
ಬೆಂಗಳೂರು (ಏ. 13): ಭಾರತೀಯರ ಹೃದಯದಲ್ಲಿ ಎಂದೂ ಮಾಸದ ಭೀಕರ ಕೃತ್ಯ ಜಲಿಯನ್ ವಾಲಾ ಬಾಗ್ ಹತ್ಯಾಕಾಂಡ. ಇತಿಹಾಸದಲ್ಲೇ ಯಾರೂ ಕ್ಷಮಿಸಲು ಸಾಧ್ಯವಿಲ್ಲದ ಹೇಯ ಕೃತ್ಯವದು.
1919 ರ ಏಪ್ರಿಲ್ 13 ರಂದು ಪಂಜಾಬ್‌ನ ಅಮೃತಸರದ ಜಲಿಯನ್ ವಾಲಾ ಬಾಗ್‌ನಲ್ಲಿ, ಸಾವಿರಾರು ನಿಶಸ್ತ್ರಧಾರಿ ಭಾರತೀಯರನ್ನ ಬ್ರಿಟೀಷರು ಗುಂಡಿಕ್ಕಿ ಕೊಂದು ಇಂದಿಗೆ 100 ವರ್ಷ ಕಳೆದಿವೆ.. ಬ್ರಿಟೀಷರ ಹೇಯ ಕೃತ್ಯಕ್ಕೆ ಸುಮಾರು 500ಕ್ಕೂ ಹೆಚ್ಚು ಮುಗ್ಧ ಭಾರತೀಯರು ಪ್ರಾಣ ಕಳೆದುಕೊಂಡಿದ್ದರು.
ಜಲಿಯನ್ ವಾಲಾಭಾಗ್ ಘಟನೆಗೆ ವಿಷಾದ: ಬ್ರಿಟನ್ ಪ್ರಧಾನಿ!
ಭೀಕರ ಭಯೋತ್ಪಾದಕ ಕೃತ್ಯ ನಡೆದು ಶತಮಾನ ಕಳೆದರೂ ಸಹ ಇಂದಿಗೂ ಸಹ ಬ್ರಿಟನ್ ಭಾರತೀಯರ ಕ್ಷಮೆ ಕೇಳದೇ ಇರೋದು ದುರಂತ.. ಜಲಿಯನ್ ವಾಲಾಭಾಗ್ಗೆ ಭೇಟಿ ನೀಡಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಪಂಜಾಬ್ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಮಡಿದವರ ಆತ್ಮಕ್ಕೆ ಶಾಂತಿ ಕೋರಿದರು.
ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಗಣ್ಯಾತಿ ಗಣ್ಯರೇ ಮಡಿದ ಭಾರತೀಯರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.