Personality Test: ಯಾವ ಪ್ರಾಣಿಯನ್ನ ಮೊದಲು ಗುರುತಿಸ್ತೀರೋ ಆ ಗುಣ ನಿಮ್ದು!

By Suvarna News  |  First Published Apr 10, 2023, 5:10 PM IST

ಚಿತ್ರದಲ್ಲಿರುವ ಪ್ರಾಣಿಯನ್ನು ಗುರುತಿಸಿ. ಯಾವುದನ್ನು ಮೊದಲು ಗುರುತಿಸುತ್ತೀರೋ ಅದರಂತೆ ನಿಮ್ಮ ವ್ಯಕ್ತಿತ್ವವನ್ನು ಸ್ವಲ್ಪಮಟ್ಟಿಗೆ ಅರ್ಥೈಸಿಕೊಳ್ಳಬಹುದು. 
 


ವ್ಯಕ್ತಿತ್ವ ಅದು ಹೇಗೋ ರೂಪುಗೊಳ್ಳುತ್ತದೆ. ಬಾಲ್ಯಕಾಲದ ಅನುಭವ, ಪಾಲಕರ ಧೋರಣೆ, ಮನೆಯ ವಾತಾವರಣದಿಂದ ಮಗುವಿನ ವ್ಯಕ್ತಿತ್ವ ರೂಪುಗೊಳ್ಳುತ್ತ ಸಾಗುತ್ತದೆ ಎನ್ನುವುದು ಸಾಮಾನ್ಯ ನಂಬುಗೆ. ಅನುಭವಕ್ಕೂ ಬರುವ ಸಂಗತಿ. ಆದರೆ, ಜ್ಯೋತಿಷ್ಯ ನಂಬುವವರು ಜನರ ರಾಶಿಗಳನ್ನು ಆಧರಿಸಿ ವ್ಯಕ್ತಿತ್ವ ನಿರ್ಮಾಣವಾಗುತ್ತದೆ ಎನ್ನುತ್ತಾರೆ. ಹೀಗೆ ಅವರವರ ಭಾವ ಅವರಿಗೆ. ಏನೇ ಆದರೂ ಪ್ರತಿಯೊಬ್ಬರೂ ಅವರದ್ದೇ ಆದ ವಿಭಿನ್ನ ವ್ಯಕ್ತಿತ್ವ ಹೊಂದಿರುತ್ತಾರೆ ಎನ್ನುವುದು ಸತ್ಯ. ನಾವು ಮಾಡುವ ಆಯ್ಕೆಗಳಿಂದ ನಮ್ಮ ವ್ಯಕ್ತಿತ್ವ ನಿರ್ಮಾಣವಾಗುತ್ತದೆ. ಹಾಗೆಯೇ, ನಮ್ಮ ವ್ಯಕ್ತಿತ್ವನ್ನಾಧರಿಸಿ ನಾವು ಜೀವನದಲ್ಲಿ ಆಯ್ಕೆಗಳನ್ನು ಮಾಡುತ್ತ ಹೋಗುತ್ತೇವೆ. ಒಟ್ಟಿನಲ್ಲಿ ಇದೊಂದು ಅದ್ಭುತ ಸಂಗತಿ. ನಮ್ಮ ಕಂಗಳಿಗೆ ಸುಂದರವಾಗಿ ಕಂಡಿದ್ದು, ಇನ್ನೊಬ್ಬರಿಗೆ ಸುಂದರವಾಗಿ ಕಾಣದಿರಬಹುದು. ಕೆಲವರಿಗೆ ಇಷ್ಟವಾದ ವಿಚಾರ ಮತ್ತೊಬ್ಬರಿಗೆ ಸ್ವಲ್ಪವೂ ಇಷ್ಟವಾಗದಿರಬಹುದು. ಸಾಮಾನ್ಯವಾಗಿ ನಮ್ಮ ವ್ಯಕ್ತಿತ್ವದ ಬಗ್ಗೆ ನಮಗೆ ತಿಳಿದಿರುತ್ತದೆ. ಆದರೂ ನಿಮ್ಮ ವ್ಯಕ್ತಿತ್ವದ ಯಾವುದೋ ಒಂದು ಭಾಗ ಅರಿಯಲು ಇಲ್ಲೊಂದು ಕುತೂಹಲಕರ ಮಾರ್ಗವಿದೆ. ಇಲ್ಲಿರುವ ಚಿತ್ರದಲ್ಲಿ ನೀವು ಯಾವ ಪ್ರಾಣಿಯನ್ನು ಮೊದಲು ಗುರುತಿಸುತ್ತೀರೋ ಅದರಲ್ಲಿರುವ ಗುಣವನ್ನು ನಿಮ್ಮಲ್ಲೂ ಗುರುತಿಸಬಹುದು ಎನ್ನಲಾಗಿದೆ. 

