
ಮೌಂಟ್ ಆ್ಯಥೋಸ್(ಅ.25): ಶಬರಿಮಲೆಗೆ ಮಹಿಳೆ ಪ್ರವೇಶ ಕುರಿತು ದೇಶಾದ್ಯಂತ ನಡೆಯುತ್ತಿರುವ ಚರ್ಚೆಗೇನೂ ಬರವಿಲ್ಲ. ಈಗಾಗಲೇ ಶಬರಿಮಲೆಗೆ ಮಹಿಳೆ ಪ್ರವೇಶ ವಿರೋಧಿಸಿ ಅಯ್ಯಪ್ಪನ ಸನ್ನಿಧಿಯಲ್ಲಿ ಹಿಂಸಾತ್ಮಕ ಪ್ರತಿಭಟನೆ ಕೂಡ ನಡೆದಿದೆ.
ಆದರೆ ಪವಿತ್ರ ಸ್ಥಳಗಳಲ್ಲಿ ಮಹಿಳೆಯರಿಗೆ ಪ್ರವೇಶ ನಿಷೇಧ ಇರುವುದು ಕೇವಲ ಹಿಂದೂ ಧರ್ಮದಲ್ಲಿ ಮಾತ್ರವಲ್ಲ. ಜಗತ್ತಿನ ಇತರ ಪ್ರಮುಖ ಧರ್ಮಗಳಲ್ಲೂ ಪವಿತ್ರ ಸ್ಥಳಗಳಿಗೆ ಮಹಿಳೆ ಪ್ರವೇಶಿಸುವುದನ್ನು ತಡೆ ಹಿಡಿಯಲಾಗಿದೆ.
ಅದರಂತೆ ಗ್ರೀಕ್ ನಲ್ಲಿರುವ ಪವಿತ್ರ ಮೌಂಟ್ ಆ್ಯಥೋಸ್‌ನಲ್ಲಿ ಮಹಿಳೆಯರಿಗೆ ಪ್ರವೇಶ ನಿರಾಕರಿಸಲಾಗಿದೆ. ಮೌಂಟ್ ಆ್ಯಥೋಸ್ ಕ್ರಿಶ್ಚಿಯನ್ನರ ಪವಿತ್ರ ಪರ್ವತವಾಗಿದ್ದು, ಇಲ್ಲಿ ಕ್ರಿಶ್ಚಿಯನ್ ಸಂತರು ನೆಲೆಸಿದ್ದಾರೆ.
ಕಳೆದ 1 ಸಾವಿರ ವರ್ಷಗಳಿಂದಲೂ ಈ ಪರ್ವತಕ್ಕೆ ಮಹಿಳೆಯರ ಪ್ರವೇಶವನ್ನು ನಿರಾಕರಿಸಲಾಗಿದೆ. ಇದಕ್ಕೆ ಕಾರಣವನ್ನೂ ನೀಡಲಾಗಿದ್ದು, ಕ್ರಿಶ್ಚಿಯನ್ ಸಂತರ ಬ್ರಹ್ಮಚರ್ಯೆ ಪಾಲನೆಗಾಗಿ ಇಲ್ಲಿ ಮಹಿಳೆಯರ ಪ್ರವೇಶ ಸಾಧ್ಯವಿಲ್ಲ.
ಇಷ್ಟೇ ಅಲ್ಲದೇ ಇಲ್ಲಿಗೆ ಮಹಿಳೆಯರ ಪ್ರವೇಶ ನಿರಾಕರಣೆಯ ಕುರಿತು ಐತಿಹ್ಯವೊಂದು ಚಾಲ್ತಿಯಲ್ಲಿದ್ದು, ವರ್ಜಿನ್ ಮೇರಿ ಸಿಪ್ರಸ್ ಗೆ ಹೋಗುವ ವೇಳೆ ಗಳಿಯಲ್ಲಿ ಹಾರಿ ಮೌಂಟ್ ಆ್ಯಥೋಸ್‌ಗೆ ಬರುತ್ತಾಳೆ. ಆಗ ಈ ಪರ್ವತದ ಸೌಂದರ್ಯಕ್ಕೆ ಮಾರು ಹೋಗಿ ಈ ಪರ್ವತವನ್ನು ತನ್ನ ಹೆಸರಿಗೆ ಬರೆದು ಕೊಡುವಂತೆ ಮಗನಲ್ಲಿ ಮನವಿ ಮಾಡುತ್ತಾಳೆ.
ಅದರಂತೆ ಮೌಂಟ್ ಆ್ಯಥೋಸ್ ಪರ್ವತದಲ್ಲಿ ನೆಲೆಸಿದ ಮೇರಿಯಿಂದಾಗಿ ಈ ಪ್ರದೇಶವನ್ನು ‘ದಿ ಗಾರ್ಡನ್ ಆಫ್ ದಿ ಮದರ್ ಆಫ್ ಗಾಡ್’ ಎಂದು ಕರೆಯಲಾಗುತ್ತದೆ.
ಇನ್ನೊಂದು ವಿಚಿತ್ರ ಸಂಗತಿ ಎಂದರೆ ಮೌಂಟ್ ಆ್ಯಥೋಸ್‌ಗೆ ಕೇವಲ ಮಹಿಳೆಯರಷ್ಟೇ ಅಲ್ಲ ಹೆಣ್ಣು ಪ್ರಾಣಿಗಳಿಗೂ ಇಲ್ಲಿ ಪ್ರವೇಶ ನಿರಾಕರಿಸಲಾಗಿದೆ. ಆದರೆ ಬೆಕ್ಕು ಪ್ರಜಾತಿಗೆ ಮಾತ್ರ ಈ ಪರ್ವತದಲ್ಲಿ ಪ್ರವೇಶ ಇದೆ.
ಶಬರಿಮಲೆ ಹಾಗೂ ನ್ಯಾಪ್ಕಿನ್ ಬಗ್ಗೆ ಸ್ಮೃತಿ ಇರಾನಿ ಹೇಳಿಕೆ
ಶಬರಿಮಲೆ ಬಂದ್: ಮರು ಪರಿಶೀಲನೆ ಅರ್ಜಿ ವಿಚಾರಣೆ ನ.13ಕ್ಕೆ!
ಅಯ್ಯಪ್ಪ ಸನ್ನಿಧಿಯಲ್ಲಿ ಕೇರಳ ಐಜಿಪಿ ಕಣ್ಣೀರು ಹಾಕಿದ್ದ್ಯಾಕೆ..?
ನಾಸ್ತಿಕ ಸರ್ಕಾರವಿದ್ದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರಲಿ
ಮಹಿಳೆಯರ ಶಬರಿಮಲೆ ಪ್ರವೇಶಕ್ಕೆ ರಜನಿ ವಿರೋಧ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.