸಂಬಂಧವಿತ್ತು. ಇದೇ ವಿಚಾರವಾಗಿ ತಂದೆ ಹಾಗೂ ಮಗನ ನಡುವೆ ಪದೇ ಪದೇ ಜಗಳವಾಗುತ್ತಿತ್ತು. ಅಲ್ಲದೇ ತನ್ನ ಸೊಸೆಯನ್ನು ಪ್ರೀತಿಸುತ್ತಿದ್ದ ಛೋಟಾ ಸಿಂಗ್ ಆಕೆಗಾಗಿ ಎರಡು ತಿಂಗಳ ಹಿಂದೆ ಫರೀದಾಕೋಟ್ ನಲ್ಲಿ ಬಾಡಿಗೆ ಮನೆಯೊಂದನ್ನೂ ಖರೀದಿಸಿದ್ದ. ಇದೇ ಮನೆಯಲ್ಲಿ ಛೋಟಾ ಸಿಂಗ್ ಹೆಂಡತಿಯೂ ವಾಸವಿದ್ದಳು. ಈ ಮೂಲಕ ಆತ ತನ್ನ ಸೊಸೆಯನ್ನು ಮದುವೆಯಾಗಲು ಪ್ಲಾನ್ ಮಾಡಿಕೊಂಡಿದ್ದ ಎಂದಿದ್ದಾರೆ.

ಈಗಾಗಲೇ ಛೋಟಾ ಸಿಂಗ್ ವಿರುದ್ಧ ಸೆಕ್ಷನ್ 302 ಹಾಗೂ 201 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅತ್ತ ರಾಜ್ವಿಂದರ್ ಸಿಂಗ್ ಮೃತದೇಹವನ್ನು ಪೋಸ್ಟ್ ಮಾರ್ಟಂ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.

click me!