•    ಕರಡಿ (Bear)
ನೀವು ಮೊದಲು ಕರಡಿಯನ್ನು ಗುರುತಿಸಿದ್ದರೆ ತರ್ಕಬದ್ಧವಾಗಿ (Logical) ಚಿಂತನೆ ಮಾಡುತ್ತೀರಿ. ಸಾಂಪ್ರದಾಯಿಕ (Conservative) ಮನಸ್ಥಿತಿ ಹೊಂದಿರುತ್ತೀರಿ. ವಿಚಾರಪೂರ್ಣರಾಗಿದ್ದು, ಸೂಕ್ಷ್ಮವಾಗಿ ಎಲ್ಲವನ್ನೂ ಅವಲೋಕಿಸಬಲ್ಲಿರಿ. ದೃಢವಾದ ಮೌಲ್ಯಗಳು (Values) ನಿಮ್ಮಲ್ಲಿದ್ದು, ನಿಯಮಕ್ಕೆ ಅನುಸಾರವಾಗಿ ನಡೆಯುತ್ತೀರಿ.

Latest Videos

undefined

World Bipolar Day: ಒಬ್ಬನೊಳಗೇ ಇನ್ನೊಬ್ಬನ ವ್ಯಕ್ತಿತ್ವ, ಸ್ಥಿಮಿತದಲ್ಲಿರಲ್ಲ ಮನಸ್ಥಿತಿ

•    ಜಿರಾಫೆ (Giraffe)
ಸಮಾಜಜೀವಿಯಾಗಿರುತ್ತೀರಿ. ಈಸಿ ಗೋಯಿಂಗ್ (Easy Going) ಮನಸ್ಥಿತಿಯಿಂದ  ಸರಳವಾಗಿ ಎಲ್ಲರೊಂದಿಗೆ ಬೆರೆಯುತ್ತೀರಿ. ಎಲ್ಲರೂ ನಿಮ್ಮನ್ನು ಗಮನಿಸಬೇಕೆಂದು ಇಷ್ಟಪಡುತ್ತೀರಿ. ಸೂಕ್ಷ್ಮವಾಗಿದ್ದು, ಜೀವನಶೈಲಿಯಲ್ಲಿ ಆಗಾಗ ಬದಲಾವಣೆ (Change) ತಂದುಕೊಳ್ಳುತ್ತೀರಿ. ದೀರ್ಘ ಸಮಯ ಒಂದೇ ಕೆಲಸದಲ್ಲಿರಲು ನಿಮ್ಮಿಂದ ಸಾಧ್ಯವಿಲ್ಲ.

    ಸಿಂಹ (Lion)
ನೀವು ನಿಜವಾದ ನಾಯಕ (Leader). ನಿಮ್ಮಲ್ಲಿ ಶಿಸ್ತು (Discipline) ಹಾಗೂ ಸ್ಪರ್ಧಾತ್ಮಕ ಮನೋಭಾವ ಇರುತ್ತದೆ. ಯೋಜನೆಗಳನ್ನು ರೂಪಿಸುವುದೆಂದರೆ ನಿಮಗಿಷ್ಟ. ನೀವು ಸ್ವಲ್ಪ ದಾಳಿಕೋರರೂ ಹೌದು, ಇತರರು ನಿಮ್ಮನ್ನು ಅನುಸರಿಸುವಂತೆ ಮಾಡುತ್ತೀರಿ. ಜೀವನವೊಂದು ಸವಾಲು (Challenge) ಎಂದು ಸ್ವೀಕಾರ ಮಾಡುತ್ತೀರಿ.

•    ಗೂಬೆ (Owl)
ನೀವು ಜೀವನದಲ್ಲಿ ಪರಿಪೂರ್ಣತೆ (Perfection) ಬಯಸುತ್ತೀರಿ. ಆಳವಾದ ಚಿಂತನೆ ಮಾಡುವವರಾಗಿದ್ದು, ಎಲ್ಲವೂ ನೀಟಾಗಿರಬೇಕೆಂದು ಇಷ್ಟಪಡುತ್ತೀರಿ. ಗೊಂದಲದ ಜೀವನ ನಿಮ್ಮಿಂದಾಗದು. ನೀವು ಸಾಮಾಜಿಕ ಜೀವಿ ಅಲ್ಲ, ನಿಮ್ಮದೇ ವಲಯದಲ್ಲಿರಲು ಬಯಸುತ್ತೀರಿ. 

•    ಹಂದಿ (Pig)
ನೀವು ಸ್ವತಂತ್ರ (Independent) ಮನೋಭಾವದ, ವಿಮರ್ಶಾತ್ಮಕ ನಿಲುವುಳ್ಳ ವ್ಯಕ್ತಿ. ನೀವು ಸಾಮಾಜಿಕ (Social) ವ್ಯಕ್ತಿಯಾಗಿದ್ದು, ಸಹಜ ಕುತೂಹಲ, ಚುರುಕು ಬುದ್ಧಿ ಹಾಗೂ ಉತ್ತಮ ನೆನಪಿನ ಶಕ್ತಿಯಿಂದ (Memory Power) ಎಲ್ಲರನ್ನೂ ಸೆಳೆಯುತ್ತೀರಿ.

•    ಕೋಲ (Cola)
ಶಾಂತ ಮನಸ್ಥಿತಿಯ, ಎಲ್ಲರನ್ನೂ ಕಾಳಜಿ (Caring) ಮಾಡುವ ಗುಣಧರ್ಮ ನಿಮ್ಮದು. ನಿಮ್ಮದೇ ವಿಧಾನದಲ್ಲಿ ಬದುಕಲು ಇಷ್ಟಪಡುತ್ತೀರಿ. ಪುಸ್ತಕಗಳು, ಮೂವಿ, ನಿಮ್ಮದೇ ಸಮಯದಲ್ಲಿ ಚೀರ್ ಅಪ್ ಆಗುತ್ತೀರಿ.

ಕೆಲಸಕ್ಕೆ ಹೋಗೋ ಅಮ್ಮಂದಿರ ಮಕ್ಕಳ ವ್ಯಕ್ತಿತ್ವ ಹೇಗಿರುತ್ತೆ? ಅಮ್ಮನಂತೆ ಸ್ಟ್ರಾಂಗು ಗುರು

•    ಡಕ್ (Duck)
ಧನಾತ್ಮಕ (Positive) ನಿಲುವಿನ ನಿಮ್ಮನ್ನು ಯಾವುದೇ ಶಕ್ತಿ ತಡೆಯಲು ಸಾಧ್ಯವಿಲ್ಲ. ಸದಾಕಾಲ ಉತ್ತಮ ಚಿಂತನೆ ಮಾಡುತ್ತೀರಿ. ಕುತೂಹಲ ಹೊಂದಿದ್ದು, ಹೊಸ ಅನುಭವಕ್ಕೆ ಮುಕ್ತರಾಗಿರುತ್ತೀರಿ.

•    ಆನೆ (Elephant)
ಪ್ರಾಮಾಣಿಕ, ಕಾಳಜಿಯುಳ್ಳ, ಬದ್ಧತೆಯುಳ್ಳ, ಜವಾಬ್ದಾರಿಯುತ ವ್ಯಕ್ತಿ ನೀವಾಗಿರುತ್ತೀರಿ. ಜನರಿಗೆ ಸಹಾಯ ಮಾಡಲು ಸಿದ್ಧವಾಗಿರುತ್ತೀರಿ. 

•    ಝೀಬ್ರ (Zebra)
ಸಿಕ್ಕಾಪಟ್ಟೆ ಎನರ್ಜಿ ನಿಮ್ಮಲ್ಲಿದ್ದು ಹೋದಲ್ಲೆಲ್ಲ ಖುಷಿಯ ಅಲೆಯನ್ನೇ ಹರಿಸುತ್ತೀರಿ. ಉತ್ತಮ ಸಂವಹನ ಕಲೆಯಿಂದ ಜನ ನಿಮ್ಮತ್ತ ಆಕರ್ಷಿತರಾಗುತ್ತಾರೆ.

•    ಬೆಕ್ಕು (Cat)
ಸ್ವತಂತ್ರ ಬುದ್ಧಿಯವರು. ಸಂತಸದಿಂದಿರಲು ಯಾರದ್ದೇ ಸಹವಾಸ ಬೇಕಾಗಿಲ್ಲ. ನಿಮ್ಮ ಪಾಡಿಗೆ ನೀವು ಹಾಯಾಗಿರಬಲ್ಲಿರಿ.

•    ಮೊಲ (Rabbit)
ಇತರರ ಮೊಗದಲ್ಲಿ ನಗು ಮೂಡಿಸಬಲ್ಲಿರಿ. ಸಹಾನುಭೂತಿ ಹೊಂದಿದ್ದು, ಸದಾ ಸಂತಸದಲ್ಲಿರಬಲ್ಲಿರಿ.

click me!